Andolana originals

ತಾರಾನಾಥ್ ಒಳಗೆ ಜಾಗೃತವಾಗಿತ್ತು ತಾಯ್ತನ

ಭಾವುಕರಾಗಿ ಸ್ಮರಿಸಿದ ಒಡನಾಡಿ ಹಿಮಾಂಶು

ಮೈಸೂರು: ಅವರು ಹಾಗೇ.. ತಮ್ಮ ಅಗತ್ಯಕ್ಕಿಂತಲೂ ಇತರರ ಅವಶ್ಯಕತೆಗಳಿಗೆ ಪ್ರಥಮ ಆದ್ಯತೆ ನೀಡಿ, ಮುಕ್ತ ಹೃದಯದಿಂದ ಸಹಾಯದ ಹಸ್ತ ಚಾಚುತ್ತಿದ್ದರು. ಆದರೆ, ಅದು ಯಾರಿಗೂ ಗೊತ್ತಾಗದಂತೆ ಗುಟ್ಟಾಗಿಯೇ ಇಡುತ್ತಿದ್ದರು..

ಮಂಗಳವಾರ ನಿಧನರಾದ ರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್‌ ರಾಜೀವ ತಾರಾನಾಥ್ ಅವರ ತಾಯ್ತನದಂತಹ ಗುಣಗಳ ಬಗ್ಗೆ ಕಲಾ ಪೋಷಕ ಸಿ.ಆರ್.ಹಿಮಾಂಶು ಅವರು ಅತ್ಯಂತ ಮೃದು ಹಾಗೂ ನೋವಿನಿಂದ ಕೂಡಿದ ಮಂದ ಧ್ವನಿಯಲ್ಲಿ ಹೀಗೆ ಬಣ್ಣಿಸಿದರು.

ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಎತ್ತರಕ್ಕೆ ಏರಿದ ತಾರಾನಾಥ್ ಅವರಲ್ಲಿ ಸರಳತೆ ಅಗಾಧ ವಾಗಿತ್ತು. ಅವರ ಆಪ್ತವಲಯ ಅಥವಾ ಮನೆಯಲ್ಲಿ ಕೆಲಸ ಮಾಡುವ ಜನರ ಕಷ್ಟಗಳು ಕಿವಿಗೆ ಬಿದರೆ ಸಾಕು, ತಮ್ಮಿಂದ ಸಾಧ್ಯವಾಗುವುದಿದ್ದರೆ ತಕ್ಷಣ ಪರಿಹರಿಸಲು ಮುಂದಾಗುತ್ತಿದ್ದರು. ಹಲವು ಸಂಗೀತ ಕಲಾವಿದರಿಗೂ ಅವರ ನೆರವು ಅಪಾರವಾಗಿತ್ತು. ಅನೇಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಶಾಲೆ ಕಾಲೇಜು ಪ್ರವೇಶ ಶುಲ್ಕ ಭರ್ತಿ ಮಾಡುವುದು ಇಂತಹ ಕಾರ್ಯಗಳನ್ನು ಎಲೆಮರೆಯ ಕಾಯಿಯಂತೆ ಇದ್ದುಕೊಂಡು ನೆರವೇರಿಸುತ್ತಿದ್ದರು. ಎಂದಿಗೂ ಪ್ರಚಾರ ಬಯಸಿದವರಲ್ಲ ಎಂದು ‘ಆಂದೋಲನ’ ದಿನಪತ್ರಿಕೆಗೆ ಹಿಮಾಂಶು ತಿಳಿಸಿದರು.

ನನಗೆ 18 ವರ್ಷಗಳಾಗಿದ್ದಾಗ ತಾರಾನಾಥ್ ಅವರ ಒಡನಾಟ ದಕ್ಕಿತು. ಅಂದರೆ ಸುಮಾರು 55 ವರ್ಷಗಳ ಬಾಂಧವ್ಯ. ಅಂದಿನಿಂದಲೂ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಿಗೆ ರಾಮಕೃಷ್ಣ ಹೆಗಡೆ, ಎಂ.ಪಿ.ಪ್ರಕಾಶ್ ಅವರಂತಹ ರಾಜಕಾರಣಿಗಳ ಒಡನಾಟ ಇತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರೂ, ತಾರಾನಾಥ್ ಅದನ್ನು ತಮ್ಮ ಸ್ವಾರ್ಥಕ್ಕೆ ಎಂದೂ ಬಳಸಿಕೊಳ್ಳಲಿಲ್ಲ ಎಂದು ಅವರು ಸ್ಮರಿಸಿದರು.

ಸಮಾಜ ಸೇವೆಯಲ್ಲೂ ಮುಂದು

ಧಾರವಾಡ, ಹೈದರಾ ಬಾದ್, ಕೊಲ್ಕತ್ತಾ, ತಿರುಚ್ಚಿ ಮುಂತಾದ ಸ್ಥಳಗಳಲ್ಲಿ ತಾರಾ ನಾಥ್ ಅವರು ಪ್ರಾಧ್ಯಾಪಕ
ರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ಎತ್ತಿದ ಕೈ ಆಗಿದ್ದ ತಾರಾ ನಾಥ್ ಅವರು ತಿರುಚ್ಚಿಯಲ್ಲಿದ್ದಾಗ ‘ಟೆನ್ ಆಫ್ ಅಸ್’ ಎಂಬ ಸಂಘವನ್ನು ರಚನೆ ಮಾಡಿದ್ದರು. ಸಿ.ಆರ್.ಹಿಮಾಂಶು, ಕಲಾ ಪೋಷಕರು, ಮೈಸೂರು

ಆರ್ಥಿಕವಾಗಿ, ಮಾನಸಿಕವಾಗಿ ಬಲ ತುಂಬಿದ್ದರು
ಮಾನವೀಯ ದೃಷ್ಟಿಯ ಬಹಳ ದೊಡ್ಡ ಮನುಷ್ಯ ಪಂ.ರಾಜೀವ ತಾರಾನಾಥ್ ಅವರು. 12 ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ನನ್ನ ಪತ್ನಿ ತೀರಿಹೋದರು. ನಾನು ಗಂಭೀರವಾಗಿ ಗಾಯಗೊಂಡಿದ್ದೆ. ಆ ಸಂದರ್ಭದಲ್ಲಿ ತಾರಾನಾಥ್ ಅವರು ನನಗೆ ಆರ್ಥಿಕ ವಾಗಿ, ಮಾನಸಿಕವಾಗಿ ಜೀವನ ಚೇತರಿಕೆಗೆ ಸಹಕರಿಸಿದರು. ಐಪಿಎಸ್ ಚಂದ್ರಶೇಖರ್ ಮತ್ತಿತರರನ್ನು ಒಗ್ಗೂಡಿಸಿ ನನಗೆ ಸಹಾಯ ಮಾಡಿದರು. ಜಾತಿ, ಮತ, ಧರ್ಮಗಳನ್ನು ಮೀರಿ ಅವರ ಹೃದಯ ಮಿಡಿಯುತ್ತಿತ್ತು. ಹಾಗಾಗಿ ಅವರು ಬಹಳ ಮೃದು ಹೃದಯದ ಮನುಷ್ಯರಾಗಿದ್ದರು. ಸುಮಾರು 25 ವರ್ಷಗಳಿಂದ ಅವರೊಡನೆ ನನಗೆ ಒಡನಾಟ ಇತ್ತು.ಉಸ್ತಾದ್ ಫಯಾಜ್ ಖಾನ್, ಶಾಸ್ತ್ರೀಯ ಸಂಗೀತಗಾರರು, ಧಾರವಾಡ.

ಮುಳ್ಳೂರು ಶಿವಪ್ರಸಾದ್

ಮೂಲತಃ ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದವನಾದ ನಾನು ನಂಜನಗೂಡಿನ ಕೆಎಚ್ ಬಿ ಕಾಲೋನಿಯಲ್ಲಿ ವಾಸವಿದ್ದೇನೆ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ನನಗೆ ಪತ್ರಿಕಾರಂಗದಲ್ಲಿ 20 ವರ್ಷಗಳ ಅನುಭವವಿದೆ. ನಂಜನಗೂಡಿನಲ್ಲಿ ಕಪಿಲ ವಾರ್ತೆ ದಿನಪತ್ರಿಕೆಯಲ್ಲಿ ಕೆಲಸ ಆರಂಭಿಸಿ, ನಿಜದನಿ, ಸತ್ಯಪ್ರಭ ಪತ್ರಿಕೆಗಳಲ್ಲೂ ವರದಿಗಾರಿಕೆ, 2012 ಜನವರಿ 4ರಂದು ಆಂದೋಲನ ದಿನಪತ್ರಿಕೆ ಬಳಗಕ್ಕೆ ಸೇರ್ಪಡೆಯಾಗಿದ್ದು, ಅದರಲ್ಲಿಯೇ ಮುಂದುವರಿದಿದ್ದೇನೆ. ದಿನಪತ್ರಿಕೆಗಳು, ಕಾದಂಬರಿಗಳನ್ನು ಓದುವ ಹವ್ಯಾಸ. ಮೊಬೈಲ್: 98453 41388

Recent Posts

ಇನ್ಮುಂದೆ ಕಬ್ಬನ್‌ ಪಾರ್ಕ್‌ನಲ್ಲಿ ಗುಂಪು ಚಟುವಟಿಕೆಗೆ ಅನುಮತಿ ಪಡೆಯುವುದು ಕಡ್ಡಾಯ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್‌ ಆದ ಕಬ್ಬನ್‌ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…

20 mins ago

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ

13 ವರ್ಷದ ವೈಭವ್‌ ಸೂರ್ಯವಂಶಿ ಐಪಿಎಲ್‌ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…

25 mins ago

ಕುವೈತ್‌ ಪ್ರವಾಸದಲ್ಲಿ ಪ್ರಧಾನಿ ಮೋದಿ: ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ

ಕುವೈತ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್‌ ಮಿಶಾಲ್‌…

31 mins ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದ ರಾಯ್‌ ಬರೇಲಿ ನ್ಯಾಯಾಲಯ

ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…

50 mins ago

ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚು: ಮಕ್ಕಳನ್ನು ಕಾಡುತ್ತಿರುವ ಕಾಲು ಬಾಯಿ ರೋಗ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…

1 hour ago

ವಿವಾದದ ನಡುವೆಯೂ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳದನಲ್ಲಿ ಬಾಡೂಟ ವಿತರಣೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…

1 hour ago