ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ನಂಜನಗೂಡು ತನಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಬದಿಗಳನ್ನು ಅಗೆದು ತಿಂಗಳುಗಳೇ ಕಳೆದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಹತ್ತಾರು ಕಿ.ಮೀ. ರಸ್ತೆ ಅಗೆದು ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ರಸ್ತೆ ಅಗಲೀಕರಣ ಮಾಡುತ್ತಿದ್ದರೂ ವಿದ್ಯುತ್ ಕಂಬಗಳು, ಮರಗಳನ್ನು ತೆರವು ಮಾಡಿಲ್ಲ. ಕೆಲವು ಪೆಟ್ರೋಲ್ ಬಂಕ್‌ಗಳು ಮೊದಲೇ ರಾಷ್ಟ್ರೀಯ ಹೆದ್ದಾರಿಗೆ ಚಾಚಿದಂತೆ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವು ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಸ್ತೆಗೆ ಮಣ್ಣು, ಜಲ್ಲಿ ಹಾಕಿ ಬಿಗಿ ಮಾಡುವ ಕಾರ್ಯ ನಡೆಯುತ್ತಿದ್ದರೂ ಮರ ಮತ್ತು ಕಂಬಗಳನ್ನು ತೆರವು ಮಾಡದೆ ಇರುವುದರಿಂದ ನಂತರ ಮರ, ಕಂಬಗಳನ್ನು ತೆರವುಗೊಳಿಸುವ ವೇಳೆ ರಸ್ತೆ ಸಡಿಲವಾಗುತ್ತದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆಯನ್ನು ಐದು ಕಿ.ಮೀ. ಅಂತರದವರೆಗೆ ಮಾಡಿ, ನಂತರ ಮತ್ತೆ ೫ ಕಿ.ಮೀ.ನಂತೆ ಮಾಡಿದರೆ ಸಮಸ್ಯೆಯಾಗುವುದಿಲ್ಲ.
ಆದರೆ ಹತ್ತಾರು ಕಿ.ಮೀ. ದೂರ ಒಟ್ಟಿಗೆ ರಸ್ತೆ ಅಗಲಿಕರಣ ಮಾಡಲು ಮುಂದಾಗಿ ಮಂದಗತಿಯಲ್ಲಿ ಕಾಮಗಾರಿ ನಡೆಸಿದರೆ ವಾಹನ ಸವಾರರಿಗೆ ಕಿರಿಕಿರಿಯಾಗುತ್ತದೆ ಎಂಬುದು ವಾಹನ ಸವಾರರ ಆರೋಪ.
ಇದರ ಬಗ್ಗೆ ಪ್ರಶ್ನಿಸಲು ವಾಹನ ಸವಾರರು ಮುಂದಾದರೆ ನಮಗೆ ಕನ್ನಡ ಬರುವುದಿಲ್ಲ ಎಂದು ಇಂಜಿನಿಯರ್, ಸಿಬ್ಬಂದಿ, ಕಾರ್ಮಿಕರು ಹೇಳುತ್ತಾರೆ. ತಮಿಳುನಾಡು ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ.
ವ್ಯಾಪಾರಸ್ಥರಿಗೆ ನಷ್ಟ: ರಸ್ತೆ ಬದಿಯಲ್ಲಿ ಅಗೆದಿರುವ ಕಾರಣ ಅಂಗಡಿ ಮುಂಗಟ್ಟು ಇಟ್ಟುಕೊಂಡಿರುವ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತಿದೆ. ಎರಡೂ ಬದಿಗಳಲ್ಲಿ ರಸ್ತೆಯನ್ನು ಅಗೆದಿರುವ ಕಾರಣ ರಸ್ತೆ ಕಿರಿದಾ ಗಿದ್ದು, ಟಿಪ್ಪರ್ ಮತ್ತಿತರ ವಾಹನಗಳ ಚಾಲನೆಯಿಂದ ಅಪಘಾತಗಳಾಗುವ ಆತಂಕವಿದೆ.
” ರಸ್ತೆ ಅಗಲೀಕರಣ ಕಾಮಗಾರಿ ಕಳಪೆಯಾಗಿದೆ. ಜಲ್ಲಿ ಬಳ ಸಿಲ್ಲ, ಮಣ್ಣು ಮಿಶ್ರಿತ ಮಾಡಿ ಹಾಕಿದ್ದಾರೆ. ಸರಿಯಾಗಿ ಅಗಲೀಕರಣವಾಗುತ್ತಿಲ್ಲ. ಸೆಸ್ ನವರು ಕಂಬಗಳನ್ನು, ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.”
ಮಹದೇವಪ್ಪ, ರೈತ ಮುಖಂಡ, ಮಾಡ್ರಹಳ್ಳಿ
” ಅವೈಜ್ಞಾನಿಕ ಕಾಮಗಾರಿ ನಡೆ ಯುತ್ತಿದೆ. ಕೆಲವೆಡೆ ಮಾತ್ರ ಚತುಷ್ಪಥ ಮಾಡುತ್ತಿದ್ದು, ಕೆಲವೆಡೆ ಯಥಾಸ್ಥಿತಿ ಇದೆ. ಇದರಿಂದ ವಾಹನ ಸವಾರರಿಗೆ ರಸ್ತೆಯ ಅಂದಾಜು ತಿಳಿಯದೆ ಅಪಘಾತಗಳಾಗಲಿದೆ. ಗ್ರಾವಲ್ಸ್ ಕಡಿಮೆ ಹಾಕಿ ಗುಣಮಟ್ಟದ ರಸ್ತೆ ಕಿತ್ತು ಅದ್ವಾನ ಮಾಡಿದ್ದಾರೆ. ಬೇಗೂರಲ್ಲಿ ಚತುಷ್ಪಥ ಮತ್ತು ಸರ್ವೀಸ್ ರಸ್ತೆಯಾಗಬೇಕು.”
ರವಿ ಕಮರಹಳ್ಳಿ, ಬಿಜೆಪಿ ಯುವ ಮುಖಂಡ
” ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ರಸ್ತೆ ಅಗಲೀಕರಣದಿಂದಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ. ಗುಂಡ್ಲುಪೇಟೆ-ಮೈಸೂರು ರಸ್ತೆ ಅಗಲೀಕರಣದಿಂದ ವಾಹನ ಸವಾರರಿಗೂ ಸಮಯ ಉಳಿಯುತ್ತದೆ. ಮರಗಳ ತೆರವಿಗೆ ಅರಣ್ಯ ಇಲಾಖೆಯಿಂದ ಎನ್‌ಒಸಿ ಕೆಲವೇ ದಿನಗಳಲ್ಲಿ ಸಿಗಲಿದ್ದು, ರಸ್ತೆ ಅಭಿವೃದ್ಧಿ ಮಾಡುವಾಗ ಸಮಸ್ಯೆ ಎದುರಾಗುವುದು ಸಹಜ. ನಮ್ಮ ತಾಲ್ಲೂಕಿನ ಸಂಪರ್ಕ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಎಲ್ಲರೂ ಸಹಕರಿಸಬೇಕು.”
ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ
’
ನೆಲಮಂಗಲ: ಕೆನಡಾ ದೇಶದಲ್ಲಿ ಕನ್ನಡಿಗನನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿ ಭಾವಚಿತ್ರವನ್ನು ಕೆನಡಾದ ಟೊರಂಟೊ ಪೊಲೀಸರು…
ಕೊಡಗು: ಸಂಸದ ಯದುವೀರ್ ಕೃಷ್ಣದತತ ಚಾಮರಾಜ ಒಡೆಯರ್ ಅವರ ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಬೆಂಗಳೂರು ವಿಭಾಗೀಯ…
ಟೆಹರಾನ್: ಇರಾನ್ ಸರ್ವೋಚ್ಛ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರು ಮಗ ಉತ್ತರಾಧಿಕಾಗಲು ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಇರಾನ್‌ನ ಮುಂದಿನ ಸರ್ವೋಚ್ಛ…
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಟಾಕ್ಸಿಕ್ ಇರಾನ್- ಇಸ್ರೇಲ್ ಯುದ್ಧದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಮಾರ್ಚ್.19ರಂದು ಬಿಡುಗಡೆಯಾಗಬೇಕಿದ್ದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮದ ಸಮೀಪ ಪ್ರತಿನಿತ್ಯ…