Andolana originals

ಹೊಸ ಟಿಕೆಟ್ ಯಂತ್ರದಿಂದ ನಿರ್ವಾಹಕರ ಪರದಾಟ

ಸಾರಿಗೆ ನಿಗಮವು ನಿರ್ವಾಹಕರಿಗೆ ಕೊಟ್ಟಿರುವ ಹೊಸ ಟಿಕೆಟ್ ಯಂತ್ರದಿಂದ ಸಮಸ್ಯೆ
• ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ‘ಹೊಸ ಯಂತ್ರದ ತಾಂತ್ರಿಕ ದೋಷದಿಂದ ನಿತ್ಯ ಕೈಯಿಂದ ಹಣ ಕಟ್ಟುತ್ತಿದ್ದೇವೆ…, ಒಂದು ಟಿಕೆಟ್‌ಗೆ ಮೂರು ಆಪ್ಷನ್ ಒತ್ತಬೇಕು…, ಟಿಕೆಟ್ ಕೊಡಲು ಕಷ್ಟವಾಗುತ್ತಿದ್ದು, ಲೋಪಗಳನ್ನು ಸರಿಪಡಿಸಿ…’

ಇದು ಟಿಕೆಟ್ ಕೊಡಲು ಇಲಾಖೆ ನೀಡಿರುವ ಹೊಸ ಟಿಕೆಟ್ ಯಂತ್ರದಲ್ಲಿನ ಲೋಪಗಳನ್ನು ಬಗೆಹರಿಸುವಂತೆ ಕೆಎಸ್‌ಆರ್‌ಟಿಸಿ ಬಸಿನ ನಿರ್ವಾಹಕರು ತಮಗಾಗುತ್ತಿರುವ ಸಮಸ್ಯೆಗಳನ್ನು ಲೆಡ್ಜರ್ ಬರೆದು ಬೇಡಿಕೊಳ್ಳುತ್ತಿರುವ ಪರಿ.

ಸಾರಿಗೆ ನಿಗಮವು ಬಸ್ಸಿನ ನಿರ್ವಾಹಕರಿಗೆ ಕೊಟ್ಟಿರುವ ಹೊಸ ಟಿಕೆಟ್ ಯಂತ್ರದ ಬಳಕೆಯಿಂದ ಆಗುತ್ತಿರುವ ಸಮಸ್ಯೆಯನ್ನು ಹಣ ಕಟ್ಟುವ ವಿಭಾಗದಲ್ಲಿ ಸಮಸ್ಯೆಗಳನ್ನು ಬರೆಯಲು ಇಟ್ಟಿರುವ ಲೆಕ್ಚರ್ ಪುಸ್ತಕದಲ್ಲಿ ಬರೆಯುವುದರ ಜೊತೆಗೆ ಮೌಖಿಕವಾಗಿ ಮನವಿ ಮಾಡುತ್ತಿದ್ದರೂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ.

ಹಳೆಯ ಯಂತ್ರವೂ ಕೀ ಬಟನ್‌ಗಳ ಸಹಾಯದಿಂದ ಕ್ಷಣಾರ್ಧದಲ್ಲಿ ಟಿಕೆಟ್ ಕೊಡುತ್ತಿದ್ದೆವು. ಒಂದು ಟಿಕೆಟ್‌ಗೆ ಒಂದು ಆಕ್ಷನ್ ಇತ್ತು. ಜೊತೆಗೆ ಮರು ಟಿಕೆಟ್ ಕೊಡುವ ಆಯ್ಕೆ ಇತ್ತು. ಆದರೆ, ಹೊಸ ಯಂತ್ರದಲ್ಲಿ ಇದಕ್ಕೆ ತದ್ವಿರುದ್ಧ ಆಕ್ಷನ್ ಹೊಂದಿದೆ ಎಂದು ಆರೋಪಿಸುತ್ತಿದ್ದಾರೆ.

ಹೊಸ ಯಂತ್ರವು ಸಂಪೂರ್ಣ ಟಚ್ ಸ್ಕ್ರೀನ್ ಆಪ್ಷನ್‌ಗಳಿಂದ ಕೂಡಿದೆ. ಒಂದು ಟಿಕೆಟ್‌ಗೆ ಮೂರು ಆಯ್ಕೆಗಳನ್ನು ಒತ್ತಬೇಕು. ಯಂತ್ರದಲ್ಲಿರುವ ಅಕ್ಷರಗಳ ಫಾಂಟ್ ಸೈಜ್ ತುಂಬಾ ಸಣ್ಣದಾಗಿದ್ದು, ಇದನ್ನು ತುಂಬಾ ಹತ್ತಿರದಿಂದ ನೋಡುವಂತಾಗಿದೆ.

ಜತೆಗೆ ಮರು ಆಯ್ಕೆಯ ಪ್ರಕ್ರಿಯೆ ಇಲ್ಲ. ಇದರಿಂದ ಒಂದು ಟಿಕೆಟ್ ಕೊಡಲು ನಿಮಿಷಗಳಷ್ಟು ಸಮಯ ಬೇಕಾಗುತ್ತಿದೆ. ಇದರಿಂದ ಬಸ್ಸುಗಳು ತುಂಬ ರಸ್ ಆದ ಸಂದರ್ಭದಲ್ಲಿ 15-20 ನಿಮಿಷ ಟಿಕೆಟ್ ಕೊಡುವ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ದಸರಾ ವಸ್ತುಪ್ರದರ್ಶನ, ದೀಪಾಲಂಕಾರ ಇರುವುದರಿಂದ ಪ್ರತಿ ಟ್ರಿಪ್‌ನಲ್ಲೂ ಬಸ್ಸು ರಶ್ ಆಗುತ್ತಿವೆ. ಅದರಲ್ಲಿಯೂ ಸಂಜೆ ವೇಳೆಗೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಸಾರ್ವಜನಿಕರು ತುಂಬ ತ್ರಾಸದಾಯಕವಾಗಿ ಪ್ರಯಾಣಿಸುತ್ತಿದ್ದಾರೆ. ಇದರ ಮಧ್ಯೆ ಹೊಸ ಯಂತ್ರದಿಂದ ಟಿಕೆಟ್ ಕೊಡಲು ನಿರ್ವಾಹಕರು ಪರದಾಡುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.

ಬೆಂಗಳೂರಿನ ಬಿಎಂಟಿಸಿ ಬಸ್ಸುಗಳಲ್ಲಿ ಈಗಾಗಲೇ ಡಿಜಿಟಲ್ ಯಂತ್ರಗಳನ್ನು ನೀಡಲಾಗಿದ್ದು, ಆನ್‌ಲೈನ್ ಮೊಬೈಲ್ ಪೇಮೆಂಟ್ ಮೂಲಕ ಟಿಕೆಟ್ ಪಡೆಯುವ
ಅವಕಾಶ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದ ಎಲ್ಲ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಆನ್ ಲೈನ್ ಪೇಮೆಂಟ್‌ಗೆ ಅನುವು ಮಾಡಿಕೊಡುವ ಉದ್ದೇಶದಿಂದ ಇಲಾಖೆಯು ಖಾಸಗಿ ಸಂಸ್ಥೆಯಿಂದ ಟಿಕೆಟ್ ಯಂತ್ರಗಳನ್ನು ಪಡೆದು ನಿರ್ವಾಹಕರಿಗೆ ನೀಡಿದೆ.

ಮೈಸೂರು ನಗರ ಮತ್ತು ಜಿಲ್ಲಾದಾದ್ಯಂತ ಕೆಎಸ್‌ಆರ್‌ಟಿಸಿಯ ಎಲ್ಲ ಬಸ್ ಡಿಪೋಗಳಲ್ಲಿನ ನಿರ್ವಾಹಕರಿಗೂ ಹಳೆಯ ಯಂತ್ರವನ್ನು ಪಡೆದು ಹೊಸ ಯಂತ್ರಗಳನ್ನು ಕೊಡಲಾಗಿದ್ದು, ಕೆಲವು ನಿರ್ವಾಹಕರು ನಿಧಾನವಾಗಿ ಯಂತ್ರದ ಬಳಕೆಯನ್ನು ಕಲಿತುಕೊಳ್ಳುತ್ತಿದ್ದಾರೆ. ಕೆಲವರು ತುಂಬಾ ತೊಂದರೆ ಪಡುತ್ತಿದ್ದಾರೆ. ಟಚ್ ಸ್ಟೀನ್ ಮೊಬೈಲ್ ಬಳಸದ ನಿರ್ವಾಹಕರು ಮಾತ್ರ ಟಿಕೆಟ್ ಯಂತ್ರ ಬಳಸಲು ಸಾಧ್ಯವಾಗದೆ ರಜಾ ಪಡೆದುಕೊಳ್ಳುತ್ತಿರುವ ಪ್ರಸಂಗಗಳೂ ನಡೆದಿವೆ. ನಮ್ಮನ್ನು ಸೇರಿದಂತೆ ವಯಸ್ಸಾದ ಕಂಡಕ್ಟರ್‌ಗಳು ನಿತ್ಯ 200ರಿಂದ 300 ರೂಪಾಯಿ ಕಳೆದುಕೊಳ್ಳುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಬಸ್ ಕಂಡಕ್ಟರ್ ಒಬ್ಬರು ‘ಆಂದೋಲನ’ದೊಂದಿಗೆ ಅಳಲು ತೋಡಿಕೊಂಡರು.

ಹೊಸ ಯಂತ್ರವನ್ನೇ ಬಳಸುತ್ತೇವೆ. ಆದರೆ, ಯಂತ್ರದಲ್ಲಿನ ಲೋಪಗಳನ್ನು ಸರಿಪಡಿಸಿಕೊಡಬೇಕು. ಅಕ್ಷರಗಳು ದಪ್ಪವಾಗಿ ಕಾಣುವಂತೆ ಮಾಡಬೇಕು. ಆಯ್ಕೆಗಳನ್ನು
ಕಡಿಮೆ ಮಾಡಿ ಜೊತೆಗೆ ಮರು ಟಿಕೆಟ್ ಬರುವ ಆಯ್ಕೆಗಳನ್ನು ಸೇರಿಸಬೇಕು ಎಂದು ನಿರ್ವಾಹಕರೊಬ್ಬರು ಮನವಿ ಮಾಡಿದ್ದಾರೆ.

ಗ್ರಾಮಾಂತರದಲ್ಲಿ 940 ಮತ್ತು ನಗರದಲ್ಲಿ 500 ಮಂದಿ ನಿರ್ವಾಹಕರಿಗೆ ಹೊಸ ಯಂತ್ರಗಳನ್ನು ನೀಡಲಾಗಿದೆ. ಯಂತ್ರದಲ್ಲಿನ ಲೋಪಗಳ ಕುರಿತು. ನಿರ್ವಾಹಕರ ದೂರಗಳನ್ನು ಪರಿಗಣಿಸಲಾಗಿದ್ದು, ಕಂಡಕ್ಟರ್‌ಗೆ ಅನುಕೂಲವಾಗುವ ಮಾದರಿಯಲ್ಲಿ 51 ಪ್ರಕ್ರಿಯೆಗಳನ್ನು ಪರಿಷ್ಕರಿಸಲಾಗಿದೆ. ಇನ್ನೊಂದು 15 ದಿನಗಳಲ್ಲಿ ಕಂಡಕ್ಟರ್‌ಗಳು ಹೊಸ ಯಂತ್ರಗಳನ್ನು ಸೂಲಲಿತವಾಗಿ ಬಳಸುವಂತೆ ಸರಿಪಡಿಸಲಾಗುವುದು.
• ಶ್ರೀನಿವಾಸ್, ನಿಯಂತ್ರಣಾಧಿಕಾರಿ, ಗ್ರಾಮಾಂತರ ವಿಭಾಗ .

 

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

5 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

6 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

6 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

7 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

7 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

11 hours ago