ಎಸ್.ಎಸ್.ಭಟ್
ಮೈಸೂರು: ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿ ಆದರ್ಶವಾಗಿದ್ದ ಆದರ್ಶ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಗಳೊಂದಿಗೆ ೭೪ ಪದವಿ ಪೂರ್ವ ಕಾಲೇಜುಗಳನ್ನು ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲೇ ಆರಂಭಿಸಲಾಗಿದ್ದು, ಅವುಗಳೀಗ ಎರಡನೇ ವರ್ಷಕ್ಕೆ ಕಾಲಿಟ್ಟಿವೆ. ಆದರೆ, ಯಾವುದೇ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರೇ ಇಲ್ಲ.
ಪ್ರಯೋಗಾಲಯಗಳಿವೆ; ಪರಿಕರಗಳೇ ಇಲ್ಲ. ೨೨ ಜಿಲ್ಲೆಗಳಲ್ಲಿರುವ ೭೪ ಆದರ್ಶ ಶಾಲೆಗಳನ್ನು ಉನ್ನತೀಕರಿಸಿ ಪದವಿಪೂರ್ವ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯಲ್ಲೇ ಆರು ಆದರ್ಶ ಶಾಲೆಗಳಿದ್ದು, ಕಾಲೇಜುಗಳು ಸ್ಥಾಪನೆಯಾಗಿ ೨ ವರ್ಷಗಳಾದರೂ ಶಿಕ್ಷಣ ಇಲಾಖೆ ಈ ಪದವಿ ಪೂರ್ವ ಕಾಲೇಜುಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸದೆ ಅತಿಥಿ ಶಿಕ್ಷಕರಿಂದಲೇ ತರಗತಿಗಳನ್ನು ನಡೆಸುತ್ತಿದೆ.
ಆದರ್ಶ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉನ್ನತ ಮಟ್ಟದಲ್ಲಿರುವುದರಿಂದ ಪದವಿ ಪೂರ್ವ ಕಾಲೇಜಿನಲ್ಲೂ ಉತ್ತಮ ವಿದ್ಯಾಭ್ಯಾಸ ದೊರಕಬಹುದೆಂಬ ಆಶಾಭಾವನೆಯಿಂದ ಪಿಯುಸಿ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಖಾಯಂ ಉಪನ್ಯಾಸಕರ ಬೋಧನೆಯ ಸುಯೋಗ ಇಲ್ಲದಂತಾಗಿದೆ. ಆದರ್ಶ ಮನೋಭಾವನೆಯಿಂದ ಕಾಲೇಜು ಸ್ಥಾಪಿಸಿದ ಶಿಕ್ಷಣ ಇಲಾಖೆಯೂ ಈವರೆಗೆ ಮಕ್ಕಳಿಗೆ ಖಾಯಂ ಬೋಧಕರನ್ನು ಒದಗಿಸದೇ ಇರುವುದು ವಿಪರ್ಯಾಸದ ಸಂಗತಿ.
ರಾಜ್ಯದಾದ್ಯಂತ ೭೪ ಆದರ್ಶ ಪ್ರೌಢಶಾಲೆಗಳನ್ನು ಸ್ಥಾಪಿಸಿರುವ ಸರ್ಕಾರ ಇದೇ ಶಾಲೆಗಳಲ್ಲಿ ೨ ವರ್ಷಗಳ ಹಿಂದೆ ಪದವಿ ಪೂರ್ವ ಕಾಲೇಜುಗಳನ್ನೂ ಸ್ಥಾಪಿಸಿತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ನಂಜನಗೂಡು, ಕೆ.ಆರ್.ನಗರ, ತಿ.ನರಸೀಪುರ, ಹುಣಸೂರು ಹಾಗೂ ಮೈಸೂರು ತಾಲ್ಲೂಕುಗಳಲ್ಲಿ ಸದ್ಯ ೬ ಕಾಲೇಜುಗಳಿವೆ. ಕಳೆದ ವರ್ಷವೇ ಆರಂಭವಾದ ಈ ಕಾಲೇಜುಗಳಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳು ಈಗ ದ್ವಿತೀಯ ಪಿಯುಸಿಗೆ ಕಾಲಿಟ್ಟಿದ್ದಾರೆ. ತರಗತಿಗಳು ಆರಂಭವಾಗಿ ಎರಡು ತಿಂಗಳುಗಳೇ ಕಳೆದಿವೆ. ಆದರೂ ಈ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರನ್ನು ಸರ್ಕಾರ ಈವರೆಗೂ ನೇಮಿಸಿಯೇ ಇಲ್ಲ. ಜಿಲ್ಲೆಯ ಆರೂ ಆದರ್ಶ ಕಾಲೇಜುಗಳೂ ಸೇರಿದಂತೆ ರಾಜ್ಯದ ಎಲ್ಲ ೭೪ ಆದರ್ಶ ಕಾಲೇಜುಗಳಲ್ಲೂ ಇಂದಿಗೂ ಕೇವಲ ಅತಿಥಿ ಉಪನ್ಯಾಸಕರಿಂದಲೇ ಪಾಠ ಪ್ರವಚನ ನಡೆಸಲಾಗುತ್ತಿದೆ.
ಅತಿಥಿ ಉಪನ್ಯಾಸಕರಿಂದಲೇ ತುಂಬಿರುವ ಆದರ್ಶ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗವನ್ನು ಸ್ಥಾಪಿಸಲಾಗಿದ್ದು, ಲ್ಯಾಬ್ ಕೂಡ ಇದೆ. ಆದರೆ ಲ್ಯಾಬ್‌ಗೆ ಬೇಕಾದ ಪರಿಕರಗಳೇ ಇಲ್ಲ. ಲ್ಯಾಬ್‌ಗೆ ಪರಿಕರಗಳನ್ನು ತರಲು ಕಾಲೇಜುಗಳಿಗೆ ಹಣ ಬಿಡುಗಡೆಯೇ ಆಗಿಲ್ಲ ಎನ್ನಲಾಗುತ್ತಿದ್ದು, ವಿಜ್ಞಾನ ಕೋರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಪ್ರಯೋಗಶಾಲೆಯ ಪ್ರಾಯೋಗಿಕ ತರಗತಿಯ ಅನುಭವವೇ ಇಲ್ಲದೇ ಪಿಯುಸಿ ಶಿಕ್ಷಣ ಮುಗಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಹಲವೆಡೆ ಕೊಠಡಿಗಳ ಕೊರತೆಯೂ ಇದೆ
” ಖಾಯಂ ಶಿಕ್ಷಕರ ನೇಮಕ ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಕಾಲೇಜುಗಳಿಗೆ ಖಾಯಂ ಉಪನ್ಯಾಸಕರನ್ನು ನೇಮಿಸಲು ಅನುಮತಿಗಾಗಿ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಹೇಳಲಾಗುತ್ತಿದೆ”
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…
ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…
ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…
ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…
ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…