Andolana originals

‘ದುರಂಧರ್’- ನಾಯಕ ಗುಪ್ತಚರನಲ್ಲ, ಯೋಧನೂ ಅಲ್ಲ!’

ಹಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಚಾಡ್ ಸ್ಟಹೆಲ್ಸ್ಕಿ ನಿರ್ದೇಶನದ john wick” ಸರಣಿ ಚಿತ್ರಗಳಲ್ಲಿನ ಅಂತ್ಯವಿಲ್ಲದ ಶವಗಳ ಎಣಿಕೆ, ಕ್ವೆಂಟಿನ್ ಟರೆಂಟಿನೋ ನಿರ್ದೇಶನದ Kill Bill'” ಭಾಗ-೧ ಮತ್ತು ೨ ಚಿತ್ರಗಳಲ್ಲಿನ ರಕ್ತರಂಜಿತ ಉನ್ಮತ್ತ ಆನಂದ ಹಾಗೂ ಅವರದ್ದೇ ನಿರ್ದೇಶನದ ಇತಿಹಾಸದ ಪುನರ್ ವ್ಯಾಖ್ಯಾನದ ಮಿಶ್ರಣ ಹೊಂದಿರುವ ಯುದ್ಧದ ಕುರಿತಾದ ಚಲನಚಿತ್ರ “Inglourious Basterds”.”. ಈ ಮೂರೂ ಸಿನಿಮಾಗಳನ್ನು ಮಿಕ್ಸರ್ ಗ್ರೈಂಡರ್‌ನಲ್ಲಿ ಹಾಕಿ ಕಿರ್… ಕಿರ್… ಅಂತ ಶಬ್ದ ಬರುವ ಹಾಗೆ ಮೂರ್ನಾಲ್ಕು ಬಾರಿ ಮಿಕ್ಸ್ ಮಾಡಿ. ಅದಕ್ಕೆ ಒಂದಿಷ್ಟು ಹಳೆಯ ಬಾಲಿವುಡ್ ಹಾಡುಗಳ ರಿಮಿಕ್ಸ್ ಸೇರಿಸಿ. ಸಂಕಲನಕಾರನನ್ನು ಸಿನಿಮಾದ ಹತ್ತಿರವೂ ಬಿಟ್ಟುಕೊಳ್ಳಬೇಡಿ. ನಂತರ ಒಂದಾದ ಮೇಲೊಂದರಂತೆ ಹಲವು ಸ್ಟ್ರಾಂಗ್ ಕಾಫಿ ಕುಡಿಯಿರಿ ಹಾಗೂ ಒಂದರ ಹಿಂದೊಂದರಂತೆ ಹಲವು ಪ್ಯಾಕ್   ಮಾರ್ಲ್‌ಬರೋ ಸಿಗರೇಟ್‌ಗಳನ್ನು ಸೇದುತ್ತ ಆಕಾಶಕ್ಕೆ ಮುಖ ಮಾಡಿ ಬುಸ್ ಬುಸ್ ಎಂದು ಹೊಗೆ ಬಿಡಿ. ಇಷ್ಟೆಲ್ಲ ಮಾಡುವಾಗ ನಿಮಗಾಗುವ ಅನುಭವವನ್ನು ಸತತವಾಗಿ ನಾಲ್ಕು ಗಂಟೆಗಳ ಕಾಲ ಸಹಿಸಿಕೊಳ್ಳಲು ನೀವು ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದರೆ ‘ದುರಂಧರ್-ದಿ ರಿವೇಂಜ್’  ಸಿನಿಮಾವನ್ನು ಖಂಡಿತವಾಗಿ ನೋಡಬಹುದು.

ಇದು ಬ್ರಿಟನ್ನಿನ ‘ದಿ ಎಕನಾಮಿಸ್ಟ್’ ಪತ್ರಿಕೆಯು ‘ದುರಂಧರ್ – ದಿ ರಿವೇಂಜ್’  ಸಿನಿಮಾ ಕುರಿತು ಪ್ರಕಟಿಸಿರುವ ವಿಮರ್ಶೆ. ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಮತ್ತು ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿರುವ ಈ ಚಿತ್ರದ ಬಗೆಗಿನ ಚರ್ಚೆ ಭಾರತದ ಗಡಿಗಳನ್ನು ದಾಟಿ ವಿದೇಶಗಳಿಗೂ ತಲುಪಿರುವುದಕ್ಕೆ ಇದು ಉದಾಹರಣೆ.

ಕಳೆದ ತಿಂಗಳು ಭಾರತದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ‘ದುರಂಧರ್ – ದಿ ರಿವೇಂಜ್’ ಚಿತ್ರ, ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡುವ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುವತ್ತ ದಾಪುಗಾಲು ಇಟ್ಟಿದೆ. ಈ ಚಿತ್ರ “ದುರಂಧರ್”  ಚಿತ್ರದ ಮುಂದುವರಿದ ಭಾಗವಾಗಿದೆ. ಮೊದಲ ಚಿತ್ರವೇ ಈಗಾಗಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಪಡೆದಿರುವುದರಿಂದ ಅದಕ್ಕಿಂತ ಹೆಚ್ಚು ಕ್ರೇಜ್ ಈ ಸಿನಿಮಾಕ್ಕೆ ವ್ಯಕ್ತವಾಗುತ್ತಿರುವುದನ್ನು ನೋಡಿದರೆ ಈ ಚಿತ್ರವೂ ಹಣ ಗಳಿಕೆಯಲ್ಲಿ ಹೊಸ ಹೊಸ ದಾಖಲೆ ಬರೆಯುವುದು ಸ್ಪಷ್ಟವಾಗಿದೆ.

ಸಿನಿಮಾ ವಿಮರ್ಶೆ ಮಾಡುವ  Rotten Tomatoes ಎಂಬ ವೆಬ್ ಸೈಟ್‌ನಲ್ಲಿ ಈ ಎರಡು ಚಿತ್ರಗಳಿಗೂ ಪ್ರೇಕ್ಷಕರ ಬಹುತೇಕ ಪರಿಪೂರ್ಣ ರೇಟಿಂಗ್ ದೊರೆತಿದೆ. ಆದರೆ ವಿಮರ್ಶಕರು ಈ ಚಿತ್ರವನ್ನು ಅದೇ ಪ್ರಮಾಣದಲ್ಲಿ ಮೆಚ್ಚಿಕೊಂಡಿಲ್ಲ. ಮೊದಲ ಚಿತ್ರವನ್ನು ಕೇವಲ ಶೇ.೩೫ ವಿಮರ್ಶಕರು ಮೆಚ್ಚಿದ್ದರೆ,  ಎರಡನೇ ಚಿತ್ರಕ್ಕೆ ಶೇ.೪೦ ವಿಮರ್ಶಕರು ಮಾತ್ರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಮರ್ಶಕರ ಅಭಿಪ್ರಾಯದಲ್ಲಿ, ಎರಡೂ ಚಿತ್ರಗಳು ಭಾರತ ಸರ್ಕಾರ ಅಥವಾ ಆಡಳಿತ ಪಕ್ಷವಾದ ಬಿಜೆಪಿ ಪರವಾದ ಪ್ರೊಪಗೆಂಡಾ (ಪ್ರಚಾರ) ಚಿತ್ರಗಳಲ್ಲ,  ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಪ್ರಚಾರ ಮಾಡುವ, ಅವರ ವರ್ಚಸ್ಸು ವೃದ್ಧಿಸುವ ಉದ್ದೇಶ ಹೊಂದಿರುವ ಚಿತ್ರಗಳಾಗಿವೆ.

‘ದುರಂಧರ್’ ಸರಣಿಯ ಮೊದಲ ಚಿತ್ರದಲ್ಲಿ ಪಾಕಿಸ್ತಾನದ ದೊಡ್ಡ ನಗರಕರಾಚಿಯ ಅಪರಾಧ ಜಗತ್ತಿನೊಳಗೆ ಸೇರಿಕೊಳ್ಳುವಂತೆ ಒಬ್ಬ ಸೀಕ್ರೆಟ್ ಏಜೆಂಟ್ (ಗುಪ್ತಚರ)ನನ್ನು ಭಾರತ ಸರ್ಕಾರ ಕಳುಹಿಸುತ್ತದೆ. ಕರಾಚಿಯ ಭೂಗತ ಜಗತ್ತಿನ ಗುಂಪುಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದನಾ ಸಂಘಟನೆಗಳಿಗೆ ಶಸ್ತ್ರಾಸ್ತ್ರ  ಪೂರೈಸುವ ಜೊತೆಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತಿರುತ್ತವೆ. ಕರಾಚಿಯ ಭೂಗತ ಜಗತ್ತಿನ ಸಕ್ರಿಯ ಸದಸ್ಯನಾಗುವ ಭಾರತದ ಸೀಕ್ರೆಟ್ ಏಜೆಂಟ್ ಭಾರತ ವಿರೋಧಿ ಶಕ್ತಿಗಳು ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ಸ್ವಯಂ ನಾಶವಾಗುವಂತೆ ತಂತ್ರಗಳನ್ನು ಹೆಣೆಯುತ್ತಾನೆ. ಎರಡನೇ ಚಿತ್ರ ‘ದುರಂಧರ್- ದಿ ರಿವೇಂಜ್’ನಲ್ಲಿ, ಆ ಸೀಕ್ರೆಟ್ ಏಜೆಂಟ್‌ನ ದುಃಖಭರಿತ ಹಿನ್ನೆಲೆ ಅನಾವರಣಗೊಳ್ಳುತ್ತದೆ.  ಭಾರತಕ್ಕೆ ಅವಮಾನ ಮಾಡಿದ ಮತ್ತು ಭಾರತದ ವಿರುದ್ಧ ಸಂಚು ರೂಪಿಸಿದ ಘಟನೆಗಳಿಗೆ ಕಾರಣರಾದವರನ್ನು ಹುಡುಕಿ ಹುಡುಕಿ ಕ್ರೂರವಾಗಿ ಆತ ಸಂಹರಿಸುವ ಕಥಾನಕವನ್ನು ಈ ಸಿನಿಮಾ ಹೊಂದಿದೆ.

ಈ ಎರಡೂ ಚಿತ್ರಗಳು ಅಪಾರ ಯಶಸ್ಸು ಗಳಿಸುವುದಕ್ಕೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಹಿಂಸೆಯನ್ನು ವಿಜೃಂಭಿಸುವ, ಥ್ರಿಲ್ಲಿಂಗ್ ಅನುಭವ ನೀಡುವ ಶೈಲಿ ಹಾಗೂ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಉತ್ಸಾಹಭರಿತ ಸಂಗೀತ ನೀಡುವ ರೋಮಾಂಚನ. ಎರಡನೆಯದು ನಮ್ಮನ್ನು ನಾವೇ ವೈಭವೀಕರಿಸಿಕೊಂಡು ಮನಸ್ಸನ್ನು ತೃಪ್ತಗೊಳಿಸಿಕೊಳ್ಳುವ (ಕಥಾರ್ಸಿಸ್) ಭಾವ.

ಭಾರತದಲ್ಲಿ ಬಾಲಿವುಡ್ ದೀರ್ಘಕಾಲದಿಂದ ರಾಜಕೀಯವಾಗಿ ತಟಸ್ಥವಾಗಿದ್ದರೂ ದೇಶಭಕ್ತಿಯ ಭಾವವನ್ನು ಉದ್ದೀಪನಗೊಳಿಸುವಂತಹ ಚಿತ್ರಗಳು ಸಾಕಷ್ಟು ನಿರ್ಮಾಣವಾಗುತ್ತಿದ್ದವು.  ನರೇಂದ್ರ ಮೋದಿ ಪ್ರಧಾನಿಯಾದ ನಂತರದ ಮೊದಲ ಅವಧಿಯಲ್ಲಿ ಸಾಮಾನ್ಯ ಪ್ರೇಮಕಥೆಗಳು ಮತ್ತು ಹಾಸ್ಯಚಿತ್ರಗಳು ಬಾಲಿವುಡ್‌ನಲ್ಲಿ ಹೆಚ್ಚಾಗಿ ನಿರ್ಮಾಣವಾಗುತ್ತಿದ್ದವು. ೨೦೨೦ರ ನಂತರ ಬಾಲಿವುಡ್ ಅಂದರೆ ಮಾದಕ ವಸ್ತು ತಾಂಡವವಾಡುವ ಹಾಗೂ ಅನೈತಿಕ ಜೀವನಶೈಲಿ ನಡೆಸುವ ಶ್ರೀಮಂತರು,  ಸೆಲೆಬ್ರಿಟಿಗಳ ನೆಲೆ ಎಂದು ವ್ಯವಸ್ಥಿತವಾಗಿ ಚಿತ್ರಿಸುವ ಅಭಿಯಾನ ಆರಂಭವಾಯಿತು. ಈ ಅಭಿಯಾನ ಬಾಲಿವುಡ್ ಜನರಲ್ಲಿ ಭೀತಿ ಸೃಷ್ಟಿಸಿತು.  ಇಲ್ಲಿ ಯಾರೂ ಸುರಕ್ಷಿತರಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಯಿತು. ಆ ನಂತರ ಬಾಲಿವುಡ್ ನಿಧಾನಕ್ಕೆ ಪ್ರೊಪಗಂಡಾ (ಪ್ರಚಾರ) ಸಿನಿಮಾಗಳತ್ತ ಮುಖ ಮಾಡಿತು.

The Kashmir Files”ಎಂಬ ಚಿತ್ರ ಕಾಶ್ಮೀರದಿಂದ ಹಿಂದೂಗಳ ಪಲಾಯನ ಕುರಿತು ಚಿತ್ರಿಸಿತು; “”The Kerala Story”  ಚಿತ್ರದಲ್ಲಿ ಹಿಂದೂ ಹುಡುಗಿಯರನ್ನು ಮುಸ್ಲಿಂ ಪುರುಷರು ಮೋಸದಿಂದ ಮತಾಂತರ ಮಾಡುತ್ತಾರೆ ಎಂಬ ಕಥೆಯನ್ನು ತೋರಿಸಲಾಯಿತು. ಇವುಗಳ ಹೊರತಾಗಿ ಇನ್ನೂ ಹಲವಾರು ಚಿತ್ರಗಳು ವಿಫಲವಾದವು. ಉದಾಹರಣೆಗೆ,  ತಾಜ್ ಮಹಲ್ ಒಂದು ಹಿಂದೂ ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳುವ ಸಿನಿಮಾ.

‘ದುರಂಧರ್’ ಸರಣಿ ಸಿನಿಮಾಗಳು ಈ ಎಲ್ಲ ಪ್ರಚಾರದುದ್ದೇಶದ ಸಿನಿಮಾಗಳಿಗಿಂತ ವಿಭಿನ್ನವಾಗಿವೆ. ಸಾಮಾನ್ಯವಾಗಿ ಜಿಂಗೋಯಿ ಸ್ಟಿಕ್ ಬಾಲಿವುಡ್ ಚಿತ್ರಗಳಲ್ಲಿ ಪಾಕಿಸ್ತಾನವೇ ಮುಖ್ಯ ಶತ್ರು.  ಆದರೆ ‘ದುರಂಧರ್’ನಲ್ಲಿ  ಶತ್ರುಗಳು ಪಾಕಿಸ್ತಾನಿಗಳು ಮಾತ್ರವಲ್ಲ, ಎಲ್ಲೆಡೆ ಇದ್ದಾರೆ ಎಂದು ಬಿಂಬಿಸಲಾಗಿದೆ.  ಭಾರತದ ವಿರೋಧ ಪಕ್ಷಗಳು, ಮುಸ್ಲಿಂ ಮಾಂಸ ವ್ಯಾಪಾರಿಗಳು, ಸಿಖ್ ವಿಭಜನೆವಾದಿಗಳು, ಎನ್‌ಜಿಒಗಳು ಮತ್ತು ಎಡಪಂಥೀಯರು ಎಲ್ಲರೂ ಶತ್ರುಗಳು. ಒಂದು ಹಂತದಲ್ಲಿ, ಗುಪ್ತಚರ ಮುಖ್ಯಸ್ಥನು ಭಾರತದ ದುರ್ಬಲತೆಯನ್ನು ಹೇಳುತ್ತಾ, ಪಾಕಿಸ್ತಾನವನ್ನು ಎದುರಿಸಲು ಬಲಿಷ್ಠ ನಾಯಕನಿಗಾಗಿ ನಾವು ಕಾಯಬೇಕು ಎಂದು ಹೇಳುತ್ತಾನೆ.  ಈ ಚಿತ್ರದಲ್ಲಿ ನಿಜವಾದ ನಾಯಕ ಒಬ್ಬನೇ. ಅದು ಗುಪ್ತಚರನಲ್ಲ, ಯೋಧನೂ ಅಲ್ಲ…

ಈ ಚಿತ್ರ ಪ್ರದರ್ಶನದ ವೇಳೆ ದೇಶಭಕ್ತಿಯ ಸಂಭಾಷಣೆಗಳು, ಪಾಕಿಸ್ತಾನಿಗಳನ್ನು ಕೊಲ್ಲುವ ದೃಶ್ಯಗಳು ಅಥವಾ ಭಯೋತ್ಪಾದಕರ ಹತ್ಯೆಯ ದೃಶ್ಯಗಳಿಗಿಂತ ಹೆಚ್ಚಾಗಿ ನರೇಂದ್ರ ಮೋದಿ ಪರದೆಯ ಮೇಲೆ ಕಾಣಿಸಿದಾಗಲೇ ಅತಿ ಹೆಚ್ಚು ಶಿಳ್ಳೆ, ಚಪ್ಪಾಳೆಗಳು ಕೇಳಿಸುತ್ತವೆ.  ಆದರೆ, ‘ದುರಂಧರ್’ನ್ನು ಕೇವಲ ಪ್ರಚಾರಚಿತ್ರ ಎಂದು ಹೇಳಿದರೆ ಒಂದು ಪ್ರಮುಖ ಅಂಶವನ್ನು ಕಡೆಗಣಿಸಿದಂತಾಗುತ್ತದೆ. ಇದು ಪ್ರೇಕ್ಷಕರಿಗೆ ಹೊಸ ವಾಸ್ತವಿಕತೆಯನ್ನು ತೋರಿಸುವ ಮೂಲಕ ಯಶಸ್ಸು ಸಾಽಸಿಲ್ಲ. ಬದಲಾಗಿ,  ವರ್ಷಗಳ ಕಾಲ ಟಿವಿ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮೋದಿ ಪರ ಸಂದೇಶಗಳಿಂದ ರೂಪುಗೊಂಡಿರುವ, ಅನೇಕ ಭಾರತೀಯರು ಈಗಾಗಲೇ ಸತ್ಯ ಎಂದು ನಂಬಿರುವ ವಿಷಯವನ್ನೇ ಆಕರ್ಷಕವಾಗಿ ತೋರಿಸುವ ಮೂಲಕ ಯಶಸ್ಸು ಸಾಽಸಿದೆ. ಅದುವೇ ಚಿತ್ರದ ನಿಜವಾದ ಶಕ್ತಿ.

ಕೃಪೆ: ದಿ ಎಕನಾಮಿಸ್ಟ್

” ಈ ಚಿತ್ರ ಪ್ರದರ್ಶನದ ವೇಳೆ ದೇಶಭಕ್ತಿಯ ಸಂಭಾಷಣೆಗಳು, ಪಾಕಿಸ್ತಾನಿಗಳನ್ನು ಕೊಲ್ಲುವ ದೃಶ್ಯಗಳು ಅಥವಾ ಭಯೋತ್ಪಾದಕರ ಹತ್ಯೆಯ ದೃಶ್ಯಗಳಿಗಿಂತ ಹೆಚ್ಚಾಗಿ ನರೇಂದ್ರ ಮೋದಿ ಪರದೆಯ ಮೇಲೆ ಕಾಣಿಸಿದಾಗಲೇ ಅತಿ ಹೆಚ್ಚು ಶಿಳೆ , ಚಪ್ಪಾಳೆಗಳು ಕೇಳಿಸುತ ವೆ. ಆದರೆ, ‘ದುರಂಧರ್’ನ್ನು ಕೇವಲ ಪ್ರಚಾರಚಿತ್ರ ಎಂದು ಹೇಳಿದರೆ ಒಂದು ಪ್ರಮುಖ ಅಂಶವನ್ನು ಕಡೆಗಣಿಸಿದಂತಾಗುತ್ತದೆ.”

” ‘ದುರಂಧರ್’ ಸರಣಿಯ ಮೊದಲ ಚಿತ್ರದಲ್ಲಿ ಪಾಕಿಸ್ತಾನದ ದೊಡ್ಡ ನಗರ ಕರಾಚಿಯ ಅಪರಾಧ ಜಗತ್ತಿನೊಳಗೆ ಸೇರಿಕೊಳ್ಳುವಂತೆ ಒಬ್ಬ ಸೀಕ್ರೆಟ್ ಏಜೆಂಟ್ (ಗುಪ್ತಚರ)ನನ್ನು ಭಾರತ ಸರ್ಕಾರ ಕಳುಹಿಸುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಹೊರ್ಮುಜ್‌ ಜಲಸಂಧಿಯಿಂದ ನುಗ್ಗಿಬಂದ ಅಮೆರಿಕದ ಯುದ್ಧನೌಕೆಗಳು : ಇರಾನ್‌ನಿಂದ ದಾಳಿ

ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮೂರು ಯುದ್ಧನೌಕೆಗಳ ಮೇಲೆ ಇರಾನ್ ಕ್ಷಿಪಣಿ, ಡ್ರೋನ್ ಮತ್ತು ಸಣ್ಣ ದೋಣಿಗಳ ಮೂಲಕ…

41 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ದೇಶದ ಪ್ರವಾಸೋದ್ಯಮವೂ, ಚಲನಚಿತ್ರ ಪ್ರವಾಸೋದ್ಯಮವೂ

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಅವರ ಈ ಪ್ರವಾಸದ ಹಿಂದೆ ತಮ್ಮ ರಾಜ್ಯದ ಪ್ರವಾಸೋದ್ಯಮವನ್ನು…

2 hours ago

ವೈಭವದ ವಸಂತ ಮಹಲ್‌ಗೆ ಬೇಕಿದೆ ಕಾಯಕಲ್ಪ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಗರಿಮೆಯ ಕಿರೀಟದಂತಿರುವ, ಅಚ್ಚ ಹಸಿರಿನ ನಡುವಿನ ೧೮೩ ವರ್ಷಗಳ ಇತಿಹಾಸವಿರುವ ಅರಮ ನೆಯೊಂದು…

4 hours ago

ವಿರಾಜಪೇಟೆ | ಅವಘಡಕ್ಕಾಗಿ ಕಾಯುತ್ತಿದೆ ಮಾರುಕಟ್ಟೆ ಹಳೇ ಕಟ್ಟಡ..!

ಕುಸಿಯುವ ಹಂತದಲ್ಲಿದ್ದರೂ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ; ಸೂಕ್ತ ಕ್ರಮಕ್ಕೆ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ : ಪಟ್ಟಣದ ಖಾಸಗಿ…

4 hours ago

ಗುಂಡ್ಲುಪೇಟೆ | ಶಿಥಿಲಗೊಂಡಿರುವ ಅಂಗನವಾಡಿ, ಶಾಲೆ ಕಟ್ಟಡಗಳು

ಗುಂಡ್ಲುಪೇಟೆ ತಾಲ್ಲೂಕಿನ ಕೆಲ ಗ್ರಾಮಗಳ ಅಂಗನವಾಡು, ಶಾಲೆಗಳಲ್ಲಿ ಮೇಲ್ಚಾವಣೆ ಸೋರಿಕೆ ಗುಂಡ್ಲುಪೇಟೆ : ತಾಲ್ಲೂಕಿನ ಸೋಮಹಳ್ಳಿ ಗ್ರಾಮದ ಎರಡನೇ ಅಂಗನವಾಡಿಯ…

4 hours ago

ನಂಜನಗೂಡು ನಗರಸಭೆ ವಾರ್ಡ್ ವಿಂಗಡಣೆ ; ಒಂದರಲ್ಲಿ ಸಾವಿರ ; ಮತ್ತೊಂದರಲ್ಲಿ 6 ಸಾವಿರ ಜನ

ಅವೈಜ್ಞಾನಿಕ ಜನಸಂಖ್ಯೆ ವಿಂಗಡಣೆ ಬಗ್ಗೆ ಸಾರ್ವಜನಿಕರ ಆಕ್ಷೇಪ ಎಸ್. ಎಸ್. ಭಟ್ ನಂಜನಗೂಡು : ನಗರದಲ್ಲಿ ೧,೦೨೩ ಜನರಿಗೆ ಒಂದು…

4 hours ago