Andolana originals

ನಾಳೆ ಚುನಾವಣೆ: ಯಾರಿಗೆ ಎಪಿಎಂಸಿ ಪಟ್ಟ?

ಚಾಮರಾಜನಗರ: ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎಪಿಎಂಸಿ) ಮೂರನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅ.೩೧ರಂದು ಚುನಾವಣೆ ನಿಗದಿಯಾಗಿದೆ.

ಸದ್ಯ ಎಚ್.ಎನ್.ಮಹದೇವಸ್ವಾಮಿ ಉ.ಸೋಮೇಶ್, ರಾಮಚಂದ್ರ ಎಪಿಎಂಸಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದು ಕಾಂಗ್ರೆಸ್ ಬೆಂಬಲಿತರಾದ ಇವರ ಅಧಿಕಾರಾವಧಿ ನ.೩ರಂದು ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ೨೦ ತಿಂಗಳ (ಅಂತಿಮ ಅವಧಿಗೆ) ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶುಕ್ರವಾರ (ಅ.೩೧) ಆಯ್ಕೆ ಮಾಡಲಾಗುತ್ತದೆ.

ಈಗಿನ ಬಲಾಬಲದ ಪ್ರಕಾರ ಎಪಿಎಂಸಿ ಅಧಿಕಾರ ಕಾಂಗ್ರೆಸ್ ಪಾಲಾಗುವುದು ಬಹುತೇಕ ನಿಶ್ಚಿತವಾಗಿದೆ. ೧೩ ಚುನಾಯಿತ ಸದಸ್ಯರು, ಮೂವರು ನಾಮನಿರ್ದೇಶಿತ ಸದಸ್ಯರು ಮತ್ತು ತಾಲ್ಲೂಕು ತೆಂಗು ಬೆಳೆಗಾರರ ಸಂಘದ ಒಬ್ಬರು ಮತದಾನ ಮಾಡಲು ಅರ್ಹರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ೭ ಚುನಾಯಿತ ಸದಸ್ಯರು, ಆ ಪಕ್ಷದ ಮೂವರು ನಾಮನಿರ್ದೇಶಿತ ಸದಸ್ಯರು ಸೇರಿ ಅವರ ಒಟ್ಟು ಬಲ ೧೦ಕ್ಕೆ ತಲುಪಿದೆ.

ಮೊದಲ ೨೦ ತಿಂಗಳ ಅವಧಿಗೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಬಿಜೆಪಿಗೆ ಸೇರಿದ ಮೂವರು ನಾಮನಿರ್ದೇಶಿತ ಸದಸ್ಯರು ಆಗ ನೇಮಕ ಆಗಿದ್ದರಿಂದ ಆ ಪಕ್ಷದ ನಾಲ್ವರು ಚುನಾಯಿತ ಸದಸ್ಯರು, ಮತ್ತು ಇತರರ ಬೆಂಬಲದೊಂದಿಗೆ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿತ್ತು.

ನಂತರದ ೨೦ ತಿಂಗಳ ಅವಧಿಯ ಅಧಿಕಾರ ಕಾಂಗ್ರೆಸ್ ಬೆಂಬಲಿತರಿಗೆ ದೊರಕಿತ್ತು. ಈಗ ಮತ್ತೆ ಅಧಿಕಾರ ಕೈ ಬೆಂಬಲಿಗರಿಗೆ ದೊರಕುವುದು ಖಾತ್ರಿಯಾಗಿದೆ. ಯಳಂದೂರು ತಾಲ್ಲೂಕು ಕೂಡ ಚಾಮರಾಜನಗರ ಎಪಿಎಂಸಿಗೇ ಒಳಪಟ್ಟಿದ್ದು, ಅಲ್ಲಿಂದ ಆರಿಸಿ ಬಂದಿರುವ ಇಬ್ಬರೂ ಸದಸ್ಯರು ಕಾಂಗ್ರೆಸ್ ಬೆಂಬಲಿತರೇ ಆಗಿರುವ ಕಾರಣ ಅಧ್ಯಕ್ಷ ಸ್ಥಾನ ನಮ್ಮ ತಾಲ್ಲೂಕಿಗೆ ಬೇಕು ಎಂಬ ಧ್ವನಿ ತೆಗೆದಿದ್ದಾರೆ ಎಂದು ಗೊತ್ತಾಗಿದೆ.

ಯಾರು ಆಗುವರು ಅಧ್ಯಕ್ಷರು?: ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಬದನಗುಪ್ಪೆ ಕ್ಷೇತ್ರದ ಎಂ.ಬಿ.ಗುರುಸ್ವಾಮಿ, ಯಳಂದೂರು ಕ್ಷೇತ್ರದ ಯರಗಂಬಳ್ಳಿ ಮಹೇಶ್, ಹೊಂಗನೂರು ಕ್ಷೇತ್ರದ ರವಿಶಂಕರ ಮೂರ್ತಿ , ನಾಗವಳ್ಳಿ ಕ್ಷೇತ್ರದ ಆಲೂರು ಪ್ರದೀಪ್ ಹಾಗೂ ಹಾಲಿ ಉಪಾಧ್ಯಕ್ಷರಾಗಿರುವ ಅಗರ ಕ್ಷೇತ್ರದ ರಾಮಚಂದ್ರ ಆಕಾಂಕ್ಷಿಗಳಾಗಿದ್ದಾರೆ. ಈಗಿನ ಮಟ್ಟಿಗೆ, ಗುರುಸ್ವಾಮಿ ಮತ್ತು ಯಳಂದೂರು ಮಹೇಶ್ ಅವರ ಹೆಸರು ಮುಂಚೂಣಿಯಲ್ಲಿ ಇದೆ ಎಂದು ತಿಳಿದುಬಂದಿದೆ. ಹಿಂದುಳಿದ ಸಮಾಜಕ್ಕೆ ಸೇರಿದ ಗುರುಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ನಿಯೋಗವೊಂದು ಸಿಎಂ ವರೆಗೂ ಹೋಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇದೇ ರೀತಿ, ಯಳಂದೂರು ತಾಲ್ಲೂಕಿನವರಿಗೆ ಇದುವರೆಗೂ ಅಧ್ಯಕ್ಷಸ್ಥಾನ ದೊರಕಿಲ್ಲ. ಈ ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವ ಯರಗಂಬಳ್ಳಿ ಮಹೇಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಡ ಹಾಕಲಾಗುತ್ತಿದೆ ಎಂದು ಗೊತ್ತಾಗಿದೆ.

ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಉಡಿಗಾಲ ಕ್ಷೇತ್ರದ ಪ್ರೇಮಾಶೇಖರ್ ಅವರ ಹೆಸರು ಚಾಲ್ತಿಯಲ್ಲಿದೆ.ಅಧ್ಯಕ್ಷ ಸ್ಥಾನ ವಂಚಿತರಾದವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಯೂ ಇದೆ. ಹಾಗೆಯೇ, ೧೦:೧೦ ತಿಂಗಳ ಅಧಿಕಾರ ಸೂತ್ರ ಹೆಣೆದು ಮೊದಲ ಅವಧಿಗೆ ಒಬ್ಬರು, ನಂತರದ ಅವಧಿಗೆ ಇನ್ನೊಬ್ಬರನ್ನು ಕೂರಿಸುವ ಲೆಕ್ಕಾಚಾರವೂ ನಡೆಯುತ್ತಿದೆ. ಇದು ಪಕ್ಷಾತೀತ ಚುನಾವಣೆ. ಆದರೆ, ಎಪಿಎಂಸಿ ಸದಸ್ಯರು ಕಾಂಗ್ರೆಸ್, ಬಿಜೆಪಿ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ.

ವರಿಷ್ಠರಿಂದ ಸಭೆ:  ಕಾಂಗ್ರೆಸ್ ಪಕ್ಷ ಬೆಂಬಲಿತ ಎಲ್ಲಾ ಎಪಿಎಂಸಿ ಸದಸ್ಯರನ್ನು ನಗರದ ಪ್ರವಾಸಿ ಮಂದಿರದಲ್ಲಿ ಸೇರಿಸಿ ಸಭೆ ಮಾಡಲಾಗಿದ್ದು ವರಿಷ್ಠರು ಯಾರನ್ನೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಮಾಡಿದರೂ ಅದಕ್ಕೆ ಬದ್ಧ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ ಅವರು ಮತ್ತು ಜಿಲ್ಲಾ -ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಜರಿದ್ದರು. ಹೀಗಾಗಿ ಉಭಯ ಶಾಸಕರು ಏನು ತೀರ್ಮಾನ ಮಾಡುತ್ತಾರೋ ನೋಡಬೇಕು ಎಂದು ಎಪಿಎಂಸಿ ಸದಸ್ಯರೊಬ್ಬರು ತಿಳಿಸಿದರು.

ಆ.೩೧ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ:

ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅ.೩೧ರಂದು ಚುನಾವಣೆ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸದಸ್ಯರ ಚುನಾವಣೆ ಸಭೆ ಕರೆಯಲಾಗಿದ್ದು, ಬೆಳಿಗ್ಗೆ ೧೧ ರಿಂದ ೧ ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಧ್ಯಾಹ್ನ ೧.೩೦ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಧ್ಯಾಹ್ನ ೧.೩೦ ರಿಂದ ೨ ಗಂಟೆಯವರೆಗೆ ನಾಮಪತ್ರ ವಾಪಸ್ ಪಡೆಯಬಹುದಾಗಿದೆ. ಮಧ್ಯಾಹ್ನ ೨.೧೫ ಗಂಟೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳಾದ ತಹಸಿಲ್ದಾರ್ ಗಿರಿಜಾ ತಿಳಿಸಿದ್ದಾರೆ

” ನನ್ನ ೨೦ ತಿಂಗಳ ಅಧಿಕಾರ ನ.೩ ರಂದು ಮುಗಿಯಲಿದೆ. ಈ ಅವಧಿಯಲ್ಲಿ ರೈತ ಪರವಾಗಿ ಕೆಲಸ ಮಾಡಿದ ತೃಪ್ತಿ ಇದೆ. ನಗರದ ಎಪಿಎಂಸಿ ಆವರಣದಲ್ಲಿ ೧೬ ಲಕ್ಷ ರೂ.ವೆಚ್ಚದಲ್ಲಿ ಕ್ಯಾಂಟೀನ್ ಕಟ್ಟಡ, ಸಂತೇಮರಹಳ್ಳಿಯಲ್ಲಿ ೩೦ ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ; ಅಲ್ಲಿಯೇ ೫ ಕೋಟಿ ರೂ. ವೆಚ್ಚದಲ್ಲಿ ಶಾಸಕರ ಸಹಕಾರದೊಂದಿಗೆ ಎಳನೀರು ಸಂಸ್ಕರಣೆ ಘಟಕ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.”

-ಎಚ್.ಎನ್.ಮಹದೇವಸ್ವಾಮಿ (ಸೋಮೇಶ್), ಎಪಿಎಂಸಿ ಅಧ್ಯಕ್ಷರು

ಆಂದೋಲನ ಡೆಸ್ಕ್

Recent Posts

ಬಯಲುಸೀಮೆಗೆ ಭದ್ರಾ ಜೀವಜಲ : ನವೆಂಬರ್ ಅಂತ್ಯಕ್ಕೆ ಎಲ್ಲ ಕೆರೆಗಳಿಗೂ ನೀರು ; ಸಚಿವ ಚಲುವರಾಯಸ್ವಾಮಿ ಭರವಸೆ*

ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…

2 hours ago

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

10 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

10 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

10 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

10 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

10 hours ago