Andolana originals

11 ವೇದಿಕೆ, 508 ಕಾರ್ಯಕ್ರಮ, 6500 ಕಲಾವಿದರು; ಇದು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಶಿಷ್ಟ್ಯಗಳು

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಸಂಗೀತ ಪ್ರಿಯರ ಮನ ತಣಿಸುವ ಅರಮನೆ ವೇದಿಕೆ ಸೇರಿದಂತೆ ಹನ್ನೊಂದು ವೇದಿಕೆಗಳಲ್ಲಿ ೫೦೮ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೬,೫೦೦ ಕಲಾವಿದರು ವಿವಿಧ ಕಲಾ ಪ್ರಕಾರಗಳಲ್ಲಿ ಸಂಗೀತದ ರಸದೌತಣ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ . ಮಹದೇವಪ್ಪ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡಿದ ಅವರು, ಕಾರ್ಯಕ್ರಮಗಳ ಸಿದ್ಧತೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಅ. ೩ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಉಳಿದಂತೆ ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸಂಜೆ ಅರಮನೆ ಮುಂಭಾಗ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅರಮನೆ ಮುಂಭಾಗ ಅ. ೩ರಿಂದ ೧೦ರವರೆಗೆ ಮತ್ತು ಉಳಿದ ಹತ್ತು ವೇದಿಕೆಗಳಲ್ಲಿ ಅ. ೧೧ರವರೆಗೆ ನಡೆಯಲಿದೆ. ಈ ಬಾರಿ ಸಂಗೀತ, ನೃತ್ಯ, ನಾಟಕ, ಪೌರಾಣಿಕ, ರಂಗಭೂಮಿ ಮೊದಲಾದ ಕಲಾ ಪ್ರಕಾರಗಳಿಗೆ ಅವಕಾಶ ಮಾಡಿ ಕೊಡುವ ಜತೆಗೆ ವಿಶೇಷ ಸಂಗೀತಕ್ಕೂ ಒತ್ತು ನೀಡಲಾಗಿದೆ. ೧೧ ವೇದಿಕೆಗಳಿಂದ ೫೦೮ ಕಲಾ ತಂಡಗಳಿಗೆ ಅವಕಾಶ ನೀಡಿದ್ದು, ೬,೫೦೦ ಕಲಾವಿದರಿಗೆ ಅವಕಾಶ ದೊರೆತಿದೆ ಎಂದರು. ಬನ್ನಿಮಂಟಪದಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನ ಈ ಬಾರಿ ಅನುಮಾನವಾಗಿದೆ.

ಮುಖ್ಯ ಮಂತ್ರಿ ಗಳು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಈವರೆಗೆ ಖಚಿತವಾಗಿಲ್ಲ ಎಂದು ತಿಳಿಸಿದರು. ಯುವ ದಸರಾದಲ್ಲಿ ಹೆಸರಾಂತ ಗಾಯಕರು ಬರುತ್ತಿ ರುವುದರಿಂದ ಭದ್ರತೆ, ಶೌಚಾಲಯ, ಕುಡಿಯುವ ನೀರು, ಬೀದಿ ದೀಪ, ಬಸ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಡಿಸಿ, ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ಅಗತ್ಯ ವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ದಸರಾ ಜಂಬೂಸವಾರಿ ಮೆರವಣಿಗೆ ಮತ್ತು ಬನ್ನಿ ಮಂಟಪದ ಪಂಜಿನ ಕವಾಯತು ಟಿಕೆಟ್, ಗೋಲ್ಡ್ ಕಾರ್ಡ್ ಮಾರಾಟಕ್ಕೆ ಬಿಡಲಾಗಿದ್ದು, ನಾಲ್ಕು ದಿನಗಳಿಂದ ಟಿಕೆಟ್ ಮಾರಾಟವಾಗುತ್ತಿದೆ. ಜಂಬೂಸವಾರಿಗೆ ೨ ಸಾವಿರ ಸಾಮಾನ್ಯ ಟಿಕೆಟ್‌ಗಳು ಲಭ್ಯವಿದೆ ಎಂದರು. ಒಂದು ಸಾವಿರ ಗೋಲ್ಡ್ ಕಾರ್ಡ್ ದೊರೆಯುತ್ತವೆ ಎಂದು ವೆಬ್‌ಸೈಟ್‌ವೊಂದರಲ್ಲಿ ಮಾಹಿತಿ ಹಾಕಲಾಗಿದೆ ಎಂದು ತಿಳಿದುಬಂದಿದೆ. ಒಟಿಪಿ, ಇ-ಮೇಲ್ ಸಿಸ್ಟಂನಡಿ ಮಾರಾಟ ಮಾಡುತ್ತಿರುವುದರಿಂದ ಒಬ್ಬರೇ ಬೇಕಾ ಬಿಟ್ಟಿಯಾಗಿ ಖರೀದಿಸಲು ಸಾಧ್ಯವಾಗಿಲ್ಲ ಎಂದರು.

ಅ. ೩ ಮತ್ತು ೪ರಂದು ‘ವಾಹನ ಮುಕ್ತ ವಲಯ’ ಮೈಸೂರು: ದಸರಾ ಸಂದರ್ಭದಲ್ಲಿ ವಾಹನ ದಟ್ಟಣೆ ತಡೆಯುವ ಸಲುವಾಗಿ ಅರಸು ರಸ್ತೆ, ಅರಮನೆಯ ಸುತ್ತ ಅರ್ಧಭಾಗ ಅ. ೩ ಮತ್ತು ೪ರಂದು ಪ್ರಾಯೋಗಿ ಕವಾಗಿ ವಾಹನ ಮುಕ್ತ ವಲಯ ಮಾಡಲಾಗುವುದು. ಯಶಸ್ವಿಯಾದರೆ ದಸರಾದ ೧೦ ದಿನಗಳೂ ಇದೇ ಮಾದರಿ ಜಾರಿ ಮಾಡಲಾಗುತ್ತದೆ. ಅತೀ ಹೆಚ್ಚಿನ ಜನಸಂದಣಿ ಇರುವ ಅರಸು ರಸ್ತೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಈ ಸಂಬಂಧ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದ ಬಳಿಕ ಜಿಲ್ಲಾಡಳಿತ ಈ ತೀರ್ಮಾನವನ್ನು ಕೈಗೊಂಡಿದೆ ಎಂದು ಡಿಸಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.

ಯುವ ದಸರಾ 10 ಸಾವಿರ ಟಿಕೆಟ್‌ ಮಾರಾಟ:
ಯುವ ದಸರಾ ಟಿಕೆಟ್ ಮೊತ್ತ ಜಾಸ್ತಿಯಾಗಿರುವ ಬಗ್ಗೆ ಭಿನ್ನ ಅಭಿಪ್ರಾಯ ಬಂದಿದ್ದರಿಂದ ೧,೫೦೦ ರೂ. ಮತ್ತು ೨,೫೦೦ ರೂ. ಮುಖಬೆಲೆಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುವುದು. ಯುವ ದಸರಾಕ್ಕೆ ಹತ್ತು ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದು, ೮೦ರಿಂದ ೯೦ ಸಾವಿರ ಜನರಿಗೆ ಮುಕ್ತ ಪ್ರವೇಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಮಾಹಿತಿ ನೀಡಿದರು.

ಈ ಬಾರಿ ಏರ್ ಶೋ ನಡೆಯುವುದು ಅನುಮಾನ. ಬದಲಿಗೆ ಆಕರ್ಷಕ ಡ್ರೋನ್ ಶೋ ಅನ್ನು ಆಯೋಜಿಸಲಾಗಿದೆ. ಹೋಟೆಲ್ ಮಾಲೀಕರು ಪ್ರವಾಸಿಗರಿಗೆ ಹೆಚ್ಚು ಶುಲ್ಕ ವಿಧಿಸಬಾರದು. ಈ ಸಂಬಂಧ ಹೋಟೆಲ್ ಮಾಲೀಕರ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. -ಡಾ. ಎಚ್. ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

 

andolana

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

8 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

8 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

8 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

8 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

8 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

8 hours ago