Andolana originals

ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯ ದುರ್ಬಲ

ಚಿರಂಜೀವಿ ಸಿ ಹುಲ್ಲಹಳ್ಳಿ

ಮೈಸೂರು: ನಗರದ ಶೈಕ್ಷಣಿಕ ಪರಂಪರೆಯ ಭಾಗವಾಗಿರುವ ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯ ಕಟ್ಟಡ ಈಗ ಆತಂಕದ ಕೇಂದ್ರವಾಗಿದೆ. ಸುಮಾರು ೮೦-೯೦ ವರ್ಷಗಳ ಹಳೆಯ ಈ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ.

ಒಮ್ಮೆ ವಿದ್ಯಾರ್ಥಿಗಳ ಕಲರವದಿಂದ ಉತ್ಸಾಹದ ಬುಗ್ಗೆಯಂತಿದ್ದ ಈ ವಸತಿ ನಿಲಯ ಇಂದು ನೀರವ ಮೌನಕ್ಕೆ ಶರಣಾಗಿದೆ. ಗೋಡೆಗಳಲ್ಲಿ ದೊಡ್ಡ ಬಿರುಕುಗಳು, ಚಾವಣಿಯಿಂದ ಉದುರುತ್ತಿರುವ ಗಾರೆ, ಪಿಲ್ಲರ್‌ಗಳು ಕೂಡ ಶಿಥಿಲವಾಗಿದ್ದು, ಕಟ್ಟಡದ ದುಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಮಳೆಗಾಲದ ವೇಳೆ ಸೋರಿಕೆಯಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತವೆ. ಇದು ಕಟ್ಟಡದ ಭದ್ರತೆಗೆ ಭಾರಿ ಹೊಡೆತ ನೀಡಿದೆ. ಕಟ್ಟಡ ಸ್ಥಿತಿ ಅಪಾಯಕಾರಿಯಾಗಿದೆ.

ಹಾಗಾಗಿ ೨-೩ ವರ್ಷಗಳಿಂದ ಕಟ್ಟಡಕ್ಕೆ ಪ್ರವೇಶವನ್ನು ನಿರ್ಬಂಽಸಲಾಗಿದೆ. ಈ ಕಟ್ಟಡ ಪಾರಂಪರಿಕ ಮಹತ್ವ ಹೊಂದಿರುವುದರಿಂದ ಅದನ್ನು ಕೆಡವಲು ಆಡಳಿತ ಮಂಡಳಿ ಮೀನ ಮೇಷ ಎಣಿಸುತ್ತಿದೆ. ಇತಿಹಾಸದ ಗುರುತಾಗಿ ಉಳಿದಿರುವ ಈ ವಸತಿನಿಲಯವನ್ನು ಉಳಿಸಬೇಕೆಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಆದರೆ, ಇಂದಿನ ಸ್ಥಿತಿ ನೋಡಿದಾಗ, ಪಾರಂಪರಿಕತೆಗಿಂತ ಮನುಷ್ಯರ ಜೀವಗಳ ಭದ್ರತೆ ಮುಖ್ಯ ಎನ್ನುವ ಮಾತು ಗಟ್ಟಿಯಾಗಿ ಕೇಳಿಬರುತ್ತಿದೆ. ಯಾವುದೇ ಕ್ಷಣದಲ್ಲಿ ಕಟ್ಟಡ ಕುಸಿಯುವ ಪರಿಸ್ಥಿತಿ ಇದೆ. ಒಂದು ವೇಳೆ ದುರಂತ ಸಂಭವಿಸಿದರೆ, ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಅನುರಣಿಸುತ್ತಿದೆ.

ಒಂದು ಕಡೆ ಪಾರಂಪರಿಕ ಮೌಲ್ಯ ಕಾಪಾಡಬೇಕೆಂಬ ಒತ್ತಡ, ಮತ್ತೊಂದು ಕಡೆ ವಿದ್ಯಾರ್ಥಿಗಳ ಭದ್ರತೆ ಈ ಎರಡರ ಮಧ್ಯೆ ಆಡಳಿತ ಮಂಡಳಿ ಸಿಲುಕಿಕೊಂಡಿದೆ. ಕಟ್ಟಡವನ್ನು ಕೂಡಲೇ ಕೆಡವಿ, ಹೊಸದಾಗಿ ಸುರಕ್ಷಿತ ವಸತಿನಿಲಯವನ್ನು ನಿರ್ಮಿಸಬೇಕು. ಪರಂಪರೆಯ ಬಗ್ಗೆ ಯೋಚಿಸುತ್ತಿದ್ದರೆ, ಅದು ದುರ್ಘಟನೆಯನ್ನು ಆಹ್ವಾನ ನೀಡಿದಂತಾಗುತ್ತದೆ ಎಂಬುದು ಸ್ಥಳೀಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಆತಂಕವಾಗಿದೆ.

ಪ್ರಸ್ತುತ ಈ ವಿದ್ಯಾರ್ಥಿನಿಲಯದಲ್ಲಿ ಎ, ಬಿ, ಸಿ ಎಂಬ ಮೂರು ವಿಭಾಗಗಳಿವೆ. ಇದರಲ್ಲಿ ರಾಜ್ಯದ ವಿವಿಧ ವಿಭಾಗಗಳ ೨೭೦ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಮೂರು ಬ್ಲಾಕ್‌ಗಳಲ್ಲಿ ಎರಡು ಕಟ್ಟಡಗಳು ಹೊಸದಾಗಿದ್ದು, ಮತ್ತೊಂದು ಕಟ್ಟಡ ಹಳೆಯದಾದರೂ ಸುಸ್ಥಿತಿಯಲ್ಲಿದೆ. ಆದರೆ, ನಿರ್ವಹಣೆ ಕೊರತೆಯಿಂದ ಈ ಕಟ್ಟಡಗಳುಸೊರಗುತ್ತಿವೆ. ಕೊಠಡಿಗಳಲ್ಲಿ ದೂಳು ಮನೆ ಮಾಡಿದೆ. ಎಷ್ಟೋ ವರ್ಷಗಳಿಂದ ಕೊಠಡಿಗಳನ್ನು ಸ್ವಚ್ಛಗೊಳಿಸಿಲ್ಲ ಎನ್ನುವಂತೆ ಭಾಸವಾಗುತ್ತಿದೆ.

ವಿದ್ಯುತ್ ದೀಪವಿಲ್ಲ: ಹಾಸ್ಟೆಲ್‌ನ ಹೊರಭಾಗದಲ್ಲಿ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಕತ್ತಲೆಯೇ ತುಂಬಿರುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಓಡಾಡುತ್ತಾರೆ. ಓದುವು ದಂತೂ ಅಸಾಧ್ಯ. ಹಾಗಾಗಿ ವಿದ್ಯುತ್ ದೀಪಗಳನ್ನು ಅಳವಡಿಸುವುದರಿಂದ ವಿದ್ಯಾರ್ಥಿ ಗಳ ಓಡಾಟದ ಜೊತೆಗೆ ನಿಲಯದ ಹೊರಭಾಗದಲ್ಲಿ ಕುಳಿತು ಓದಲು ಅನುಕೂಲ ಕಲ್ಪಿಸಿದಂತಾಗುತ್ತದೆ. ವಸತಿನಿಲಯದ ಎ ಬ್ಲಾಕ್ ಮುಂಭಾಗ ಹಾಸ್ಟೆಲ್‌ನ ಆಡಳಿತ ಕಚೇರಿ ಇರುವ ಬ್ಲಾಕ್‌ನಲ್ಲಿ ಹೆಂಚುಗಳು ಒಡೆದು ಹೋಗಿವೆ. ಮಳೆ ಸುರಿದಾಗ ಕೆಲವು ಕಡೆ ಸೋರಿಕೆ ಯಾಗುತ್ತದೆ. ನಾಲ್ಕೈದು ತಿಂಗಳ ಹಿಂದೆ ವಿದ್ಯಾರ್ಥಿಗಳೇ ಪಕ್ಕದಲ್ಲಿ ಇದ್ದ ಹೆಂಚುಗಳನ್ನು ಬಳಸಿಕೊಂಡು ಸ್ವತಃ ನಾವೇ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕೆಲ ವಿದ್ಯಾರ್ಥಿಗಳು.

” ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯದ ಶಿಥಿಲಾವಸ್ಥೆಯಲ್ಲಿರುವ ಅನುಪಯುಕ್ತ ಕಟ್ಟಡವನ್ನು ಖಾಲಿ ಬಿಡಲಾಗಿದೆ. ಕಳೆದೆರಡು ವರ್ಷಗಳಿಂದ ಈ ಬ್ಲಾಕಿಗೆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ನಿರ್ಬಂDiಸಲಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿದ್ದು, ಯಾವ ತೊಂದರೆಯೂ ಆಗಿಲ್ಲ. ಶಿಥಿಲಗೊಂಡಿರುವ ಕಟ್ಟಡವನ್ನು ಕೆಡಹುವ ಸಂಬಂಧ ಇಂಜಿನಿಯರಿಂಗ್ ವಿಭಾಗದ ಗಮನಕ್ಕೆ ತರಲಾಗಿದೆ.”

ಗುರುಸಿದ್ದಯ್ಯ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ವಿದ್ಯಾರ್ಥಿನಿಲಯಗಳು, ಮೈಸೂರು ವಿವಿ

” ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಶಿಥಿಲಗೊಂಡಿರುವ ಕಟ್ಟಡವು ತುಂಬ ಹಳೆಯದಾಗಿದೆ. ಅನಾಹುತದ ಮುನ್ನೆಚ್ಚರಿಕೆಯಿಂದ ಕಟ್ಟಡಕ್ಕೆ ಪ್ರವೇಶವನ್ನು ನಿರ್ಬಂಽಸಲಾಗಿದೆ. ಈ ಕಟ್ಟಡವೂ ಪಾರಂಪರಿಕ ವಿನ್ಯಾಸದಲ್ಲಿರುವ ಹಿನ್ನೆಲೆಯಲ್ಲಿ ಪುನರ್ ನವೀಕರಣ ಮಾಡಬೇಕೆ ಅಥವಾ ಕೆಡವಿ ಹೊಸ ಕಟ್ಟಡ ಕಟ್ಟಡ ನಿರ್ಮಿಸಬೇಕೇ ಎಂಬುದರ ಬಗ್ಗೆ ಚಿಂತಿಸಲಾಗುತ್ತಿದೆ.”

ಎನ್.ಎ.ಉಮೇಶ್, ಕಾರ್ಯಪಾಲಕ ಅಭಿಯಂತರ, ಮೈಸೂರು ವಿವಿ

” ಮಹಾರಾಜ ವಿದ್ಯಾರ್ಥಿನಿಲಯದಲ್ಲಿ ಶಿಥಿಲಗೊಂಡಿರುವ ಅನುಪಯುಕ್ತ ಕಟ್ಟಡದ ಸ್ಥಿತಿಗತಿ ಅರಿತ ಇಂಜಿನಿಯರಿಂಗ್ ವಿಭಾಗವು ಆ ಕಟ್ಟಡಕ್ಕೆ ಪ್ರವೇಶಾತಿ ಕೊಡಬಾರದು ಎಂಬ ಸೂಚನೆಯನ್ನು ಪಾಲಿಸಿದೆ. ಪದವಿ ತರಗತಿಗಳ ಶೈಕ್ಷಣಿಕ ವರ್ಷ ಪೂರ್ಣಗೊಂಡು ವಿದ್ಯಾರ್ಥಿಗಳು ಊರಿಗೆ ತೆರಳಿದ ನಂತರ ಕಟ್ಟಡದ  ದುರಸ್ತಿಯ ರೂಪರೇಷೆ ಸಿದ್ಧಪಡಿಸಲಾಗುವುದು.”

ಡಾ.ನಿಂಗರಾಜು, ನಿಲಯ ಪಾಲಕ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

2 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

2 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

2 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

2 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

2 hours ago

ಕೆಡ್ಲಿ ಬಾಳ್ಲಿ ನಮ್‌ ಬದ್ಕ್‌ ನಾಮ್‌ ನೋಡ್ಬೇಕು ಕಣ ಕುಸೋ

ಚಂದ್ರಶೇಖರ್ ಮೂರ್ತಿ ಕೆ.ಎಸ್. ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ…

2 hours ago