Andolana originals

ಡಿ.26ರಿಂದ ಕೊಡವ ಹಾಕಿ ಚಾಂಪಿಯನ್ ಟ್ರೋಫಿ

ಪುನೀತ್

ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ

ಮಡಿಕೇರಿ: ಕೊಡವ ಹಾಕಿ ಅಕಾಡೆಮಿ ವತಿಯಿಂದ ಹಾಕಿ ಕೂರ್ಗ್ ಸಂಸ್ಥೆ, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ, ಮೂರ್ನಾಡು ವಿದ್ಯಾಸಂಸ್ಥೆ ಸಹಕಾರದೊಂದಿಗೆ ಡಿ.೨೬ರಿಂದ ೩೦ರವರೆಗೆ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಮೂರ್ನಾಡಿನ ದಿ.ಬಾಚೆಟ್ಟೀರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕೌಟುಂಬಿಕ ಹಾಕಿ ಉತ್ಸವಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರೇಮಿಗಳಿಗೆ ರಸದೌತಣ ನೀಡಲಿದೆ.

೧೯೯೭ನೇ ಇಸವಿಯಲ್ಲಿ ಪಾಂಡಂಡ ದಿ. ಕುಟ್ಟಪ್ಪ ಕುಟ್ಟಣಿ ಹಾಗೂ ಸಹೋದರ ಕಾಶಿ ಅವರಿಂದ ಕರಡದಲ್ಲಿ ಸುಮಾರು ಅರವತ್ತು ಕೊಡವ ಕುಟುಂಬಗಳಿಂದ ಶುರುವಾದ ಕೊಡವ ಕುಟುಂಬಗಳ ನಡುವೆ ಹಾಕಿ ಹಬ್ಬವು ಕೊಡಗಿನಎ ಭಾಗಗಳಲ್ಲಿ ನಡೆಯುತ್ತಾ ಬಂದಿದೆ.

೨೦೨೪ರಲ್ಲಿ ನಾಪೋಕ್ಲುವಿನಲ್ಲಿ ನಡೆದ ಕುಂಡ್ಯೋಳಂಡ ಹಾಕಿ ಹಬ್ಬವು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ ೨೫ನೇ ವರ್ಷದ ಮುದ್ದಂಡ ಹಾಕಿ ಹಬ್ಬವು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಎಂಬ ಬಿರುದನ್ನು ಪಡೆದಿರುವುದು ಕೊಡವ ಹಾಕಿ ಅಕಾಡೆಮಿಗೆ ಸಂದ ಗೌರವವಾಗಿದೆ. ಅದೇ ರೀತಿ ಪಾಂಡಂಡ ದಿ. ಕುಟ್ಟಪ್ಪ ಅವರಿಗೆ ಚಾಂಪಿಯನ್ ಟ್ರೋಫಿ ನಡೆಸುವ ಆಕಾಂಕ್ಷೆ ಇತ್ತು, ಆದರೆ, ಸಾಧ್ಯವಾಗಿರಲಿಲ್ಲ. ಇದರ ಭಾಗವಾಗಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಹಮ್ಮಿಕೊಳ್ಳಲಾಗಿದೆ.

೧೩ ತಂಡಗಳು ಭಾಗಿ: ೨೫ ವರ್ಷಗಳಲ್ಲಿ ಕೊಡವ ಹಾಕಿ ಹಬ್ಬದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದ ಸುಮಾರು ೧೩ ತಂಡಗಳು ಈ ಚಾಂಪಿಯನ್ಸ್ ಟ್ರೋಫಿಗಾಗಿ ಸೆಣಸಾಟ ನಡೆಸುತ್ತಿವೆ. ೪ ಪೋಲ್‌ಗಳಾಗಿ ವಿಂಗಡಿಸಿದ್ದು, ಪ್ರತಿ ಪಂದ್ಯವು ಲೀಗ್ ಮಾದರಿಯಲ್ಲಿ ನಡೆಯಲಿದೆ. ನಂತರ ೪ ಪೋಲ್‌ನ ಅಗ್ರ ೪ ತಂಡಗಳು ಸೆಮಿಫೈನಲ್‌ನಲ್ಲಿ ಪಾಲ್ಗೊಳ್ಳುತ್ತವೆ. ಸೆಮಿಫೈನಲ್ ನಾಕೌಟ್ ಮಾದರಿಯಲ್ಲಿ ನಡೆಯಲಿದೆ.

ಸ್ಮರಣಿಕೆ ಗೌರವ: ೧೯೯೭ರಲ್ಲಿ ಕರಡದಲ್ಲಿ ಆರಂಭವಾದ ಮೊದಲ ಹಾಕಿ ಹಬ್ಬದಲ್ಲಿ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರು ಹಾಗೂ ವೀಕ್ಷಕ ವಿವರಣೆಗಾರರನ್ನು ಗುರುತಿಸಿ ಉದ್ಘಾಟನಾ ಪಂದ್ಯದ ದಿನದಂದು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಅಂದು ೩ ಬಾರಿಯ ಒಲಿಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ ತವರು ಮನೆ(ಗುಡ್ಡಂಡ), ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಪಾಂಡಂಡ ಪುಷ್ಪಾ ಸುಬ್ಬಯ್ಯ ತವರು ಮನೆ(ಅಮ್ಮಾಟಂಡ) ಅಲ್ಲದೆ ಇನ್ನಿತರ ಗಣ್ಯರು ಉಪಸ್ಥಿತರಿರುವರು. ಅಲ್ಲದೇ, ಕಳೆದ ೨೫ ವರ್ಷಗಳಿಂದ ಹಾಕಿ ಹಬ್ಬವನ್ನು ಶ್ರಮವಹಿಸಿ ಆಯೋಜಿಸುತ್ತಿರುವ ೨೫ ಕೊಡವ ಕುಟುಂಬದ ಅಧ್ಯPರು, ಪಟ್ಟೆದಾರರನ್ನು ಅಂತಿಮ ಪಂದ್ಯಾಟದ ದಿನದಂದು ಸ್ಮರಣಿಕೆ ನೀಡಿ ಗೌರವಿಸಲಾಗುತ್ತಿದೆ.

ವಿಜೇತ ತಂಡಕ್ಕೆ ೨ ಲಕ್ಷ ರೂ:. ಪ್ರಥಮ ಬಹುಮಾನ ಪಡೆದ ತಂಡಕ್ಕೆ ೨ ಲಕ್ಷ ರೂ.ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ೧ ಲಕ್ಷ ರೂ. ನಗದು ಮತ್ತು ಟ್ರೋಫಿ, ಸೆಮಿಫೈನಲ್‌ಗೆ ಅರ್ಹತೆ ಪಡೆದ ತಂಡಕ್ಕೆ ತಲಾ ೫೦,೦೦೦ ರೂ. ನಗದು ಮತ್ತು ಟ್ರೋಫಿ ಹಾಗೂ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದ ಪ್ರತಿ ತಂಡಕ್ಕೂ ತಲಾ ೨೫,೦೦೦ ರೂ. ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುತ್ತಿದೆ. ಜತೆಗೆ ಉತ್ತಮ ಫಾರ್ವರ್ಡ್, ಉತ್ತಮ ಫುಲ್ ಬ್ಯಾಕ್, ಉತ್ತಮ ಆಫ್, ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

” ೧೯೯೭ನೇ ಇಸವಿಯಲ್ಲಿ ಪಾಂಡಂಡ ದಿ.ಕುಟ್ಟಪ್ಪ ಕುಟ್ಟಣಿ ಹಾಗೂ ಸಹೋದರ ಕಾಶಿ ಅವರಿಂದ ಕರಡದಲ್ಲಿ ಸುಮಾರು ಅರವತ್ತು ಕೊಡವ ಕುಟುಂಬಗಳಿಂದ ಕೊಡವ ಕುಟುಂಬಗಳ ನಡುವೆ ಹಾಕಿಹಬ್ಬವು ಆರಂಭವಾಯಿತು. ಅದೇ ರೀತಿ ಪಾಂಡಂಡ ದಿ.ಕುಟ್ಟಪ್ಪ ಅವರಿಗೆ ಚಾಂಪಿಯನ್ ಟ್ರೋಫಿ ನಡೆಸುವ ಆಕಾಂಕ್ಷೆ ಇತ್ತು. ಆದರೆ, ಸಾಧ್ಯವಾಗಿರಲಿಲ್ಲ. ಇದರ ಭಾಗವಾಗಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಹಮ್ಮಿಕೊಳ್ಳಲಾಗಿದೆ.”

-ಪಾಡಂಡ ಕೆ.ಬೋಪಣ್ಣ, ಅಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ

ಪಾಲ್ಗೊಳ್ಳುವ ತಂಡಗಳು:  ಎ ಗುಂಪಿನಲ್ಲಿ ಮಂಡೇಪಂಡ, ಪರದಂಡ, ಕೋಣೇರಿರ. ಬಿ ಗುಂಪಿನಲ್ಲಿ ಚೆಪ್ಪುಡಿರ, ಪಳಂಗಂಡ, ಅಂಜಪರವಂಡ, ಮುಕ್ಕಾಟಿರ(ಬೊಂದ), ಸಿ ಗುಂಪಿನಲ್ಲಿ ನೆಲ್ಲಮಕ್ಕಡ, ಕುಲ್ಲೇಟಿರ, ಮಾಚಮಾಡ. ಡಿ ಗುಂಪಿನಲ್ಲಿ ಕುಪ್ಪಂಡ, ಕೂತಂಡ ಮತ್ತು ಕಲಿಯಂಡ ತಂಡಗಳು ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

24 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

24 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

24 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

24 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

1 day ago