Andolana originals

ವೃತ್ತಗಳಿಗೆ ಚಿತ್ತಾಕರ್ಷಕ ‘ತ್ರೀಡಿ’ ಮೆರುಗು!

ಆಕರ್ಷಿಸುತ್ತಿರುವ ಸರ್ಕಲ್‌ಗಳು; ಪ್ರವಾಸಿಗರ ಜೊತೆಗೆ ಸವಾರರಿಗೂ ಅನುಕೂಲ

ಸಾಲೋಮನ್

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಸಾಗುವ ಮಾರ್ಗ ದಲ್ಲಿನ ವೃತ್ತಗಳಲ್ಲಿ ಅತ್ಯಾಧುನಿಕ ತಂತ್ರಗಾರಿಕೆ ಆಧರಿಸಿದ ತ್ರೀ ಡೈಮೆನ್ಷನ್‌ (ತ್ರಿಡೀ) ರೇಡಿಯಂ ಚಿತ್ರಗಳನ್ನು ಬಿಡಿಸಿ ವೃತ್ತದ ಸೌಂದರ್ಯವನ್ನು ಇನ್ನಷ್ಟು ಆಕರ್ಷಕಗೊಳಿಸಲಾಗಿದೆ.

ಇದೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಜಂಬೂ ಸವಾರಿ ಮಾರ್ಗದ ವೃತ್ತಗಳ ಸುತ್ತಲೂ ಕೋಲ್ಡ್ ಪ್ಲಾಸ್ಟಿಕ್ ಟೆಕ್ನಾಲಜಿ ಅಳವಡಿಸಿಕೊಂಡು ನಗರದ ಪಾರಂಪರಿಕ ಸೌಂದರ್ಯಕ್ಕೆ ಸ್ಪಂದಿಸುವ ಚಿತ್ರಗಳನ್ನು ಬಿಡಿಸಿ ವೃತ್ತಗಳಿಗೆ ಮೆರುಗು ನೀಡಿದೆ. ಈ ತ್ರೀಡಿ ಚಿತ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಮಾತ್ರವಲ್ಲದೆ, ವಾಹನ ಸವಾರರಿಗೂ ಉಪಯುಕ್ತವಾಗಿರುವುದು ವಿಶೇಷತೆಯಾಗಿದೆ.

ದಸರಾದ ವಿಜಯದಶಮಿಯಂದು ಜಂಬೂ ಸವಾರಿ ಸಾಗುವ ಮಾರ್ಗದ ಅರಮನೆ ಮುಂಭಾಗದ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ ಹಾಗೂ ಹೈವೇ ವೃತ್ತಗಳಲ್ಲಿ ಈ ಚಿತ್ತಾಕರ್ಷಕ ಕಲೆಯು ಕಲಾವಿದರ ಕೈಚಳಕದಲ್ಲಿ ಮೂಡಿಬಂದಿದೆ.

ವೃತ್ತದ ಸುತ್ತಲೂ ತ್ರೀಡಿ ರೇಡಿಯಂ ಪೈಂಟಿಂಗ್ ಮಾಡಿ ಅದರ ಒಳಗೆ ಆನೆ, ಎಲೆಗಳು, ಕಮಲ, ನವಿಲು ಮುಂತಾದ ಆಕರ್ಷಕ ವಿನ್ಯಾಸದ ಚಿತ್ರಗಳನ್ನು ಬಿಡಿಸಲಾಗಿದೆ.

ಇವು ಪೈಂಟ್ ವಾಷಬಲ್ ಕೂಡ ಆಗಿದ್ದು, ಈ ಭಾಗದಲ್ಲಿ ರಾತ್ರಿ ವೇಳೆ ಸಂಚರಿಸುವಾಗ ಪೈಂಟಿಂಗ್ ಪ್ರಜ್ವಲಿಸುವುದರಿಂದ ಆಕರ್ಷಣೆ ಜೊತೆಗೆ ವಾಹನ ಚಾಲಕರಿಗೆ ಸುರಕ್ಷತೆಯನ್ನೂ ನೀಡುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಮಹಾನಗರಗಳ ಸೌಂದರ್ಯ ಹೆಚ್ಚಿಸಲು ಈ ತಂತ್ರಜ್ಞಾನ ಬಳಸಲಾಗಿದ್ದು, ಭಾರತದ ವಿವಿಧ ನಗರಗಳಲ್ಲಿ ವಿಶಾಲವಾದ ರಸ್ತೆಗಳಲ್ಲಿ ವಾಹನಗಳ ಟ್ಯಾಕ್‌ಗಳು, ಫುಟ್‌ಪಾತ್‌ಗಳು ಹಾಗೂ ವೃತ್ತಗಳಿಗಳಿಗೆ ಕೋಲ್ ಪ್ಲಾಸ್ಟಿಕ್ ಟೆಕ್ನಾಲಜಿ ಆಧರಿಸಿ ‘ರೇಡಿಯಂ ಪೇಯಿಂಟ್’ಗಳನ್ನು ರಚಿಸಲಾಗಿದೆ. ದಿಚಕ್ರ ವಾಹನಗಳು ಈ ಚಿತ್ರಗಳ ಮೇಲೆ ಚಲಿಸಿದರೂ ಬಣ್ಣ ಮಾಸ ದಿರುವುದು ಇದರ ವಿಶೇಷತೆಯಾಗಿದೆ.

ಪುಣೆಯ ‘ಕೆಟಲೈನ್ ಇನ್ಪ್ರಾ ಪ್ರಾಡೆಕ್ಟ್ ಪೈ.ಲಿ, ಕಂಪನಿ’ಗೆ ಈ ಜವಾಬ್ದಾರಿಯನ್ನು ವಹಿಸಿ 45 ಲಕ್ಷ ರೂ.ಗೆ ಗುತ್ತಿಗೆಗೆ ನೀಡಲಾಗಿದೆ. ಈ ಚಿತ್ರಗಳು ಸುಮಾರು ಎರಡು ವರ್ಷಗಳವರೆಗೂ ಹಾಳಾಗುವುದಿಲ್ಲ ಹಾಗೂ ಅವುಗಳ ನಿರ್ವಹಣೆಯನ್ನೂ ಇದೇ ಕಂಪನಿಯು ನಿರ್ವಹಿಸಲಿದೆ.

ರೋಮಾಂಚಕ ವಿನ್ಯಾಸಗಳು ಮತ್ತು ಕ್ರಿಯಾತ್ಮಕ ಗುರುತುಗಳನ್ನು ಸಂಯೋಜಿಸುವ ಮೂಲಕ, ನಗರದ ಸಾರ್ವಜನಿಕ ಸ್ಥಳಗಳು ಸೌಂದರ್ಯ ಪರಿಕಲ್ಪನೆಯಡಿ ಪರಿವರ್ತನೆ ಕಂಡಿವೆ. ಸುರಕ್ಷತೆ, ಸೌಂದರ್ಯ ಮತ್ತು ಪರಿಸರ ಪ್ರಜ್ಞೆಯ ಸಮ್ಮಿಲನವನ್ನು ಇಲ್ಲಿ ಕಾಣಬಹುದಾಗಿದೆ.

ಕೋಲ್ಡ್ ಪ್ಲಾಸ್ಟಿಕ್:
ಕೋಲ್ ಪ್ಲಾಸ್ಟಿಕ್ ನಗರದ ಸೌಂದರ್ಯ ಹೆಚ್ಚಿಸುವಲ್ಲಿ ವಿಶ್ವದಾದ್ಯಂತ ಕ್ರಾಂತಿಯನ್ನುಂಟು ಮಾಡುತ್ತಿದೆ, ಇದು ಪರಿಸರ ಸ್ನೇಹಿ ಮತ್ತು ಸ್ಕಿಡ್‌ನಿರೋಧಕ ಆಗಿದೆ. ನಗರದ ಪ್ರದೇಶದಲ್ಲಿ ಸೈಕಲ್ ಟ್ರ್ಯಾಕ್‌ಗಳು, ಪಾದಚಾರಿ ಕ್ರಾಸಿಂಗ್ ಗಳು, ವಾಕ್ ವೇಗಳು, ಜಂಕ್ಷನ್‌ಗಳು ಮತ್ತು ರೋಟರಿಗಳಲ್ಲಿ ವ್ಯಾಪಕವಾಗಿ ಇದನ್ನೇ ಬಳಸಲಾಗುತ್ತಿದೆ. ಈ ಪೈಂಟಿಂಗ್ ನಗರ ಪ್ರದೇಶಗಳನ್ನು ಸುಂದರಗೊಳಿಸುವುದಲ್ಲದೆ ವಾಹನ ಸವಾರರ ಸುರಕ್ಷತೆಯನ್ನೂ ಹೆಚ್ಚಿಸುತ್ತದೆ. ಇದರ ಆಂಟಿ-ಸ್ಲಿಪ್ ಗುಣಲಕ್ಷಣಗಳು ಸುಗಮ ಮತ್ತು ಸುರಕ್ಷಿತ ಚಲನೆಗೆ ಸಹಕಾರಿಯಾಗಿದ್ದು, ಅಪಘಾತಗಳು, ಅಪಾಯವನ್ನು ಕಡಿಮೆ ಮಾಡುತ್ತದೆ. ಕೋಲ್ಡ್ ಪ್ಲಾಸ್ಟಿಕ್‌ನ ಬಾಳಿಕೆ ಮತ್ತು ಪರಿಸರ ಸಂರಕ್ಷಿತ ಪ್ರಯೋಜನಗಳು ಸುಸ್ಥಿರ ನಗರ ಯೋಜನೆಗೆ ಆದ್ಯತೆ ನೀಡಿದೆ.

 

ಆಂದೋಲನ ಡೆಸ್ಕ್

Recent Posts

ಕರ್ನಾಟಕ ಸೇರಿ ಐದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಭಾರತ್‌ ರೈಸ್:‌ ಪ್ರಹ್ಲಾದ್‌ ಜೋಶಿ ಮಾಹಿತಿ

ನವದೆಹಲಿ: ಕರ್ನಾಟಕ ಸೇರಿದಂತೆ ದಕ್ಷಿಣದ ಐದು ರಾಜ್ಯಗಳಿಗೆ ಹೆಚ್ಚುವರಿ ಭಾರತ್ ರೈಸ್ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್…

13 hours ago

ಜನರ ತೆರಿಗೆ ಹಣದಿಂದ ಕಟ್ಟಿದ ಅರಮನೆ ಜನರಿಗೇ ಸೇರಬೇಕು: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮೈಸೂರು ಅರಮನೆ ಕುರಿತ ಹೇಳಿಕೆಯನ್ನು ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಹಾರಾಜರು ಅರಮನೆ…

14 hours ago

ಮಲೆ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ಪಾದಯಾತ್ರೆ ನಿಷೇಧ: ನ.11ರವರೆಗೆ ನಿರ್ಬಂಧ!

ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರ ಗಮನಕ್ಕೆ! ದೀಪಾವಳಿ ಜಾತ್ರೆಯ ಹಿನ್ನೆಲೆಯಲ್ಲಿ ನವೆಂಬರ್‌ 11ರವರೆಗೆ ರಾತ್ರಿ ವೇಳೆ ಕಾಲ್ನಡಿಗೆ…

17 hours ago

10 ದಿನಗಳಲ್ಲಿ 6 ಅಡಿ ಕುಸಿದ ಕೆಆರ್‌ಎಸ್‌: 98 ಅಡಿಗೆ ಇಳಿದ ನೀರಿನ ಮಟ್ಟ, ರೈತರಲ್ಲಿ ಆತಂಕ!

ಮಂಡ್ಯ: ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ನೀರಿನ ಮಟ್ಟ ಆರು ಅಡಿ…

17 hours ago

ನವೆಂಬರ್.‌13ರಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ

ಬೆಂಗಳೂರು: ನವೆಂಬರ್‌ 13ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ…

17 hours ago

ಓದುಗರ ಪತ್ರ: ಹಾಲಿನ ದರದ ಹೆಚ್ಚಳದ ಲಾಭ ರೈತನಿಗೆ ಸಿಗಲಿ

ರೈತರ ಹೆಸರನ್ನು ಮುಂದಿಟ್ಟುಕೊಂಡು ಸರ್ಕಾರ ಹಾಲಿನ ದರ ಹೆಚ್ಚಳದ ಘೋಷಣೆ ಮಾಡುತ್ತದೆ. ಆದರೆ ಆ ಘೋಷಣೆಯ ಪೂರ್ಣ ಲಾಭ ಮಾತ್ರ…

18 hours ago