ಪ್ರತಿದಿನ ರಾತ್ರಿ ಅರಮನೆಗೆ ದೀಪಾಲಂಕಾರ ಹೂವಿನಿಂದ ಶೃಂಗೇರಿ ದೇವಸ್ಥಾನದ
ಮಾದರಿ ನಿರ್ಮಾಣ ಪುಷ್ಪ ಪ್ರಿಯರ ಕಣ್ಮನ ಸೆಳೆಯಲಿರುವ ವಿವಿಧ ಮಾದರಿಗಳು
ಮೈಸೂರು:ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ ರವರೆಗೆ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಡಿ.೨೧ರಂದು ಸಂಜೆ ೪ ಗಂಟೆಗೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೯ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ಬಾರಿ ಸುಮಾರು ೨೫,೦೦೦ ವಿಭಿನ್ನ ಅಲಂಕಾರಿಕ ಹೂ ಕುಂಡಗಳು, ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ವರ್ಬಿನ, ಡೈಂಥಸ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ ಪೆಲಂಬೂಡಿಯ, ಸನ್-ವರ್, ಜಪಾನ್ ಸನ್‌ಪ್ಲವರ್, ಆಲೇಕ್, ಸಿನೇರಿಯಾ, ಕಾಸ್‌ಮಸ್, ಪ್ಲಾಕ್ಸ್, ಕ್ಯಾಲೂಂಡಲ, ಗೋಪೆರಿಯನ್, ಮ್ಯಾಂಡೂವಿಲ, ಪಾಂಚಿಟಿಯ, ತುರೂನಿಯಂ, ಬಾಲ್ಸಂ, ಕಾಕ್ಸ ಕೊಂಬ್, ನಸ್ಟರ್‌ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು, ಸೇರಿದಂತೆ ೩೫ ಜಾತಿಯ ಹೂವಿನ ಗಿಡಗಳು ಹಾಗೂ ಅಂದಾಜು ೪ ಲಕ್ಷ ವಿಧದ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲವರ್ಗಳಿಂದ ಅಲಂಕರಿಸಲಾಗಿರುತ್ತದೆ.
ಶೃಂಗೇರಿ ದೇವಸ್ಥಾನದ ಮಾದರಿಯನ್ನು ಹೂವಿನಿಂದ ರೂಪಿಸುವುದು ವಿಶೇಷ ಫಲ ಪುಷ್ಪ ಪ್ರದರ್ಶನದ ಪ್ರವೇಶ ದ್ವಾರ ಮತ್ತು ಹೊರ ಹೋಗುವ ದ್ವಾರಗಳಲ್ಲಿ ಗರಿಗಳಿಂದ ಚಪ್ಪರ ನಿರ್ಮಿಸಿ ಹೂವುಗಳಿಂದ ಅಲಂಕರಿಸಲಾಗುತ್ತದೆ. ಹೂಗಳಿಂದ ದಿ. ಸಾಲುಮರದ ತಿಮ್ಮಕ್ಕ ಅವರ ಚಿತ್ರ, ಸಿರಿಧಾನ್ಯ ದಿಂದ ಅಲಂಕರಿಸಿ ವೃಕ್ಷ ಮಾದರಿ ನಿರ್ಮಾಣ, ಅರಮನೆ ಮಂಡಳಿ ಕಚೇರಿಯಲ್ಲಿರುವ ಮೈಸೂರು ಸಂಸ್ಥಾನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಮಾದರಿ ಚಿತ್ರವನ್ನು ಬೇಸಿಗೆ ಹೂವುಗಳಿಂದ ಅಲಂಕರಿಸಲಾಗುವುದು.
ಭಾರತ ಸಂವಿಧಾನ ಘೋಷ ವಾಕ್ಯಕ್ಕೆ ಹೂವಿನ ಅಲಂಕಾರ,ಹಣ್ಣು ಮತ್ತು ತರಕಾರಿಗಳಿಂದ ಗಣ್ಯ ವ್ಯಕ್ತಿಗಳು,ಪ್ರಾಣಿ ಪಕ್ಷಿಗಳು, ಶ್ರೀ ಕೃಷ್ಣ ಮತ್ತು ರಾಧೆ ಉಯ್ಯಾಲೆಯಲ್ಲಿ ಕುಳಿತು ವಿಹರಿಸುತ್ತಿರುವ ಮಾದರಿ, ಭಾರತದ ಮಹಿಳಾ ಕ್ರಿಕೆಟಿಗರು ಗೆದ್ದ ವಿಶ್ವಕಪ್ ಟ್ರೋಫಿ ಮಾದರಿ, ಕ್ರಿಕೆಟ್, ಖೋ ಖೋ, ಕಬಡ್ಡಿ, ವಿಶ್ವಕಪ್ ಕ್ರಿಕೆಟ್ ಗೆದ್ದ ಅಂಧ ಕ್ರಿಕೆಟ್ ಆಟಗಾರರ ಭಾವ ಚಿತ್ರಗಳನ್ನು ಡಿಜಿಟಲ್ ಬೋರ್ಡ್‌ನಿಂದ ಅಲಂಕರಿಸುವುದು, ೨೦೨೫ರ ಆಪರೇಷನ್ ಸಿಂಧೂರ್ ಮಾದರಿ ನಿರ್ಮಾಣ, ಛೋಟಾ ಭೀಮ್ ಮಾದರಿಯ ಚಿತ್ರವನ್ನು ಥರ್ಮಾ ಕೋಲ್ ಮತ್ತು ಹೂವುಗಳಿಂದ ಅಲಂಕರಿಸುವುದು, ಕಾಳಿಂಗ ಮರ್ಧನ ಮಾದರಿ, ಅಳಿಲು ಸೈಕಲ್ ಓಡಿಸುವ ಮಾದರಿ, ೨ ಹಂಸ ಮಾದರಿಯ ಸೆಲ್ಫಿ ಪಾಯಿಂಟ್‌ಗಳ ನಿರ್ಮಾಣ, ಮಕ್ಕಳ ಆಕ ರ್ಷಣೆಗೆ ವಿವಿಧ ಮಾದರಿಯ ಕೊಕ್ಕರೆ ಗಳು, ಪಕ್ಷಿಗಳು, ಲೇಡಿ ಬಗ್, ಮೊಲ, ಸ್ಕೈಲ್ ಹುಳುವಿನ ಆಕಾರದ ಚಿತ್ರ, ಮಾವಿನ ಹಣ್ಣಿನ ಮಾದರಿ ವೀಕ್ಷಣೆಗೆ ಲಭ್ಯವಿರುತ್ತದೆ. ಫಲ ಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬರುವ ೫೦೦ ಮಂದಿ ಗಣ್ಯರು, ಸಾರ್ವಜನಿಕರಿಗೆ ಸಾಂಕೇತಿಕವಾಗಿ ಔಷಧಿ ಗಿಡಗಳನ್ನು ವಿತರಿಸಲಾಗುವುದು. ಶ್ರೀ ಜಯಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳು ಮತ್ತು ಸಂಗೀತವನ್ನು ಆಲಿಸಬಹುದಾಗಿದೆ.
ಬೊಂಬೆಗಳ ಪ್ರದರ್ಶನ: ನವರಾತ್ರಿ ಸಂದರ್ಭ ಹಾಗೂ ವಿಶೇಷ ಸಂದರ್ಭಗಳಲ್ಲಿ ಮನೆಗಳಲ್ಲಿ ಬೊಂಬೆಗಳನ್ನು ಪ್ರದರ್ಶಿಸುವ ಆಯ್ದ ಐದು ಜನರನ್ನು ಆಹ್ವಾನಿಸಿ, ೫ ಬ್ಲಾಕ್‌ಗಳಲ್ಲಿ ಭವ್ಯ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.
” ಮೈಸೂರು ಅರಮನೆ ವಿದ್ಯುತ್ ದೀಪಾಲಂಕಾರ ರಾತ್ರಿ ೯ ರವರೆಗೂ ಇರುತ್ತದೆ. ಫಲಪುಷ್ಪ ಪ್ರದರ್ಶನದ ದಿನಗಳಲ್ಲಿ ಪ್ರತಿದಿನ ಸಂಜೆ ೫ ರಿಂದ ೯.೩೦ ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಡಿ.೩೧ರಂದು ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ರಾತ್ರಿ ೧೧ರಿಂದ ೧೨ ಗಂಟೆವರೆಗೆ ಏರ್ಪಡಿಸಲಾಗುತ್ತದೆ. ಹೊಸ ವರ್ಷಾಚರಣೆಯ ಪ್ರಯುಕ್ತ ರಾತ್ರಿ ೧೨ ರಿಂದ ೧೨.೧೫ ರವರೆಗೆ ಬಣ್ಣಗಳ ಚಿತ್ತಾರ ಮೂಡಿಸುವ ಶಬ್ದ ರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮವೂ ಇರಲಿದೆ.
“ಛಾಯಾಚಿತ್ರ, ವಿಡಿಯೋ ಪ್ರದರ್ಶನ ದಸರಾ ಅಂದು-ಇಂದು, ಒಡೆಯರ್ ಆಡಳಿತ ಹಾಗೂ ವಿಶ್ವ-ವಿಖ್ಯಾತ ನಾಡಹಬ್ಬವಾದ ಹಿಂದಿನ ಮೈಸೂರು ದಸರಾ, ಹಳೆಯ ದಸರಾವನ್ನು ಪ್ರಾರಂಭಿಸಿ ತಹಸಿಲ್‌ವರೆಗಿನ ಸಾಕ್ಷ ಚಿತ್ರ,ಛಾಯಾಚಿತ್ರ, ವಿಡಿಯೋ ಪ್ರದರ್ಶನ ಇರಲಿದೆ.”
ಹನೂರು: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಾಯಗೊಂಡಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು…
ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿ ಕೃಪೆಯಿಂದಲೇ ಈ ಬಾರಿ ಉತ್ತಮ ಮಳೆಯಾಗಿ, ಬರಗಾಲದಿಂದ ಕಂಗೆಟ್ಟಿದ್ದ ರೈತರ…
‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…
ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…
ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…
ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…