Andolana originals

ಅಷ್ಟಾಂಗ ಯೋಗದ ರಾಜಧಾನಿ ಮೈಸೂರು

ಉದ್ಯಮವಾಗಿಯೂ ಬೆಳೆಯುವತ್ತ ಯೋಗ
ಮಕ್ಕಳು ವಯೋವೃದ್ಧರನ್ನೂ ಸೆಳೆಯುವ ಯೋಗ
ಯೋಗ ದೈಹಿಕ ಬಲ ಮತ್ತು ನಮ್ಯತೆ ಹೆಚ್ಚಿಸುವಲ್ಲಿ ಸಹಕಾರಿ

ನಮಗೆ ಮೈಸೂರು ಪಾಕ್ ಗೊತ್ತು. . . ಮೈಸೂರು ಸಿಲ್ಕ್ ಗೊತ್ತು. . . ಮೈಸೂರು ಮಲ್ಲಿಗೆಯೂ ಗೊತ್ತು. . . ಆದರೆ, ಮೈಸೂರು ಯೋಗ ಗೊತ್ತಾ? ಹೆಚ್ಚಿನವರಿಗೆ ಇದು ಗೊತ್ತಿಲ್ಲ. ಇದು ಮೈಸೂರಿನ ಯೋಗ ವಿದ್ವಾಂಸರೇ ರೂಢಿಸಿಕೊಂಡ, ಜಗತ್ತಿಗೆ ಅದರ ವಿಶೇಷತೆಯನ್ನು ಮನದಟ್ಟು ಮಾಡಿದ ವಿಶೇಷವಾದ ವಿಧಾನ. ಅದೇ ಅಷ್ಟಾಂಗ ಯೋಗ. ಈ ಯೋಗ ವಿಧಾನವನ್ನು ಶ್ರೀಕೃಷ್ಣ ಪಟ್ಟಾಭಿ ಜೋಯಿಸರು ಮೊದಲ ಬಾರಿಗೆ ರೂಢಿಗೆ ತಂದರು. ಅವರು, ೨೦ನೇ ಶತಮಾನದ ಮಹಾನ್ ಯೋಗ ಪಟುಗಳಲ್ಲೊಬ್ಬರಾದ ಟಿ. ಕೃಷ್ಣಮಾಚಾರ್ಯರ ಶಿಷ್ಯರು. ಶ್ರೀಕೃಷ್ಣ ಪಟ್ಟಾಭಿ ಯವರು ರೂಪಿಸಿದ ಅಷ್ಟಾಂಗ ಯೋಗ ಇಂದು ಜಗತ್ತಿನಾದ್ಯಂತ ರೂಢಿಯಲ್ಲಿದೆ. ಹಾಗಾಗಿಯೇ, ಮೈಸೂರನ್ನು ಅಷ್ಟಾಂಗ ಯೋಗದ ರಾಜಧಾನಿ ಎಂದು ಕರೆಯಲಾಗುತ್ತದೆ.

ಮೈಸೂರನ್ನು ದೇಶದ ಯೋಗ ರಾಜಧಾನಿ ಎಂದು ಹೆಸರಿಸಲು ಇರುವ ಪ್ರಮುಖ ಕಾರಣವೇನೆಂದರೆ, ಮೈಸೂರಿಗೆ ಇರುವ ಪ್ರಾಚೀನತೆ ಹಾಗೂ ಸಾಂಸ ತಿಕ ಮೌಲ್ಯ. ಸುಮಾರು ಒಂದು ನೂರು ವರ್ಷಗಳ ಇತಿಹಾಸವನ್ನು ಈ ನಗರಿ ಹೊಂದಿದೆ. ಮೈಸೂರಿನ ಯದುವಂಶದ ಅರಸರು ಯೋಗ ಶಿಕ್ಷಣಕ್ಕೆ ರಾಜಾಶ್ರಯ ನೀಡಿದ್ದಕ್ಕೆ ಅನೇಕ ದಾಖಲೆಗಳಿವೆ. ಮುಮ್ಮಡಿ ಕೃಷ ರಾಜ ಒಡೆಯರ್ ರವರ ‘ಶೃತತ ನಿಽ’ ಎಂಬ ಗ್ರಂಥದಲ್ಲಿ ೧೨೨ ಯೋಗಾಸನಗಳ ಚಿತ್ರಣವಿದೆ ಎಂದು ವಿದ್ವಾಂಸರು ಹೇಳುತ್ತಾರೆ. ೧೯೩೦ರಲ್ಲಿ ಮೈಸೂರು ಅರಮನೆಯಲ್ಲಿ ಯೋಗ ಶಾಲೆಯನ್ನು ಸ್ಥಾಪಿಸಿ ರಾಜಕುಟುಂಬ ಮತ್ತು ಸಾರ್ವಜನಿಕರಿಗೆ ಯೋಗ ಕಲಿಸಲಾಗುತ್ತಿತ್ತು. ಟಿ. ಕೃಷ್ಣಮಾಚಾರ್ಯರು, ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ (ಬಿಕೆಎಸ್) ಅಯ್ಯಂಗಾರ್, ಕೆ. ಪಟ್ಟಾಭಿ ಜೋಯಿಸರು ಯೋಗ ಸಾಧನೆ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ಇಡೀ ವಿಶ್ವಕ್ಕೇ ಪಸರಿಸಿದ್ದಾರೆ.

ಮೈಸೂರಿನ ಯೋಗದ ಇತಿಹಾಸ: ಮೈಸೂರು ಅರಮನೆಯ ದಾಖಲೆಗಳ ಪ್ರಕಾರ, ಸರಿಸುಮಾರು ೨೨೫ ವರ್ಷಗಳಿಂದ, ಮೈಸೂರು ರಾಜ ಮನೆತನವು ಯೋಗವನ್ನು ಪ್ರೋತ್ಸಾಹಿಸುತ್ತಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ರಚಿತ ವಿದ್ವತ್ಪೂರ್ಣ ಪುಸ್ತಕ ಶೃತತನಿಽಯಲ್ಲಿ ಯೋಗಾಸನದ ೧೨೨ ಆಸನಗಳ ವಿವರಣೆಯನ್ನು ದಾಖಲಿಸಲಾಗಿದೆ. ಈ ಪುಸ್ತದ ಪ್ರಕಾರ ಮೈಸೂರು ಸಾಮ್ರಾಜ್ಯದಲ್ಲಿ ಯೋಗಕ್ಕೆ ೨೨೫ ವರ್ಷಗಳಷ್ಟು ಹಿಂದಿನ ಪ್ರಾಚೀನ ಇತಿಹಾಸವಿರುವುದು ಸ್ಪಷ್ಟವಾಗುತ್ತದೆ. ಮೈಸೂರು ಅರಮನೆಯಲ್ಲಿ ೧೯೩೦ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜಮನೆತನದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಯೋಗವನ್ನು ಕಲಿಸಬೇಕು ಎಂಬ ಮಹತ್ವದ ನಿರ್ಧಾರವನ್ನು ಕೈಗೊಂಡು ಯೋಗಶಾಲೆಯನ್ನು ಪ್ರಾರಂಭಿಸಿದರು. ಆ ಮೂಲಕ, ಯೋಗ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದರು.

ಮೈಸೂರು ಯೋಗ ಶಿಕ್ಷಕರ ಅತಿ ದೊಡ್ಡ ನಗರ ಎಂದರೆ ತಪ್ಪಾಗಲಾರದು. ಏಕೆಂದರೆ ಪ್ರತಿ ವರ್ಷ ಸಾವಿರಾರು ಮಂದಿ ಇಲ್ಲಿ ಯೋಗ ಕಲಿತು, ಯೋಗ ಶಿಕ್ಷಣವನ್ನು ಪ್ರಚುರಪಡಿಸುತ್ತಿದ್ದಾರೆ. ಅರಮನೆಯಲ್ಲಿ ಯೋಗಶಾಲೆಯನ್ನು ಪ್ರಾರಂಭಿಸಿ ಯೋಗಾಭ್ಯಾಸವನ್ನು ಕಲಿಸಲು ಮುಂದಾದ ಟಿ. ಕೃಷ್ಣಮಾಚಾರ್ಯ ರನ್ನು ‘ಆಧುನಿಕ ಯೋಗ ಪಿತಾಮಹ’ ಎಂದು ಪರಿಗಣಿಸಲಾಗಿದೆ. ಯೋಗವನ್ನು ಉತ್ತೇಜಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್‌ರು ಯೋಗದ ರಾಯಭಾರಿಯಾಗಿ ಕೃಷ ಮಾಚಾರ್ಯರನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಿದರು ಎನ್ನುತ ದೆ ಇತಿಹಾಸ.

ಕೃಷ್ಣಮಾಚಾರ್ಯರು ಮೈಸೂರಿನಲ್ಲಿ ಮೊತ್ತಮೊದಲ ಹಠ ಯೋಗ ಶಾಲೆಯನ್ನು ಪ್ರಾರಂಭಿಸಿದರು. ಹಠ ಯೋಗವನ್ನು ಅಭಿವೃದ್ಧಿಪಡಿಸಿದರು. ಅವರ ಯೋಗ ಶಾಲೆಯ ಶಿಷ್ಯರಾಗಿದ್ದ ಅವರ ಮಗ ದೇಶಿಕಾಚಾರ್ ಅವರು ಯೋಗದಲ್ಲಿ ವಿನಿಯೋಗ ವಿಧಾನವನ್ನು ಅಭಿವೃದ್ಧಿಪಡಿಸಿದರು. ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ (ಬಿಕೆಎಸ್) ಅಯ್ಯಂಗಾರ್‌ರು, ಕೃಷ್ಣಮಾಚಾರ್ಯರ ಶಿಷ್ಯವೃಂದದಲ್ಲಿನ ಇನ್ನೊಬ್ಬ ಪ್ರಸಿದ್ಧ ವಿದ್ಯಾರ್ಥಿ. ಅವರು ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಅಯ್ಯಂಗಾರ್ ಯೋಗವನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ಪರಿಚಯಿಸಿದರು. ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದ ಖ್ಯಾತಿ ಮೈಸೂರಿನ ಮತ್ತೊಬ್ಬ ಪ್ರಸಿದ್ಧ ಯೋಗ ಗುರು ಕೆ. ಪಟ್ಟಾಭಿ ಜೋಯಿಸ್ ಅವರದ್ದು.

ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯಕ್ಕೆ ಸಂಬಂಽಸಿದ ಹಲವು ಸಮಸ್ಯೆಗಳಿಗೆ ಯೋಗ ರಾಮಬಾಣ ಎನ್ನಲಾಗಿದ್ದು, ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣದಿಂದ, ವೈಜ್ಞಾನಿಕ, ಸಾಂಪ್ರದಾಯಿಕ ಯೋಗ ಕಲಿಕಾ ತಾಣವಾದ ಮೈಸೂರು ಇಂದು ವಿಶ್ವದಲ್ಲೇ ಪ್ರಮುಖ ಯೋಗ ಕಲಿಕೆಯ ತಾಣವಾಗಿ ಬೆಳೆದಿದೆ. ಸಾಂಪ್ರದಾಯಿಕವಾಗಿರುವ ಅಷ್ಟಾಂಗ ಯೋಗ, ಹಠಯೋಗ ಮತ್ತು ವಿನಿಯೋಗದ ಜೊತೆಗೆ, ಹತ್ತಾರು ಆಧುನಿಕ ಯೋಗ ತರಬೇತಿ ಸಂಸ್ಥೆಗಳು ಇಂದು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.

600ಕ್ಕೂ ಹೆಚ್ಚು ಯೋಗ ಕೇಂದ್ರಗಳು
ಪ್ರತಿ ವರ್ಷ, ದೇಶದ ಮೂಲೆಮೂಲೆಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ಮಂದಿ ಯೋಗ ಕಲಿಯಲು ಮೈಸೂರಿಗೆ ಬರುತ್ತಾರೆಂದರೆ ನಿಮಗೆ ಅಚ್ಚರಿಯಾಗ ಬಹುದು. ಆರು ನೂರಕ್ಕೂ ಹೆಚ್ಚು ಯೋಗ ಕೇಂದ್ರಗಳು ತರಬೇತಿ ನೀಡುತ್ತಿವೆ. ಪ್ರತಿವರ್ಷ ಮಾರ್ಚ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಸಾಮಾನ್ಯವಾಗಿ ಯೋಗ ಕೇಂದ್ರಗಳಲ್ಲಿ ಶಿಕ್ಷಣಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಮೈಸೂರಿನಲ್ಲೇ ೬೦೦ ಯೋಗ ಕೇಂದ್ರಗಳು, ೨೨ ಆಯುಷ್ಮಾನ್ ಆರೋಗ್ಯ ಮಂದಿರಗಳು ಇವೆ. ಅಲ್ಲದೆ, ನ್ಯಾಚುರೋಪತಿ ಕಾಲೇಜುಗಳು, ಪಂಚ ಕರ್ಮ ಆಯುರ್ವೇದ ಸೇವಾ ಕೇಂದ್ರಗಳಿವೆ. ನ್ಯಾಚುರೋಪತಿ, ಪಂಚಕರ್ಮ ಕೇಂದ್ರ ಗಳಲ್ಲಿಯೂ ಯೋಗ ಹೇಳಿಕೊಡಲಾಗುತ್ತದೆ. ಒಂದು ವರ್ಷದಲ್ಲಿ ಏನಿಲ್ಲವೆಂದರೂ ವಿವಿಧ ದೇಶಗಳಿಂದ ಅಂದಾಜು ೨೦ ಸಾವಿರ ಮಂದಿ ಇಲ್ಲಿಗೆ ಯೋಗ ಕಲಿಯಲು ಬರುತ್ತಾರೆ. ಗೋಕುಲಂ, ಯಾದವಗಿರಿ, ಜಯಲಕ್ಷ್ಮೀಪುರಂನಲ್ಲಿರುವ ಯೋಗ ತರಬೇತಿ ಕೇಂದ್ರಗಳು ಹೌಸ್‌ಫುಲ್ ಆಗಿರುಅತ್ತವೆ. ಇವರಲ್ಲಿ ವರ್ಷಕ್ಕೆ ಕನಿಷ್ಠ ೮,೦೦೦ ಮಂದಿ ಯೋಗ ಶಿಕ್ಷಕರಾಗುವ ಬಯಕೆಯನ್ನು ಹೊಂದಿರುತ್ತಾರೆ. ಮೈಸೂರಿಗೆ ಬಂದು ಯೋಗ ಕಲಿತು, ಪ್ರಮಾಣಪತ್ರವನ್ನು ಪಡೆದು ತಮ್ಮ ದೇಶಕ್ಕೆ ಹಿಂದಿರುಗಿದ ನಂತರ ಅವರು ಯೋಗ ಶಿಕ್ಷಕರಾಗಿ ತೊಡಗಿಸಿಕೊಂಡಿರು ವುದೂ ಉಂಟು. ಮೈಸೂರಿನ ಯೋಗ ಕೇಂದ್ರಗಳಲ್ಲಿ ಕೆ. ಪಟ್ಟಾಭಿ ಜೋಯಿಸ್ ಅಷ್ಟಾಂಗ ಸಂಸ್ಥೆ ಪ್ರಮುಖವಾಗಿದೆ. ಮೈಸೂರಿನ ಅನೇಕ ಯೋಗ ಕೇಂದ್ರಗಳಲ್ಲಿ ಅಷ್ಟಾಂಗ ಯೋಗವನ್ನು ಹೇಳಿಕೊಡಲಾಗುತ್ತದೆ. ಇದು ಭಾರತ ಮೂಲ ಯೋಗದ ಆಧುನಿಕ ರೂಪಾಂತರ ಎಂದೇ ಪರಿಗಣಿಸಲ್ಪಟ್ಟಿದೆ. ದೇಹದ ಉಸಿರಾಟವನ್ನು, ದೇಹದ ಅಂಗಾಂಗ ಚಲನೆಗಳಿಗೆ ಸಮ್ಮಿಳಿತಗೊಳಿಸುವ ಮೂಲಕ ಶರೀರದ ಅಂತಃಶಕ್ತಿಯನ್ನು ಜಾಗೃತಗೊಳಿಸುವ ವಿಶೇಷವಾದ ಯೋಗ ವಿನ್ಯಾಸವಾಗಿದೆ. ಇದರ ಬಗ್ಗೆ ವಿದೇಶಗಳಿಂದ ಬರುವ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಾರೆ.

 

ಆಂದೋಲನ ಡೆಸ್ಕ್

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

3 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

4 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

6 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

6 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

10 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

10 hours ago