Andolana originals

ಗಣಪತಿ ವಿಗ್ರಹ ತಯಾರಿಕೆ ಬಿಡಿಸಲಾಗದ ಬಂಧ

ಕಿಕ್ಕೇರಿ ಸ್ವಾಮಿಗೆ ವಂಶದ ಬಳುವಳಿಯಾಗಿ ಬಂದಿರುವ ಕಲೆ ‘

ಮೈಸೂರು: ಈ ಕಲೆಯಿಂದ ಬಿಡಿಸಿಕೊಳ್ಳಲಾಗದ ನಂಟು… ಬದುಕು ಕಟ್ಟಿಕೊಡದಿದ್ದರೂ ಕಲೆಯ ಮೇಲಿನ ಪ್ರೀತಿ, ಅಭಿಮಾನ ಗಣಪತಿ ವಿಗ್ರಹಗಳನ್ನು ತಯಾರಿಸಲು ಉತ್ತೇಜಿಸುತ್ತದೆ… ಅದೂ ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳು ಅವು… ಹಾಗಾಗಿಯೇ ಸುಮಾರು 30 ವರ್ಷಗಳಿಂದಲೂ ಹಬ್ಬದ ವೇಳೆಗೆ ಇಡೀ ಕುಟುಂಬದವರು ಈ ಕಾಯಕದಲ್ಲಿ ತನ್ಮಯರಾಗಿ ತೊಡಗುತ್ತಾರೆ. ಗಳಿಸಿದಷ್ಟೇ ಆದಾಯಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ವಾಸಿಸುತ್ತಿರುವ ಸ್ವಾಮಿ ಅವರೇ ಈ ಶ್ರಮಜೀವಿ. ಅವರಿಗೆ ಗಣೇಶ ತಯಾರಿಕೆ ವಂಶ ಪಾರಂಪರವಾಗಿ ಬಂದಿರುವ ಕಲೆ. ಆದರೆ, ಇದರಿಂದ ನಿತ್ಯದ ಬದುಕು ಸಾಗಿಸುವುದು ಕಠಿಣವಾಗಿಬಿಟ್ಟಿತು. ಹಾಗಾಗಿ ಜೀವನಕ್ಕೆ ಬೇರೆ ದುಡಿಮೆಯ ದಾರಿ ಕಂಡುಕೊಂಡಿದ್ದಾರೆ. ಆದರೆ, ಗೌರಿ- ಗಣೇಶ ಹಬ್ಬದ ಸಮಯದಲ್ಲಿ ಮಾತ್ರ ಮಣ್ಣಿನ ಗಣಪನ ತಯಾರಿಕೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಅವರಿಗೆ ಇಡೀ ಕುಟುಂಬ ಸಹಕಾರ ನೀಡುತ್ತದೆ.

ವಿಗ್ರಹಕ್ಕೆ ನೈಸರ್ಗಿಕ ಸುಗಂಧ ದ್ರವ್ಯ ಬಳಕೆ
ಸ್ವಾಮಿ ಅವರು ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯಲ್ಲಿ ನೈಸರ್ಗಿಕ ಸುಗಂಧವನ್ನು ಸೇರಿಸುತ್ತಾರೆ. ಇದು ಗಣಪತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಉತ್ತಮಗೊಳಿಸುತ್ತದೆ. ಪ್ರತಿಮೆಗೆ ವಾಟರ್ ಪೇಯಿಂಟ್ ಬಳಸದೆ, ಆಯಿಲ್ ಪೇಯಿಂಟ್ ಉಪಯೋಗಿಸುತ್ತಾರೆ. ನಂತರ ಗಣಪತಿಯ ಮುಖದಲ್ಲಿ ಕಣ್ಣುಗಳು, ದಂತಗಳು ಮತ್ತಿತರ ಚಿತ್ತಾರಗಳನ್ನು ಮೂಡಿಸುತ್ತಾರೆ.

ಸ್ವಾಮಿ ತಯಾರಿಸುವ ವಿಗ್ರಹ ಪ್ರಸಿದ್ಧಿ:
ಸ್ವಾಮಿ ಅವರ ಮೂರ್ತಿ ತಯಾರಿಕೆ ಮತ್ತು ಬಣ್ಣ ಹಾಕುವ ಕಾರ್ಯವು ಕಿಕ್ಕೇರಿ ಪಟ್ಟಣದಲ್ಲಿ ಬಹಳ ಪ್ರಸಿದ್ಧವಾಗಿದೆ.

ಹಿಂದೆ ಕೂಡು ಕುಟುಂಬದಲ್ಲಿದ್ದಾಗಲೇ ಸ್ವಾಮಿ ಅವರಿಗೆ ಗಣಪನ ತಯಾರಿಕೆ ಕಲೆ ಕರಗತವಾಗಿತ್ತು. ಮದುವೆಯಾದ ನಂತರ ದಂಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿ ಸಿದರು. ಕಲೆಯನ್ನು ಬಿಡದೆ ಗಣಪನನ್ನು ತಯಾರಿಸಿ ಮಾರಾಟ ಮುಂದುವರಿಸಿದ್ದರು. ಅವರಿಗೆ ಪತ್ತಿ ಕಲಾವತಿ ಸಹಕಾರ ನೀಡಿ ದರು. ಈ ಕೆಲಸ ಹೊಟ್ಟೆತುಂಬಿಸು ವುದು ಕಷ್ಟವಾದಾಗ ಸ್ವಾಮಿ ಅವರು, ಮನೆಗಳಿಗೆ ಬಣ್ಣ ತುಂಬುವ ಕೆಲಸ ಶುರು ಮಾಡಿದರು.

ಅಲ್ಲದೆ, ಕಲಾವತಿ ಅವರು ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಗಣಪತಿ ತಯಾರಿಕೆ ಯನ್ನು ಮುಂದುವರಿಸಿ ದ್ದಾರೆ. ಸ್ವಾಮಿ ದಂಪತಿ ಜೊತೆ ಅವರ ಪುತ್ರ ಮೋಕ್ಷಿತ್ ಕೂಡ ಗಣಪ ವಿಗ್ರಹ ತಯಾರಿ ಸುವುದನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಮಣ್ಣಿನ ಗಣಪತಿಯ ತಯಾರಿಕೆಯಲ್ಲಿ ಪರಿಸರ ಸ್ನೇಹಿ ತತ್ವಗಳು ಗಾಳಿಗೆ ತೂರುತ್ತಿರುವುದರಿಂದ, ಪರಿಸರದ ಪಾಲನೆಯ ದೃಷ್ಟಿಯಿಂದ ಮಣ್ಣಿನ ಗಣಪತಿ ಮೂರ್ತಿಯನ್ನೇ ಹೆಚ್ಚಾಗಿ ಪೂಜಿಸಿ ಪರಿಸರಕ್ಕೆ ಹಾನಿ ಮಾಡದಂತೆ ಹಬ್ಬ ಆಚರಿಸಲು ಜನತೆಮುಂದಾಗಬೇಕು.
-ಸ್ವಾಮಿ, ಕಿಕ್ಕೇರಿ, ಮಂಡ್ಯ ಜಿಲ್ಲೆ.

ಆಂದೋಲನ ಡೆಸ್ಕ್

Recent Posts

ಕೊಡಗಿನಲ್ಲಿ ಮುಂದುವರೆದ ಕಾಡಾನೆ ಸೆರೆ ಕಾರ್ಯಾಚರಣೆ

ಕೊಡಗು: ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿರುವ…

2 hours ago

ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ 20ನೇ ವರ್ಷದ ಸಂಭ್ರಮ

ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…

3 hours ago

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

6 hours ago

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…

6 hours ago

ಓದುಗರ ಪತ್ರ: ಹೆಚ್ಚಿನ ಟಿಕೆಟ್ ದರ ನೀಡಲು ಸಿದ್ಧರಾಗಬೇಕಾ?

ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…

6 hours ago

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

6 hours ago