ಗ್ರೀನ್ ಪೀಸ್ ಇಂಡಿಯಾ ಸಂಶೋಧನಾ ವರದಿ ಬಹಿರಂಗ
ಮೈಸೂರು: ಚಾಮುಂಡಿ ಬೆಟ್ಟದ ಮಡಿಲಲ್ಲಿರುವ, ಬಂಡೀಪುರ, ನಾಗರಹೊಳೆ ಮತ್ತಿತರ ಸಮೃದ್ಧ ಅರಣ್ಯ ಪ್ರದೇಶಗಳಿಂದ ಸುತ್ತುವರಿದಿ ರುವ ಮೈಸೂರು ನಗರದ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ ಎಂಬ ಆಘಾತಕಾರಿ ಸುದ್ದಿ ಗ್ರೀನ್ ಪೀಸ್ ಸಂಶೋಧನಾವರದಿಯಲ್ಲಿ ಬಹಿರಂಗಗೊಂಡಿದೆ.
ಈ ವರದಿಯು ವಾಯು ಮಾಲಿನ್ಯದಿಂದ ನಗರದ ಜನತೆಯ ಆರೋಗ್ಯದ ಮೇಲೆ ಗಂಭೀರ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ.
ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿ ನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿ ದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಕೂಡಲೇ ವಾಯು ಮಾಲಿನ್ಯವನ್ನು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳ ದಿದ್ದರೆ, ಜನರ ಆರೋಗ್ಯದ ಮೇಲೆ ಅದು ತೀವ್ರ ತೆರನಾದ ದುಷ್ಪರಿಣಾಮ ಬೀರಬಲ್ಲದು. ದಕ್ಷಿಣ ಭಾರತದ 10 ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ 2.5 (ಸೂಕ್ಷ್ಮ) ಮತ್ತು ಪಿಎಂ 10 (ಅತಿಸೂಕ್ಷ್ಮಗಳ ಪ್ರಮಾಣವು ಡಬ್ಲ್ಯುಎಚ್ ಒ ಮಾರ್ಗಸೂಚಿ ನಿಗದಿಪಡಿಸಿದ ಸರಾಸರಿ ಮಟ್ಟ ಗಳನ್ನು ಮೀರಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಗ್ರೀನ್‌ಸ್ ಇಂಡಿಯಾದ ‘ಸ್ಟೇರ್ ದಿ ಏರ್-2 ವರದಿಯು ಎಚ್ಚರಿಸಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಬೆಂಗಳೂರು, ಮಂಗಳೂರು, ಮೈಸೂರು, ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣ, ಕೊಚ್ಚಿ, ಅಮರಾವತಿ, ವಿಜಯವಾಡ ಮತ್ತು ಪುದುಚೇರಿಯಲ್ಲಿ ಳಿಯ ಗುಣಮಟ್ಟವನ್ನು ಈ ಸಂಸ್ಥೆ ವಿಶ್ಲೇಷಿಸುತ್ತದೆ. ಈ ಹತ್ತು ನಗರಗಳ ಪೈಕಿ ವಿಶಾಖಪಟ್ಟಣದಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ. ಇಲ್ಲಿನ ಗಾಳಿಯಲ್ಲಿ ಪಿಎಂ 2.5 ಕಣಗಳ ಪ್ರಮಾಣ ಡಬ್ಲ್ಯುಎಚ್ ಮಾರ್ಗಸೂಚಿ ನಿಗದಿ ಪಡಿಸಿದ ಮಾನದಂಡಕ್ಕಿಂತ 10 ಪಟ್ಟು ಮತ್ತು ಪಿಎಂ 10 ಕಣಗಳ ಪ್ರಮಾಣ 9 ಪಟ್ಟು ಹೆಚ್ಚಿರು ವುದು ದೃಢಪಟ್ಟಿದೆ. ಇದು ಗಾಳಿಯ ಗುಣಮಟ್ಟ ಮಾಪಕ ನ್ಯಾಶನಲ್ ಎಂಬಿಯಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್ (ಎನ್ಎಕ್ಯೂಎಸ್) ನಿಗದಿಪಡಿಸಿದ ಮಿತಿಗಳನ್ನೂ ಮೀರಿದೆ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.
ಡಬ್ಲ್ಯುಎಚ್ ಒ ಮಾರ್ಗಸೂಚಿಗಳೊಂದಿಗೆ ಹೋಲಿಸಿದಾಗ, ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರು, ಹೈದರಾಬಾದ್, ವಿಜಯವಾಡ, ಕೊಚ್ಚಿ, ಅಮರಾವತಿ ಮತ್ತು ಚೆನ್ನೈನಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ. ಅದೇ ರೀತಿ, ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟು ಹೆಚ್ಚಾಗಿದೆ ಎಂಬುದನ್ನು ವರದಿಯು ದೃಢಪಡಿಸಿದೆ.
ಈ ಸಂಶೋಧನಾ ತಂಡದ ನೇತೃತ್ವವನ್ನು ವಹಿಸಿದ್ದ ಸಂಶೋಧಕಿ, ಆಕಾಂಕ್ಷಾಸಿಂಗ್, ಈ ಅಧ್ಯಯನವು ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿ ದಂತೆ ನ್ಯಾಶನಲ್ ಎಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ (ಎನ್ ಎಎಕ್ಯೂಎಸ್) ಮಾರ್ಗಸೂಚಿ ಯಲ್ಲಿ ತಿಳಿಸಲಾದ ಮಾನದಂಡ ಗಳನ್ನು ಮೀರಿರುವ ನಗರಗಳ ಮೇಲೆ ಕೇಂದ್ರೀಕೃತವಾಗಿದೆ. ಆದರೆ, ಈಗಾಗಲೇ ನಿಗದಿಪಡಿಸಲಾದ ಮಾನದಂಡಗಳನ್ನು ಅನುಸರಿಸುತ್ತಿ ರುವ ನಗರಗಳನ್ನೂ ಈ ಅಧ್ಯ ಯನಕ್ಕೆ ಒಳಪಡಿಸುವುದು ಅಗತ್ಯ ವಾಗಿದೆ. ಈ ನಗರಗಳಲ್ಲಿನ ಗಾಳಿಯ ಗುಣಮಟ್ಟವನ್ನು ಅದು ನಿಗದಿಪಡಿ ಮಾನದಂಡಗಳನ್ನು ಮೀರುವ ಮುಂಚಿತವಾಗಿಯೇ ಕಾಪಾಡಿ ಕೊಳ್ಳು ವುದು ಅಗತ್ಯ ಎಂದು ಎಚ್ಚರಿಸಿದರು. ಈ ವರದಿಯು ಪ್ರಸ್ತುತ ವಾಯು ಮಾಲಿನ್ಯದ ಬಿಕ್ಕಟ್ಟು ಕೇವಲ ಉತ್ತರ ಭಾರತದ ನಗರಗಳನ್ನು ಮಾತ್ರವಲ್ಲ ಇಡೀ ದೇಶವನ್ನು ಒಳಗೊಳ್ಳುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
• ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ ದಕ್ಷಿಣ ಭಾರತದ 10 ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳ ಪ್ರಮಾಣ ಏರಿಕೆ
• ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿದ ಸರಾಸರಿ ಮಟ್ಟ ಮೀರಿ ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ
• ಜನತೆಯ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ಸಂದೇಶ ಮಾಲಿನ್ಯಕಾರಕ ಕಣ ಪಿಎಂ 10 (ಅತಿಸೂಕ್ಷ್ಮ ) ಮಾನದಂಡ
• ವಿಶಾಖಪಟ್ಟಣದಲ್ಲಿ 9 ಪಟ್ಟು ಹೆಚ್ಚಳ
• ಬೆಂಗಳೂರು, ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟು ಹೆಚ್ಚಳ
ಮಾಲಿನ್ಯಕಾರಕ ಕಣ ಪಿಎಂ 2.5 (ಸೂಕ್ಷ್ಮ) ಮಾನದಂಡ
• ವಿಶಾಖಪಟ್ಟಣದಲ್ಲಿ 10 ಪಟ್ಟು ಹೆಚ್ಚಳ
• ಮಂಗಳೂರು, ಹೈದರಾ ಬಾದ್, ವಿಜಯವಾಡ,
ಕೊಚ್ಚಿ, ಅಮರಾವತಿ ಮತ್ತು ಚೆನ್ನೈನಲ್ಲಿ 6 ರಿಂದ 7 ಪಟ್ಟು ಹೆಚ್ಚಳ
ಪ್ರಸ್ತುತ ವರದಿಯು ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿನ ಮಾಲಿನ್ಯ ಕಾರಕ ಪಿಎಂ (ಪರ್ಟಿಕ್ಯುಲೇಟ್ ಮ್ಯಾಟರ್ಸ್) ಕಣಗಳ ಮಟ್ಟವು ಡಬ್ಲ್ಯುಎಚ್ ಒನಿಂದ ಪರಿಷ್ಕೃತ ನಿಗ ದಿತ ಮಾರ್ಗಸೂಚಿಗಳನ್ನು ಮೀರಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
–ಆಕಾಂಕ್ಷಾ ಸಿಂಗ್, ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಸಂಶೋಧಕಿ,
ದಕ್ಷಿಣ ಭಾರತದ ನಗರಗಳಲ್ಲಿ ಅಪಾಯಕಾರಿ ಪ್ರಮಾಣದಲ್ಲಿರುವ ಮಾಲಿನ್ಯಕಾರಕ ಕಣಗಳ ಮಟ್ಟವು ಡಬ್ಲ್ಯುಎಚ್ ಒ ಮಾರ್ಗಸೂಚಿಗಳನ್ನು ಮೀರಿದ್ದು, ಜನರ ಆರೋಗ್ಯಕ್ಕೆ ತೀವ್ರ ಆತಂಕವನ್ನೊಡ್ಡಿದೆ.
-ಲೋಮಿ ಗಾರ್ನಾಯಕ್, ಗ್ರೀನ್ ಪೀಸ್ ಇಂಡಿಯಾದ ಪ್ರಚಾರಕಿ
ಗ್ರೀನ್‌ಸ್ ಇಂಡಿಯಾ ಬಗ್ಗೆ
ಗ್ರೀನ್ ಪೀಸ್ ಇಂಡಿಯಾ ಸ್ವತಂತ್ರ ಸಂಸ್ಥೆಯಾಗಿದ್ದು, ಲಾಭರಹಿತ ಮತ್ತು ಪರಿಸರ ಪರ ಅಭಿಯಾನಗಳನ್ನು ಹಮ್ಮಿ ಕೊಳ್ಳುವ ಸಂಸ್ಥೆಯಾಗಿದೆ. ಹವಾಮಾನ ಭೂಮಿಯ ತಾಪಮಾನ ತಗ್ಗಿಸುವಿಕೆಗೆ ಹೊಸ ಮಾರ್ಗೋಪಾಯ ಮತ್ತು ಅಗತ್ಯ ಮಾರ್ಪಾಡುಗಳಿಗೆ ಉತ್ತೇ ಜನ ನೀಡಲು ಮೀಸಲಾಗಿದೆ.
• ಮಾಹಿತಿಗೆ: https://www.greenpeace.org/india/en/
ಶೇತಾ ಸಿಂಗ್: shweta.singh1@greenpeace.org, . 20.9691330473
• ಸೆಲೋಮಿ ಗರ್ನಾಯಕ್ ಇಮೇಲ್: selomi.garnaik@ greenpeace.org, ಮೊ.ಸಂ.7991000638 ಸಂಪರ್ಕಿಸಬಹುದು.
ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…
ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…
ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್ ರಿಲೀಫ್…
ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…
ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…
ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…