Andolana originals

ಅವ್ಯವಸ್ಥೆಗಳ ಆಗರ ಕುವೆಂಪುನಗರ ಪಾರ್ಕ್

ಪ್ರಶಾಂತ್ ಎಸ್.

ಮೈಸೂರು: ನಗರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತಿದ್ದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಾರ್ಡ್ ಸಂಖ್ಯೆ ೪೭ರ ಕುವೆಂಪುನಗರದ ಉದ್ಯಾನ ಸೂಕ್ತ ನಿರ್ವಹಣೆ ಕಾಣದೆ ಪಾಳು ಬಿದ್ದಿದೆ. ಇಲ್ಲಿಗೆ ಕಸ ತಂದು ಬಿಸಾಡುವವರು ಒಂದೆಡೆಯಾದರೆ, ಕೆಲವರು ಮದ್ಯಪಾನ ಮಾಡಿ ಅಲ್ಲಿಯೇ ಖಾಲಿ ಬಾಟಲಿಗಳನ್ನು ಎಸೆದು ಹೋಗುತ್ತಿದ್ದು, ನಾಗರಿಕರು ಉದ್ಯಾನಕ್ಕೆ ಕಾಲಿಡಲು ಅಂಜುವಂತಾಗಿದೆ.

ಉದ್ಯಾನ ಅಧ್ವಾನ: ಹಲವು ತಿಂಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಹಸಿರು ಹುಲ್ಲು ಒಣಗಿ ಹಳದಿ ಬಣ್ಣಕ್ಕೆ ತಿರುಗಿದೆ. ಉದ್ಯಾನದಲ್ಲಿ ಬೀದಿನಾಯಿಗಳು, ಜಾನುವಾರುಗಳು ವಿಶ್ರಾಂತಿ ಪಡೆಯುತ್ತಿರುತ್ತವೆ. ಉದ್ಯಾನದ ರಕ್ಷಣೆಗೆ ಸುತ್ತಲೂ ಕಬ್ಬಿಣದ ಬೇಲಿ ಅಳವಡಿಸಲಾಗಿದೆ. ಆದರೆ, ಕೆಲವೆಡೆ ಇದೂ ಕಿತ್ತು ಬಂದಿದೆ.

ಜತೆಗೆ ರಸ್ತೆಯ ಕಸವನ್ನೂ ಇಲ್ಲಿಗೆ ತಂದು ಹಾಕಲಾಗುತ್ತಿದೆ. ಉದ್ಯಾನದ ಕೆಲವೆಡೆ ಸೌದೆ ಹಾಗೂ ಇನ್ನಿತರೆ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಹಸಿರಿನ ಉದ್ಯಾನದಲ್ಲಿ ಪಾರ್ಥೇನಿಯಂ, ಎಕ್ಕದ ಗಿಡಗಳು ಬೆಲೆದು ನಿಂತಿದ್ದು, ಉದ್ಯಾನ ಅವ್ಯವಸ್ಥೆಯ ತಾಣವಾಗಿದೆ.

ನಿರ್ವಹಣೆ ಸಮಸ್ಯೆ: ಕೆಲ ತಿಂಗಳುಗಳ ಹಿಂದೆ ಒಂದು ಸಂಸ್ಥೆಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿತ್ತು. ಅವರ ಅವಧಿ ಮುಗಿದ ನಂತರ ಪಾಲಿಕೆ ಅಧಿಕಾರಿಗಳು ಬೇರೊಬ್ಬರಿಗೆ ವಹಿಸಲು ಅನುಸರಿಸಬೇಕಾದ ಪ್ರಕ್ರಿಯೆ ಕೈಗೊಂಡಿಲ್ಲ. ನಗರಪಾಲಿಕೆಯು ಟೆಂಡರ್ ಕರೆದು ನಿರ್ವಹಣೆ ಜವಾಬ್ದಾರಿ ವಹಿಸುವ ವೇಳೆಗೆ ಉದ್ಯಾನ ಅವಸಾನದ ಹಾದಿ ಹಿಡಿದಿರುತ್ತದೆ. ಕೂಡಲೇ ಸಂಬಂಧಿಸಿದವರು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.

ತುಕ್ಕು ಹಿಡಿದ ಆಟಿಕೆಗಳು: ಮಕ್ಕಳ ಆಟಿಕೆಗಳಾದ ಜೋಕಾಲಿ, ಜಾರು ಬಂಡಿಗಳು ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿಗೆ ತಲುಪಿವೆ.

ಪಾರ್ಕ್‌ಗಳ ಸಂರಕ್ಷಣೆಗೆ ಜನರು ಕೈಜೋಡಿಸಬೇಕು: ಕೆಲ ಪಾರ್ಕ್‌ಗಳು ತಕ್ಕಮಟ್ಟಿಗೆ ನಿರ್ವಹಣೆಯಾಗುತ್ತಿವೆ. ಆದರೆ, ಹೊರವಲಯದ ಅನೇಕ ಪಾಕ್ ಗಳು ಸೂಕ್ತ ನಿರ್ವಹಣೆ ಕಾಣುತ್ತಿಲ್ಲ. ಪಾರ್ಕ್‌ಗಳು ಸಾರ್ವಜನಿಕ ಆಸ್ತಿ. ಅವುಗಳ ಸೂಕ್ತ ನಿರ್ವಹಣೆಯ ಜವಾಬ್ದಾರಿ ಕೇವಲ ಇಲಾಖೆಗಳದ್ದು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಪ್ರತೀ ನಾಗರಿಕರೂ ತಮ್ಮ ಮನೆಗಳನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇರಿಸಿಕೊಳ್ಳುವಂತೆ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನೂ ಕಾಪಾಡಿಕೊಳ್ಳಬೇಕು.

” ಸುತ್ತಮುತ್ತಲಿನ ಪಾರ್ಕ್‌ಗಳು ಅಭಿವೃದ್ಧಿ ಆಗಿವೆ. ಆದರೆ, ಈ ಉದ್ಯಾನವನ ಅಭಿವೃದ್ಧಿಯಾಗಿಲ್ಲ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕೆಲವರು ಬೇರೆ ಕಡೆಯಿಂದ ಇಲ್ಲಿಗೆ ಕಸ ತಂದು ಎಸೆಯುತ್ತಾರೆ. ಅಧಿಕಾರಿಗಳು ಈ ಉದ್ಯಾನವನವನ್ನು ಸ್ವಚ್ಛಗೊಳಿಸಬೇಕು.”

-ಮಹದೇವು, ಸ್ಥಳೀಯರು

” ಅನೇಕ ಬಾರಿ ಪಾರ್ಕ್ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರೂ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳೀಯರೇ ಸೇರಿ ಬಹಳಷ್ಟು ಬಾರಿ ಪಾರ್ಕ್ ಸ್ವಚ್ಛಗೊಳಿಸಿದ್ದೇವೆ. ಉದ್ಯಾನವನದಲ್ಲಿ ದೀಪದ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ.”

-ಪಿ.ಚಂದನ್ ಕುಮಾರ್, ಸ್ಥಳೀಯರು 

 

 

ಆಂದೋಲನ ಡೆಸ್ಕ್

Recent Posts

ದರಗಳ ಏರಿಕೆಯಿಂದ ಸಂಕಷ್ಟದಲ್ಲಿ ಜನರು

ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ…

2 hours ago

ನಾಯಿಗೆ ಮೇಯರ್ ಗಿರಿ…!!

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ, ಚುನಾವಣೆಯೆಂದರೆ, ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತು…

2 hours ago

ಸಿಎಂ ಅಚ್ಯುತರಾಯರು ಮತ್ತು ಮಂತ್ರಿ ಗುಲ್ಗುಲೆಯೂ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ…

3 hours ago

ದೀಪಾವಳಿ ಬಳಿಕ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ

ಕೆ.ಬಿ.ರಮೇಶನಾಯಕ ಕಾಮಗಾರಿ ವೇಳೆ ಒಂದು ಕಡೆ ಸಂಚಾರ ನಿರ್ಬಂಧ; ಮತ್ತೊಂದು ಕಡೆ ಓಡಾಟಕ್ಕೆ ಅವಕಾಶ ವೈಟ್ ಟಾಪಿಂಗ್ ಕಾಮಗಾರಿಗೆ ಅತ್ಯಾಧುನಿಕ…

3 hours ago

ಬೆಳಕಿನ ಹಬ್ಬಕ್ಕಿಲ್ಲ ಪಟಾಕಿ ವ್ಯಾಪಾರದ ಕಳೆ

ಅಣ್ಣೂರು ಸತೀಶ್ ಶೇ.೫೦ರಷ್ಟು ವಹಿವಾಟು ಇಳಿಕೆ; ಗ್ರಾಹಕರಿಲ್ಲದೆ ಕಂಗಾಲಾದ ವ್ಯಾಪಾರಿಗಳು ಭಾರತೀನಗರ: ದೀಪಾವಳಿ ಎಂದರೆ ಮನೆಮನೆಗಳಲ್ಲಿ ದೀಪಗಳ ಬೆಳಕಿನೊಂದಿಗೆ ಪಟಾಕಿಗಳ…

3 hours ago

ದೀಪಾವಳಿ ಜಾತ್ರೆಗೆ ಕಾರ್ಯ ಸಿದ್ದೇಶ್ವರಸ್ವಾಮಿ ಬೆಟ್ಟ ಸಜ್ಜು

ಪಿ.ಶಿವಕುಮಾರ್ ಕಾರ್ಯ ಗ್ರಾಮದಲ್ಲಿ ನ.೧೧, ೧೨, ೧೩ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೊಡ್ಡ ಕವಲಂದೆ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ…

3 hours ago