ಕೆ.ಬಿ.ರಮೇಶನಾಯಕ
ಬೆರಗಾಗಿಸಿರುವ ಬಣ್ಣದ ವಿದ್ಯುತ್ ದೀಪಗಳ ಬೆಳಕು
ಸಿಎಂ, ಡಿಸಿಎಂ, ಇಂಧನ ಸಚಿವರ ಪ್ರತಿಕೃತಿ
ಕಂಗೊಳಿಸುತ್ತಿರುವ ಕೆ.ಆರ್.ವೃತ್ತ
ವರ್ಣಮಯ ರಸ್ತೆಗಳಲ್ಲಿ ಓಡಾಡುವ ಸಂಭ್ರಮ
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಯುಕ್ತ ಅರಮನೆ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರದ ಚಿತ್ತಾಕರ್ಷಕ ಆಕೃತಿಗಳ ಮೂಲಕ ಲಕ್ಷಾಂತರ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಹೊಸತನದ ದೀಪಾಲಂಕಾರ ಮಾಡಿರುವುದರಿಂದ ಹಲವು ವೃತ್ತಗಳು ಕಂಗೊಳಿಸುತ್ತಿವೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಿಶಿಷ್ಟವಾಗಿ ಅಲಂಕಾರ ಮಾಡಿರುವುದರ ಜತೆಗೆ ಇಡೀ ಮೈಸೂರು ಸುತ್ತುವರಿದಂತೆ ದೀಪಾಲಂಕಾರ ಮಾಡಿರುವ ಹಿನ್ನೆಲೆಯಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಕಳೆದ ವರ್ಷ 120 ಕಿ.ಮೀ. ಹಾಗೂ 91 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ ದೀಪಾಲಂಕಾರದಲ್ಲಿ ಕೆಲವು ಬದಲಾವಣೆ ಮಾಡಿದ್ದು, ನಗರದ ಹೊರ ವರ್ತುಲ ರಸ್ತೆಯ 42 ಕಿ.ಮೀ. ರಸ್ತೆಗೂ ದೀಪಾಲಂಕಾರದ ಜತೆಗೆ ಸದ್ಯ ಆಯ್ಕೆ ಮಾಡಿರುವ 100 ವೃತ್ತಗಳನ್ನು ಸೇರ್ಪಡೆ ಮಾಡಲಾಗಿದೆ.
ನಗರದ ಪ್ರಮುಖ ರಸ್ತೆಗಳು, ವೃತ್ತ ಹಾಗೂ ಪಾರಂಪರಿಕ ಮಾದರಿಗಳನ್ನು ಅಳವಡಿಸಿದ್ದು, ಪ್ರಜಾಪ್ರಭುತ್ವ ಸಾಗಿಬಂದ ಕಟ್ಟಡಗಳಿಗೆ ದೀಪಾಲಂಕಾರ ಮಾಡುವ ಮೂಲಕ ದಸರಾ ವೈಭಕ್ಕೆ ಮೆರುಗು ನೀಡಿ ಮೈಸೂರನ್ನು ಪ್ರಕಾಶಿಸುವಂತೆ ಮಾಡಲಾಗಿದೆ.
ಯಾವ್ಯಾವ ವೃತ್ತದಲ್ಲಿ ಅಲಂಕಾರ?: ನಗರದ ಮಣಿಪಾಲ್ ಆಸ್ಪತ್ರೆ ಬಳಿಯ ಬೆಂಗಳೂರು- ಮೈಸೂರು ರಸ್ತೆ ವರ್ತುಲ ರಸ್ತೆಯ ವೃತ್ತ, ವೆಂಕಟೇಶ್ವರ ದೇವಸ್ಥಾನ ವೃತ್ತ, ಹುಣಸೂರು, ನಂಜನಗೂಡು, ಕೆಆರ್‌ಎಸ್ ರಸ್ತೆಯ ವರ್ತುಲ ರಸ್ತೆ, ಜಯಚಾಮರಾಜ ಒಡೆಯರ್ ವೃತ್ತ, ಕ್ಲಾಕ್ ಟವರ್, ಫೌಂಟೇನ್, ಸರ್ಕಾರಿ ಅತಿಥಿಗೃಹ, ಫೈವ್ ಲೈಟ್, ಮುಡಾ, ಡಾ. ಬಿ. ಆರ್.ಅಂಬೇಡ್ಕರ್, ಮಿಲೇನಿಯಂ, ಆಯುರ್ವೇದಿಕ್, ಹೈವೇ ಸೇರಿದಂತೆ ಹಲವು ವೃತ್ತಗಳು ವಿಭಿನ್ನ ಬಗೆಯ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಮಹನೀಯರ ಪ್ರತಿಕೃತಿಗಳು: ವಿವಿಧೆಡೆ 65 ಪ್ರತಿಕೃತಿಗಳ ಹಾದಿ, ಭುವನೇಶ್ವರಿ, ಸೋಮನಾಥೇಶ್ವರ ದೇವಾಲಯ, ಸಂವಿಧಾನದ ಪ್ರಸ್ತಾವನೆ, ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪ ನಂಜಮ್ಮಣ್ಣಿ, ಜಯಚಾಮರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಪ್ರತಿಕೃತಿಗಳು ನೋಡುಗರನ್ನು ಆಕರ್ಷಿಸುತ್ತಿವೆ.
ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ನಂಜನಗೂಡು ರಸ್ತೆ, ಹರ್ಷ ರಸ್ತೆ, ಅಶೋಕ ರಸ್ತೆ, ಮಹದೇಶ್ವರ ರಸ್ತೆ, ಹುಣಸೂರು ರಸ್ತೆ, ಜೆಎಲ್‌ಬಿ ರಸ್ತೆ, ಮೈಸೂರು- ಬೆಂಗಳೂರು ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ಚಾಮರಾಜ ಜೋಡಿ ರಸ್ತೆ, ಬುಲೇವಾರ್ಡ್ ರಸ್ತೆ, ಸಿದ್ದಾರ್ಥನಗರ ರಸ್ತೆ, ಸರ್ಕಾರಿ ಕಚೇರಿಗಳು, ಪಾರಂಪರಿಕ ಕಟ್ಟಡಗಳು, ಸಾರ್ವಜನಿಕರ ಉದ್ಯಾನವನಗಳಿಗೂ ದೀಪಾಲಂಕಾರ ಮಾಡಲಾಗಿದೆ.
ರಾತ್ರಿ 7 ಗಂಟೆಗೆ ಅರಮನೆಯಲ್ಲಿ ವಿದ್ಯುತ್ ದೀಪ ಬೆಳಗುತ್ತಿದ್ದಂತೆ ಇಡೀ ನಗರ ಕ್ಷಣಾರ್ಧದಲ್ಲಿ ಬಣ್ಣಗಳ ಬೆಳಕಿನ ಮಳೆಯಲ್ಲಿ ಮಿಂದೆದ್ದಂತೆ ಕಾಣುತ್ತದೆ. ಅದನ್ನು ನೋಡಿ ಆನಂದಿಸಲು ಜನರು ದಂಡು ದಂಡಾಗಿಯೇ ಮುಖ್ಯರಸ್ತೆಗಳ ಕಡೆಗೆ ದಾಂಗುಡಿ ಇಡುತ್ತಿದ್ದಾರೆ.
ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ:
ಮೈಸೂರಿನ ಪ್ರಮುಖ ವೃತ್ತಗಳಲ್ಲಿ ವಿಭಿನ್ನ ಮಾದರಿಯ ದೀಪಾಲಂಕಾರ ಪ್ರತಿಕೃತಿಗಳು ನೋಡುಗರ ಮನಸ್ಸನ್ನು ಮುದಗೊಳಿಸುತ್ತಿವೆ. ಜನರಿಂದ ಸಕಾರಾತಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ತುಂಬಾ ಸಂತೋಷವಾಗಿದೆ. ಈ ಬಾರಿ 21 ದಿನಗಳ ಕಾಲ ದೀಪಾಲಂಕಾರ ಇರುವುದರಿಂದ ನಿರೀಕ್ಷೆ ಮೀರಿ ಜನರು ದೀಪಾಲಂಕಾರವನ್ನು ಕಣ್ಣುಂಬಿಕೊಳ್ಳುವ ಸಾಧ್ಯತೆ ಇದೆ.
ಕೆ.ಎಂ.ಮುನಿಗೋಪಾಲರಾಜು, ತಾಂತ್ರಿಕ ನಿರ್ದೇಶಕರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ.
ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…
ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…
ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.ನಾಗರತ್ನಮ್ಮ ಅವರ…
ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್…
ಗುಂಡ್ಲುಪೇಟೆ: ಮೋಟರ್ ಆನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದ ತೋಟವೊಂದರಲ್ಲಿ…
ಬೆಂಗಳೂರು : 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.…