Andolana originals

ಆಶ್ರಯಕ್ಕೆ ಸೂರಿಲ್ಲ.. ಮರು ನಿರ್ಮಾಣ ಮಾಡುತ್ತಿಲ್ಲ ..

ಮೋರಿ ಕಾಮಗಾರಿಗಾಗಿ ಸೆ.೨೯ರಂದು ಗಾಯತ್ರಿಪುರಂ ಹಾಗೂ ಕ್ಯಾತಮಾರನಹಳ್ಳಿ ಮುಖ್ಯರಸ್ತೆಯಲ್ಲಿರುವ ನಾಲ್ಕು ಮನೆಗಳ ಭಾಗಶಃ (ಹುತ್ತದ ದೇವಸ್ಥಾನದ ಮನೆಗಳು) ನಾಶ

ನೆಲೆ ಕಳೆದುಕೊಂಡ ನಿವಾಸಿಗಳ ಅಳಲು; ಬಾಡಿಗೆ ಮನೆ, ಸಂಬಂಧಿಕರ ಮನೆಗಳಲ್ಲಿ ವಾಸ; ಆಶ್ರಯಕ್ಕಾಗಿ ಪರದಾಟ

ಮೈಸೂರು: ಮೋರಿ ನಿರ್ಮಾಣಕ್ಕಾಗಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನಾಲ್ಕು ಮನೆಗಳನ್ನು ಭಾಗಶಃ ಕೆಡವಿದ ಅಧಿಕಾರಿಗಳು ತಿಂಗಳುಗಳೇ ಉರುಳಿದರೂ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ನೊಂದ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.

ನಗರಪಾಲಿಕೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್ ಐಡಿಎಲ್)ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದರಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಈಗ ಅಕ್ಷರಶಃ ಆಶ್ರಯಕ್ಕಾಗಿ ಪರದಾಡುವಂತಾಗಿದೆ.

ನಗರದ ಗಾಯತ್ರಿಪುರಂ ಹಾಗೂ ಕ್ಯಾತಮಾರನಹಳ್ಳಿ ಮುಖ್ಯರಸ್ತೆ ಯಲ್ಲಿರುವ ನಾಲ್ಕು ಮನೆಗಳನ್ನು(ಹುತ್ತದ ದೇವಸ್ಥಾನದ ಮನೆಗಳು) ಮೋರಿ ಕಾಮಗಾರಿ ಹಿನ್ನೆಲೆಯಲ್ಲಿ ಸೆ.೨೯ರಂದು ನಗರಪಾಲಿಕೆ ವಲಯ ಕಚೇರಿ ೯ರ ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿಯಿಂದ ಕೆಡವಲಾಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಪ್ರತಿಭಟಿಸಿದವರನ್ನು ಪೊಲೀಸರು ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿ ವಾಹನಗಳಲ್ಲಿ ತುಂಬಿಕೊಂಡು ಹೋಗಿ ಸಂಜೆ ವೇಳೆಗೆ ಬಿಟ್ಟು ಕಳುಹಿಸಿದ್ದರು.

ಮರುದಿನ ಬಿಜೆಪಿ ಮುಖಂಡರಾದ ಗಿರಿಧರ್ ಸೇರಿದಂತೆ ಹಲವರು ದೇವಸ್ಥಾನ ಹಾಗೂ ಮನೆಗಳನ್ನು ತೆರವುಗೊಳಿಸದಂತೆ ಪ್ರತಿಭಟನೆ ನಡೆಸಿದ್ದರು. ನಂತರ ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮಹಾಪೌರ ಸಂದೇಶ್ ಸ್ವಾಮಿ, ಮುಖಂಡರಾದ ನಾರಾಯಣ್(ಲೋಲಪ್ಪ) ಸೇರಿದಂತೆ ಮುಖಂಡರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ನೆಲಸಮಗೊಳಿಸಿರುವ ಮನೆಗಳನ್ನು ಮರು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಈ ವೇಳೆ ಮನೆ ಕಟ್ಟಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.

ಆದರೀಗ ನಾವು ಮನೆ ಕಟ್ಟಿಕೊಡಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ನಗರಪಾಲಿಕೆ ಹಾಗೂ ಕೆಆರ್ ಐಡಿಎಲ್ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಬಾಡಿಗೆ ಮನೆ, ಸಂಬಂಧಿಕರ ಮನೆಯಲ್ಲಿ ವಾಸ ನೆಲಸಮವಾದ ನಾಲ್ಕು ಮನೆಗಳ ಪೈಕಿ ಗಂಡ-ಹೆಂಡತಿ ಮತ್ತು ಮಕ್ಕಳು ವಾಸವಾಗಿದ್ದ ಕುಟುಂಬವೊಂದು ಮತ್ತು ವಯೋವೃದ್ಧೆಯೊಬ್ಬರು ಪ್ರತ್ಯೇಕವಾಗಿ ಬಾಡಿಗೆ ಮನೆಗೆ ತೆರಳಿದರೆ, ಇನ್ನುಳಿದ ಎರಡು ಕುಟುಂಬಗಳು ಸಂಬಂಧಿಕರ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ.

ಕರೆಂಟ್, ನೀರಿಗಾಗಿ ಪರದಾಟ: ಕಾಮಗಾರಿಗಾಗಿ ನಾಲ್ಕು ಮನೆಗಳನ್ನು ಹೊಡೆದ ಪರಿಣಾಮ ನಾಲ್ಕು ವಿದ್ಯುತ್ ಮೀಟರ್‌ಗಳ ಪೈಕಿ, ಒಂದು ಮನೆಗೆ ವಿದ್ಯುತ್ ಮೀಟರ್ ನೀಡಲಾಗಿದೆ. ಇನ್ನುಳಿದ ಮೂರು ಮನೆಗಳು, ವಿದ್ಯುತ್ ಮೀಟರ್ ನೀಡಿರುವ ಮನೆಯಿಂದ ವಿದ್ಯುತ್ ಸಂಪರ್ಕ ಪಡೆದು ರಾತ್ರಿ ಕಳೆಯುವಂತಾಗಿದೆ. ಅಲ್ಲದೇ, ಕುಡಿಯುವ ನೀರಿಗಾಗಿಯೂ ಕೂಡ ಪರದಾಡುವಂತಾಗಿದೆ.

” ಅಂದು ಕಾಮಗಾರಿ ಆರಂಭಿಸಿದ್ದು ಕೆಆರ್‌ಐಡಿಎಲ್‌ನಿಂದ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವುದರಿಂದ ನಮ್ಮನ್ನು ಕರೆದರು. ಸಂಪೂರ್ಣ ಕೆಲಸ ಅವರೇ ಮಾಡುತ್ತಿರುವುದು, ನಾನು ಮನೆ ಕಟ್ಟಿಸಿ ಕೊಡು ತ್ತೇನೆ ಎಂದು ಬರೆದುಕೊಟ್ಟಿಲ್ಲ, ಮನೆಯಲ್ಲಿ ಹೋಗಿರುವ ಪರಿಕರಗಳ ಕೊಡಿಸುವುದಾಗಿ ಹೇಳಿದ್ದೆ ಅಷ್ಟೆ.”

-ಹರೀಶ್, ಇಂಜಿನಿಯರ್, ನಗರಪಾಲಿಕೆ ೯ರ ಕಚೇರಿ

” ಕೆಆರ್‌ಐಡಿಎಲ್‌ನಿಂದ ಮೋರಿ ಕಾಮಗಾರಿ ಮಾಡಲಾಗುತ್ತಿದೆ. ಮನೆ ಕೆಡವಿದಕ್ಕಾಗಿ ಪರಿಹಾರ ನೀಡುವ ಬಗ್ಗೆ ನಮಗೆ ಗೊತ್ತಿಲ್ಲ.”

-ಆನಂದ್, ಇಂಜಿನಿಯರ್,

” ನಾಲ್ಕು ಮನೆಗಳನ್ನು ಕೆಡವಿದ್ದ ರಿಂದ ಇಲ್ಲಿ ವಾಸಿಸುತ್ತಿದ್ದ ಕುಟುಂಬ ಗಳು ನಿತ್ಯ ಪರದಾಡುವಂತಾಗಿದೆ. ವಿದ್ಯುತ್, ನೀರಿಗಾಗಿ ಕಷ್ಟಪಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮನೆ ರಿಪೇರಿ ಮಾಡಿಸಿಕೊಡಬೇಕು.”

-ರಾಜೇಶ್, ನಿವಾಸಿ

 

 

ಆಂದೋಲನ ಡೆಸ್ಕ್

Recent Posts

13 ವರ್ಷ ಹಳೆಯ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಗೆ ಪೊಲೀಸ್ ನೋಟಿಸ್‌

ನವದೆಹಲಿ: 13 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಪೊಲೀಸರು ನೋಟಿಸ್‌…

3 hours ago

ದೀಪಾವಳಿ ಬಳಿಕ ಬೆಂಗಳೂರಲ್ಲಿ ವಾಯುಮಾಲಿನ್ಯ ಏರಿಕೆ, AQI 186ಕ್ಕೆ

ಬೆಂಗಳೂರು: ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ, ಅಂದರೆ ಎಕ್ಯೂಐ, 186ಕ್ಕೆ ತಲುಪಿದೆ.…

3 hours ago

ರೇಷನ್ ಕಾರ್ಡ್ ಇ-ಕೆವೈಸಿಗೆ ಇಂದೇ ಕೊನೆ ದಿನ!

ಬೆಂಗಳೂರು: ನಿಮ್ಮ ರೇಷನ್ ಕಾರ್ಡ್‌ಗೆ ಇನ್ನೂ ಇ-ಕೆವೈಸಿ ಮಾಡಿಸಿಲ್ವಾ? ಹಾಗಿದ್ದರೆ ಗಮನಿಸಿ. ಇ-ಕೆವೈಸಿ ಮಾಡಿಸಲು ಇಂದೇ ಕೊನೆಯ ದಿನ! ಈಗಾಗಲೇ…

3 hours ago

ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆ ದಿನ! ನಾಳೆ ಗರ್ಭಗುಡಿ ಬಾಗಿಲು ಬಂದ್‌

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು, ನವೆಂಬರ್‌ 10, ಕೊನೆಯ ದಿನ. ಕೊನೆಯ ದಿನವಾದ್ದರಿಂದ…

7 hours ago

ಓದುಗರ ಪತ್ರ: ಈ ದೀಪ ಪ್ರೀತಿಯ ರೂಪ

ಈ ದೀಪ ಪ್ರೀತಿಯ ರೂಪ ನಾನೊಂದು ದೀಪ ಹಚ್ಚುತ್ತೇನೆ ನಮ್ಮೊಳಗಿನ ಅಜ್ಞಾನ, ಅಹಂ ಅಂಧಕಾರವೆಲ್ಲಾ ಅಳಿದು, ಸುಜ್ಞಾನದ ಬೆಳಕು ಬೆಳಗಲಿಯೆಂದು…

7 hours ago

ಓದುಗರ ಪತ್ರ: ಮೈಸೂರಿಗೆ ಮತ್ತೊಂದು ಪ್ರಶಸ್ತಿಯ ಗರಿ

೨೦೨೫-೨೬ ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೊಡಮಾಡುವ ಸ್ವಚ್ಛ ಸರ್ವೇಕ್ಷಣ್ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರು ಭಾಜನವಾಗಿರುವುದು…

7 hours ago