Andolana originals

ಇಲ್ಲಿ ಒಂದಾ ಮಾಡಲು ಹೋದ್ರೆ ಇನ್ನೊಂದಾದೀತು!

ಕೆ.ಎಂ.ಅನುಚೇತನ್

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ಕನ್ನಡಿ ನಿರ್ಬಂಧ

ಮೈಸೂರು: ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ನಗರದ ಸ್ವಚ್ಛತೆಗೆ ಸವಾಲಾಗಿದ್ದವರಿಗೆ ನಗರಪಾಲಿಕೆ ‘ರಿಫ್ಲೆಕ್ಟಿಂಗ್’ ಬರೆ ಎಳೆದಿದೆ.

ಹೇಳಿ ಕೇಳಿ ಅದು ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರದೇಶ. ದೂರದ ಊರುಗಳಿಂದ ಮೈಸೂರು ನಗರಕ್ಕೆ ಬರುವವರು, ಮೈಸೂರಿನಿಂದ ಬೇರೆ ಬೇರೆ ಪ್ರದೇಶಗಳಿಗೆ ತೆರಳುವವರು, ಪ್ರವಾಸಿಗರು ಹಗಲು-ರಾತ್ರಿ ಎನ್ನದೇ ಇಲ್ಲಿಗೆ ಬಂದು ಹೋಗುವವರ ಸಂಖ್ಯೆ ಹೆಚ್ಚು. ಹೀಗೆ ಹೋಗಿ-ಬರುವವರು ಮೂತ್ರ ವಿಸರ್ಜನೆಗೆ ಬಸ್ ನಿಲ್ದಾಣದ ಒಳಗಿನ ಶೌಚಾಲಯಗಳನ್ನು ಬಳಸುವ ಬದಲಿಗೆ ಎದುರಿನ ಕಾಂಪೌಂಡ್ ಆಶ್ರಯಿಸುತ್ತಿದ್ದರು.

ಇದರಿಂದ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಮೂತ್ರದ ರೊಚ್ಚಿನಿಂದ ದುರ್ನಾತ ಬೀರುತ್ತಿತ್ತು. ನಗರದ ಸ್ವಚ್ಛತೆಗೆ ಸವಾಲಾಗಿರುವ ಈ ಪ್ರದೇಶದ ನೈರ್ಮಲ್ಯ ಕಾಪಾಡಲು ನಗರಪಾಲಿಕೆ ವಿನೂತನ ಪ್ಲಾನ್ ಮಾಡಿ ಕಾಂಪೌಂಡ್‌ಗೆ ಸ್ಟೆನ್‌ಲೆಸ್ ಸ್ಟೀಲ್ ಕನ್ನಡಿ ಅಳವಡಿಸಿ, ಹಾದಿಬೀದಿಯಲ್ಲಿ ಮೂತ್ರ ಮಾಡುತ್ತಿದ್ದವರಿಗೆ ತಕ್ಕಪಾಠ ಕಲಿಸಿದೆ. ಈ ಹಿಂದೆ ನಗರಪಾಲಿಕೆ ಸಾರ್ವಜನಿಕ ಸ್ಥಳಗಳಲ್ಲಿ ‘ಇಲ್ಲಿ ಮೂತ್ರ ವಿಸರ್ಜನೆ’ ಮಾಡಬೇಡಿ ಎಂದು ಮಾಡುತ್ತಿದ್ದ ಮನವಿ ಪರಿಣಾಮ ಬೀರಿರಲಿಲ್ಲ.

ಫುಟ್‌ಪಾತ್‌ಗಳ ಗೋಡೆಗಳ ಸ್ಟೇನ್‌ಲೆಸ್ ಸ್ಟೀಲ್ ಹಾಳೆಗಳನ್ನು ತೀಕ್ಷ್ಣವಾಗಿ ಕನ್ನಡಿಯಂತೆ ಪ್ರತಿಫಲನವಾಗುವಂತೆ ಪಾಲಿಶ್ ಮಾಡಿಸಿ, ಕನ್ನಡಿಯ ರೂಪ ನೀಡಿ ಅಳವಡಿಸಿದೆ. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವವರು ಮುಜುಗರಕ್ಕೊಳಗಾಗಿ ಯಾರೊಬ್ಬರೂ ಈವರೆಗೆ ಗಲೀಜು ಮಾಡುವ ಧೈರ್ಯ ತೋರಿಲ್ಲ.

ಹೇಗಿದೆ ಪರಿಣಾಮ?: ಸಾರ್ವಜನಿಕರ ಶೌಚಾಲಯವಿದ್ದರೂ ಸಬ್ ಅರ್ಬನ್ ಬಸ್ ನಿಲ್ದಾಣದ ಎದುರು, ರಸ್ತೆಯ ಪಕ್ಕದಲ್ಲಿರುವ ಕಾಪೌಂಡ್‌ಗೆ ನಿತ್ಯವು ನೂರಾರು ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದರಿಂದ ವಿಪರೀತ ಕೆಟ್ಟವಾಸನೆ, ಗಲೀಜು ಹೆಚ್ಚಾಗಿದ್ದರಿಂದ ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಓಡಾಡಲು ಸಾಕಷ್ಟು ತೊಂದರೆ, ಮುಜುಗರ ಅನುಭವಿಸುತ್ತಿದ್ದರು. ಇಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕಿತ್ತು. ಇದನ್ನು ಮನಗಂಡು ಹೇಗಾದರೂ ಇದಕ್ಕೆ ಬ್ರೇಕ್ ಹಾಕಬೇಕೆಂದು ಯೋಚಿಸಿದ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಹಮ್ಮದ್ ಮುಸ್ತಫ್, ಇಂತಹ ದೊಂದು ಕನ್ನಡಿ ಅಳವಡಿಕೆಯನ್ನು ಪ್ರಯೋಗಿಸಿದರು. ಈಗ ಈ ಐಡಿಯಾ ವರ್ಕ್ ಔಟ್ ಆಗುತ್ತಿದೆ.

ಐಡಿಯಾ ಹೇಗೆ ಬಂತು: ನಗರದ ಮೇದರ್ ಬ್ಲಾಕ್‌ನ ಅಂಡರ್ ಪಾಸ್ ರಸ್ತೆಯ ತಿರುವಿನಲ್ಲಿ ಎದುರಿಗೆ ಬರುವ ವಾಹನಗಳು ಕಾಣುವಂತೆ ರಿಫ್ಲೆಕ್ಟರ್ಗಳನ್ನು ಅಳವಡಿಸಿದ್ದು, ಅದನ್ನು ಗಮನಿಸಿದ ಅವರು, ಇದೇ ಸೂತ್ರವನ್ನು ಫುಟ್‌ಪಾತ್‌ಗಳಿಗೂ ಅಳವಡಿಸಿದರು.

ಇದೀಗ ಕೇವಲ ಒಂದು ಸ್ಥಳದಲ್ಲಿ ಅಳವಡಿಸಲಾಗಿದ್ದು, ಸಫಲವಾಗಿದೆ. ಈ ಕನ್ನಡಿಗಳನ್ನು ಸ್ಟೇನ್‌ಲೆಸ್ ಸ್ಟೀಲ್ ಶೀಟ್‌ಗಳನ್ನು ಪಾಲಿಶ್ ಮಾಡಿಸಿ ಕಾಂಪೌಂಡ್‌ಗಳಿಗೆ ಕಾಂಕ್ರೀಟ್ ಬಳಸಿ ಅಳವಡಿಸಲಾಗಿದೆ. ಈ ಶೀಟ್ ಗಳಿಗೆ ಪ್ರತಿ ಕೆಜಿ ಗೆ ೨೧೦ ರೂ. ವೆಚ್ಚ ತಗುಲಿದ್ದು, ನಗರದ ಬೇರೆಡೆಯೂ ಈ ಪ್ರಯೋಗ ಮಾಡಲು ಪಾಲಿಕೆ ಮುಂದಾಗಿದೆ.

೪೦ ಜಾಗಗಳು ಗುರುತು: ನಗರದಲ್ಲಿ ಇದೇ ರೀತಿಯ ಜನನಿಬಿಡ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ಗಲೀಜಾಗಿದ್ದು, ನಗರದಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ೪೦ ಜಾಗಗಳನ್ನು ಪತ್ತೆ ಹಚ್ಚಿದ್ದಾರೆ. ಆ ಎಲ್ಲಾ ಸ್ಥಳಗಳಲ್ಲಿ ಈ ಕನ್ನಡಿಗಳನ್ನು ಅಳವಡಿಸಲು ಸಾಧ್ಯವೇ ಎಂದು ತೀರ್ಮಾನಿಸಿ ಅನಿವಾರ್ಯ ಹಾಗೂ ಸೂಕ್ತ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ ಎಂದು ಮಹಮ್ಮದ್ ಮುಸ್ತಫಾ ಆಂದೋಲನ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

” ಇದೊಂದು ವಿನೂತನವಾಗಿ ಹೊಳೆದ ಆಲೋಚನೆ, ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬ ಆಶಯದಲ್ಲಿ ಪ್ರಯೋಗಿಸಿದ್ದು, ಸಂಪೂರ್ಣವಾಗಿ ಸಫಲತೆ ಕಂಡಿದೆ. ಇದೀಗ ನಗರದ ಬೇರೆಡೆಗಳಲ್ಲಿ ಪ್ರಯೋಗ ನಡೆಸಲು ಪಾಲಿಕೆ ನಿರ್ಧರಿಸುತ್ತಿದ್ದು, ಜಾಗಗಳ ಪರಿಶೀಲನೆ ನಡೆಸಿದ್ದೇವೆ.”

– ಮಹಮ್ಮದ್ ಮುಸ್ತಫ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ನಗರ ಪಾಲಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್:  ನಗರಪಾಲಿಕೆಯ ಈ ವಿನೂತನ ಕಾರ್ಯಕ್ಕೆ ಸಾರ್ವಜ ನಿಕರು ಶ್ಲಾಘನೆ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಸಾಕಷ್ಟು ವೈರಲ್ ಆಗುತ್ತಿದೆ. ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಕನ್ನಡಿ ಮುಂದೆ ನಿಂತು ‘ಇವಾಗ ಮೂತ್ರ ವಿಸರ್ಜನೆ ಮಾಡ್ರೋ ನೋಡೋಣ’ ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಹಾಕಿ ಗಮನ ಸೆಳೆಯುತ್ತಿದ್ದಾರೆ.

ಕನ್ನಡಿಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಕೆ: 

ಬೆಳಗಿನ ಸಮಯದಲ್ಲಿ ಬೆಳಕಿದ್ದು, ಕನ್ನಡಿಗಳು ಪ್ರಕಾಶಮಾನವಾಗಿ ಕಾಣುತ್ತವೆ. ಆದರೆ, ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಗಳ ಬೆಳಕಿನ ಅವಶ್ಯವಿದೆ. ಕನ್ನಡಿಗಳನ್ನು ಹಾಳು ಮಾಡದಂತೆ ಕನ್ನಡಿಗಳ ಸುತ್ತಲೂ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿಯ ವೇಳೆಯಲ್ಲೂ ಕನ್ನಡಿಗಳು ಹೆಚ್ಚು ಪ್ರಕಾಶಮಾನವಾಗಿ ಕಾಣಲಿದ್ದು, ಇಂತಹ ಸ್ಥಳಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಲು ಸಹಕಾರಿಯಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

10 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

15 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

16 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

17 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

17 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

23 hours ago