ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು: ವಯಸ್ಸಾದವರು ಈ ಶಾಲೆಯನ್ನು ನೋಡಿದರೆ, ತಮ್ಮ ಬಾಲ್ಯದ ನೆನಪುಗಳಿಗೆ ರೆಕ್ಕೆಪುಕ್ಕ ಬಂದು ತಮ್ಮ ಶಾಲಾ ದಿನಗಳಿಗೆ ಹೋಗುತ್ತಾರೆ. ಮಕ್ಕಳಿಂದ ತುಂಬಿ ತುಳುಕುವ ತರಗತಿಗಳು, ಮಕ್ಕಳ ನಲಿ-ಕಲಿಕೆಗೆ ದಕ್ಕುವ ಶಿಕ್ಷಕರು, ಸುಸಜ್ಜಿತವಾದ ಕಟ್ಟಡ, ಆಡಿ ಕುಣಿಯಲು ಉತ್ತಮವಾದ ಮೈದಾನ, ಕೊರತೆ ಇಲ್ಲದ ಮೂಲಭೂತ ಸೌಕರ್ಯಗಳು, ಖಾಸಗಿ ಶಾಲೆಗಳಿಗಿಂತ ಒಂದು ಕೈ ಮೇಲಾಗೇ ಇರುವ ಶೈಕ್ಷಣಿಕ ವಾತಾವರಣ, ಹಕ್ಕಿಗಳಂತೆ ಚಿಲಿಪಿಲಿಗುಟ್ಟುವ ಮಕ್ಕಳ ಸದ್ದು, ಒಟ್ಟಿನಲ್ಲಿ ಸರ್ಕಾರಿ ಶಾಲೆ ಎನ್ನುವುದು ಹೇಗಿರಬೇಕೋ, ಆ ರೀತಿ ಇದೆ ಈ ಶತಮಾನದ ಶಾಲೆ!
ನಗರದ ಕನಕಗಿರಿಯಲ್ಲಿರುವ ಸರ್ಕಾರಿ ಶಾರದ ವಿಲಾಸ ಹಿರಿಯ ಪ್ರಾಥ ಮಿಕ ಶಾಲೆಯು ಉತ್ತಮವಾಗಿ ಇತರ ಸರ್ಕಾರಿಶಾಲೆಗಳಿಗೆ ಮಾದರಿಯಾಗಿ ಮಕ್ಕಳನ್ನು ತುಂಬಿಕೊಂಡು ಮೈದಾಳಿ ಕಲಿಕೆಯಲ್ಲಿ ಸಂತಸಪಡುತ್ತಿದೆ. ೧೯೧೮ರಲ್ಲಿ ನಗರದ ಲ್ಯಾಂಡ್ಸ್‌ಡೌನ್ ಕಟ್ಟಡದ ಸಮೀಪದಲ್ಲಿ ಸ್ಥಾಪನೆಗೊಂಡ ಈ ಶಾಲೆಯನ್ನು ೧೯೮೬ರಲ್ಲಿ ಕನಕಗಿರಿಗೆ ಸ್ಥಳಾಂತರಿಸಲಾಯಿತು. ಈಗ ಈ ಶಾಲೆಗೆ ೧೦೮ ವರ್ಷಗಳು ತುಂಬಿ ಜೀವಿಸುತ್ತಿದೆ.
ಈ ಶಾಲೆಯಲ್ಲಿ ಪ್ರಸ್ತುತ ಎಲ್‌ಕೆಜಿ, ಯುಕೆಜಿ ಒಳಗೊಂಡಂತೆ ೧ರಿಂದ ೭ನೇ ತರಗತಿಯವರೆಗೆ ೧೯೦ ಮಕ್ಕಳು ಓದುತ್ತಿದ್ದಾರೆ. ಶಾಲೆಯಲ್ಲಿ ದ್ವಿ-ಭಾಷಾ ಮಾಧ್ಯಮವನ್ನು ಅಳವಡಿಸಿಕೊಂಡು ಎಲ್‌ಕೆಜಿ, ಯುಕೆಜಿ ಆರಂಭಿಸಿರುವುದು ಶಾಲೆಗೆ ಮೆರುಗನ್ನು ತಂದಿದ್ದು, ಎಲ್ಲ ವಿಷಯಗಳಿಗೂ ಸೇರಿದಂತೆ ೧೧ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟೆಲ್ಲದರ ನಡುವೆಯೂ ಸಮೀಪದ ಖಾಸಗಿ ಶಾಲೆಗಳ ಹೊಡೆತ ಇಲ್ಲ ಎಂದು ಹೇಳುವಂತಿಲ್ಲ. ಇಲ್ಲಿ ಪರಿಶಿಷ್ಟ ಜಾತಿಯ ೨೬ ಮಕ್ಕಳು, ಪರಿಶಿಷ್ಟ ಪಂಗಡದ ೨೯ ಮಕ್ಕಳು, ಮುಸ್ಲಿಂ ಸಮುದಾಯದ ೫ ಮಕ್ಕಳು, ಹಿಂದುಳಿದ ವರ್ಗಗಳಿಗೆ ಸೇರಿದ ೧೩೦ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.
‘ನಮ್ಮಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಎಲ್ಲ ತರಗತಿಗಳೂ ಉತ್ತಮವಾಗಿ ನಡೆದುಕೊಂಡು ಹೋಗುತ್ತಿವೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪಠ್ಯವನ್ನು ಪರಿಣಾಮಕಾರಿಯಾಗಿ ಬೋಽಸಲಾಗುತ್ತಿದೆ. ಮಕ್ಕಳೂ ಕೂಡ ಖುಷಿಯಿಂದ ಕಲಿಯುತ್ತಿದ್ದಾರೆ. ಜೊತೆಗೆ ನಾನು ಗಮನಿಸಿದಂತೆ ಸ್ಥಳೀಯರು ನಮ್ಮ ಶಾಲೆಯ ಶೈಕ್ಷಣಿಕ ಚಟುವಟಿಕೆ ಮೇಲೆ ತುಂಬಾ ವಿಶ್ವಾಸವಿಟ್ಟು ಮಕ್ಕಳಿಗೆ ಪ್ರವೇಶಾತಿ ಕೊಡಿಸುತ್ತಾರೆ.
ನಾವೂ ಅವರ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ. ಇಲ್ಲಿ ಪೋಷಕರೂ, ಶಿಕ್ಷಕರೂ ಸೇರಿದಂತೆ ಎಲ್ಲರ ಜವಾಬ್ದಾರಿಯೂ ಮುಖ್ಯವಾಗಿದೆ. ಈ ಎಲ್ಲದರ ಫಲಿತವೇ ಮಕ್ಕಳ ಉತ್ತಮವಾಗದ ಕಲಿಕೆಯಾಗಿದೆ. ಹಾಗಾಗಿ ಈ ಎಲ್ಲ ವಿಷಯಗಳು ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಇರುವುದಕ್ಕೂ, ಶೈಕ್ಷಣಿಕ ವಾತಾವರಣಕ್ಕೂ ಪ್ರಮುಖ ಸಾಕ್ಷಿಯಾಗಿದೆ’ ಎಂದು ಶಾಲೆಯ ಸಹ ಶಿಕ್ಷಕಿಯಾದ ಶೈಲಜಾ ಅವರು ಅಭಿಪ್ರಾಯ ಹಂಚಿಕೊಂಡರು.
ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ‍್ಸ್ ಸೌಲಭ್ಯ, ಉತ್ತಮ ಗ್ರಂಥಾಲಯ, ವಾಚಾನಾಲಯ, ಉತ್ತಮ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಉತ್ತಮವಾಗಿದೆ. ಇಸ್ಕಾನ್‌ನಿಂದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.
” ನಮ್ಮ ಶಾಲೆ ಅತ್ಯುತ್ತಮವಾಗಿದೆ. ನಮ್ಮ ಶಾಲೆಯಂತೆಯೇ ಇತರ ಸರ್ಕಾರಿ ಶಾಲೆಗಳಲ್ಲೂ ಉತ್ತಮವಾತಾವರಣ ನಿರ್ಮಾಣ ಆಗಬೇಕು ಎಂಬುದು ನನ್ನ ಬಯಕೆ. ಸರ್ಕಾರಿ ಶಾಲೆಗಳು ಉತ್ತಮವಾಗಿ ಇರಬೇಕು ಎಂದರೆ ಸಾರ್ವಜನಿಕರು ಸರ್ಕಾರಿ ಶಾಲೆಗಳ ಮಹತ್ವವನ್ನು ಅರಿತುಕೊಳ್ಳಬೇಕು. ನಮ್ಮ ಶಾಲೆ ಮಾದರಿ ಶಾಲೆಯಾಗಿದೆ ಎಂಬುದು ಸಂತೋಷ ತಂದಿದೆ. ಶಾಲೆಯ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸುತ್ತೇನೆ.”
-ಜಯಲಕ್ಷಿ , ಮುಖ್ಯೋಪಾಧ್ಯಾಯರು,
” ಸರ್ಕಾರಿ ಶಾರದ ವಿಲಾಸ ಹಿರಿಯ ಪ್ರಾಥಮಿಕ ಶಾಲೆ, ಕನಕಗಿರಿ, ಮೈಸೂರು ನಾನೂ ಸಹ ಶಾಲೆಯ ಅಭಿವೃದ್ದಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೇನೆ. ಈ ಶಾಲೆ ಎಲ್ಲ ರೀತಿಯಲ್ಲೂ ಉತ್ತಮವಾಗಿದೆ. ಇದರ ನಡುವೆ ಶಾಲಾ ವ್ಯಾಪ್ತಿಗೆ ಸಿಸಿ ಟಿವಿ ಕ್ಯಾಮೆರಾ ಅವಶ್ಯಕತೆ ಇದೆ. ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಒದಗಿಸಿದರೆ ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯದು.”
-ಆರ್.ನಾರಾಯಣ್, ಸ್ಥಳೀಯ ನಿವಾಸಿ ಹಾಗೂ ಎಸ್‌ಡಿಎಂಎಸ್ ಸದಸ್ಯರು, ಕನಕಗಿರಿ
” ನನ್ನ ಇಬ್ಬರು ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಚನ್ನಾಗಿ ಕಲಿಯುತ್ತಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿಯೆ ಶಾಲೆಯ ಶೈಕ್ಷಣಿಕ ವಾತಾವರಣ ಗೊತ್ತಾಗುತ್ತಿದೆ. ಶಾಲೆಯಲ್ಲಿ ಮೂಲಭೂತ ಸೌಕರ್ಯ ಎಲ್ಲವೂ ಚೆನ್ನಾಗಿದೆ. ನಾನು ಶಾಲೆಯ ಅಭಿವೃದ್ಧಿ ಕೆಲಸಗಳಲ್ಲಿಯೂ ಜೊತೆಯಾಗಿ ಇದ್ದೇನೆ.”
-ಜಗದಾಂಬ, ಸ್ಥಳೀಯ ನಿವಾಸಿ ಹಾಗೂ ಎಸ್‌ಡಿಎಂಎಸ್ ಸದಸ್ಯರು
” ಈ ಶತಮಾನದ ಶಾಲೆ ಇತರ ಶಾಲೆಗಳಿಗೆ ಮಾದರಿಯಾಗಿದೆ. ಕೆಲವು ಶಾಲೆಗಳಲ್ಲಿ ಸಮಸ್ಯೆ ಗಳು ಇವೆ. ಅವುಗಳನ್ನು ಸರಿಪಡಿಸುವ ಕೆಲಸ ಆಗುತ್ತಿದೆ. ಜೊತೆಗೆ ಈ ಶಾಲೆಯನ್ನು ಮಾದರಿ ಯಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಸರ್ಕಾರಿ ಶಾಲೆಯ ಮಹತ್ವವನ್ನು ತಿಳಿಸಿ, ಕಷ್ಟದಲ್ಲಿರುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತದೆ. ಶಾಲೆಯ ಆಡಳಿತ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.”
-ಕೃಷ್ಣ, ಬಿ.ಇ.ಓ, ದಕ್ಷಿಣ ವಲಯ
” ಕಾನ್ವೆಂಟ್‌ಗಳು ಅಥವಾ ಖಾಸಗಿ ಶಾಲೆಗಳು ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತವೆ. ನಮ್ಮ ಶಾಲೆಯೂಕೂಡ ಕನ್ನಡದ ಜೊತೆ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಹಾಗಾಗಿ ನಮ್ಮಲ್ಲಿ ಇಂಗ್ಲಿಷ್ ಶಿಕ್ಷಕರು ಹೆಚ್ಚಿದ್ದಾರೆ. ಇದರಿಂದ ಮಕ್ಕಳಿಗೆ ಅನುಕೂಲವೂ ಆಗುತ್ತಿದ್ದು, ಸಂತೋಷದಿಂದ ಕಲಿಯುತ್ತಿದ್ದಾರೆ.”
-ಬಿ.ಉಮೇಶ್, ಸಹ ಶಿಕ್ಷಕ, ಸರ್ಕಾರಿ ಶಾರದ ವಿಲಾಸ ಹಿರಿಯ ಪ್ರಾಥಮಿಕ ಶಾಲೆ, ಕನಕಗಿರಿ, ಮೈಸೂರು
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಮಹಿಳಾ ಫುಟ್ಬಾಲ್ ಕಪ್ 2026ನಲ್ಲಿ ಭಾಗವಹಿಸಿದ್ದ ಇರಾನ್ ರಾಷ್ಟ್ರೀಯ ಮಹಿಳಾ…
ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ…
ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಪ್ರದೇಶದಲ್ಲಿ ತುರ್ತು ನಿರ್ಬಂಧಗಳು ಜಾರಿಯಾಗಿರುವುದರಿಂದ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತಿದ್ದ ಇಂಡಿಗೊ…
ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…
ಮೈಸೂರು : ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ 24 ಅಪರಾಧ ಪ್ರಕರಣಗಳನ್ನು…
ಮೈಸೂರು : ರಾಜ್ಯ ಸರ್ಕಾರದ ʻಪಂಚ ಗ್ಯಾರಂಟಿʼ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…