Andolana originals

ಗ್ರಾಮ ಸಹಾಯಕರಿಗಿನ್ನು ಇಡುಗಂಟು ಭಾಗ್ಯ!

ಗಿರೀಶ್ ಹುಣಸೂರು

ಮೈಸೂರು: ಮಿತ ವೇತನದ ಹೆಸರಿನಲ್ಲಿ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಮೃತರಾದಲ್ಲಿ, ನಿವೃತ್ತಿ ಹೊಂದಿದಲ್ಲಿ ಗರಿಷ್ಟ ೫ ಲಕ್ಷ ರೂ. ವರೆಗೆ ಒಂದು ಬಾರಿಯ ಇಡುಗಂಟು ಸೌಲಭ್ಯವನ್ನು ರಾಜ್ಯಸರ್ಕಾರ ಕಲ್ಪಿಸಿದೆ.

ಕರ್ನಾಟಕ ಗ್ರಾಮ ಕಚೇರಿಗಳ ರದ್ದತಿ ಕಾಯ್ದೆ -೧೯೬೧, ೧೯೬೩ರ -.೧ರಿಂದ ಜಾರಿಗೆ ಬಂದಿದ್ದು, ಈ ಅಧಿನಿಯಮದ ಅನ್ವಯ ಕಂದಾಯ ಇಲಾಖೆಯಲ್ಲಿ ವಂಶಪಾರಂಪರ್ಯವಾಗಿ ಮುಂದುವರಿಯುತ್ತಿದ್ದ ಶ್ಯಾನುಭೋಗರು, ಪಟೇಲರು ಇನ್ನು ಮುಂತಾದ ಎಲ್ಲ ಕೆಳಹಂತದ ಗ್ರಾಮ ಅಧಿಕಾರಿ ಹುದ್ದೆಗಳನ್ನು ರದ್ದುಪಡಿಸಿ, ಆಡಳಿತಾತ್ಮಕ ಅನುಕೂಲಕ್ಕಾಗಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಹಾಯ ಮಾಡಲು ಗ್ರಾಮ ಸಹಾಯಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಜಿಸಲಾಗಿದೆ.

ಕಂದಾಯ ಇಲಾಖೆಯಲ್ಲಿ ೮,೯೪೧ ಗ್ರಾಮ ಸಹಾಯಕರ ಹುದ್ದೆಗಳನ್ನು ಸ್ಟಿಪೆಂಡಿಯರಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ೧೦,೪೫೦ ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ಖಾಯಂ ಆಗಿ ಮುಂದುವರಿಸಿ ಆದೇಶಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿ ಸುತ್ತಿರುವ ೯,೯೦೩ ಗ್ರಾಮ ಸಹಾಯಕರ ಮಾಸಿಕ ಮಿತ ವೇತನವನ್ನು ೨೦೨೪ರ ಏ.೧ರಿಂದ ಅನ್ವಯವಾಗುವಂತೆ ೧೩ ಸಾವಿರ ರೂ.ಗಳಿಂದ ೧೫ ಸಾವಿರ ರೂ.ಗಳಿಗೆ ಹೆಚ್ಚಿಸ ಲಾಗಿತ್ತು.

ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘವು ಗ್ರಾಮ ಸಹಾಯಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಸೇವಾ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಅವರನ್ನು ಗ್ರೂಪ್-ಡಿ ನೌಕರರು ಎಂದು ಪರಿಗಣಿಸಿ ೨೭ ಸಾವಿರ ರೂ. ವೇತನ ನಿಗದಿಪಡಿಸಬೇಕು. ಅಲ್ಲದೆ ಮರಣ, ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ ೧೦ ಲಕ್ಷ ರೂ.ಗಳ ಇಡುಗಂಟು ನೀಡಬೇಕು ಎಂಬ ಬೇಡಿಕೆಗಳನ್ನಿಟ್ಟು ಹೋರಾಟ ನಡೆಸಿತ್ತು.

ಗ್ರಾಮ ಸಹಾಯಕರು ೬೫ ವರ್ಷ ವಯಸ್ಸಿನವರೆಗೆ ಸೇವೆಯಲ್ಲಿ ಮುಂದುವರಿಯಲು ಅವಕಾಶವಿದ್ದು, ಪ್ರಸ್ತುತ ಇವರಿಗೆ ಮಾಸಿಕ ೧೫ ಸಾವಿರ ರೂ. ಮಿತವೇತನವನ್ನು ಪಾವತಿಸಲಾಗುತ್ತಿದ್ದು, ವೇತನ ಹೊರತುಪಡಿಸಿ ಇನ್ಯಾವುದೇ ಸೇವಾ ಸೌಲಭ್ಯಗಳು ಇರುವುದಿಲ್ಲ. ಇವರು ಖಾಯಂ ಸರ್ಕಾರಿ ನೌಕರರಾಗದೇ ಇರುವುದರಿಂದ ತುಟ್ಟಿಭತ್ಯೆ, ವೇತನ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಇವುಗಳಾವುವೂ ಲಭ್ಯವಾಗುತ್ತಿಲ್ಲ. ಗ್ರಾಮ ಸಹಾಯಕರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಗೌರವಯುತ ನಿವೃತ್ತಿ ಜೀವನವನ್ನು ನಡೆಸಲು ಮತ್ತು ದೈನಂದಿನ ಅಗತ್ಯಗಳ ವೆಚ್ಚ, ಮಕ್ಕಳ ಶಿಕ್ಷಣ, ವೃದ್ಧ ಪೋಷಕರ ನಿರ್ವಹಣೆಗೆ ನಿವೃತ್ತಿ ನಂತರ, ಮೃತರಾದ ಸಂದರ್ಭದಲ್ಲಿ ಒಂದು ಬಾರಿಗೆ ೫ ಲಕ್ಷ ರೂ.ಗಳ ಇಡು ಗಂಟು ನೀಡಲು ೨೦೨೫ರ ಸೆ.೨೫ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಐದು ತಿಂಗಳ ಬಳಿಕ ೨೦೨೬ರ -.೬ರಂದು ಇಡುಗಂಟು ನೀಡಲು ಕೆಲ ಷರತ್ತುಗಳೊಂದಿಗೆ ಸರ್ಕಾರ ಆದೇಶ ಹೊರಡಿಸಿದ್ದು, ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಸೇವೆಯಲ್ಲಿರುವಾಗಲೇ ಮೃತರಾದಲ್ಲಿ, ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಗರಿಷ್ಟ ೫ ಲಕ್ಷ ರೂ.ಗಳವರೆಗೆ ಇಡುಗಂಟನ್ನು ಮಂಜೂರು ಮಾಡಿ ಆದೇಶಿಸಿದೆ.

” ೨೦೨೫ರ ಸೆ.೨೫ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ಸಂಖ್ಯೆ: ೮೨೭/೨೦೨೫ರಲ್ಲಿ ಕೈಗೊಳ್ಳಲಾದ ನಿರ್ಣಯದ ಅನ್ವಯ ಈ ಆದೇಶವನ್ನು ಹೊರಡಿಸಲಾಗಿದೆ. ಗ್ರಾಮ ಸಹಾಯಕರುಗಳು ನಿವೃತ್ತಿ ನಂತರ, ಮೃತರಾದ ಸಂದರ್ಭದಲ್ಲಿ ಒಂದು ಬಾರಿಗೆ ೫ ಲಕ್ಷ ರೂ.ಗಳ ಇಡುಗಂಟು ಸೌಲಭ್ಯ ದೊರೆಯಲಿದೆ.”

-ರಾಜೇಂದರ್ ಕುಮಾರ್ ಕಟಾರಿಯಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ.

ಷರತ್ತುಗಳು: 

ಅರ್ಹ ಪ್ರಕರಣಗಳಲ್ಲಿ ಒಂದು ವೇಳೆ ಗ್ರಾಮ ಸಹಾಯಕರು ಮರಣಹೊಂದಿದ್ದರೆ, ಅರ್ಹ ಅವಲಂಬಿತರಿಗೆ ಇಡುಗಂಟು ಮೊತ್ತವನ್ನು ಪಾವತಿಸಲಾಗುತ್ತದೆ. ಅವಲಂಬಿತರು ಇಡುಗಂಟನ್ನು ಪಡೆಯಲು ಸಲ್ಲಿಸಬೇಕಾ ಗಿರುವ ಅರ್ಜಿಯ ನಮೂನೆ, ಸೇವಾ ದೃಢೀಕರಣ ಪತ್ರ, ಮರಣ ಪ್ರಮಾಣ ಪತ್ರ ಹಾಗೂ ಇತರೆ ಸಂಬಂಽತ ದಾಖಲೆಗಳೊಂದಿಗೆ ಪ್ರಸ್ತಾವನೆ ಸ್ವೀಕೃತಿಗೆ ಅನುಸರಿಸಬೇಕಾಗಿರುವ ಕಾರ್ಯವಿಧಾನದ ಕುರಿತು ಒಂದು ಸಮಗ್ರವಾದ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಹೇಳಲಾಗಿದೆ. ಅರ್ಹ ಪ್ರಸ್ತಾವನೆಗಳನ್ನು ಸಂಬಂಧಿತ ತಹಸಿಲ್ದಾರ್‌ಗಳು ಪಡೆದು ಪರಿಶೀಲಿಸಿ, ದೃಢೀಕರಿಸಿ, ಆಯಾ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಪರಿಶೀಲನೆಯ ನಂತರ ಅರ್ಹ ಪ್ರಸ್ತಾವನೆಗಳಿಗೆ ಇಡುಗಂಟು ನೀಡುವ ಸಂಬಂಧ ಮಂಜೂರಾತಿ ಆದೇಶವನ್ನು ಹೊರಡಿಸಲಾಗುತ್ತದೆ.

 

 

ಆಂದೋಲನ ಡೆಸ್ಕ್

Recent Posts

ವಿಧಾನಸಭೆಯಲ್ಲಿ ಹನೂರು ಎನ್‌ಕೌಂಟರ್‌ ಸದ್ದು: ಗದ್ದಲ ಕೋಲಾಹಲ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್‌ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್‌,…

4 hours ago

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

7 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

7 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

8 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

11 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

11 hours ago