Andolana originals

ಮಾರುಕಟ್ಟೆ ಬಂದ್ ಭೀತಿ; ಹೊಗೆಸೊಪ್ಪು ತಂದ ರೈತರ ಪರದಾಟ

ಮಂಜು ಕೋಟೆ

ಕೋಟೆ: ಹೆಬ್ಬಾಳ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೇಲ್‌ಗಳ ರಾಶಿ; ಮಳೆ ಬಂದರೆ ನಷ್ಟದ ಆತಂಕ

ಎಚ್.ಡಿ.ಕೋಟೆ: ಮಾರುಕಟ್ಟೆ ಬಂದ್ ಆಗಲಿದೆ ಎಂಬ ಆತಂಕದಿಂದ ನೂರಾರು ರೈತರು ತಾವು ಬೆಳೆದಿರುವ ಹೊಗೆಸೊಪ್ಪಿನ ಸಾವಿರಾರು ಬೇಲ್ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹರಸಾಹಸಪಡುತ್ತಿದ್ದಾರೆ. ಪಟ್ಟಣ ಸಮೀಪದ ಹೆಬ್ಬಾಳ ತಂಬಾಕು ಹರಾಜು ಮಾರುಕಟ್ಟೆಯಲ್ಲಿನ ಅಧಿಕಾರಿಗಳು ಇನ್ನು ಎರಡು ದಿನಗಳು ಮಾತ್ರ ಮಾರಾಟ ಕೇಂದ್ರ ತೆರೆದಿರುತ್ತದೆ.

ಆನಂತರ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಕೋಟೆ, ನಂಜನಗೂಡು, ಗುಂಡ್ಲುಪೇಟೆ, ಹುಣಸೂರು ಈ ಭಾಗದ ಹೊಗೆಸೊಪ್ಪು ರೈತರಿಗೆ ವಿಚಾರ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರ ನೂರಾರು ರೈತರು ಟ್ರಾಕ್ಟರ್, ಲಾರಿ, ಟೆಂಪೋಗಳ ಮೂಲಕ ಎರಡೂವರೆ ಸಾವಿರಕ್ಕೂ ಹೆಚ್ಚು ಹೊಗೆಸೊಪ್ಪು ಬೇಲ್ಗಳನ್ನು ಮಾರಾಟ ಮಾಡಲು ಹರಾಜು ಮಾರುಕಟ್ಟೆಗೆ ತಂದಿದ್ದರು. ನಂತರ ರೈತರಿಗೆ ಸೂಕ್ತ ಸ್ಥಳಗಳಲ್ಲಿ ಬೇಲ್‌ಗಳನ್ನು ಇಡಲು ಸಾಧ್ಯವಾಗದೆ ನರಕ ಯಾತನೆ ಪಡುವ ಪರಿಸ್ಥಿತಿಎದುರಾಗಿ, ಎಲ್ಲೆಂದರಲ್ಲಿ ಬೇಲ್‌ಗಳು ಬೀದಿಪಾಲಾಗಿ ಬಿದ್ದಿದ್ದವು. ಮಾರಾಟಕ್ಕೆ ತಂದಿರುವ ಹೊಗೆಸೊಪ್ಪಿಗೆ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ನೀಡದೆ

ಕೆಲವೊಂದನ್ನು ವಾಪಸ್ ಮಾಡುತ್ತಿದ್ದರೆ, ಮತ್ತೆ ಕೆಲವನ್ನು ಮತ್ತಷ್ಟು ಕಡಿಮೆ ಬೆಲೆಗೆ ಕೆಲ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು ಪಡೆದುಕೊಳ್ಳುತ್ತಿದ್ದುದು ಕಂಡುಬಂದಿತು.

ರೈತರು ತಂದಿರುವ ಹೊಗೆಸೊಪ್ಪಿನ ಬೇಲ್‌ಗಳು ಸಂಪೂರ್ಣ ಮಾರಾಟ ವಾಗಬೇಕಾದರೆ ಇನ್ನೂ ಎರಡು ಮೂರು ದಿನಗಳು ಬೇಕಾಗಿವೆ. ಜತೆಗೆ ಇನ್ನಷ್ಟು ರೈತರು ಹೊಗೆಸೊಪ್ಪನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ವಾಹನ ಗಳಲ್ಲಿ ತಂದು ಎಲ್ಲೆಂದರಲ್ಲಿ ಹೊಗೆ ಸೊಪ್ಪಿನ ಬೇಲ್ಗಳು ಸಂಗ್ರಹ ಇಟ್ಟಿರುವುದರಿಂದ ಮಳೆ ಬಂದರೆ ಕೋಟ್ಯಂತರ ರೂ. ಬೆಲೆ ಬಾಳುವ ಹೊಗೆಸೊಪ್ಪು ನೀರು ಪಾಲಾಗಲಿದೆ. ಆಗ ರೈತರು ಸಂಪೂರ್ಣವಾಗಿ ಬೀದಿಗೆ ಬೀಳಲಿದ್ದಾರೆ.

ಇಷ್ಟೊಂದು ಸಮಸ್ಯೆಗಳು ಎದುರಾಗಿದ್ದರೂ ಸಂಘ ಸಂಸ್ಥೆಯವರಾಗಲಿ, ರೈತ ಮುಖಂಡರಾಗಲಿ, ಜನಪ್ರತಿನಿಧಿಗಳಾಗಲಿ ರೈತರಿಗೆ ಸ್ಪಂದಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಾರಿ ಹೊಗೆಸೊಪ್ಪು ಬೆಳೆದ ರೈತರು ಮಾರಾಟ ಮಾಡಲು ಹಾಗೂ ಸೂಕ್ತ ಬೆಲೆ ಇಲ್ಲದೆ ಕಳೆದ ಮೂರು ತಿಂಗಳಿನಿಂದ ಪಡುತ್ತಿರುವ ಕಷ್ಟ ಹೇಳತೀರದಾಗಿದೆ. ಇನ್ನು ಮುಂದಾದರೂ ಸೂಕ್ತವಾದ ಬೆಲೆ ಕೊಡಿಸುವಲ್ಲಿ ಸಂಬಂಧಪಟ್ಟವರು ಮುಂದಾಗಬೇಕಿದೆ.

” ಎರಡು ದಿನಗಳಲ್ಲಿ ಮಾರುಕಟ್ಟೆ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಎಲೆಹುಂಡಿ ಆದರೆ, ರೈತರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬೇಲ್‌ಗಳನ್ನು ತರುತ್ತಿದ್ದಾರೆ. ಸೋಮವಾರ ಒಂದೇ ದಿನ ೩ ಸಾವಿರ ಬೇಲ್‌ಗಳನ್ನು ತಂದಿದ್ದಾರೆ. ಇದೇ ಎರಡು ದಿನಗಳ ಕಾಲ ಮಾರಾಟ ಮಾಡುವಷ್ಟಿದೆ. ಮತ್ತಷ್ಟು ಬೇಲ್‌ಗಳನ್ನು ತರುವ ಸಾಧ್ಯತೆ ಇದೆ. ಹಾಗಾಗಿ ಶನಿವಾರದವರೆಗೂ ಮಾರುಕಟ್ಟೆ ಮುಂದುವರಿಸಲು ತೀರ್ಮಾನಿಸಲಾಗಿದೆ. ತಂಬಾಕು ತಂದಿರುವ ರೈತರಿಗೆ ಮಳೆಯಿಂದ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.”

-ವಿಜಯಕುಮಾರ್, ಅಧಿಕ್ಷಕ, ತಂಬಾಕು ಮಂಡಳಿ ಹರಾಜು ಮಾರುಕಟ್ಟೆ 

” ಅಧಿಕಾರಿಗಳು ನೀಡಿದ ಸೂಚನೆ ಮೇರೆಗೆ ನಾವು ಹೊಗೆಸೊಪ್ಪನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತಂದಿದ್ದೇವೆ. ಒಟ್ಟಿಗೆ ಎಲ್ಲ ರೈತರು ತಂದಿದ್ದರಿಂದ ಇಲ್ಲಿ ಅವ್ಯವಸ್ಥೆ ಉಂಟಾಗಿದೆ. ರೈತರ ಆಕ್ರೋಶದ ಹಿನ್ನೆಲೆಯಲ್ಲಿ ಇನ್ನು ಕೆಲ ದಿನಗಳ ಕಾಲ ಮಾರುಕಟ್ಟೆ ನಡೆಸಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ.”

-ವೆಂಕಟೇಗೌಡ, ಹೊಗೆಸೊಪ್ಪು ರೈತ, ಎಲೆಹುಂಡಿ

 

 

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

10 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

11 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

11 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

12 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

12 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

18 hours ago