Andolana originals

ಮತ್ತೆ ಮತ್ತೆ ಕುವೆಂಪು; 32 ಲೇಖನಗಳ ಗುಚ್ಛ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಾರ್ಥಕ ಕಾರ್ಯ 

ಡಾ. ಮುಳ್ಳೂರು ನಂಜುಂಡಸ್ವಾಮಿ

ಮೈ ಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಕೆ. ಲೋಲಾಕ್ಷಿ ಅವರ ಪ್ರಧಾನ ಸಂಪಾದಕತ್ವದಲ್ಲಿ ರೂಪಿತಗೊಂಡಿರುವ ‘ಮತ್ತೆ ಮತ್ತೆ ಕುವೆಂಪು’ ಕೃತಿಯು ಕುವೆಂಪು ಅವರ ಸೂಕ್ಷ ಸಂವೇದನೆಯ ಕವಿ ಗುಣ, ವೈಚಾರಿಕತೆಯ ನಿಲುವು ಗಳು, ವಿಶ್ವ ಮಾನವ ಸಂದೇಶದ ಪುನರ್ ಮನನಕ್ಕೆ ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸಮರ್ಥವಾಗಿದೆ. ಇದೇ ಅದರ ವಿಶೇಷತೆ ಕೂಡ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ವಿಶ್ವಕೋಶ ವಿಭಾಗ, ಸಂಪಾದನಾ ವಿಭಾಗ, ಅನುವಾದ ವಿಭಾಗ, ಎಪಿಗ್ರಾಫಿಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಪಾದಕ ವರ್ಗ, ಸಂಶೋಧನಾ ಸಹಾಯಕರು, ಅಧ್ಯಾಪಕೇತರರು ಮತ್ತು ಸಂಶೋಧನಾ ವಿದ್ಯಾರ್ಥಿಗಳೂ ಸೇರಿ ಕುವೆಂಪು ಮತ್ತು ಅವರ ಸಾಹಿತ್ಯದ ಒಳನೋಟವನ್ನು ಕುರಿತು ಲೇಖನಗಳನ್ನು ಬರೆದಿದ್ದಾರೆ.

 

ಈ ಕೃತಿಯಲ್ಲಿ ಒಟ್ಟು ೩೨ ಲೇಖನಗಳಿವೆ. ಲೋಲಾಕ್ಷಿ ಅವರ ‘ಕುವೆಂಪು ಸಾಹಿತ್ಯ : ಸಬಾಲ್ಟ್ರನ್ ಓದು’ ಲೇಖನದಿಂದ ಪ್ರಾರಂಭವಾಗಿ ಸಂಶೋಧನಾ ವಿದ್ಯಾರ್ಥಿ ಬಿ. ಭವಿತ ಅವರ ‘ಮಹಿಳೆಯ ಪ್ರತಿನಿಽಕರಣ’ ಲೇಖನದವರೆಗೆ ಕುವೆಂಪು ಅವರ ಎಲ್ಲಾ ಪ್ರಕಾರದ ಸಾಹಿತ್ಯ ಚಿತ್ರಣವನ್ನು ಒಳಗೊಂಡ ಅಪರೂಪದ ಕೃತಿಯಾಗಿದೆ.

 

ಕುವೆಂಪು ಸಾಹಿತ್ಯವು ಸಬಾಲ್ಟ್ರನ್ ಚಿಂತನೆಗಳಿಂದ ಪ್ರಭಾವಿತವಾಗಿರುವುದನ್ನು ಲೋಲಾಕ್ಷಿ ಅವರು ಅರ್ಥಪೂರ್ಣವಾಗಿ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

 

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಅಭಿವ್ಯಕ್ತಗೊಂಡಿರುವ ಮಾಟ ಮಂತ್ರಗಳು, ಅಂದಿನ ಕಾಲದಲ್ಲಿದ್ದ ಅತಿಮಾನುಷ ಮತ್ತು ಮಾನುಷ ಶಕ್ತಿಗಳ ಮೇಲೆ ಜನರಿಗಿದ್ದ ನಂಬಿಕೆಯನ್ನು, ಪುರೋಹಿತರು, ಮಾಂತ್ರಿಕರು ನೀಡುತ್ತಿದ್ದ ಪ್ರಸಾದ, ವಿಭೂತಿ, ಮಂತ್ರ ಚೀಟಿಗಳ ಪದ್ಧತಿಯನ್ನು ಪ್ರೊ. ನಂಜಯ್ಯ ಹೊಂಗನೂರು ಅವರು ಜಾನಪದ ಪ್ರಜ್ಞೆಯ ಹಿನ್ನೆಲೆಯಲ್ಲಿ ತಿಳಿಸಿದ್ದಾರೆ.

ಕುವೆಂಪು ಅವರು ವರ್ಣ ಸಂಘರ್ಷವನ್ನು ಕುರಿತು ಅವರ ನಾಟಕಗಳಲ್ಲಿ ವ್ಯಕ್ತಪಡಿಸಿರುವ ನಿಲುವುಗಳನ್ನು ಪ್ರೊ. ಎಸ್. ಡಿ. ಶಶಿಕಲಾ ಅವರು ‘ಕುವೆಂಪು ನಾಟಕಗಳಲ್ಲಿ ವರ್ಣ ಸಂಘರ್ಷ ಇತ್ಯಾತ್ಮಕತೆ ಲೇಖನದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಈ ಕೃತಿಯಲ್ಲಿ ಕುವೆಂಪು ಅವರ ಕಾವ್ಯ, ನಾಟಕ, ಕಾದಂಬರಿ ಮತ್ತು ಇನ್ನಿತರ ಸಾಹಿತ್ಯ ರೂಪಗಳಲ್ಲೂ ದೇವರು ಮತ್ತು ಮೂಢತೆಯ ನಿರಾಕರಣೆ ವಿಭಿನ್ನವಾಗಿ ಮೂಡಿಬಂದಿದೆ.

ಪ್ರಕೃತಿಯಲ್ಲಿ ದೇವರನ್ನು ಕಾಣುವ ಕುವೆಂಪು ಅವರು, ಆ ದೇವರ ಹೆಸರಿನಲ್ಲಿ ನಡೆಯುವ ಬ್ರಾಹ್ಮಣ್ಯದ ಹುನ್ನಾರ, ಡಾಂಭಿಕ ಪೂಜೆ, ಬಲಿ, ಮೌಢ್ಯ ಮುಂತಾದ ಶೋಷಣೆಗಳನ್ನು ತಿರಸ್ಕರಿಸಿರುವುದನ್ನು ಇಲ್ಲಿರುವ ಬೇರೆ ಬೇರೆ ಲೇಖನಗಳಲ್ಲಿ ದಾಖಲಿಸಲಾಗಿದೆ.

ಕುವೆಂಪು ಅವರ ಕಾದಂಬರಿಗಳಲ್ಲಿ ಬಳಸಿರುವಂತಹ ಭಾಷೆ, ಕುವೆಂಪು ಮತ್ತು ಅಡಿಗರ ಕಾವ್ಯಾನುಸಂಧಾನ, ಯುಗದ ಕವಿಗೆ ಜಗದ ಸಾಲು, ನನ್ನ ಮನೆ ಕವನ ಸಂಕಲನದಲ್ಲಿ ಬಳಕೆಯಾಗಿರುವ ಶಿಶು ಸಾಹಿತ್ಯ ಮತ್ತು ಕವಿಶೈಲದ ವರ್ಣನೆ, ವಿಶ್ವಮಾನವ ಗೀತೆಯಾದ ಅನಿಕೇತನ ಕವಿತೆಯ ವಸ್ತು ಮತ್ತು ಛಂದಸ್ಸು, ಕುವೆಂಪು ಅನುವಾದಗಳ ಪಕ್ಷಿ ನೋಟ, ಮಲೆನಾಡಿನ ಚಿತ್ರಣ, ಜಲಗಾರ ನಾಟಕದಲ್ಲಿ ಅಸ್ಪೃಶ್ಯತೆಯನ್ನು ಖಂಡಿಸುವುದು, ಜನಸಾಮಾನ್ಯರ ಬಗೆಗೆ ಕುವೆಂಪು ಅವರ ಸಾಹಿತ್ಯದ ದೃಷ್ಟಿಕೋನ, ನಾಡು-ನುಡಿಯ ಬಗೆಗಿನ ಅಪಾರವಾದ ಪ್ರೀತಿ, ಗೌರವ, ಸ್ತ್ರೀ ವೇದನೆಯ ಚಿಂತನೆಗಳು, ರಾಷ್ಟ್ರೀಯತೆ ಮತ್ತು ವಿಶ್ವಮಾನವ ಸಂದೇಶದ ಪ್ರತಿಪಾದನೆ, ಕುವೆಂಪು ಅವರ ಆಪ್ತ ವೈದ್ಯರಾಗಿದ್ದ ಡಾ. ಲಕ್ಷ್ಮೀನಾರಾಯಣ್ ಅವರ ಸಂದರ್ಶನ, ತಾರತಮ್ಯದ ವಿರೋಧದ ದನಿ, ಕಿಂಕಿಣಿ ಕವನ ವಚನಾವಲೋಕನ, ಅನಿಕೇತನದ ಅನಂತತೆ, ಅಂಬೇಡ್ಕರ್ ಮತ್ತು ಕುವೆಂಪು ಅವರ ವಿಶ್ವ ಮಾನವ ಸಂದೇಶ, ಕುವೆಂಪು ಕವಿತೆಗಳಲ್ಲಿ ರೈತನಿಗೆ ಸಿಗಬೇಕಾದ ನ್ಯಾಯದ ಬಗೆಗೆ, ಮಹಾರಾತ್ರಿ ನಾಟಕದಲ್ಲಿ ಬರುವ ಬುದ್ಧನ ವಿಚಾರಗಳ ಅಗತ್ಯತೆ, ವೈಚಾರಿಕ ಆಯಾಮಗಳು, ಸ್ವಾತಂತ್ರ್ಯ ದನಿ, ಕುವೆಂಪು ಕಾನನದೊಳಗೆ ಸಂಚರಿಸಿದ ದೇವರು, ಕುವೆಂಪು ಅವರ ಮಂತ್ರ ಮಾಂಗಲ್ಯ ಸೇರಿದಂತೆ, ಕುವೆಂಪು ಅವರ ಇನ್ನಿತರ ಸಾಹಿತ್ಯದ ಒಳನೋಟವನ್ನು, ಅವರ ವೈಚಾರಿಕತೆಯನ್ನು ಈ ಕೃತಿಯಲ್ಲಿರುವ ಲೇಖನಗಳು ಕಟ್ಟಿಕೊಡುತ್ತವೆ.

ಹೀಗೆ ಕುವೆಂಪು ಅವರ ಹೆಸರನ್ನು ಒಳಗೊಂಡ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಮೈಸೂರು ವಿವಿಯ ಹೆಮ್ಮೆಯ ಸಂಸ್ಥೆಯಾಗಿದೆ. ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಕುರಿತು ಸಂಸ್ಥೆಯ ಎಲ್ಲರೂ ಸೇರಿ ಹೊರತಂದಿರುವ ಈ ಕೃತಿಯು ವಿಶೇಷವಾದ ಮಹತ್ವವನ್ನು ಪಡೆದಿದೆ.

 

ಆಂದೋಲನ ಡೆಸ್ಕ್

Recent Posts

ಸಿದ್ದರಾಮಯ್ಯ ಪೂರ್ಣವಧಿ ಸಿಎಂ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆ ಪರ ಯಂತ್ರೀಂದ್ರ ಬ್ಯಾಟಿಂಗ್‌

ಬೆಳಗಾವಿ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್‌ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…

22 mins ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ಡಿಕೆಶಿ ಆಪ್ತ ಇನಾಯತ್‌ ಅಲಿಗೆ ದಿಲ್ಲಿ ಪೊಲೀಸರಿಂದ ನೋಟಿಸ್‌

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…

42 mins ago

ಇಂಡಿಗೋ ಬಿಕ್ಕಟ್ಟು : ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ : ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು…

49 mins ago

ಜನವರಿಯಿಂದ ಇಂದಿರಾ ಕಿಟ್‌ ವಿತರಣೆ

ಬೆಳಗಾವಿ : ಮುಂಬರುವ ಜನವರಿಯಿಂದ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ರಾಜ್ಯಾದ್ಯಂತ ಇಂದಿರಾ ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು…

1 hour ago

ಲ್ಯಾಂಡ್‌ ಲಾರ್ಡ್‌ ಚಿತ್ರದ ಟೀಸರ್‌ ರಿಲೀಸ್‌

ಬೆಂಗಳೂರು: ನಟ ದುನಿಯಾ ವಿಜಯ್‌ ಅಭಿನಯದ ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ನಟ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದು, ಇಂದು ಸಿನಿಮಾದ…

2 hours ago

ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು.!

ಬೆಳಗಾವಿ: ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಮಸ್ಯೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಪ್ರಾಥಮಿಕ…

2 hours ago