ಚಿರಂಜೀವಿ ಸಿ. ಹುಲ್ಲಹಳ್ಳಿ
ಜಿಲ್ಲೆಯಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಸಂಖ್ಯೆ ಹೆಚ್ಚಳ
ಮೈಸೂರು: ಬಹುತೇಕ ಮಕ್ಕಳು ಹೆತ್ತವರ ಮಡಿಲಲ್ಲಿ, ಮಮತೆಯ ನುಡಿಯಲ್ಲಿ ಕೈತುತ್ತನ್ನುಂಡು ಬೆಳೆದು, ಗೆಳೆಯರೊಂದಿಗೆ ಆಟವಾಡುತ್ತಾ, ಪಾಠ-ಪ್ರವಚನ ಕೇಳುತ್ತಾ ನಾಗರಿಕ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಆದರೆ, ಇಂತಹ ಭಾವನಾತ್ಮಕ ಅನುಭವವಿಲ್ಲದೆ ಬೆಳೆದ ಹಲವು ಮಕ್ಕಳು ಸಂದರ್ಭದ ಹೊಡೆಕ್ಕೆ ಸಿಲುಕಿ ತಮಗೆ ಅರಿವಿಲ್ಲದೆ ಎಸಗುವ ತಪ್ಪಿನಿಂದಾಗಿ ಕಾನೂನು ಸಂಘರ್ಷಕ್ಕೆ ಒಳಗಾಗುತ್ತಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ಇಂತಹ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.
ಮತ್ತೊಂದು ಕಳವಳಕಾರಿ ಸಂಗತಿ ಎಂದರೆ ರಾಜ್ಯದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಿ ರಿಮ್ಯಾಂಡ್ ರೂಂನಲ್ಲಿರುವ ಮಕ್ಕಳ ಸಂಖ್ಯೆಯಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿ ರುವುದು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ತಪ್ಪೆಸಗಿ ಕಾನೂನು ಸಂಘರ್ಷಕ್ಕೆ ಒಳ ಗಾದವರು ಬಾಲಕಿಯರೂ ಸೇರಿದಂತೆ ಒಟ್ಟು ೬೩೬ ಮಂದಿ. ಮಕ್ಕಳ ಅಪರಾಧಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿದೆ. ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಾಲಕಿಯರೂ ಸೇರಿದಂತೆ ರಾಜ್ಯಾದ್ಯಂತ ೭೬೨೬ ಮಕ್ಕಳು ಮಂದಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವುದು ಆತಂಕ ಹುಟ್ಟಿಸುವ ವಿಚಾರವಾಗಿದೆ.
ತಮ್ಮ ಮಕ್ಕಳು ಸುಂದರವಾದ ಬದುಕು ಕಟ್ಟಿಕೊಳ್ಳಬೇಕೆಂದು. ಆ ಮೂಲಕ ದೇಶದ ಉತ್ತಮ ಪ್ರಜೆಗಳಾಗಬೇಕು ಎಂಬ ನೂರಾರು ಕನಸುಗಳನ್ನು ಕಟ್ಟಿಕೊಂಡು ಪೋಷಕರು ಶಾಲಾ-ಕಾಲೇಜುಗಳಿಗೆ ಕಳಿಸುತ್ತಾರೆ. ಆದರೆ, ತಮಗೆ ಅರಿವಿಲ್ಲದೆಯೋ, ಸಹವಾಸ ದೋಷದಿಂದಲೋ ಅಥವಾ ಯಾರದೋ ಕುಮ್ಮಕ್ಕಿನಿಂದಲೋ ತಪ್ಪೆಸಗಿ ಕಾನೂನು ಸಂಘರ್ಷಕ್ಕೆ ಸಿಲುಕುವ ಪ್ರಕರಣಗಳು ಹೆಚ್ಚಾ ಗುತ್ತಿವೆ. ಕಳೆದ ಮೂರು ವರ್ಷಗಳಲ್ಲಿ (೨೦೨೧-೨೦೨೪) ಮೈಸೂರು ಜಿಲ್ಲೆಯಲ್ಲಿ ೬೩೬ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾಗಿ ಪರಿವೀಕ್ಷಣ ಮಂದಿರದಲ್ಲಿದ್ದು, ಹೋಗಿದ್ದಾರೆ.
ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಮೊಬೈಲ್ ತೆಗೆದುಕೊಂಡು ಪಾರ್ಟಿ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮೂವರು ಬಾಲಕರು ತಮ್ಮ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಕಳೆದ ಕೆಲವು ದಿನಗಳ ಹಿಂದೆ ಪಡುವಾರಹಳ್ಳಿಯ ರೌಡಿಶೀಟರ್ ಚಂದು ಅಲಿಯಾಸ್ ಕುಂಡ ಚಂದುವನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ೧೭ ವರ್ಷದ ಬಾಲಕನೂ ಇದ್ದಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಿನಿಮಾ ಪ್ರೇರಣೆ, ಸಾಮಾಜಿಕ ಜಾಲತಾಣಗಳ ಪ್ರೇರಣೆ, ಸಹವಾಸ ದೋಷ, ಹಣ ಸಂಪಾದನೆ, ಕೌಟುಂಬಿಕ ಜಗಳ, ಪಾಲಕರ ಅತಿಯಾದ ಮುದ್ದು ಅಥವಾ ಉದಾಸೀನ, ಶಿಕ್ಷಕರ ತಾರತಮ್ಯ, ಮಾನಸಿಕ ದೌರ್ಬಲ್ಯ, ಮಾದಕ ವಸ್ತುಗಳ ವ್ಯಸನ, ಆಮಿಷಗಳಿಗೆ ಒಳಗಾಗುವ ಕಿಶೋರ ವಯೋಮಾನದವರು, ಗಲಾಟೆ ಯಂತದ ಸಣ್ಣ ಪ್ರಕರಣಗಳಿಂದ ಹಿಡಿದು, ಕೊಲೆ ಯತ್ನ, ಕೊಲೆ ಮುಂತಾದ ಗಂಭೀರವಾದ ಪ್ರಕರಣಗಳಲ್ಲಿಯೂ ಭಾಗಿಯಾಗಿ ಭವಿಷ್ಯ ಕಳೆದುಕೊಳ್ಳುತ್ತಿದ್ದಾರೆ.
ಶಿಕ್ಷಿತರೇ ಹೆಚ್ಚು: ಉತ್ತಮ ಶಿಕ್ಷಣ ಕಲಿತು ಸುಶಿಕ್ಷಿತರಾಗ ಬೇಕಾದವರು ಕಾಲೇಜು ಮಟ್ಟದಲ್ಲಿ ರೌಡಿಸಂ ಎಂಬ ಭ್ರಮಾಲೋಕದ ಸೆಳತಕ್ಕೆ ಸಿಲುಕಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿಕೊಳ್ಳುತ್ತಾರೆ. ಇದರಿಂದ ರೌಡಿ ಶೀಟರ್ಗಳ ಪರಿಚಯವಾಗಿ ನಂತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಇವರಲ್ಲಿ ೧೭ರಿಂದ ೧೮ ವಯೋಮಾನದ ಬಾಲಕರೇ ಹೆಚ್ಚು.
ಕಾಲೇಜು ಮೆಟ್ಟಿಲೇರಿ ಉತ್ತಮ ಭವಿಷ್ಯ ರೂಪಿಸಿಕೊಳ್ಳ ಬೇಕಾದ ೧೭ರಿಂದ ೧೮ ವಯೋಮಾನದೊಳಗಿನ ೨೦೯ ಬಾಲಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಈ ವಯಸ್ಸಿನ ಬಾಲಕರೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊ ಳ್ಳುತ್ತಿರುವುದು ಕಳವಳ ಮೂಡಿಸಿದೆ.
ಮಕ್ಕಳ ಸಂರಕ್ಷಣಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕ್ರಮಗಳನ್ನು ಪ್ರತಿ ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತದೆ.
ರೌಡಿ ಶೀಟರ್ -ನ್ ಪೇಜುಗಳು: ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕರು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅಂತರ್ಜಾಲ ದಲ್ಲಿ ಒಳ್ಳೆಯದ್ದು-ಕೆಟ್ಟದ್ದು ಎರಡೂ ಸುಲಭವಾಗಿ ದೊರೆಯುತ್ತಿವೆ. ಇಲ್ಲಿ ರೌಡಿ ಶೀಟರ್‌ಗಳ -ನ್ ಪೇಜುಗಳು ಇದ್ದು, ಅದರಲ್ಲಿ ಅವರನ್ನು ದೊಡ್ಡ ನಾಯಕರೆಂದು ಬಿಂಬಿಸಿ ಕನ್ನಡ-ತಮಿಳು ಹೀಗೆ ನಾನಾ ಬಗೆಯ ರೌಡಿಸಂ ಹಾಡುಗಳು, ಡಿಜಿಎಂ (ಹಿನ್ನೆಲೆ ಸಂಗೀತ) ಅನ್ನು ಹಾಕಿ ಇನ್‌ಸ್ಟಾಗ್ರಾಂನಲ್ಲಿ ಹಾಕಲಾಗುತ್ತಿದೆ. ಇದನ್ನು ನೋಡಿದ ಬಾಲಕರು ಲೈಕ್ ಒತ್ತಿ ಪ್ರಭಾ ವಿತರಾಗುತ್ತಿದ್ದಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ ಗಮನವಹಿಸಬೇಕು ಎಂಬುದು ಪೋಷಕರಾದ ವಸಂತಪ್ಪ ಅವರ ಕಳಕಳಿಯ ಮನವಿ ಆಗಿದೆ.
ಸಿನಿಮಾ ಪ್ರಭಾವವೂ ಹೆಚ್ಚು: ಇತ್ತೀಚಿನ ಸಿನಿಮಾ ಗಳಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರಿದ ದೃಶ್ಯಗಳು ಹೆಚ್ಚಾಗುತ್ತಿವೆ. ರೌಡಿಸಂ ಕ್ರೂರ ರೂಪ ತೋರಿಸುತ್ತೇವೆಂದು ಕೊಲೆಯಂತಹ ಪ್ರಕರಣವನ್ನು ವೈಭವೀಕರಿಸುವುದರಿಂದ ಬಾಲಕರು ಪ್ರಭಾವಿತರಾಗುತ್ತಿದ್ದಾರೆ. ಇದರಿಂದ ಕಾನೂನು ಪ್ರಕರಣಗಳು ಹೆಚ್ಚುತ್ತಿವೆ ಎಂದು ಪಾಲಕರು ಸೇರಿದಂತೆ ಕೆಲವು ವಿದ್ಯಾರ್ಥಿ ಸಂಘಟನೆಗಳು ದೂರಿವೆ.
” ಮಕ್ಕಳ ಬಲವಂತದ ದುಡಿತ. ಬಾಲ್ಯದಲ್ಲಿ ಕುಟುಂಬದ ಹೊಣೆಗಾರಿಕೆ. ಅಕ್ಷರದಿಂದ ವಂಚನೆ. ಮಾದರಿ ಅಲ್ಲದ ಶಿಕ್ಷಣ. ಇವುಗಳೆಲ್ಲದರಲ್ಲಿಯೂ ನೈತಿಕತೆಯನ್ನು ತುಂಬಬೇಕು. ಆಗ ಮಾತ್ರ ಸ್ವಸ್ಥ ಸಮಾಜವನ್ನು ಕಾಣಲು ಸಾಧ್ಯ. ಮಕ್ಕಳು ಸಣ್ಣಪುಟ್ಟ ತಪ್ಪು ಮಾಡಿದಾಗ. ಸಮರ್ಥವಾಗಿ ಬದುಕು ಬದಲಾಯಿಸುವ ಆಪ್ತಸಮಾಲೋಚನೆ. ತರಬೇತಿಯನ್ನು ಹೊಂದಿದ ತರಬೇತುದಾರರಿಂದ ತರಬೇತಿ, ಬದುಕಿಗೆ ಬೇಕಾದಂತಹ ವೃತ್ತಿಪರ ಶಿಕ್ಷಣಗಳನ್ನು ನೀಡಬೇಕು. ಸಮಾಜವು ಕೂಡ, ಇವರ ಬದಲಾವಣೆಗೆ ಪೂರಕ ಸ್ಪಂದನೆ ಮಾಡುವ ಅಗತ್ಯವಿದೆ. ಅಸಮಾಧಾನಗಳು, ತಾರತಮ್ಯಗಳು ಕೊನೆಗೊಂಡಾಗ. ಅಪರಾಧ ಜಗತ್ತು ಕಡಿಮೆಯಾಗುತ್ತದೆ. ಈ ರೀತಿಯ ಮಕ್ಕಳಿಗೆ ಆರೈಕೆ, ಅಂತಃಕರಣ, ಮಮಕಾರ ಬಹಳ ಮುಖ್ಯವಾಗಿ ರುತ್ತದೆ. ಅದು ಸಮಾಜವೇ ಕೊಡಬೇಕು.”
-ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ.
” ಪಾಲಕರು, ಶಿಕ್ಷಕರು ತಮ್ಮ ದುಡಿಮೆ, ಕೆಲಸದ ನಡುವೆಯೂ ಮಕ್ಕಳು ಮತ್ತು ಅವರ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು.”
-ಈ.ಧನಂಜಯ ಎಲಿಯೂರು, ಮಕ್ಕಳ ಹಕ್ಕುಗಳ ಹೋರಾಟಗಾರರು, ಮೈಸೂರು.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…