Andolana originals

ಕಿಡ್ನಿಗೆ ಒಂದಕ್ಕಿಂತ ಹೆಚ್ಚು ರಕ್ತನಾಳಗಳು : ಅಪರೂಪದ ಪ್ರಕರಣ

ಮಂಡ್ಯ : ಮಾನವನ ದೇಹದಲ್ಲಿ ಮೂತ್ರಕೋಶ(ಕಿಡ್ನಿ) ಬಹುಮುಖ್ಯವಾದ ಅಂಗ. ಇತ್ತೀಚೆಗೆ ಕಿಡ್ನಿ ಸೋಂಕು, ಕಿಡ್ನಿ ವೈಫಲ್ಯಗಳು, ಕಿಡ್ನಿಯಲ್ಲಿ ಕಲ್ಲು. . . ಮುಂತಾದ ಸಮಸ್ಯೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇಂತಹ ಸನ್ನಿವೇಶದಲ್ಲಿ ಕಿಡ್ನಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ, ಸಂಶೋಧನೆಗಳ ಮೂಲಕ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ವೈದ್ಯಲೋಕ ಮುಂದಾಗಿದೆ.

ಬೆಂಗಳೂರಿನ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ೪ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಮದ್ದೂರು ತಾಲ್ಲೂಕಿನ ಮರಕಾಡುದೊಡ್ಡಿಯ ಎಂ. ಬಿ. ಚಂದನ್ ಅವರು ಅಂಗರಚನಾಶಾಸ್ತ್ರ ವಿಭಾಗದಲ್ಲಿ ಮೃತ ದೇಹವನ್ನು ವಿಭಜಿಸುವಾಗ ಆ ದೇಹದ ಕಿಡ್ನಿಯಲ್ಲಿ ಒಂದಕ್ಕಿಂತ ಹೆಚ್ಚು ರಕ್ತನಾಳಗಳಿರುವುದು ಕಂಡು ಬಂದಿದೆ. ಈ ಕುರಿತು ಚಂದನ್ ಅಧ್ಯಯನ ಮಾಡಿ ಹಾಸನದಲ್ಲಿ ನಡೆದ ಸ್ಟೇಟ್ ಅನಾಟೆಮಿ ಕಾನ್ಛರೆನ್ಸ್‌ನಲ್ಲಿ ಭಾಗವಹಿಸಿ ಈ ವಿಷಯವನ್ನು ಪ್ರಸ್ತುತಪಡಿಸಿದ್ದರು.

ಅದಾದ ಬಳಿಕ ಈ ವಿಷಯವು ಮುಲ್ಲರ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರೀಸರ್ಚ್ ನಲ್ಲಿ ಪ್ರಕಟಗೊಂಡಿತು. ಭಾರತದಲ್ಲಿ ಕಿಡ್ನಿಗೆ ಒಂದಕ್ಕಿಂತ ಹೆಚ್ಚು ರಕ್ತನಾಳಗಳು ಇರುವಂತಹ ಪ್ರಕರಣಗಳು ಶೇ. ೧೫ ಜನರಲ್ಲಿ ಕಂಡು ಬಂದಿವೆ ಎಂದು ಸಂಶೋಧನೆಗಳು ತಿಳಿಸಿವೆ. ಇದರಿಂದಾಗಿ ಅವರಲ್ಲಿ ಬೇಗ ರಕ್ತದೊತ್ತಡದ ಸಮಸ್ಯೆ ಉಂಟಾಗ ಬಹುದು, ಕಿಡ್ನಿಯನ್ನು ದಾನ ಮಾಡು ವಾಗ ಸಮಸ್ಯೆಯಾಗಬಹುದು ಹಾಗೂ ಕಿಡ್ನಿ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬುದಾಗಿ ತಜ್ಞರು ತಿಳಿಸಿದ್ದು, ಇದರ ಪೂರ್ವಾಪರಗಳ ಕುರಿತು ಪ್ರಸ್ತುತ ಹೆಚ್ಚಿನ ಸಂಶೋಧನೆಗಳು ನಡೆಯು ತ್ತಿವೆ ಎಂದು ಚಂದನ್ ತಿಳಿಸಿದ್ದಾರೆ.

ಹೀಗೆ ಕಿಡ್ನಿಯಲ್ಲಿ ಒಂದಕ್ಕಿಂತ ಹೆಚ್ಚು ರಕ್ತನಾಳಗಳು ಇರುವ ವ್ಯಕ್ತಿಗಳು ಮತ್ತೊಬ್ಬರಿಗೆ ಕಿಡ್ನಿ ದಾನ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಮತ್ತೊಬ್ಬರಿಂದ ಕಿಡ್ನಿ ಪಡೆಯಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಇದರ ಬಗ್ಗೆ ತಿಳಿವಳಿಕೆ ಹೊಂದುವುದು ವೈದ್ಯರಿಗೆ ಬಹಳ ಮುಖ್ಯವಾಗುತ್ತದೆ. ಶಸ್ತ್ರಚಿಕಿತ್ಸಕರು, ರೇಡಿಯಾಲಜಿಸ್ಟ್ ಹಾಗೂ ಮೂತ್ರ ಶಾಸ್ತ್ರಜ್ಞರು ಸರ್ಜರಿ ಮಾಡುವಾಗ ಮತ್ತು ಆಂಜಿಯೋಗ್ರಫಿ ಮಾಡುವಾಗ ಇದರಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಬಹುದು ಎನ್ನುವ ಚಂದನ್, ನನ್ನ ಈ ಅಧ್ಯಯನಕ್ಕೆ ಸಹಾಯ ಮಾಡಿದ ಅಂಗರಚನಾಶಾಸ್ತ್ರ ವಿಭಾಗ, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದ್ದಾರೆ.

– ಹೇಮಂತ್ ಕುಮಾರ್

ಆಂದೋಲನ ಡೆಸ್ಕ್

Recent Posts

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ? | ಹಾಲಿನ ದರ ಏರಿಕೆ ನಡುವೆ ಕಾಫಿ,ಟೀ ಬೆಲೆ ಹೆಚ್ಚುವ ಸಾಧ್ಯತೆ

ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ…

6 hours ago

ಕೆಪಿಎಸ್‌ಸಿ ಅಕ್ರಮ | 1.52 ಕೋಟಿ ಹಣ ಪಾವತಿ ಪತ್ತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…

7 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ನೆರಳಿನಂತಿದ್ದ ಕಸ್ತೂರ ಬಾ

ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…

7 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗೊಂದಲಗೊಳಿಸುತಿದ್ದ ಹಲವು ಸಂದೇಹಗಳು

ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…

8 hours ago

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

1 day ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

1 day ago