Andolana originals

ಭರದಿಂದ ಸಾಗಿದ ವೀಕ್ಷಣ ಗ್ಯಾಲರಿ ಕಾಮಗಾರಿ

ಚಾಮುಂಡಿ ವಿಹಾರ ಕ್ರೀಡಾಂಗಣ ಅಭಿವೃದ್ಧಿಗೆ ಸರ್ಕಾರದಿಂದ ೮ ಕೋಟಿ ರೂ. ಅನುದಾನ ಬಿಡುಗಡೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಸೇರಿದಂತೆ ವರ್ಷಪೂರ್ತಿ ಕ್ರೀಡಾಚಟುವಟಿಕೆಗಳು ನಡೆಯುವ ನಜರಬಾದ್ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದ ಹೊರಾಂಗಣ ಕೀಡಾಂಗಣದಲ್ಲಿ ಪ್ರೇಕ್ಷಕರು ನಿರಾಳವಾಗಿ ಕುಳಿತುಕೊಂಡು ಪಂದ್ಯ ಗಳನ್ನು ವೀಕ್ಷಿಸಲು ಗ್ಯಾಲರಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಮೈಸೂರಿನಲ್ಲಿ ಉತ್ತಮ ಗುಣಮಟ್ಟದ ಕ್ರೀಡಾ ಸಂಕೀರ್ಣವಿದ್ದರೂ ಪ್ರೇಕ್ಷಕರು ಆರಾಮವಾಗಿ ಕುಳಿತುಕೊಂಡು ಪಂದ್ಯಗಳ ಅವಿಸ್ಮರಣೀಯ ಕ್ಷಣ ಹಾಗೂ ಕುತೂಹಲದ ಘಟ್ಟಗಳನ್ನು ಸವಿಯಲು ಬಿಸಿಲು ಸೇರಿದಂತೆ ಇನ್ನಿತರ ಪ್ರಕೃತಿದತ್ತ ಸಮಸ್ಯೆಗಳು ಅಡ್ಡಿಯಾಗಿದ್ದವು. ಹೀಗಾಗಿ ಕ್ರೀಡಾಂಗಣಕ್ಕೆ ಮೇಲ್ಚಾವಣಿ ಅಗತ್ಯವಿದೆ ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು. ಅಂತಿಮವಾಗಿ ಕ್ರೀಡಾಸಕ್ತರ ಧ್ವನಿ ವಿಧಾನಸೌಧದವರೆಗೂ ಮುಟ್ಟಿ, ಅಲ್ಲಿಂದ ಅನುಮೋದನೆ ರೂಪದಲ್ಲಿ ಫಲಿತಾಂಶ ಕಂಡಿದೆ.

೮ ಕೋಟಿ ರೂ. ಅನುದಾನ: ರಾಜ್ಯ ಸರ್ಕಾರ ಈ ಅತ್ಯಾಧುನಿಕ ಕ್ರೀಡಾಂಗಣಕ್ಕೆ ಮೇಲ್ಚಾವಣಿ ಹೊದಿಸಲು ೮ ಕೋಟಿ ರೂ ಅನುದಾನ ನೀಡಿದೆ. ಈ ಅನುದಾನವನ್ನು ಬಳಕೆ ಮಾಡಿಕೊಂಡು ಚಾವಣಿ ನಿರ್ಮಾಣಕ್ಕೆ ಸಕ್ಷಮ ಪ್ರಾಽಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕಾಮಗಾರಿ ಶುರುವಾಗಿದ್ದು, ಪಿಲ್ಲರ್‌ಗಳನ್ನು ನಿರ್ಮಿಸಲು ಗುಂಡಿಗಳನ್ನು ತೋಡಲಾಗಿದೆ. ಕಾಮಗಾರಿಗೆ ಬೇಕಾದ ಸಾಮಗ್ರಿಗಳು ಹಾಗೂ ಪರಿಕರಗಳನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ.

ನೂತನ ತಂತ್ರಜ್ಞಾನ: ಪ್ರೇಕ್ಷಕರ ಗ್ಯಾಲರಿಗೆ ಮೇಲ್ಛಾವಣಿ ಹೊದಿಸಲು ಟೆನ್‌ಸೈಲ್ ಮೆಂಬರಿನ್ ತಂತ್ರಜ್ಞಾನ ಬಳಸಲಾಗುತ್ತಿದೆ. ಲೋಹದ ಕಂಬಗಳು ಅಥವಾ ಕೇಬಲ್‌ಗಳ ಸಹಾಯದಿಂದ ಬಟ್ಟೆಯನ್ನು ಎಳೆದು ಕಟ್ಟಲಾಗುತ್ತದೆ. ಈ ಮೇಲ್ಚಾವಣಿ ಸುಂದರವಾಗಿ ಹಾಗೂ ಪಾರದರ್ಶಕವಾಗಿ ಕಾಣುತ್ತದೆ. ನೋಡುಗರಿಗೆ ಒಂದು ರೀತಿಯ ರಾಯಲ್ ಟಚ್ ನೀಡುತ್ತದೆ. ಇದು ಸರ್ವ ಋತುವಿಗೂ ಹೊಂದಿಕೊಳ್ಳುವ ಗುಣ ಹೊಂದಿದೆ ಎನ್ನಲಾಗಿದೆ.

ಉಪಯೋಗವೇನು?:

ಈ ಕ್ರೀಡಾಂಗಣಕ್ಕೆ ಮೇಲ್ಚಾವಣಿ ಹೊದಿಕೆ ಮಾಡುವುದರಿಂದ ಪ್ರೇಕ್ಷಕರು ಸಾವಕಾಶವಾಗಿ ಕುಳಿತುಕೊಂಡು ಪಂದ್ಯಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಕ್ರೀಡಾಕೂಟಗಳ ಸಂದರ್ಭದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ತಾತ್ಕಾಲಿಕವಾಗಿ ಶಾಮಿಯಾನದ ಮೊರೆ ಹೋಗುತ್ತಿದ್ದರು. ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರು ಕೂಡ ಸೀಮಿತವಾಗಿದ್ದ ಶಾಮಿಯಾನದ ನೆರಳಿನಲ್ಲೇ ಕುಳಿತು ವೀಕ್ಷಿಸುತ್ತಿದ್ದರು. ಆದರೆ, ಮೇಲ್ಚಾವಣಿ ಪೂರ್ಣಗೊಂಡ ಬಳಿಕ ಆಟವನ್ನು ಯಾವುದೇ ಅಡೆತಡೆ ಇಲ್ಲದೇ ನೋಡಿ ಆನಂದಿಸಬಹುದಾಗಿದೆ.

” ಈ ವರ್ಷದ ದಸರಾ ವೇಳೆಗೆ ಪ್ರೇಕ್ಷಕರು ಮೇಲ್ಚಾವಣಿ ನೆರಳಿನಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಅಷ್ಟರೊಳಗೆ ಎಲ್ಲ ಕಾಮಗಾರಿ ಪೂರ್ಣ ಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಆಸನ ವ್ಯವಸ್ಥೆಯನ್ನೂ ಮಾಡುವ ಆಲೋಚನೆ ಇದೆ.”

-ಭಾಸ್ಕರ್ ನಾಯಕ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ, ಇಲಾಖೆ

೨೫ ಸಾವಿರ ಮಂದಿ ಸಾಮರ್ಥ್ಯ: ಚಾಮುಂಡಿ ವಿಹಾರ ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತು ನೋಡಲು ೧೧ ಮೆಟ್ಟಿಲುಗಳಿದ್ದು, ಇವುಗಳ ಮೇಲೆ ಸಾವಕಾಶವಾಗಿ ಕುಳಿತುಕೊಂಡರೆ ಸುಮಾರು ೨೫ ಸಾವಿರ ಮಂದಿ ಕುಳಿತುಕೊಳ್ಳಬಹುದಾಗಿದೆ. ಸ್ವಲ್ಪ ಒತ್ತರಿಸಿಕೊಂಡು ಕುಳಿತುಕೊಂಡರೆ ೩೦ ಸಾವಿರ ಮಂದಿಗೆ ಅವಕಾಶವಿದೆ. ಇಂತಹ ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಈ ಕ್ರೀಡಾಂಗಣಕ್ಕೆ ಹೊಸದಾಗಿ ಮೇಲ್ಚಾವಣಿ ನಿರ್ಮಾಣ ಮಾಡುತ್ತಿರುವುದರಿಂದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ನೋಡಬಹುದಾಗಿದೆ.

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

5 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

5 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

5 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

5 hours ago

ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು ಒದಗಿಸಿ

ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…

5 hours ago

ಹಿಂದಿನ ಉಸ್ತುವಾರಿಗಿದ್ದ ಖಾತೆಗಳು ಪುಟ್ಟರಂಗಶೆಟ್ಟರಿಗೆ!

ರಾಜೇಶ್ ಬೆಂಡರವಾಡಿ ಪಶುಸಂಗೋಪನೆ, ರೇಷ್ಮೆ ಖಾತೆ ಹಂಚಿಕೆ; ಉಭಯ ಕ್ಷೇತ್ರಗಳಲ್ಲಿ ಅನುಭವ ಇರುವ ಹಿನ್ನೆಲೆ  ಚಾಮರಾಜನಗರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ…

5 hours ago