Andolana originals

ಗಾಂಧಿ ಅಭಿಯಾನ ಅರಿವಿನ ಯಾನ : ಇಲ್ಲಿದೆ ಗಾಂಧಿ ಆತ್ಮಕತೆಯ ಆಯ್ದ ತುಣುಕು

ನನ್ನ ನಡೆತೆಯನ್ನು ಬಹು ಎಚ್ಚರಿಕೆಯಿಂದ ಕಾಯ್ದುಕೊಂಡಿದ್ದೆ

ನನ್ನ ಮದುವೆಯಾದ ಕಾಲಕ್ಕೆ ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ನಾನು ಉಪಾಧ್ಯಾಯರ ಪ್ರೀತಿಯನ್ನು ಯಾವಾಗಲೂ ಸಂಪಾದಿಸಿದ್ದೆನು. ವಿದ್ಯಾರ್ಥಿಗಳ ವ್ಯಾಸಂಗ ಮತ್ತು ನಡತೆಯನ್ನು ಕುರಿತ ಪ್ರಗತಿ ಪತ್ರಗಳನ್ನು ಪ್ರತಿ ವರ್ಷವೂ ಅವರ ತಂದೆ ತಾಯಿಗಳಿಗೆ ಕಳುಹಿಸಲಾಗುತ್ತಿತ್ತು. ಅವುಗಳಲ್ಲಿ, ನನ್ನ ವ್ಯಾಸಂಗ ಮತ್ತು ನಡತೆ ಸರಿಯಾಗಿರಲಿಲ್ಲವೆಂದು ನಾನು ಎಂದೂ ಹೇಳಿಸಿಕೊಳ್ಳಲಿಲ್ಲ. ಎರಡನೆಯ ತರಗತಿಯಲ್ಲಿ ತೇರ್ಗಡೆಯಾದ ಮೇಲೆ ನನಗೆ ಬಹುಮಾನ ಸಹ ಬಂದಿತು. ಐದನೇ ಮತ್ತು ಆರನೆಯ ತರಗತಿಗಳಲ್ಲಿ ನನಗೆ ಕ್ರಮವಾಗಿ ನಾಲ್ಕು ಮತ್ತು ಹತ್ತು ರೂಪಾಯಿಗಳ ವಿದ್ಯಾರ್ಥಿ ವೇತನ ಸಹ ದೊರಕಿತು. ಇದಕ್ಕೆ ನನ್ನ ಯೋಗ್ಯತೆಗಿಂತ ಅದೃಷ್ಟವೇ ಹೆಚ್ಚು ಕಾರಣವೆಂದು ಹೇಳಬೇಕು. ಏಕೆಂದರೆ ಈ ವಿದ್ಯಾರ್ಥಿ ವೇತನವನ್ನು ಕಾಥೇವಾಡದ ಸೋರತ್ ಜಿಲ್ಲೆಯ ಯೋಗ್ಯ ವಿದ್ಯಾರ್ಥಿಗಳಿಗೆ ಮಾತ್ರ ಕೊಡುತ್ತಿದ್ದರು.

ನನ್ನ ಯೋಗ್ಯತೆಯ ವಿಷಯದಲ್ಲಿ ನನಗೇ ಉತ್ತಮ ಅಭಿಪ್ರಾಯವಿರಲಿಲ್ಲವೆಂದು ನನ್ನ ನೆನಪು. ಬಹುಮಾನವಾಗಲೀ ವಿದ್ಯಾರ್ಥಿ ವೇತನವಾಗಲೀ ದೊರೆತಾಗ, ನನಗೇ ಆಶ್ಚರ್ಯವಾಗುತ್ತಿತ್ತು. ಆದರೆ ನನ್ನ ನಡತೆಯನ್ನು ಮಾತ್ರ ನಾನು ಬಹು ಎಚ್ಚರಿಕೆ ಯಿಂದ ಕಾಯ್ದುಕೊಂಡಿದ್ದೆ. ಸಣ್ಣ ಕಳಂಕವೂ ನನ್ನ ಕಣ್ಣಿನಲ್ಲಿ ನೀರು ತರುತ್ತಿತ್ತು. ಬಯ್ಯಿಸಿಕೊಂಡಾಗ ಅಥವಾ ಬೈಗುಳಕ್ಕೆ ನಾನು ಅರ್ಹನೆಂದು ಉಪಾ ಧ್ಯಾಯರಿಗೆ ತೋರಿದಾಗ, ಅದನ್ನು ಸಹಿಸುವುದಕ್ಕೆ ನನಗೆ ಆಗುತ್ತಿರಲಿಲ್ಲ. ಒಂದು ಸಲ ಏಟು ತಿಂದುದೂ ನನಗೆ ಜ್ಞಾಪಕವಿದೆ. ಏಟು ಬಿದ್ದುದರಿಂದ ನನಗೆ ಅಷ್ಟು ದುಃಖವಾಗಲಿಲ್ಲ. ನಾನು ಏಟಗೆ ಅರ್ಹನೆಂದು ಭಾವಿಸಿದರಲ್ಲಾ ಎಂದು ನನಗೆ ಬಹಳ ವ್ಯಥೆಯಾಯಿತು. ನಾನು ಬಹಳವಾಗಿ ಅತ್ತೆ. ನಾನು ಏಳನೆಯ ತರಗತಿಯಲ್ಲಿದ್ದಾಗ ಆಂತಹ ಮತ್ತೊಂದು ಘಟನೆ ನಡೆಯಿತು. ದೊರಾಬ್ಬೀ ಎದುಲ್‌ಜೀ ಜಿಮಿ, ಆಗ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರು ನಿಯಮಪಾಲಕರು ವಿಧಿ ಪೂರ್ವಕ ಕಾರ್ಯ ಮಾಡುವವರು, ಉತ್ತಮ ಉಪಾಧ್ಯಾಯರು ಎಂದು ವಿದ್ಯಾರ್ಥಿಗಳಲ್ಲಿ ಪ್ರೀತಿ ಗಳಿಸಿದ್ದರು. ಅವರು ಮೇಲಿನ ತರಗತಿಯ ವಿದ್ಯಾರ್ಥಿಗಳಿಗೆ, ವ್ಯಾಯಾಮವನ್ನೂ ಕ್ರಿಕೆಟನ್ನೂ ಕಡ್ಡಾಯ ಮಾಡಿದ್ದರು. ವ್ಯಾಯಾಮ ಮತ್ತು ಕ್ರಿಕೆಟ್ ಕಡ್ಡಾಯವಾದ ಮೇಲೆ, ಈ ಸೇವೆಗೆ ವಿಘ್ನ ಒದಗಿತು. ತಂದೆಯವರ ಸೇವೆ ಮಾಡಲು ನನಗೆ ಅವಕಾಶವಾಗುವಂತೆ ವ್ಯಾಯಾಮದಿಂದ ನನಗೆ ವಿನಾಯಿತಿ ಕೊಡ ಬೇಕೆಂದು ನಾನು ಜಿಮಿಯವರನ್ನು ಬೇಡಿ ಕೊಂಡೆನು. ಆದರೆ ಜಿಮಿಯವರು ನನ್ನ ಮಾತನ್ನು ಅಂಗೀಕರಿಸಲಿಲ್ಲ. ಒಂದು ಶನಿವಾರ ಶಾಲೆ ಬೆಳಿಗ್ಗೆ ಇತ್ತು. ಮಧ್ಯಾಹ್ನ ನಾಲ್ಕು ಗಂಟೆಗೆ ಮನೆಯಿಂದ ಶಾಲೆಗೆ ವ್ಯಾಯಾಮಕ್ಕೆ ಹೋಗಬೇಕಾಗಿತ್ತು. ನನ್ನಲ್ಲಿ ಗಡಿಯಾರ ಇರಲಿಲ್ಲ. ಅಂತರಿಕ್ಷ ಮೋಡಗಳಿಂದ ಆಚ್ಛಾದಿತವಾಗಿತ್ತು. ನಾನು ಶಾಲೆ ಸೇರುವ ಹೊತ್ತಿಗೆ
ವಿದ್ಯಾರ್ಥಿಗಳೆಲ್ಲ ಹೊರಟೇ ಹೋಗಿದ್ದರು. ಮರು ದಿನ ಜಿಮಿಯವರು ಹಾಜರಿ ಪಟ್ಟಿಯನ್ನು ನೋಡಿ ದಾಗ, ನನ್ನ ಗೈರುಹಾಜರಿ ಗೊತ್ತಾಯಿತು. ಗೈರು ಹಾಜರಿಯ ಕಾರಣವನ್ನು ಕೇಳಿದರು. ನಾನು ನಡೆದ ಸಂಗತಿಯನ್ನು ಹೇಳಿದೆ. ನನ್ನ ಮಾತನ್ನು ಅವರು ನಂಬದೆ ನನಗೆ ಒಂದು ಆಣೆಯೋ ಎರಡು ಆಣೆಯೋ (ಮರೆತು ಹೋಗಿದೆ) ದಂಡ ಹಾಕಿದರು.

ಇದರಲ್ಲಿ ನನಗೆ ದುಃಖದ ಸಂಗತಿಯೆಂದರೆ ನಾನು ಸುಳ್ಳು ಹೇಳಿದೆನೆಂದು ನನಗೆ ಶಿಕ್ಷೆಯಾದುದು. ನಾನು ಸುಳ್ಳು ಹೇಳಿಲ್ಲವೆಂದು ಸಿದ್ಧಗೊಳಿಸುವುದೆಂತು? ನಾನು ಬಹಳ ಸಂಕಟದಿಂದ ಅತ್ತೆ. ಸತ್ಯವನ್ನು ಹೇಳುವವನು, ಸತ್ಯ ವನ್ನು ಆಚರಿಸುವವನು ಬಹಳ ಎಚ್ಚರಿಕೆಯ ಮನುಷ್ಯ ನಾಗಿರಬೇಕೆಂಬುದನ್ನೂ ಅರಿತೆ. ನನ್ನ ವ್ಯಾಸಂಗ ಕಾಲದಲ್ಲಿ ನಾನು ಅಜಾಗರೂಕನಾಗಿದ್ದುದು ಅದೇ ಮೊದಲು ಅದೇ ಕೊನೆ. ನಾನು ತೆತ್ತ ದಂಡವನ್ನು ಹಿಂದಕ್ಕೆ ಪಡೆದೆನೆಂದು ನನಗೆ ಅಸ್ಪಷ್ಟವಾದ ನೆನಪಿದೆ.

ಕೊನೆಗೆ ವ್ಯಾಯಾಮದಿಂದ ವಿನಾಯಿತಿ ದೊರ ಕಿತ್ತು. ಶಾಲೆ ಮುಗಿದ ಮೇಲೆ ನಾನು ಮನೆಯಲ್ಲಿ ತಮ್ಮ ಶುಶ್ರೂಷೆಗಾಗಿ ಇರಬೇಕೆಂದು ನಮ್ಮ ತಂದೆ ಮುಖ್ಯೋಪಾಧ್ಯಾಯರಿಗೆ ಪತ್ರ ಬರೆದುದರಿಂದ ನನಗೆ ವ್ಯಾಯಾಮ ತರಗತಿಯಿಂದ ವಿನಾಯಿತಿ ದೊರೆಯಿತು. ವ್ಯಾಯಾಮವನ್ನು ಬಿಟ್ಟುದರಿಂದ ನನಗೇನೂ ನಷ್ಟವಾಗದಿದ್ದರೂ, ಮತ್ತೊಂದು ನಿರ್ಲಕ್ಷಕ್ಕಾಗಿ ನಾನು ಇಂದಿಗೂ ದಂಡ ತೆರುತ್ತಿದ್ದೇನೆ. ಅಂದವಾದ ಅಕ್ಷರ, ಒಳ್ಳೆಯ ಬರವಣಿಗೆ, ಶಿಕ್ಷಣದ ಆವಶ್ಯಕ ಅಂಶವಲ್ಲವೆಂಬ ಭಾವನೆ ನನಗೆ ಹೇಗೆ ಬಂತೋ ಕಾಣೆ. ಇಂಗ್ಲೆಂಡಿಗೆ ಹೋಗುವವರೆಗೆ ನನ್ನಲ್ಲಿ ಇದೇ ಭಾವನೆ ಇತ್ತು. ಆನಂತರ ದಕ್ಷಿಣ ಆಫ್ರಿಕಾಕ್ಕೆ ಹೋದ ಮೇಲೆ, ಅಲ್ಲಿ ಸುಶಿಕ್ಷಿತ ಯುವಕರ ಮತ್ತು ವಕೀಲರ ಮುತ್ತು ಪೋಣಿಸಿದಂ ತಿದ್ದ ಸುಂದರ ಬರವಣಿಗೆ ನೋಡಿ, ನನಗೆ ನಾಚಿಕೆಯೂ, ಪಶ್ಚಾತ್ತಾಪವೂ ಉಂಟಾಯಿತು. ಕೆಟ್ಟ ಅಕ್ಷರದ ಬರವಣಿಗೆ ಅಪಕ್ವ ಮತ್ತು ಅಪೂರ್ಣ ಶಿಕ್ಷಣದ ಚಿಹ್ನೆ ಎಂದು ಭಾವಿಸಬೇಕೆಂದು ನಾನು ಅರಿತೆನು. ಈಚೆಗೆ ನನ್ನ ಬರಹವನ್ನು ತಿದ್ದಿಕೊಳ್ಳ ಬೇಕೆಂದು ಪ್ರಯತ್ನಿಸಿದೆ. ಸುಟ್ಟ ಮಡಕೆಗೆ ಹಸಿ ಮಣ್ಣನ್ನು ಮೆತ್ತಲು ಸಾಧ್ಯವೆ? ಆದರೆ ಆ ವೇಳೆಗೆ ಕಾಲ ಮೀರಿಹೋಗಿತ್ತು. ಚಿಕ್ಕ ವಯಸ್ಸಿನಲ್ಲಿ ಅಸಡ್ಡೆ ಮಾಡಿದುದನ್ನು, ಇಂದಿನವರೆಗೆ ತಿದ್ದಿಕೊಳ್ಳಲು ಆಗಲಿಲ್ಲ. ನನ್ನ ಉದಾಹರಣೆಯಿಂದ, ಒಳ್ಳೆಯ ಬರ ವಣಿಗೆ ಉತ್ತಮ ಶಿಕ್ಷಣದ ಆವಶ್ಯಕವಾದ ಅಂಶನೆಂಬುದನ್ನು ಪ್ರತಿಯೊಬ್ಬ ಯುವಕನೂ ಯುವತಿಯೂ ತಿಳಿದುಕೊಳ್ಳಲಿ. ಅಕ್ಷರ ಬರೆಯುವು ದನ್ನು ಕಲಿಸುವುದಕ್ಕೆ ಮುಂಚೆ ಮಕ್ಕಳಿಗೆ ಚಿತ್ರಕಲೆ ಅಭ್ಯಾಸ ಮಾಡಿಸಬೇಕೆಂಬುದು ನನ್ನ ಈಗಿನ ಅಭಿ ಪ್ರಾಯ. ಪಕ್ಷಿ, ಹೂವು ಮುಂತಾದುವನ್ನು ನೋಡಿ ತಿಳಿದುಕೊಳ್ಳುವಂತೆ ಮಕ್ಕಳು ಅಕ್ಷರಗಳನ್ನೂ ನೋಡಿ ತಿಳಿದುಕೊಳ್ಳಲಿ. ವಸ್ತುಗಳ ಚಿತ್ರಗಳನ್ನು ಬರೆಯು ವಂತೆ, ಅವುಗಳನ್ನು ಬರೆಯುವುದನ್ನು ಕಲಿತ ನಂತರವೇ ಅಕ್ಷರ ಬರೆಯುವುದನ್ನು ಕಲಿತುಕೊಳ್ಳಲಿ. ಆಗ ಅವರ ಬರಹ ಅಂದವಾಗಿ ಮುದ್ದಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

3 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

3 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

4 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

4 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

4 hours ago

ಸಕ್ಕರೆ ನಾಡಿನಲ್ಲಿ ಬರದಿಂದ ಕಂಗಾಲಾದ ರೈತರು

ಹೇಮಂತ್‌ಕುಮಾರ್ ಮಂಡ್ಯ ಜಿಲ್ಲೆಯಲ್ಲಿ ೪೮,೫೯೧ ಹೆ. ಬೆಳೆ ಹಾನಿ ೫೪.೫೩ ಕೋಟಿ ರೂ. ನಷ್ಟದ ಅಂದಾಜು ಮಂಡ್ಯ: ಜಿಲ್ಲೆಯಲ್ಲಿ ಕಳೆದ…

4 hours ago