Andolana originals

ಮಕ್ಕಳ ಕಲಿಕಾ ಮಟ್ಟ ಸುಧಾರಣೆಗೆ ಓದು ಕರ್ನಾಟಕ ಕಾರ್ಯಕ್ರಮ

ಭೇರ್ಯ ಮಹೇಶ್

ಅವಳಿ ತಾಲ್ಲೂಕುಗಳಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಸರ್ಕಾರಿ ಶಾಲಾ ಮಕ್ಕಳಿಗೆ ತರಬೇತಿ

ಕೆ.ಆರ್.ನಗರ: ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಉತ್ತಮ ಗೊಳಿಸಲು ‘ಓದು ಕರ್ನಾಟಕ’ ಪರಿಹಾರ ಬೋಧನೆ ಕಾರ್ಯಕ್ರಮವನ್ನು ಕೆ.ಆರ್ .ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಸಲಾಗುತ್ತಿದೆ.

ರಾಜ್ಯ ಸರ್ಕಾರವು ಕಲಿಕೆಯಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಕಲಿಕಾ ಅಂತರ ಸರಿದೂಗಿ ಸುವುದು ಇದರ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ೧೦೩ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ೧೧೧ ಹಿರಿಯ ಪ್ರಾಥಮಿಕಮ ಶಾಲೆಗಳಲ್ಲಿ ಓದು ಕರ್ನಾಟಕದ ಕಲಿಕೆಯನ್ನು ೧ರಿಂದ ೫ನೇ ತರಗತಿ ಮಕ್ಕಳಿಗೆ ಕಲಿಕಾ ಸಾಮರ್ಥ್ಯದ ಅನುಗುಣವಾಗಿ ಕಲಿಕಾ ಬೋಧನೆ ಮಾಡಲಾಗುತ್ತಿದೆ.

ಓದು ಕರ್ನಾಟಕದ ಬಗ್ಗೆ ಕೆ.ಆರ್.ನಗರ ತಾಲ್ಲೂಕಿನ ಅಡಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ ತ ಮುಖ್ಯಶಿಕ್ಷಕ ಬ್ಯಾಡರಹಳ್ಳಿ ಭಾಸ್ಕರ್ ಮಕ್ಕಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶವನ್ನು ಹೊಂದಿ ಅಚ್ಚುಕಟ್ಟಾಗಿ ಬೋಧನೆ ಮಾಡುತ್ತಾ ಬಂದಿದ್ದಾರೆ.

ಕಲಿಕೆಯ ಪಠ್ಯದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸರಳ ಕನ್ನಡ ಸಾಮಗ್ರಿಯು ವರ್ಣಮಾಲೆ, ಕಾಗುಣಿತ, ಒತ್ತಕ್ಷರ, ಪದ, ವಾಕ್ಯ ರಚನೆ, ಕಥೆ ಓದುವಿಕೆ ವಿಭಾಗಗಳನ್ನು ಒಳಗೊಂಡಿದೆ. ಕಲಿಕಾ ಮಟ್ಟ ಗುರುತಿಸಿ ಬೋಧನೆ, ಪ್ರತ್ಯೇಕ ವಿದ್ಯಾರ್ಥಿಗಳ ಗುಂಪು ರಚಿಸಿ ಬೋಧನೆ ನಡೆಯಲಿದೆ. ಅಂಕಿ ಪರಿಚಯ, ಗಣಿತದ ಮೂಲ ಕ್ರಿಯೆಗಳು (ಸಂಕಲನ, ವ್ಯವಕಲನ, ಗುಣಕಾರ, ಭಾಗಾಕಾರ), ಏರಿಕೆ ಮತ್ತು ಇಳಿಕೆ ಪದ್ಧತಿ ಮೊದಲಾದ ಘಟಕಗಳು ಸರಳ ಗಣಿತ ಸಾಮಗ್ರಿಯಲ್ಲಿವೆ. ವಿದ್ಯಾರ್ಥಿಗಳಿಗೆ ಗಣಿತದ ಮೂಲಾಂಶಗಳನ್ನು ಹಂತಹಂತವಾಗಿ ಪರಿಚಯಿಸುವ ವಿಧಾನಗಳು ಇವೆ ಎಂದು ತಿಳಿಸಿದರು.

” ಕಲಿಕೆಯಲ್ಲಿ ಹಿಂದೆ ಬಿದ್ದಿರುವವಿದ್ಯಾರ್ಥಿಗಳಿಗೆ  ವಿಷಯ ಮನದಟ್ಟು ಮಾಡಿಸಿ, ಕಲಿಕಾ ಅಂತರ ನಿವಾರಿಸಿ ಓದಿನೆಡೆಗೆ ಪ್ರೋತ್ಸಾಹಿಸುವುದಕ್ಕಾಗಿಯೇ ಓದು ಕರ್ನಾಟಕ ಕಾರ್ಯಕ್ರಮ ರೂಪಿಸಲಾಗಿದೆ.ಮೊದಲ ಹಂತದಲ್ಲಿ ಸಿಆರ್‌ಪಿಗಳಿಗೆ ಈ ಪರಿಹಾರ ಬೋಧನೆ ಕ್ರಮ ತಿಳಿಸಲಾಗಿದ್ದು, ಅವರು ಶಾಲೆಗಳ ಶಿಕ್ಷಕರಿಗೆ ಕಲಿಸಿಕೊಡುತ್ತಾರೆ. ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುತ್ತಾರೆ.”

-ಆರ್.ಕೃಷ್ಣಪ್ಪ, ಬಿಇಒ

 

 

ಆಂದೋಲನ ಡೆಸ್ಕ್

Recent Posts

ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಸಿಐಡಿ ಕಸ್ಟಡಿಗೆ

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಅವರನ್ನು ಸಿಐಡಿ ಕಸ್ಟಡಿಗೆ ವಹಿಸಿ…

6 mins ago

ಸಾಲೂರು ಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಶಿವಕುಮಾರ್‌ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿಯ ಜಾತ್ರಾ…

16 mins ago

ನಂಜನಗೂಡು ತಾಯಿ-ಮಕ್ಕಳ ಆಸ್ಪತ್ರೆಗೆ ಶಾಸಕ ದರ್ಶನ್ ದಿಢೀರ್ ಭೇಟಿ, ಪರಿಶೀಲನೆ

ನಂಜನಗೂಡು: ನಂಜನಗೂಡು ಪಟ್ಟಣದಲ್ಲಿರುವ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಕಳೆದ ತಡರಾತ್ರಿ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ದಿಢೀರ್…

24 mins ago

ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್:‌ ಗಣಿಗ ರವಿಕುಮಾರ್‌ ವ್ಯಂಗ್ಯ

ಮಂಡ್ಯ: ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಹೈಕಮಾಂಡ್.‌ ನಮಗೆ ಹೈಕಮಾಂಡ್‌ ನೋಟಿಸ್‌ ಕೊಡಬಹುದು. ಆದರೆ ಹೈಕಮಾಂಡ್‌ಗೆ ನಾವು ನೋಟಿಸ್‌ ಕೊಡಲು…

30 mins ago

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಚಳಿಯ ಅಬ್ಬರ, ಶೀತ ಸಂಪೂರ್ಣ ಕಡಿಮೆಯಾಗಿದ್ದು, ಒಣ ಹವೆಯ ಜೊತೆಗೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಶಿವರಾತ್ರಿ…

32 mins ago

ಕೆಮಿಕಲ್‌ ಟ್ಯಾಂಕ್‌ ಸ್ಫೋಟ: ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

ಮಂಡ್ಯ: ಕೆಮಿಕಲ್‌ ಟ್ಯಾಂಕ್‌ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಬಸರಾಳು ಸಮೀಪದ ಕಾರೆಕಟ್ಟೆ ಬಳಿ ಕೀರ್ತಿ…

34 mins ago