Andolana originals

ಓದುಗರ ಪತ್ರ:  ರಾಜ್ಯೋತ್ಸವ ನಿತ್ಯೋತ್ಸವವಾಗಲಿ

ಕನ್ನಡ ರಾಜ್ಯೋತ್ಸವ ಬಂದರೆ ಸಾಕು ಕನ್ನಡದ ಮೇಲೆ ಅಭಿಮಾನ ಉಕ್ಕಿ ಹರಿಯುತ್ತದೆ. ಅಂಗಡಿ, ಹೋಟೆಲ್‌ಗಳು ಕನ್ನಡಮಯವಾಗಿರುತ್ತವೆ. ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಅಭಿಮಾನವನ್ನು ತೋರುವ ಈ ಅಭಿಮಾನಿಗಳಿಗೆ ಉಳಿದ ದಿನಗಳಲ್ಲಿ ಇವರ ಕನ್ನಡ ಅಭಿಮಾನ ಎಲ್ಲಿ ಹೋಗಿರುತ್ತದೆ ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ.

ನವೆಂಬರ್‌ನಲ್ಲಿ ಕನ್ನಡ ಧ್ವಜ ಸ್ತಂಭಗಳಲ್ಲಿ  ಧ್ವಜಾರೋಹಣ ಮಾಡಿದರೆ ಅದು ಸೂಕ್ತ ನಿರ್ವಹಣೆಯಿಲ್ಲದೇ ಹರಿದುಹೋಗಿದ್ದರೂ ಹಾಗೆಯೇ ಇರುತ್ತದೆ. ಧ್ವಜಸ್ತಂಭಗಳಿಗೆ ಬಣ್ಣ ಬಳಿದು ಮತ್ತೆ ಹೊಸ ಧ್ವಜಾರೋಹಣವಾಗುವುದು ನವೆಂಬರ್ ಬಂದಾಗಲೇ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ. ಕನ್ನಡ ಧ್ವಜಾರೋಹಣ ಮಾಡಿದ ಮೇಲೆ ಸೂಕ್ತ ನಿರ್ವಹಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.

ಇದನ್ನೂ ಓದಿ:-ದಾರಿ ತಪ್ಪಿದ ಮಕ್ಕಳನ್ನು ಮನೆ ತಲುಪಿಸುವ ಐಎಎಸ್ ಅಧಿಕಾರಿ

ಪ್ರತಿಯೊಬ್ಬರೂ ವರ್ಷಪೂರ್ತಿ ಕನ್ನಡದ ಮೇಲೆ ಅಭಿಮಾನ ತೋರಿಸಬೇಕು. ನವೆಂಬರ್ ತಿಂಗಳಿನಲ್ಲಿ ಮಾತ್ರ ಗುಂಪು ಕಟ್ಟಿಕೊಂಡು ಇಂಗ್ಲಿಷ್ ಫಲಕಗಳಿರುವ ಅಂಗಡಿಗಳ ಮೇಲೆ ದಾಳಿ ಮಾಡುವುದಲ್ಲ. ಹೊರ ರಾಜ್ಯದಿಂದ ಬಂದವರಿಗೆ ಮೊದಲು ಕನ್ನಡ ಓದಲು, ಬರೆಯಲು ಕಲಿಸಬೇಕು. ರಾಜ್ಯೋತ್ಸವ ಒಂದು ತಿಂಗಳಿಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು.

-ಎಂ. ಎಸ್. ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

3 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

3 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

3 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

3 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

3 hours ago