ಪ್ರಶಾಂತ್ ಎನ್.ಮಲ್ಲಿಕ್
ಸ್ವಚ್ಛತಾ ರಾಯಭಾರಿಗಳ ಆಶಯ ; ‘ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ, ಅನನ್ಯಾ ಭಟ್
ಮೈಸೂರು: ನಗರಪಾಲಿಕೆಯ ಸ್ವಚ್ಛ ಸರ್ವೇಕ್ಷಣ ೨೦೨೬ರ ರಾಯ ಭಾರಿ ಗಳಾಗಿ ಆಯ್ಕೆಯಾಗಿರುವ ೬ ಮಂದಿ ಪೈಕಿ ಇಬ್ಬರು ಕಲಾವಿದರು ಹಾಗೂ ಒಬ್ಬರು ಚಲನಚಿತ್ರ ಗಾಯಕರು ಆಯ್ಕೆಯಾಗಿದ್ದು, ದೇಶದಲ್ಲೇ ಮೈಸೂರು ಮತ್ತೆ ಪ್ರಥಮ ಸ್ವಚ್ಛನಗರಿಯಾಗಬೇಕು ಎಂಬ ಆಶಯವನ್ನು ಮೂವರೂ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಸ್ವಚ್ಛತೆ ಅಭಿಯಾನ ಮತ್ತು ಅದರ ಮಹತ್ವವನ್ನು ಕುರಿತು ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಜನರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಸಿನಿಮಾ ಕಲಾವಿದ ದಂಪತಿ ಹರಿಪ್ರಿಯಾ, ವಸಿಷ್ಠ ಸಿಂಹ ಮತ್ತು ಗಾಯಕರಾದ ಅನನ್ಯಾ ಭಟ್ ಅವರು ‘ಆಂದೋಲನ’ದೊಂದಿಗೆ ಮಾತನಾಡಿದ್ದು, ಅವರ ಮಾತುಗಳು ಇಂತಿವೆ
ಮೈಸೂರು ನನ್ನ ಊರು. ಇಲ್ಲಿ ನನ್ನ ಬಾಲ್ಯವನ್ನು ಕಳೆದಿದ್ದೇನೆ. ಶಾಲಾ ದಿನಗಳನ್ನು ಅನುಭವಿಸಿದ್ದೇನೆ. ೨೦೧೪ರಲ್ಲಿ ಆರಂಭವಾದ ಸ್ವಚ್ಛ ಭಾರತ್ ಅಭಿಯಾನದ ವೇಳೆ ಮೈಸೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿತ್ತು. ಆ ಗೌರವವನ್ನು ಮತ್ತೆ ತರುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಮೈಸೂರು ಮಹಾನಗರ ಪಾಲಿಕೆ, ಪೌರ ಕಾರ್ಮಿಕರು ಮತ್ತು ಅಧಿಕಾರಿಗಳ ಶ್ರಮ ಸ್ಛೂರ್ತಿದಾಯಕ. ಸ್ವಚ್ಛತಾ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಅದನ್ನು ನಮ್ಮ ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನೀಡಬಹುದಾದ ದೊಡ್ಡ ಉಡುಗೊರೆ ಸ್ವಚ್ಛ ಮತ್ತು ಸುಂದರ ಮೈಸೂರು. ಮಕ್ಕಳಿಗೆ ಆಸ್ತಿ ಮಾತ್ರವಲ್ಲ, ಶುದ್ಧ ಗಾಳಿ ಮತ್ತು ಉತ್ತಮ ಪರಿಸರ ಕಲ್ಪಿಸುವುದು ನಮ್ಮ ಕರ್ತವ್ಯ. ಸ್ವಚ್ಛತೆಯ ಕೊರತೆಯಿಂದ ಹರಡುವ ರೋಗಗಳಿಂದ ಸಮಾಜವನ್ನು ರಕ್ಷಿಸುವುದಕ್ಕೆ ಇದು ಕೂಡ ಒಂದು ದಾರಿ.
-ವಸಿಷ್ಠ ಸಿಂಹ, ನಟ ಹಾಗೂ ಸ್ವಚ್ಛತಾ ಬ್ರ್ಯಾಂಡ್ ಅಂಬಾಸಿಡರ್,
ಮೈಸೂರು ನಗರಪಾಲಿಕೆ ಮೈಸೂರಿನೊಂದಿಗೆ ನನ್ನ ಸಂಬಂಧ ಅಪಾರ. ಸ್ವಚ್ಛತೆ ಮನೆಮಾತಾಗಬೇಕು; ಅದು ನಮ್ಮ ಮನೆಯಿಂದಲೇ ಆರಂಭವಾಗಬೇಕು. ನಾವು ನಮ್ಮ ಮನೆ, ವಾಹನ ಹಾಗೂ ಮನೆಮುಂದಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನಗರ ಸುಂದರವಾಗುತ್ತದೆ. ಮೈಸೂರು ಹಿಂದೆ ಅಗ್ರಸ್ಥಾನದಲ್ಲಿತ್ತು; ಪ್ರತಿ ವರ್ಷವೂ ಅದೇ ಸ್ಥಾನದಲ್ಲಿ ಕಾಣಬೇಕು ಎಂಬುದು ನನ್ನ ಆಶಯ. ಈಗಿನ ‘ಸ್ವಚ್ಛತಾ ಲೀಗ್’ ಜನರನ್ನು ಒಗ್ಗೂಡಿಸುವ ಉತ್ತಮ ಪರಿಕಲ್ಪನೆ. ಯಾರು ನಂಬರ್ ೧ ಎನ್ನುವುದಕ್ಕಿಂತ, ನಮ್ಮ ನಗರ ಗೆಲ್ಲುವುದು ಮುಖ್ಯ. ನಮ್ಮ ಕಣ್ಣ ಮುಂದೆ ಕಸ ಕಂಡರೆ ಎತ್ತಿ ಸ್ವಚ್ಛ ಮಾಡುವ ಶಪಥ ಮಾಡೋಣ. ಮುಂದಿನ ಪೀಳಿಗೆಗೆ ಸ್ವಚ್ಛ, ಸುಂದರ ಮೈಸೂರನ್ನು ನೀಡೋಣ.
-ಹರಿಪ್ರಿಯಾ, ನಟಿ ಹಾಗೂ ಸ್ವಚ್ಛತಾ ಬ್ರ್ಯಾಂಡ್ ಅಂಬಾಸಿಡರ್,
ಮೈಸೂರು ನಗರಪಾಲಿಕೆ ‘ಮೈಸೂರಿನ ಸ್ವಚ್ಛತಾ ರಾಯಭಾರಿಯಾಗಿ ಆಯ್ಕೆಯಾಗಿರುವುದು ನನಗೆ ಅಪಾರ ಸಂತೋಷ ತಂದಿದೆ. ಇದು ಗೌರವ ಮಾತ್ರವಲ್ಲ, ದೊಡ್ಡ ಜವಾಬ್ದಾರಿಯೂ ಹೌದು. ಮೈಸೂರು ಈಗಾಗಲೇ ಸ್ವಚ್ಛ ನಗರವಾಗಿ ಹೆಸರು ಪಡೆದಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳನ್ನು ಇನ್ನಷ್ಟು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶಾಲಾ ಮಕ್ಕಳನ್ನು ವಾರಾಂತ್ಯಗಳಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗಿಸುವ ಮೂಲಕ ಮುಂದಿನ ತಲೆಮಾರಿಗೆ ಜಾಗೃತಿ ಮೂಡಿಸಬಹುದು. ಸಾರ್ವಜನಿಕರು ಕಸವನ್ನು ಕಂಡ ಕಂಡ ಜಾಗದಲ್ಲೆಲ್ಲ ಎಸೆಯದೆ ಡಸ್ಟ್‌ಬಿನ್‌ಗಳಲ್ಲಿ ಹಾಕುವ ಅಭ್ಯಾಸ ಬೆಳೆಸಬೇಕು. ಸ್ವಚ್ಛತಾ ಕಾರ್ಮಿಕರನ್ನು ಗೌರವದಿಂದ ಕಾಣಬೇಕು; ಅವರು ನಮ್ಮ ಸಮುದಾಯದ ಹೆಮ್ಮೆ. ಮೈಸೂರು ನಗರ ಪಾಲಿಕೆ ಸಹಕಾರದಿಂದ ಮೈಸೂರನ್ನು ಇನ್ನಷ್ಟು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸಲು ಸಾರ್ವಜನಿಕರು ಕೈಜೋಡಿಸಬೇಕು.
-ಅನನ್ಯಾ ಭಟ್, ಗಾಯಕಿ, ಹಾಗೂ ಸ್ವಚ್ಛತಾ ಬ್ರ್ಯಾಂಡ್ ಅಂಬಾಸಿಡರ್, ಮೈಸೂರು ನಗರಪಾಲಿಕೆ
ತಮಿಳುನಾಡಿನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸೆಲ್ವಕುಮಾರ್ ಹೊಲಿಗೆ ತರಬೇತಿ ಯೂಟ್ಯೂಬ್ ತೆರೆದು ಅದರಲ್ಲಿ ‘ಟೈಲರ್ ಬ್ರೋ’ ಎಂದು ಟೈಪಿಸಿದರೆ…
ಪುನೀತ್ ಮಡಿಕೇರಿ ಮಡಿಕೇರಿ: ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಮತ್ತು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗಿದೆ. ನಗರದ ಹೋಂಸ್ಟೇಗಳಿಗೆ…
ಕೆ.ಟಿ.ಮೋಹನ್ ಕುಮಾರ್ ಫೆ.೨೭ರಂದು ನವಗ್ರಾಮದೇವತೆ ಹುಣಸಮ್ಮತಾಯಿ ಸಿಡಿ ಉತ್ಸವ, ೨೮ರಂದು ರಥೋತ್ಸವ ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ನವಗ್ರಾಮದೇವತೆ ಶ್ರೀ…
ಕೆ.ಎಸ್.ಚಂದ್ರಶೇಖರಮೂರ್ತಿ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಚಿಂತನೆಗೆ ಶಿಕ್ಷಕ ವೃಂದ ಸ್ವಾಗತ ಮೈಸೂರು: ಆಧುನಿಕತೆ ಬೆಳೆಯುತ್ತಾ ಹೋದಂತೆ ಆಧುನಿಕ ತಂತ್ರಜನ…
ಗಿರೀಶ್ ಹುಣಸೂರು ರೆಸಾರ್ಟ್‌ಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ಹುನ್ನಾರ ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ನೆಪ ಇಂದು ಸಫಾರಿ ವಿರೋಧಿಸಿ ಪ್ರತಿಭಟನೆ …