• ದಾ.ರಾ.ಮಹೇಶ
ವೀರನಹೊಸಹಳ್ಳಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ 39 ವರ್ಷದ ಏಕಲವ್ಯ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಲ್ಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ದಲ್ಲಿ ಗ್ರಾಮಗಳಿಗೆ ಬಂದು ಉಪಟಳ ನೀಡು ತ್ತಿದ್ದ ‘ಮೂಡಿಗೆರೆ ಭೈರ’ ಎಂದೇ ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದ ಆನೆಯೇ ಈ ಏಕಲವ್ಯ.
ಚಿಕ್ಕಮಗಳೂರು ಜಿಲ್ಲೆಯ ಮೂಡಿ ಗೆರೆ, ಆಲ್ಲೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ 2020ರಿಂದ ಎರಡು ವರ್ಷ ಪದೇ ಪದೇ ಕಾಣಿಸಿ ಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದಲ್ಲದೆ, ಆಕಸ್ಮಿಕವಾಗಿ ಎದುರಾದ ಮೂವರ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾಗಿದ್ದ. ಅದೇ ಸಂದರ್ಭದಲ್ಲಿ ಎರಡು ಕಾಡಾನೆಗಳು ಸಂಚರಿಸುತ್ತಿದ್ದವಾದರೂ, ಮೂವರ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ಆನೆ ‘ಭೈರನೇ’ ಎಂಬುದು ಖಚಿತ ವಾಗಿಲ್ಲದಿದ್ದರೂ ಸ್ಥಳೀಯರು ಮಾತ್ರ ಭೈರನತ್ತಲೇ ಬೆರಳು ತೋರಿಸಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 20218 ಜ.25ರಿಂದ ಮೂಡಿಗೆರೆಯ ಸುತ್ತ ಕಾರ್ಯಾಚರಣೆ ನಡೆಸಿತ್ತು. ದಸರಾ ಗಜಪಡೆ ನಾಯಕ ಅಭಿ ಮನ್ಯು, ಭೀಮ, ಧನಂ ಜಯ, ಪ್ರಶಾಂತ ಹಾಗೂ ಹರ್ಷ ನೊಂದಿಗೆ ಪಶು ವೈದ್ಯ ಡಾ. ರಮೇಶ ಹಾಗೂ ಇನ್ನಿತರರ ತಂಡ ಕಾರ್ಯಾಚರಣೆ ನಡೆಸಿ, 6 ದಿನಗಳಲ್ಲೇ ಭೈರ ನೊಂದಿಗೆ ಉಪಟಳ ನೀಡುತ್ತಿದ್ದ ಮತ್ತೊಂದು ಆನೆಯನ್ನು ಕೂಡ ಸೆರೆ ಹಿಡಿಯಲು ಮುಂದಾಗಿತ್ತು. ಆದರೆ, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಮತ್ತೊಂದು ಆನೆಯಿಂದ ತೊಂದರೆಯಾಗಿಲ್ಲ. ಭೈರನನ್ನು ಮಾತ್ರ ಸೆರೆಹಿಡಿಯಿರಿ ಎಂದು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ‘ಮೂಡಿಗೆರೆ ಭೈರ’ನನ್ನು 2022ರ ಫೆ.12ರಂದು ಮೂಡಿಗೆರೆ ಬಳಿ ಗುರುತಿಸಿ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದಿತ್ತು. ಬಳಿಕ ಅದನ್ನು ಮತ್ತಿಗೋಡು ಶಿಬಿರಕ್ಕೆ ಕರೆತಂದು ಕ್ರಾಲ್‌ನಲ್ಲಿಟ್ಟು ಪಳಗಿಸಲಾಗಿತ್ತು.
ಅಂಬಾರಿ ಹೊರುವ ಸಾಮರ್ಥ್ಯ: ಸೆರೆಹಿಡಿದ ಒಂದೇ ವರ್ಷದೊಳಗೆ ಸೌಮ್ಯ ಸ್ವಭಾವಿಯಾಗಿ ಮಾರ್ಪಾಡಾದ ಮೂಡಿಗೆರೆ ಭೈರನಿಗೆ ‘ಏಕಲವ್ಯ’ ಎಂದು ನಾಮಕರಣ ಮಾಡಲಾಯಿತು. 8 ತಿಂಗಳ ಹಿಂದೆಯೇ ಕ್ರಾಲ್‌ನಿಂದ ಹೊರಗೆ ಬಂದಿರುವ ಏಕಲವ್ಯ, ಮಾವುತ ಸೃಜನ್ ಹಾಗೂ ಎಸ್. ಇದಾಯತ್ ಅವರ ಆರೈಕೆಯಲ್ಲಿ ಪಳಗಿದೆ. ಹೇಳಿದಂತೆ ಕೇಳುವುದರೊಂದಿಗೆ ಮೃದು ಸ್ವಭಾವಿ ಯಾಗಿ ಮಾರ್ಪಟ್ಟಿದೆ. ಸಮ ತಟ್ಟಾದ ಬೆನ್ನು, ನಡಿಗೆಯಲ್ಲಿ ರಾಜಗಾಂಭೀರ್ಯ ಹೊಂದಿರುವ ಏಕಲವ್ಯ ಅಂಬಾರಿ ಹೊರಲು ಅರ್ಹತೆ ಹೊಂದಿದೆ ಎನ್ನುವುದು ಅಧಿಕಾರಿಗಳ ಅನಿಸಿಕೆ.
18 ತಿಂಗಳ ಹಿಂದೆ ಕಾಡಾನೆ, ಇದೀಗ ಸಾಕಾನೆ ‘ಏಕಲವ್ಯ’ನಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದೆ. ಹಳೆಯದನ್ನು ಮರೆತು ಹೊಸ ಅಧ್ಯಾಯ ಬರೆಯಲು ತವಕಿಸುತ್ತಿರುವ ಏಕಲವ್ಯ ಅಧಿಕಾರಿಗಳು ಮಾತ್ರ ವಲ್ಲದೆ, ಮತ್ತಿಗೋಡು ಕ್ಯಾಂಪ್ ನಲ್ಲಿರುವ ಎಲ್ಲಾ ಆನೆಗಳ ಮಾವುತ, ಕಾವಾಡಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಮೊದಲ ಹಂತದಲ್ಲೇ ಆಗಮಿ ಸಿರುವ ಏಕಲವ್ಯ ಸುಮಾರು 50 ದಿನ ಅರಮನೆ ಆವರಣದಲ್ಲಿದ್ದು, ಉತ್ಸವಕ್ಕೆ ತಾಲೀಮು ನಡೆಸಲಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…