Andolana originals

ಗಾಂಧಿ ಅಭಿಯಾನ ಅರಿವಿನ ಯಾನ ; ಗಾಂಧಿ ಮುಟ್ಟಿದ ನನ್ನೂರಿನ ಮನಸುಗಳು…

• ಎಸ್.ಗಂಗಾಧರಯ್ಯ

ಗಾಂಧಿ ಎಂಬುದೊಂದು ತಾಯ್ತನದ ಭಾವ, ಅದು ಅಂದು ಇಂದು ಮುಂದೆ ಯಾವತ್ತೂ ಎದೆಯ ಕತ್ತಲಿಗೆ ಹಚ್ಚಿದ ತುಂಬಿಹೋಗದ ಕೈ ದೀಪ. ಅಂಥ ದೀಪವನ್ನು ದಾರಿ ದೀಪವಾಗಿಸಿಕೊಂಡು ಈ ಜಾತಿ, ಧರ್ಮ, ದೇಶ, ಭಾಷೆಗಳ ಹಂಗಿನ ಬೇಲಿಯನ್ನು ದಾಟಿ ಮನುಕುಲದ ದಾರಿಯಲ್ಲಿ ನಡೆದವರು, ನಡೆಯುತ್ತಿರುವ ವರು ಈ ಲೋಕದಗಲಕ್ಕೂ ಹರವಿಕೊಂಡಿದ್ದಾರೆ.

ಅದು ಮನುಷ್ಯತ್ವವನ್ನು ಪೊರೆವ ಪರಿಗೆ ಅದೆಷ್ಟೋ ಹೊಚ್ಚ ಹೊಸ ಮನಸ್ಸುಗಳು ಈ ಚಣದಲ್ಲೂ ಆ ತಾಯ್ತನದಡಿಯ ನೆರಳಿನಲ್ಲಿ ನಡೆಯ ಬಯಸುತ್ತಿರುವುದು, ಎದೆಯ ಕೇಡುಗಳಿಗೆ ಮಹಾ ಮದ್ದಾಗು ತಿರುವುದು ಅದರ ಸವಿಯುಂಡವರಿಗೆ ಸೋಜಿಗದ ಸಂಗತಿ ಅಲ್ಲವೇ ಅಲ್ಲ.

ಇಂಥದ್ದೊಂದು ಮಹಾ ಬೆಳಕು ಎಟಕಿಸಿ ಕೊಳ್ಳದ ತಾವಿಲ್ಲ. ಇದು ಕೇವಲ ಪಟ್ಟಣಗಳ ಆಸುಪಾಸಿನಲ್ಲೋ, ಇಲ್ಲಾ ವಿದ್ಯಾವಂತ ಎನಿಸಿಕೊಂಡವರ ಮರ್ಜಿಯಲ್ಲೋ ಲೊಪ್ಪದೆ ದೇಶದ ಹಳ್ಳಿ ಹಳ್ಳಿಗಳಿಗೂ ತಲು ಪಾಕಿಕೊಂಡದ್ದು ಹಾಗೂ ಅಲ್ಲಿ ಸ್ವಾತಂತ್ರ್ಯದ ಕಿಚ್ಚಿನೊಂದಿಗೆ ಹಚ್ಚಿದ ಮನುಷ್ಯತ್ವದ ಸ್ವಾಭಿಮಾನದ ಕಿಡಿ ಇಂದಿಗೂ ಮಾಸಲೊ ಪದು. ಹಂಗಾಗಿ ಗಾಂಧಿ ಎಂಬುದೊಂದು ಕಾಲಾತೀತವಾದ, ದಣಿವರಿಯದೆ ಹರಿವ ಶುದ್ಧಾತಿ ಶುದ್ಧ ನೀರಿನ ಹೊಳೆ. ಅದೊಂದು ಬದುಕ ನೋಡುವ ಕ್ರಮ. ಬದುಕುತ್ತಾ ಮನುಷ್ಯರಾಗುವ ಕ್ರಮ.

ಬೆಳಗ ನಾನು ಗಾಂಧೀಜಿಯ ಹೆಸರು ಕೇಳಿದ್ದು ಪಠ್ಯ ಪುಸ್ತಕಕ್ಕಿಂತ ಮೊದಲು, ನನ್ನ ಅಜ್ಜನ ಬಾಯಿಂದ. ಅಷ್ಟೊಂದು ಓದಿರದಿದ್ದ ಅಜ್ಜ ಗಾಂಧಿಯ ಪರಮಭಕ್ತ. ಗಾಂಧಿ ಬದುಕಿನ ಬಗೆಗಿನ ಅನೇಕ ಸಂಗತಿಗಳನ್ನು ನನಗೆ ಹೇಳುತ್ತಾ ನನ್ನೊಳಗೆ ಗಾಂಧಿ ಬಗೆಗಿನ ಅಪಾರ ಒಲವನ್ನು ಬೆಳೆಸಿದ್ದು ಈ ಅಜ್ಜ. ಗಾಂಧಿಯೆಡೆಗೆ ಅಜ್ಜನ ಅಂಥ ಒಲವಿಗೆ ಕಾರಣವೊಂದಿತ್ತು.

ಅದೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ಒಮ್ಮೆ ನನ್ನ ಹಳ್ಳಿಯ ಹತ್ತಿರದ ತಿಪ ಟೂರು ಪಟ್ಟಣಕ್ಕೆ ಬಂದಿದ್ದರಂತೆ. ಆಗ ಅಜ್ಜ ಮತ್ತವರ ಗೆಣೆಕಾರರು ಗಾಂಧಿಯನ್ನು ನೋಡಲೋಸುಗ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ತಿಪಟೂರಿಗೆ ಹೋಗಿ ಅಲ್ಲಿಯೇ ಎರಡು ದಿನ ಇದ್ದರಂತೆ. ಆಗ ಸೇರಿದ್ದ ಆ ಜನ, ಆಗ ಗಾಂಧಿ ಆಡಿದ್ದ ಆ ಮಾತುಗಳು ನನ್ನ ಅಜ್ಜನೊಳಗೆ ಆ ಕೊನೆಯವರೆಗೂ ಹಂಗೇ ಹಳ್ಳಿಯವರೊಬ್ಬರು ತನ್ನ ಮಗನಿಗೆ ಗಾಂಧಿ ಎಂದು ಹೆಸರಿಟ್ಟು ದಿನವೂ ಅವನೊಳಗೆ ಗಾಂಧಿಯನ್ನು ನೋಡಲೆತ್ನಿಸುತ್ತಿದ್ದರು. ಮತ್ತೊಬ್ಬರು ನನ್ನ ಊರಿನವರು. ನನ್ನ ಅಜ್ಜನ ಜೊತೆಗಾರರು. ನಾನವರ ಬಗ್ಗೆ ಕೇಳಿದ್ದೆ ಅಷ್ಟೇ. ಊರಾಚೆಯ ದನಗಳು ಮೇಯಲು ಹೋಗುತ್ತಿದ್ದ ಪುಟ್ಟ ಕಾಡಿನಲ್ಲಿ ಪುಟ್ಟ ಪುಟ್ಟ ಕರುಗಳಿಗೋಸ್ಕರವೇ ಪುಟ್ಟದೊಂದು ಕೆರೆಯನ್ನು ಕಟ್ಟಿ ಅದಕ್ಕೆ ಗಾಂಧಿ ಕಟ್ಟೆ ಅಂತ ಹೆಸರಿಟ್ಟಿದ್ದರಂತೆ. ಆ ನಂತರ ಆ ಕಟ್ಟೆ ಬರಬರುತ್ತಾ ಊರವರ ಬಾಯಲ್ಲಿ ಕರುವಿನ ಕಟ್ಟೆಯಾಗಿತ್ತು. ಅದೇರೀತಿ, ನನಗೆ ತುಂಬಾ ಹತ್ತಿರದಿಂದ ಗೊತ್ತಿದ್ದ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವ ಹಿಸಿದ್ದವರೊಬ್ಬರು ಆ ದಿನ ಗಾಂಧಿಯ ಕೈಯಿಂದ ತೆಂಗಿನ ಸಸಿಯೊಂದನ್ನು ಮುಟ್ಟಿಸಿ ತಂದು ಅದನ್ನು ‘ಗಾಂಧಿ ಮುಟ್ಟಿದ ಗಿಡ’ ಅಂತಲೇ ಹೆಸರಿಡಿದು ಕರೆದು ಪೋಷಿಸಿದ್ದರಂತೆ. ಆದರೆ ಅದೊಂದು ದಿನ ಅದನ್ನು ಮಳೆ ಗಾಳಿ ತಿರುಚಿ ಹಾಕಿ ಬಿಟ್ಟಿತ್ತಂತೆ. ಅದು ಆ ಗಾಂಧಿ ವ್ಯಕ್ತಿಗೆ ಅಪ್ಪಟ ಅಪಶಕುನದಂತೆ ಕಂಡಿತ್ತಂತೆ. ಕಾಕತಾಳೀಯ ಎಂಬಂತೆ ಅದಾದ ಕೆಲ ಬದಲಿಸಿದ ದಿನಕ್ಕೆ ಗಾಂಧಿಯ ಎದೆಗೆ
ಬದುಕುಗಳುಉಳಿದು ಬಿಟ್ಟಿದ್ದವು. ಆ ಚಣಗಳನ್ನು, ಆ ಮಾತುಗಳನ್ನು ನನ್ನೊಳಕ್ಕೆ ದಾಟಿಸುತ್ತಿದ್ದ ಅಜ್ಜನ ಆ ತನ್ಮಯತೆ, ಆ ಧನ್ಯತಾ ಭಾವ ನನ್ನೊಳಗೆ ಈಗಲೂ ಹಾಗೆಯೇ ಇದೆ. ಅಂದು ಗಾಂಧಿ ಉಳಿದಿದ್ದ ಮನೆ ಈಗಲೂ ಇದೆ.

ಇನ್ನು ತಿಪಟೂರಿನ ಆಸುಪಾಸಿನ ಸೀಮೆ ಯಲ್ಲಿ ಗಾಂಧಿ ನಡೆದಾಡಿದ ಮಣ್ಣಿನಲ್ಲಿ ಓಡಾಡಿದ್ದ ಅದೆಷ್ಟೋ ಮಂದಿ ಗಾಂಧಿಯನ್ನು ದಿನವೂ ಕಾಣಬಯಸುವ ಸಲುವಾಗಿ ಹತ್ತು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದರು. ಅವತ್ತು ಗಾಂಧಿ ಯನ್ನು ಕಂಡಿದ್ದ ತಿಪಟೂರಿನ ಹತ್ತಿರದ

ಹಳ್ಳಿಯವರೊಬ್ಬರು ತನ್ನ ಮಗನಿಗೆ ಗಾಂಧಿ ಎಂದು ಹೆಸರಿಟ್ಟು ದಿನವೂ ಅವನೊಳಗೆ ಗಾಂಧಿಯನ್ನು ನೋಡಲೆತ್ನಿಸುತ್ತಿದ್ದರು. ಮತ್ತೊಬ್ಬರು ನನ್ನ ಊರಿನವರು. ನನ್ನ ಅಜ್ಜನ ಜೊತೆಗಾರರು. ನಾನವರ ಬಗ್ಗೆ ಕೇಳಿದ್ದೆ ಅಷ್ಟೇ. ಊರಾಚೆಯ ದನಗಳು ಮೇಯಲು ಹೋಗುತ್ತಿದ್ದ ಪುಟ್ಟ ಕಾಡಿನಲ್ಲಿ ಪುಟ್ಟ ಪುಟ್ಟ ಕರುಗಳಿಗೋಸ್ಕರವೇ ಪುಟ್ಟದೊಂದು ಕೆರೆಯನ್ನು ಕಟ್ಟಿ ಅದಕ್ಕೆ ಗಾಂಧಿ ಕಟ್ಟೆ ಅಂತ ಹೆಸರಿಟ್ಟಿದ್ದರಂತೆ. ಆ ನಂತರ ಆ ಕಟ್ಟೆ ಬರಬರುತ್ತಾ ಊರವರ ಬಾಯಲ್ಲಿ ಕರುವಿನ ಕಟ್ಟೆಯಾಗಿತ್ತು.

ಅದೇರೀತಿ, ನನಗೆ ತುಂಬಾ ಹತ್ತಿರದಿಂದ ಗೊತ್ತಿದ್ದ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವ ಹಿಸಿದ್ದವರೊಬ್ಬರು ಆ ದಿನ ಗಾಂಧಿಯ ಕೈಯಿಂದ ತೆಂಗಿನ ಸಸಿಯೊಂದನ್ನು ಮುಟ್ಟಿಸಿ ತಂದು ಅದನ್ನು ‘ಗಾಂಧಿ ಮುಟ್ಟಿದ ಗಿಡ’ ಅಂತಲೇ ಹೆಸರಿಡಿದು ಕರೆದು ಪೋಷಿಸಿದ್ದರಂತೆ. ಆದರೆ ಅದೊಂದು ದಿನ ಅದನ್ನು ಮಳೆ ಗಾಳಿ ತಿರುಚಿ ಹಾಕಿ ಬಿಟ್ಟಿತ್ತಂತೆ. ಅದು ಆ ವ್ಯಕ್ತಿಗೆ ಅಪ್ಪಟ ಅಪಶಕುನದಂತೆ ಕಂಡಿತ್ತಂತೆ. ಕಾಕತಾಳೀಯ ಎಂಬಂತೆ ಅದಾದ ಕೆಲ ದಿನಕ್ಕೆ ಗಾಂಧಿಯ ಎದೆಗೆ ಗುಂಡೇಟು ಬಿದ್ದಿತ್ತಂತೆ. ತೊಂಬತ್ತು ವರ್ಷಗಳನ್ನಾಗಲೇ ದಾಟಿದ್ದ, ಬೊಚ್ಚು ಬಾಯಿಯ ಆ ಅಜ್ಜ ಅದನ್ನು ಹೇಳುವ ಹೊತ್ತಲ್ಲಿ ಅಜ್ಜನ ಮುಪ್ಪ ಡರಿದ್ದ ಮುಖದಲ್ಲಿ ಸಂಕಟದ ಗೆರೆಗಳು ಮೂಡುತ್ತಾ ಅಜ್ಜ ಮೌನಕ್ಕೆ ಜಾರಿಬಿಡುತ್ತಿ ದ್ದರು. ಆಗ ನನಗೆ ಆ ಅಜ್ಜನ ಮುಖ ಥೇಟ್ ಗಾಂಧಿಯ ಮುಖದಂತೆಯೇ ಕಾಣುತ್ತಿತ್ತು. ಹಂಗಾಗಿ, ಗಾಂಧಿ ಎಂಬುದು ಕೇವಲ ಭೂತಕಾಲದ ವಿದ್ಯಮಾನವಲ್ಲ. ಎಲ್ಲ ಕಾಲಕ್ಕೂ ಸಲ್ಲುವ ಸಮ್ಮೋಹನ ಕ್ರಿಯೆ.
sgangadharaiah@gmail.com

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

2 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

2 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

2 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

2 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

3 hours ago

ಸಕ್ಕರೆ ನಾಡಿನಲ್ಲಿ ಬರದಿಂದ ಕಂಗಾಲಾದ ರೈತರು

ಹೇಮಂತ್‌ಕುಮಾರ್ ಮಂಡ್ಯ ಜಿಲ್ಲೆಯಲ್ಲಿ ೪೮,೫೯೧ ಹೆ. ಬೆಳೆ ಹಾನಿ ೫೪.೫೩ ಕೋಟಿ ರೂ. ನಷ್ಟದ ಅಂದಾಜು ಮಂಡ್ಯ: ಜಿಲ್ಲೆಯಲ್ಲಿ ಕಳೆದ…

3 hours ago