ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
‘ಅಕ್ಕ ಪಡೆ’ ಸ್ಥಾಪನೆಗೆ ವಚನಕಾರ್ತಿ ಅಕ್ಕಮಹಾದೇವಿಯವರೇ ಸ್ಪೂರ್ತಿ
ಪೊಲೀಸ್ ಅಧಿಕಾರಿಯಾಗಿ (ಯುಎನ್ಪಿಒಎಲ್) ಸೇವೆ ಸಲ್ಲಿಸುವ ಸುಯೋಗ ನನಗೆ ಲಭಿಸಿತು. ವಿಶ್ವಸಂಸ್ಥೆಯ ಅಮೃತ ಮಹೋತ್ಸವ ಅಂದರೆ ೭೫ನೇ ವಾರ್ಷಿಕೋತ್ಸವದ ಸಂಭ್ರಮದ ಕಾಲಘಟ್ಟದ ಈ ಜವಾಬ್ದಾರಿ ಸಿಕ್ಕಿದ್ದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲು. ಜಗತ್ತಿನ ಅತ್ಯಂತ ಕಿರಿಯ ರಾಷ್ಟ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ವಿಶ್ವದ ೩೯ ದೇಶಗಳ ಪೊಲೀಸ್ ಅಧಿಕಾರಿಗಳೊಂದಿಗೆ ಭುಜಕೊಟ್ಟು ನಿಲ್ಲುವ ಸುಸಮಯವಾಗಿತ್ತು.
೨೦೧೧ ರಲ್ಲಿ ಸುಡಾನ್ನಿಂದ ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್, ಇಂದು ದೇಶ ನಿರ್ಮಾಣದ ಬೃಹತ್ ಸವಾಲುಗಳನ್ನು ಎದುರಿಸುತ್ತಿದೆ. ಈ ರಾಷ್ಟ್ರವು ಹತ್ತು ರಾಜ್ಯಗಳನ್ನೊಳಗೊಂಡಿದ್ದು, ಅವುಗಳನ್ನು ಐದು ‘ ಕೆಂಪು’ (ಸಂಘರ್ಷ ಪೀಡಿತ) ಮತ್ತು ಐದು ‘ ಹಸಿರು’ (ತುಸು ಶಾಂತಿಯುತ) ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಹಿಂಸಾಚಾರದಿಂದ ಸರ್ವಸ್ವ ಕಳೆದುಕೊಂಡು ಆಂತರಿಕವಾಗಿ ನಿರಾಶ್ರಿತರಾದ ಸಾವಿರಾರು ಜನರು ಕೆಂಪು ರಾಜ್ಯಗಳಲ್ಲಿ ವಿಶ್ವಸಂಸ್ಥೆಯ ನಾಗರಿಕ ರಕ್ಷಣಾ (ಪಿಒಸಿ) ಶಿಬಿರಗಳಲ್ಲಿ ಆಶ್ರಯ ಪಡೆದಿzರೆ. ವಿಶ್ವಸಂಸ್ಥೆಯ ಮಿಲಿಟರಿ, ಪೊಲೀಸ್ ಸಿಬ್ಬಂದಿ ಹಾಗೂ ಪಾಲುದಾರ ಸಂಸ್ಥೆಗಳು ಒಟ್ಟಾಗಿ ಈ ಶಿಬಿರಗಳ ರಕ್ಷಣೆಯನ್ನು ನಿರ್ವಹಿಸುತ್ತಿವೆ. ಇನ್ನು ಹಸಿರು ರಾಜ್ಯಗಳಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಪಡೆಗಳು ಶಾಂತಿ ಸ್ಥಾಪನೆಗಾಗಿ ಗಸ್ತು ಕಾರ್ಯ, ಮಾನವೀಯ ನೆರವು, ಮೂಲಭೂತ ಸೌಕರ್ಯ ಹಾಗೂ ಆಹಾರ ವಿತರಣೆಯಲ್ಲಿ ನಿರತವಾಗಿವೆ.
ಪಿಒಸಿ ಶಿಬಿರಗಳ ಒಡಲಲ್ಲಿ ಬದುಕು: ನಮ್ಮ ಮಿಷನ್ನ ಪ್ರಮುಖ ಕೇಂದ್ರ ಬಿಂದುವಾಗಿದ್ದುದೇ ಈ ಪಿಒಸಿ ಶಿಬಿರಗಳು. ಇಲ್ಲಿ ಒಮ್ಮೆಗೆ ಸುಮಾರು ೨೦,೦೦೦ ದಿಂದ ೪೦,೦೦೦ ಜನ ಆಂತರಿಕವಾಗಿ ನಿರಾಶ್ರಿತರಾದವರು ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದರು. ತಮ್ಮ ಮನೆ, ಭೂಮಿ, ಜನುವಾರು ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ನೋವಿನಲ್ಲೂ, ದಕ್ಷಿಣ ಸುಡಾನ್ನ ಜನರ-ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ-ಅಚಲವಾದ ಛಲ ಹಾಗೂ ಧೈರ್ಯವು ನಿಜಕ್ಕೂ ಸ್ತುತ್ಯರ್ಹ ವಾದುದು. ನಿರಾಶ್ರಿತರಾಗಿದ್ದರೂ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿರುವ ಅವರ ಬದ್ಧತೆ ಆಳವಾದ ಸೂರ್ತಿಯನ್ನು ನೀಡುತ್ತದೆ.
ಈ ಶಿಬಿರಗಳ ಸುತ್ತಲೂ ಕಾವಲು ಪಡೆಯ ಕಟ್ಟುನಿಟ್ಟಿನ ಶಸಾಸ ರಹಿತ ವಲಯಗಳಿದ್ದು, ಒಳಬರುವ ಮತ್ತು ಹೊರಹೋಗುವವರ ಮೇಲೆ ತೀವ್ರ ನಿಗಾ ಇಡಲಾಗುತ್ತಿತ್ತು. ಸಾಲು ಸಾಲು ಬಿಳಿ ಡೇರೆಗಳು, ಬೀದಿಯಲ್ಲಿ ಭವಿಷ್ಯದ ಅರಿವಿಲ್ಲದೆ ಆಟವಾಡುತ್ತಿದ್ದ ಮಕ್ಕಳು, ತಾತ್ಕಾಲಿಕ ಶಾಲೆಗಳು, ಚರ್ಚ್ಗಳ ನಡುವೆಯೂ ವಿಶ್ವಸಂಸ್ಥೆಯ ಮಾನವೀಯತೆ ಕಳಕಳಿಯೊಂದಿಗೆ ಬೆಳಗುತ್ತಿದ್ದವು. ನನ್ನ ಸಮವಸದ ಮೇಲಿದ್ದ ‘ ಇಂಡಿಯಾ’ ಹೆಸರನ್ನು ಗುರುತಿಸಿ, ಮಹಾತ್ಮ ಗಾಂಧೀಜಿಯವರ ಅಹಿಂಸೆಯ ಸಂದೇಶವನ್ನು ನೆನಪಿಸಿಕೊಳ್ಳುತ್ತಾ ಅನೇಕ ಸ್ಥಳೀಯರು ನನ್ನನ್ನು ಆತ್ಮೀಯವಾಗಿ ಗೌರವದಿಂದ ಸ್ವಾಗತಿಸಿ ಮಾತನಾಡುತ್ತಿದ್ದರು. ಗಡಿಗಳಿಗಿಂತ ಮೌಲ್ಯಗಳು ಹೇಗೆ ಒಂದು ದೇಶವನ್ನು ಬೆಸೆಯುತ್ತವೆ ಎಂಬುದಕ್ಕೆ ಇದು ಸಾಕ್ಷಿಯೆನ್ನಬಹುದು.
ಸಂಘರ್ಷದ ನೆರಳಿನಲ್ಲಿ ಮಹಿಳೆಯರ ಸ್ಥೈರ್ಯ: ಈ ಮಿಷನ್ನ ಅತ್ಯಂತ ಗಮನಾರ್ಹ ಸಂಗತಿಯೆಂದರೆ, ನಿಯೋಜನೆಗೊಂಡಿದ್ದ ಪೊಲೀಸ್ ಅಽಕಾರಿಗಳಲ್ಲಿ ಶೇಕಡಾ ೫೦ ರಷ್ಟು ಮಹಿಳೆಯರೇ ಆಗಿದ್ದರು. ಫಿಜಿ ದೇಶದ ದಿಟ್ಟ ಪೊಲೀಸ್ ಆಯುಕ್ತೆ ಉನೈಸಿ ಲುತು ವುನಿವಾಕಾ ಅವರ ಮುಖಂಡತ್ವದಲ್ಲಿ ನಾವೆಲ್ಲರೂ ಸಮಾನವಾಗಿ ಹೆಗಲುಕೊಟ್ಟು ಸೇವೆ ಸಲ್ಲಿಸಿದೆವು. ಆದರೆ, ದಕ್ಷಿಣ ಸುಡಾನ್ ಮಹಿಳೆಯರು ಎದುರಿಸುತ್ತಿದ್ದ ಸವಾಲುಗಳು ಭಯಾನಕವಾಗಿದ್ದವು. ಪ್ರಾಣಾಪಾಯದ ಭಯದಿಂದ ಪುರುಷರು ಡೇರೆಗಳಿಂದ ಹೊರಬರಲು ಹಿಂಜರಿಯುತ್ತಿದ್ದರೆ , ಮಹಿಳೆಯರು ಕುಡಿಯುವ ನೀರು ಹಾಗೂ ಸೌದೆ ತರಲು ಕಾಡಿನೊಳಗೆ ಮೈಲಿಗಟ್ಟಲೆ ದೂರ ಹೋಗಿ ರೆಬೆಲ್ ಗುಂಪುಗಳ ಕಿರುಕುಳ ಹಾಗೂ ದೌರ್ಜನ್ಯಗಳಿಗೆ ಗುರಿಯಾಗುವ ಪ್ರಸಂಗಗಳಿದ್ದರೂ ಮಹಿಳೆಯರು ತಮ್ಮ ಮಾನವನ್ನು ಪಣಕ್ಕಿಟ್ಟು ತಮ್ಮ ಪುರುಷರ ಪ್ರಾಣವನ್ನ ಉಳಿಸಿಕೊಳ್ಳಬೇಕಾದ ಕಹಿ ಸತ್ಯ ಅಲ್ಲಿತ್ತು. ಸಮುದಾಯ ಪೋಲಿಸಿಂಗ್ ಕರ್ತವ್ಯದ ಸಂದರ್ಭದಲ್ಲಿ ನಾನು ಶಿಬಿರದ ಶಾಲೆಯೊಂದಕ್ಕೆ ಭೇಟಿ ನೀಡಿದಾಗ ಶಾಲಾ ಬಾಲಕಿಯೊಬ್ಬಳು ಇಂಗ್ಲಿಷ್ ನಲ್ಲಿ ವಾಚಿಸಿದ ಒಂದು ಭಾವನಾತ್ಮಕ ಕವನ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿದುಹೋಯಿತು..ಅದರ ಸಾಲುಗಳು ಹೀಗಿವೆ ನಾನು ಮದುವೆಯಾಗಲು ಬಯಸುತ್ತೇನೆ, ಆದರೆ ನಾನು ಅವಸರದಲ್ಲಿದ್ದೇನೆ ಎಂದು ಭಾವಿಸಬೇಡಿ. ನಾನು ಸುಂದರವಾದ ಉಡುಗೆಯನ್ನು ಧರಿಸಲು ಬಯಸುತ್ತೇನೆ, ಆ ಉಡುಗೆಯ ಹೆಸರು ಶಾಲೆಯ ಸಮವಸವಾ ಗಿರಲಿ. ನಾನು ಆ ನೆರೆಹೊರೆಯಲ್ಲಿರಲು ಬಯಸುತ್ತೇನೆ, ಆ ಜಗದ ಹೆಸರು ಬಾಲ್ಯ. ಸ್ವಾಭಾವಿಕ ಕ್ರಮದಂತೆ ನಾನು ಪ್ರಾಯಕ್ಕೆ ಕಾಲಿಡುವ ಮುಂಚೆ ನಾನು ಕೂಡ ಲಾಬಿ ಬಣ್ಣದ ಯೂನಿಕಾರ್ನ್ ಕುದುರೆಯ ಕನಸು ಕಾಣುತ್ತೇನೆ.. ನಾನು ಮದುವೆಯಾಗಲು ಬಯಸುತ್ತೇನೆ ಆದರೆ ಮ್ಯಾಟ್ರಿಕ್ಯುಲೇಶನ್ ಗೌನ್ ಧರಿಸುವ ಮುಂಚೆಯೇ ನಾನು ನಿಶ್ಚಿತಾರ್ಥದ ವಧುವಾಗಲು ಬಯಸುವುದಿಲ್ಲ… ಬಾಲಕಿ ಹೇಳಿದ ಕವಿತೆಯ ಈ ಸಾಲುಗಳು ಅಲ್ಲಿ ಶಿಕ್ಷಣ, ಬಾಲ್ಯ, ಸ್ವಾವಲಂಬ ನೆಯ ಹಕ್ಕು ಎಲ್ಲ ಹೆಣ್ಣುಮಕ್ಕಳ ಸಾರ್ವತ್ರಿಕ ಆಕಾಂಕ್ಷೆಯನ್ನು ಮನಗಾಣಿಸಿದವು. ನೀಲಿ ಬೇರೆಟ್ ಕ್ಯಾಪ್ನ ವಿಶ್ವಸಂಸ್ಥೆಯ ಅಸಾಧಾರಣ ಮಹಿಳಾ ಅಧಿಕಾರಿಗಳು ದಕ್ಷಿಣ ಸುಡಾನ್ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ಸಾಧನೆ ಅನನ್ಯ. ಆಘಾತಕ್ಕೊಳಗಾದ ಸಮುದಾಯಗಳೊಂದಿಗೆ ನಂಬಿಕೆ ಗಳಿಸಿ ವಿಶ್ವಾಸ ಬೆಳೆಸುವುದು, ಲಿಂಗ ಆಧಾರಿತ ಹಿಂಸಾಚಾರವನ್ನು ತಡೆಯುವುದು ಮತ್ತು ಮಹಿಳೆಯರ -ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅವರೆಲ್ಲ ಶ್ರಮಿಸುತ್ತಿದ್ದರು. ಇವರಲ್ಲಿ ಜಂಬಿಯಾ ದೇಶದ ಎಸ್ಪಿ ಯಾಗಿದ್ದ ಡೊರೆನ್ ಮಲಂಬೊ ಅವರ ಕೊಡುಗೆ ಅವಿಸ್ಮರಣೀಯವಾಗಿದ್ದು, ಅವರಿಗೆ ವಿಶ್ವಸಂಸ್ಥೆಯ ಆ ವರ್ಷದ ಅತ್ಯುತ್ತಮ ಅಂತರಾಷ್ಟ್ರೀಯ ಮಹಿಳಾ ಪೊಲೀಸ್ ಅಧಿಕಾರಿ ಪ್ರಶಸ್ತಿ ಲಭಿಸಿತು. ಬಾಲ್ಯವಿವಾಹ, ಕೌಟುಂಬಿಕ ಹಿಂಸಾಚಾರ ಹಾಗೂ ಮಾನವ ಕಳ್ಳಸಾಗಣೆಯಂತಹ ಸಾಮಾಜಿಕ ಪಿಡುಗಿರುವ ಆ ಸಂಘರ್ಷ ಪೀಡಿತ ಪ್ರದೇಶದಲ್ಲಿ, ಮಹಿಳಾ ಅಧಿಕಾರಿಗಳ ಬಗ್ಗೆ ಅಲ್ಲಿನ ಮಹಿಳೆಯರು ಮತ್ತು ಮಕ್ಕಳು ಅಪಾರ ನಂಬಿಕೆಯಿಟ್ಟು ತಮ್ಮ ಸಂಕಷ್ಟ ಮತ್ತು ಸಂತಸಗಳನ್ನು ಹಂಚಿಕೊಳ್ಳುತ್ತಿದ್ದರು. ಈ ನಂಬಿಕೆಯೇ ಬದಲಾವಣೆಗೆ ಬುನಾದಿಯಾಯಿತು. ಡೋರಿನ್ ಮುಲಾಂಬೋ ಅವರನ್ನು ಅವರು ಸ್ಥಳೀಯ ಭಾಷೆಯಲ್ಲಿ ‘ಗಿಪ್ಪೀರಿ’ ಎಂದು ಕರೆಯುತ್ತಿದ್ದರು . ಅದರ ಅರ್ಥ ಮುಚ್ಚಿದ ಕೈಚೀಲ್ ಎಂದು, ಅಂದರೆ ಅವರಿಗೆ ಹಂಚಿಕೊಂಡಂತಹ ಯಾವುದೇ ವಿಷಯಗಳು ಗೌಪ್ಯವಾಗಿರುತ್ತವೆ ಎಂಬ ವಿಶ್ವಾಸ ಮತ್ತು ಭರವಸೆ ಪ್ರತೀಕವಾಗಿತ್ತು.
ಬೀದರ್ ಜಿಲ್ಲೆಗೆ ಕಾಲಿಟ್ಟ ದಕ್ಷಿಣ ಸುಡಾನ್ನ ಅನುಭವದ ಪಾಠಗಳು:
೨೦೨೩ ರಲ್ಲಿ ನಾನು ಕರ್ನಾಟಕದ ಬೀದರ್ ಜಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ, ದಕ್ಷಿಣ ಸುಡಾನ್ನಲ್ಲಿ ಯ ಅನುಭವಗಳು ಹಲವಾರು ಯೋಜನೆಗಳನ್ನು ರೂಪಿಸುವಲ್ಲಿ ಮಾರ್ಗದರ್ಶಿಯಾಗಿದ್ದವು. ಬೀದರ್ ಜಿಲ್ಲೆಯ ಐತಿಹಾಸಿಕ ಶ್ರೀಮಂತಿಕೆಯನ್ನು ಹೊಂದಿದ್ದರೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸೂಚ್ಯಂಕಗಳಲ್ಲಿ ರಾಜ್ಯದ ಮುಂದುವರಿದ ಜಿಲ್ಲೆಗಳಿಗಿಂತ ಹಿಂದುಳಿದಿದೆ. ಇಲ್ಲಿ ಬಾಲ್ಯವಿವಾಹಗಳು, ಪೋಕ್ಸೊ ಕಾಯಿದೆಯ ಬಗ್ಗೆ ಅರಿವಿನ ಕೊರತೆ, ಕಾನೂನು ಸಂಘರ್ಷಕ್ಕೆ ಸಿಲುಕುವ ಅಪ್ರಾಪ್ತರು, ಸೈಬರ್ ಸುರಕ್ಷತೆಯ ಜ್ಞಾನದ ಮಿತಿ ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯ ವ್ಯಸನದಂತಹ ಸಮಸ್ಯೆಗಳಿಗೆ ಸಮಗ್ರವಾದ ಸ್ಪಂದನೆಯ ಅಗತ್ಯವಿತ್ತು. ನಾನು ಜಿಯ ಠಾಣೆಗಳಿಗೆ ಭೇಟಿ ನೀಡಿದಾಗ, ಬಹುತೇಕ ಮಹಿಳಾ ಸಿಬ್ಬಂದಿಯನ್ನು ಕೇವಲ ಠಾಣಾ ಕಾವಲು ಅಥವಾ ಕಚೇರಿಯ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸಿರುವುದು ನನ್ನ ಗಮನಕ್ಕೆ ಬಂತು. ಗಸ್ತು, ಸಮನ್ಸ್ ವಾರಂಟ್ ಜರಿ ಮಾಡುವುದು ಅಥವಾ ತನಿಖೆಯಂತಹ ಪ್ರಮುಖ ಪೊಲೀಸ್ ಕೆಲಸಗಳಲ್ಲಿ ಅವರ ಪಾಲ್ಗೊಳ್ಳುವಿಕೆ ತೀರಾ ಕಡಿಮೆಯಿತ್ತು. ಜಿ ಪೊಲೀಸ್ ಬಲದಲ್ಲಿ ಶೇಕಡಾ ೧೪ರಷ್ಟಿದ್ದರೂ ಕೂಡ ಮುಂಚೂಣಿ ಪೊಲೀಸ್ ಕರ್ತವ್ಯಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಸೀಮಿತವಾಗಿರುವುದನ್ನು ಮನಗಂಡೆ. ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಸಬಲೀಕರಣಗೊಳಿಸುವ ಮೂಲಕ ನಾಗರಿಕ ಸಮಾಜ-ಸರ್ಕಾರದ ಇತರೆ ಇಲಾಖೆಗಳೊಂದಿಗೆ ಸಹಯೋಗ ಸಾಧಿಸಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಸೇವೆ ಅತಿಮುಖ್ಯ ಎಂಬುದು ನನಗೆ ಮನದಟ್ಟಾಯಿತು.
ಅಕ್ಕ ಪಡೆ ಸ್ಥಾಪನೆ: ಸಬಲೀಕರಣದ ಹೊಸ ಹೆಜ್ಜೆ
ಜ್ಞಾನ ಹಾಗೂ ಆಧ್ಯಾತ್ಮಿಕತೆ ಅರಸಿ ಉಡುತಡಿಯಿಂದ ಕಲ್ಯಾಣದ ಅನುಭವ ಮಂಟಪಕ್ಕೆ ನಿರ್ಭಯವಾಗಿ ಕಾಲ್ನಡಿಗೆಯಲ್ಲಿಯೇ ನಡೆದು ಬಂದ ೧೨ನೇ ಶತಮಾನದ ಮಹಿಳೆಯರ ಸ್ವಾಭಿಮಾನದ ಪ್ರತೀಕವಾಗಿದ್ದ ವಚನಕಾರ್ತಿ ಅಕ್ಕಮಹಾದೇವಿಯವರಿಂದ ಸೂರ್ತಿಗೊಂಡು ಈ ಯೋಜನೆಗೆ ‘ ಅಕ್ಕ ಪಡೆ’ ಎಂದು ನಾಮಕರಣ ಮಾಡಿದೆ. ಭರವಸೆ, ಬೆಂಬಲ ಹಾಗೂ ಸಬಲೀಕರಣದ ಸಂಕೇತವಾಗಿ ಮೂಡಿಬಂದ ಈ ಯೋಜನೆಯ ಪ್ರಮುಖ ಹೆಜ್ಜೆಗಳಲ್ಲಿ ಬೀದರನ ರೋಟರಿ ಸಂಸ್ಥೆಯ ವೈದ್ಯರು ಹಾಗೂ ಕುಟುಂಬ ಯೋಜನೆ ಸಂಸ್ಥೆಯ ಸದಸ್ಯರ ಸಹಯೋಗದೊಂದಿಗೆ ಜಿಯ ಎಲ್ಲ ಮಹಿಳಾ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ಮೂರು ದಿನಗಳ ವಿಶೇಷ ಆರೋಗ್ಯ ಶಿಬಿರ ಏರ್ಪಡಿಸಲಾಯಿತು. ಇದರಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗೆ ಇಲಾಖೆಯಲ್ಲಿ ಅವರ ಬಗ್ಗೆ ತೋರಿದ ಕಾಳಜಿಯಿಂದ ತಾವೂ ಕೂಡ ಇಲಾಖೆಯಲ್ಲಿ ಪ್ರಮುಖರು ಎಂಬ ಒಳಗೊಳ್ಳುವಿಕೆಯ ಭಾವ ಅವರಲ್ಲಿ ಉಂಟಾಯಿತು. ತದ ನಂತರ ‘ ಅಕ್ಕ ಪಡೆಗೆ’ ಮೂವರು ಮಹಿಳಾ ಪೊಲೀಸ್ ಉಪನಿರೀಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಪ್ರತಿ ಪೊಲೀಸ್ ಠಾಣೆಯಿಂದ ಪದವೀಧರೆಯರಾದ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ವಿಶೇಷ ಆತ್ಮ ರಕ್ಷಣೆಯ ತರಬೇತಿ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದೊಂದಿಗೆ ಮಹಿಳೆ ಮತ್ತು ಮಕ್ಕಳಿಗೆ ಸಂಬಂಽಸಿದಂತೆ ಕಾನೂನುಗಳ ಅರಿವು ಹಾಗೂ ನೈಜ ಪ್ರಕರಣಗಳನ್ನು ಆಧರಿಸಿ ಶಾಲಾ ಕಾಲೇಜುಗಳಲ್ಲಿ ‘ಅರಿವು’ ಕಾರ್ಯಕ್ರಮ ಹೇಗೆ ರೂಪಿಸಬೇಕೆಂಬ ಕುರಿತು ಮಾರ್ಗದರ್ಶನ ನೀಡಲಾಯಿತು. ಆಗ ನನ್ನ ವಯಕ್ತಿಕ ಮನವಿಯ ಮೇರೆಗೆ ನಮ್ಮ ನೂತನ ಅಕ್ಕ ಪಡೆಯ ಮಹಿಳಾ ಅಧಿಕಾರಿಗಳನ್ನುದ್ದೇಶಿಸಿ ಜಂಬಿಯಾ ದೇಶದಿಂದ ಡೊರೆನ್ ಮಲಂಬೊ ಅವರು ನಡೆಸಿದ ಆನ್ಲೈನ್ ಸಂವಾದವು ‘ ಅಕ್ಕ ಪಡೆ’ ತಂಡದ ಆತ್ಮಬಲವನ್ನು ಇಮ್ಮಡಿ ಗೊಳಿಸಿತು. ಅವರ ಪ್ರೇರಣಾದಾಯಕ ನುಡಿಗಳು ನಮ್ಮ ಮಹಿಳಾ ಅಧಿಕಾರಿಗಳ ಮನಸ್ಸಿನಲ್ಲಿ ಆಳವಾದ ಛಾಪನ್ನು ಮೂಡಿಸಿದವು. ಮುಂದಿನ ಆರು ತಿಂಗಳುಗಳಲ್ಲಿ, ಅಕ್ಕ ಪಡೆಯ ತಂಡಗಳು ಜಿಯ ಎ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾನೂನುಗಳು, ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳು, ಸೈಬರ್ ಸುರಕ್ಷತೆ ಹಾಗೂ ಬಾಲ್ಯವಿವಾಹ ಪಿಡುಗಿನ ಕುರಿತು ಜಗೃತಿ ಮೂಡಿಸಿದರು. ಅಲ್ಲದೆ, ವಿದ್ಯಾರ್ಥಿಗಳಿಂದ ಗೌಪ್ಯ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಸಮಯೋಚಿತ ಕಾರ್ಯಾಚರಣೆ ಗಳಿಂದ ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ನಮ್ಮ ಅಕ್ಕ ಪಡೆಯ ತಂಡಗಳು ಕಾರಣವಾದವು. ಇದಲ್ಲದೆ ಜಿಲ್ಲೆಯಲ್ಲಿ ಮಹಿಳೆಯರ ವಿರುದ್ಧದ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿತು.
ಅಕ್ಕ ಪಡೆಯ ಆತ್ಮವಿಶ್ವಾಸದ ೩೦೦ ಕಿ.ಮೀ. ಬೈಕ್ ರಾಲಿ:
ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮದ ಅಂಗವಾಗಿ ೨೦೨೪ರ ಮಾರ್ಚ್೮ರಂದು ಅಕ್ಕ ಪಡೆ ವತಿಯಿಂದ ಬೀದರ್ ಜಿಯಾದ್ಯಂತ ಮೂರು ದಿನಗಳ ಕಾಲ ಸುಮಾರು ೩೦೦ ಕಿ.ಮೀ. ಬೈಕ್ ರಾಲಿಯನ್ನು ಆಯೋಜಿಸಲಾಯಿತು. ಇದು ಮಹಿಳಾ ಪೊಲೀಸ್ ಅಧಿಕಾರಿಗಳ ದೃಢತೆ ಹಾಗೂ ಸಾಮರ್ಥ್ಯವನ್ನು ಜಿಲ್ಲೆಯ ಜನತೆಗೆ ಸಾರುವುದರೊಂದಿಗೆ, ಸಾರ್ವಜನಿಕರ ಪ್ರಶಂಸೆಯನ್ನು ಕೂಡ ಗಳಿಸಿತು. ಇದು ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆಯು ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸಿತು. ಈ ರಾಲಿಯಲ್ಲಿ ಭಾಗವಹಿಸಿದ್ದ ಪಿಎಸಐ ಸುವರ್ಣ ಅವರು ಅಂದು ತೀವ್ರ ಜ್ವರದಿಂದ ಬಳಲುತ್ತಿದ್ದರೂ ಛಲಬಿಡದೆ ಯಾತ್ರೆಯನ್ನು ಪೂರ್ಣಗೊಳಿಸಿದುದು ಪ್ರಶಂಸಾನರ್ಹ ವಾಗಿತ್ತು. ಅಕ್ಕ ಪಡೆಯ ಸ್ಥಾಪನೆಯ ಈ ವಿನೂತನ ಯೋಜನೆಯಿಂದಾಗಿ ಮಹಿಳೆಯರ ವಿರುದ್ಧದ ಅಪರಾಧ ವರದಿ ಮಾಡುವಿಕೆ, ಗುಪ್ತಚರ ಮಾಹಿತಿ ಸಂಗ್ರ ಹಣೆ ಹಾಗೂ ಸಾರ್ವಜನಿಕರು-ಪೊಲೀಸ್ ನಡುವಿನ ನಂಬಿಕೆ ಗಣನೀಯವಾಗಿ ಉತ್ತಮವಾಯಿತು. ಸ್ವಾವಲಂಬಿಯಾಗಿ ಸಮವಸ ಧರಿಸಿದ ಮಹಿಳಾ ಅಧಿಕಾರಿಗಳು ಬೈಕ್ ಚಾಲನೆ ಮಾಡುವದನ್ನು ನೋಡಿ ಅನೇಕ ಯುವತಿಯರು ಪೊಲೀಸ್ ವೃತ್ತಿಯನ್ನು ತಮ್ಮ ಗುರಿಯಾಗಿಸಿಕೊಳ್ಳಲು ಸೂರ್ತಿ ಪಡೆದರು.
ಜರ್ಮನಿಯ ಬವೇರಿಯಾ ರಾಜ್ಯದ ಸಂಸತ್ತಿನ ಮಹಿಳಾ ಅಧ್ಯಕ್ಷರೊಂದಿಗಿನ ಸ್ಪೂರ್ತಿದಾಯಕ ಭೇಟಿ: ಪ್ರಸ್ತುತ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ನನಗೆ ಕಳೆದ ವರ್ಷ ಜರ್ಮನಿ ದೇಶದ ಬವೇರಿಯನ್ ಸಂಸತ್ತಿನ ಅಧ್ಯಕ್ಷ ರಾದ ಇಲ್ಸೆ ಐಗ್ನರ್ ಹಾಗೂ ಇತರೆ ೧೯ ಜನ ಸಂಸತ್ ಸದಸ್ಯರನ್ನು ಸ್ವಾಗತಿಸುವ ಸುಯೋಗ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸಿಕ್ಕಿತ್ತು. ಬವೇರಿಯಾ ರಾಜ್ಯದೊಂದಿಗೆ ಕರ್ನಾಟಕ ಪೊಲೀಸ್ ಇಲಾಖೆ ಹೊಂದಿರುವ ತರಬೇತಿ ಪಾಲುದಾರಿಕೆಯು ಆಧುನಿಕ ಪೊಲೀಸ್ ಸವಾಲುಗಳ ಕುರಿತು ಅರ್ಥಪೂರ್ಣ ವಿಚಾರ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿದೆ. ನಾನು ಕುತೂ ಹಲದಿಂದ ಐಗ್ನರ್ ಅವರ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಅವರು ಮೂಲತಃ ಇಂಜಿನಿಯರಿಂಗ್ ಪದವೀಧರೆ ಆಗಿರುವುದಲ್ಲದೆ, ಕಳೆದ ಎರಡು ದಶಕಗಳಿಂದ ನಿರಂತರವಾಗಿ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಜರ್ಮನಿಯಲ್ಲಿ ವ್ಯಾಪಕ ಗೌರವ ಗಳಿಸಿರುವ ಮಹಿಳಾ ಜನಪ್ರತಿನಿಧಿಯಾಗಿರುವುದಾಗಿ ತಿಳಿದುಬಂದಿತು. ಅವರ ಭೇಟಿಯ ಸಂದರ್ಭದಲ್ಲಿ, ಅವರು ನಮ್ಮ ಅಕಾಡೆಮಿಯಲ್ಲಿ ತರಬೇತಿಯಲ್ಲಿ ಅಳವಡಿಸಿಕೊಂಡಿದ್ದ ನೂತನ ಕ್ರಮಗಳನ್ನು ಪ್ರಶಂಸಿಸಿದರು. ನಾನು ಅವರಿಗೆ ಒಬ್ಬ ಮಹಿಳೆಯಾಗಿ ಅವರ ರಾಜಕೀಯ ಜೀವನದ ಯಶಸ್ಸಿನ ರಹಸ್ಯವೇನು ಎಂದು ಪ್ರಶ್ನಿಸಿದಾಗ, ಅವರು ಸ್ವಲ್ಪ ಹೊತ್ತು ಯೋಚಿಸಿ, ನಾನು ಯಾವುದೇ ಕೆಲಸ ಕೈಗೆತ್ತಿಕೊಂಡರೂ, ನನ್ನ ಮೇಲೆ ನನಗೆ ದೃಢವಾದ ನಂಬಿಕೆಯನ್ನಿಟ್ಟುಕೊಂಡು ಮುಂದುವರಿಯುತ್ತೇನೆ. ನಾನೆಂದಿಗೂ ಸ್ವಯಂ- ಸಂದೇಹಕ್ಕೆ (ಸೆಲ್ ಡೌಟ್) ಅವಕಾಶ ನೀಡುವುದಿಲ್ಲ ಎಂದರು. ಐಗ್ನರ್ ಅವರ ಈ ನುಡಿಗಳು ದೃಢಸಂಕಲ್ಪದ ನಾಯಕತ್ವದ ಸಾರವನ್ನು ಅನಾವರಣಗೊಳಿಸಿದವು. ಜರ್ಮನ್ ದೇಶದ ರಾಜಕಾರಣದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅವರು ನಿರಂತರವಾಗಿ ಮಾಡುತ್ತಿರುವ ಪ್ರಯತ್ನಗಳನ್ನೂ ಕೂಡ ನನ್ನೊಂದಿಗೆ ಹಂಚಿಕೊಂಡರು.
ನಿರಂತರ ಪಯಣ: ದಕ್ಷಿಣ ಸುಡಾನ್ ಪಿಒಸಿ ಶಿಬಿರಗಳಿಂದ ಹಿಡಿದು ಬೀದರ್ನ ಅಕ್ಕಪಡೆಯ ಮಹಿಳಾ ಅಧಿಕಾರಿಗಳ ನಡೆ ಮತ್ತು ಈಗ ಬವೇರಿಯಾದ ಸಂಸತ್ನ ಕಾರಿ ಡಾರ್ಗಳವರೆಗೆ-ನಾನು ಗಮನಿಸಿದ ಪ್ರತಿಯೊಂದು ಹಂತದಲ್ಲೂ ಮಹಿಳೆ ಯರ ಧೈರ್ಯ, ಬದ್ಧತೆ ಹಾಗೂ ಪರಿಶ್ರಮವು ಎಡೆ ಒಂದೇ ಎಂಬುದು ಕಾಣಸಿಗು ತ್ತದೆ. ಮಹಿಳೆಯರ ಸಂಕಷ್ಟಗಳು, ಹೋರಾಟಗಳು ಹಾಗೂ ವಿಜಯದ ಹಾದಿಗಳು ಅಕ್ಕಮಹಾ ದೇವಿಯವರ ಕಾಲಾತೀತ ವಚನಗಳನ್ನು ನೆನಪಿಸಿಕೊಡುತ್ತವೆ..ಮಹಿಳಾ ಸಬಲೀಕರಣವೆಂಬುದು ಒಂದು ಗಮ್ಯವಲ್ಲ, ಅದೊಂದು ನಿರಂತರ ಪಯಣ ಎಂಬುದನ್ನು ಸಾರುತ್ತವೆ. ಇತ್ತೀಚೆಗೆ ಬೀದರನ ಅಕ್ಕ ಪಡೆಯ ಈ ಯೋಜನೆಯನ್ನು ಕರ್ನಾಟಕದ ಎಲ್ಲ ಜಿಗಳಿಗೂ ವಿಸ್ತರಿ ಸುವ ಮೂಲಕ ಇಡೀ ದೇಶವೇ ನಮ್ಮೆಡೆಗೆ ಹೊರಳಿ ನೋಡುವಂತಾಗಿದೆ. ದಕ್ಷಿಣ ಸುಡಾನ್ನ ಶಾಲಾ ಬಾಲಕಿಯರಿಂದ ಹಿಡಿದು ಬೀದರ್ನ ಅಕ್ಕ ಪಡೆ ಅಧಿಕಾರಿಗಳವರೆಗೆ, ಬವೇರಿಯಾದ ಸಂಸತ್ತಿನ ಅಧ್ಯಕ್ಷೆಯವರೆಗೆ -ಧೈರ್ಯ ವಂತ ಮಹಿಳೆಯರ ಈ ಮಾದರಿಗಳು ನಮಗೆ ಭರವಸೆ ಮತ್ತು ದೃಢತೆಯ ಹಾದಿಯನ್ನು ದರ್ಶಿಸುತ್ತವೆ.
” ಭಾರತವು ಜಗತಿಕ ನಾಯಕತ್ವದತ್ತ ಹೆಜ್ಜೆಹಾಕಬೇಕಾದರೆ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಗೌರವ ಹಾಗೂ ಅವಕಾಶಗಳನ್ನು ಹೆಚ್ಚಿಸುವುದು ನಮ್ಮ ರಾಷ್ಟ್ರೀಯ ಪ್ರಯತ್ನಗಳ ಕೇಂದ್ರಬಿಂದುವಾಗಿರಬೇಕಾಗಿದೆ”
ನವದೆಹಲಿ: 13 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಪೊಲೀಸರು ನೋಟಿಸ್…
ಬೆಂಗಳೂರು: ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ, ಅಂದರೆ ಎಕ್ಯೂಐ, 186ಕ್ಕೆ ತಲುಪಿದೆ.…
ಬೆಂಗಳೂರು: ನಿಮ್ಮ ರೇಷನ್ ಕಾರ್ಡ್ಗೆ ಇನ್ನೂ ಇ-ಕೆವೈಸಿ ಮಾಡಿಸಿಲ್ವಾ? ಹಾಗಿದ್ದರೆ ಗಮನಿಸಿ. ಇ-ಕೆವೈಸಿ ಮಾಡಿಸಲು ಇಂದೇ ಕೊನೆಯ ದಿನ! ಈಗಾಗಲೇ…
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು, ನವೆಂಬರ್ 10, ಕೊನೆಯ ದಿನ. ಕೊನೆಯ ದಿನವಾದ್ದರಿಂದ…
ಈ ದೀಪ ಪ್ರೀತಿಯ ರೂಪ ನಾನೊಂದು ದೀಪ ಹಚ್ಚುತ್ತೇನೆ ನಮ್ಮೊಳಗಿನ ಅಜ್ಞಾನ, ಅಹಂ ಅಂಧಕಾರವೆಲ್ಲಾ ಅಳಿದು, ಸುಜ್ಞಾನದ ಬೆಳಕು ಬೆಳಗಲಿಯೆಂದು…
೨೦೨೫-೨೬ ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೊಡಮಾಡುವ ಸ್ವಚ್ಛ ಸರ್ವೇಕ್ಷಣ್ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರು ಭಾಜನವಾಗಿರುವುದು…