Andolana originals

ರಸ್ತೆಯಲ್ಲಿ ಸಿಕ್ಕ ಮಗು ; ದತ್ತು ಪಡೆಯಲು ಸಹೃದಯರ ಸಾಲು

ಹತ್ತಕ್ಕು ಹೆಚ್ಚು ಕುಟುಂಬಗಳಿಂದ ಮಗುವನ್ನು ದತ್ತು ಪಡೆಯಲು ಕೋರಿಕೆ

ಚಾಮರಾಜನಗರ: ಹೆತ್ತವರಿಗೆ ಬೇಡ ವಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ನವಜಾತ ಶಿಶುವಿಗೆ ಬದುಕು ನೀಡಲು ಹಲವು ಕುಟುಂಬಗಳು ಉತ್ಸುಕವಾಗಿವೆ. ಮಗು ವನ್ನು ನಮಗೆ ದತ್ತು ನೀಡಿ ನಾವು ಸಾಕಿ, ಸಲಹಿ ನಮ್ಮ ಮನೆ ಮಗುವನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ಹಲವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೊರೆ ಹೋಗಿದ್ದಾರೆ.

ತಾಲ್ಲೂಕಿನ ಸಾಗಡೆ-ತಮ್ಮಡಹಳ್ಳಿ ಸಂಪರ್ಕ ರಸ್ತೆ ಬದಿಯಲ್ಲಿ ಜು. ೧೯ರಂದು ನವಜಾತ ಹೆಣ್ಣು ಶಿಶು ಪತ್ತೆಯಾಯಿತು. ಮಕ್ಕಳಿಲ್ಲದ ೧೦ಕ್ಕೂ ಹೆಚ್ಚು ವಿವಿಧ ಕುಟುಂಬಗಳ ಸದಸ್ಯರು ಈ ಹೆಣ್ಣು ಮಗುವನ್ನು ದತ್ತು ಪಡೆದುಕೊಳ್ಳಲು ಆಸಕ್ತಿ ತೋರಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಇನ್ನೂ ಕೆಲವು ದಂಪತಿಗಳ ಘಟಕದ ಸಿಬ್ಬಂದಿಯನ್ನು ನೇರವಾಗಿ ಭೇಟಿ ಮಾಡಿ ದತ್ತು ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಸದ್ಯ ಮಗು ನಗರದ ಜಿಲ್ಲಾಸ್ಪತ್ರೆಯ ಮಕ್ಕಳ ಆರೈಕೆ ಕೇಂದ್ರದಲ್ಲಿದ್ದು ಮಕ್ಕಳ ತಜ್ಞ ವೈದ್ಯರು, ಶುಶ್ರೂಷಕರು, ರಕ್ಷಣಾ ಘಟಕದ ಸಿಬ್ಬಂದಿ ನಿಗಾದಲ್ಲಿದೆ. ನವಜಾತ ಶಿಶು ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಮಕ್ಕಳಿಲ್ಲದ ದಂಪತಿ ಆ ಮಗುವನ್ನು ದತ್ತು ಸ್ವೀಕರಿಸಲು ಮುಂದಾಗಿದ್ದಾರೆ.

2 ತಿಂಗಳು ಘಟಕದ ವಶದಲ್ಲಿ: ಮಗುವನ್ನು ಈಗಲೇ ದತ್ತು ನೀಡಲು ಮಕ್ಕಳ ರಕ್ಷಣಾ ಘಟಕ ನಿರಾಕರಿಸಿದೆ. ಮಗು ಕನಿಷ್ಠ ೬೦ ದಿನಗಳ ಕಾಲ ಘಟಕದ ವಶದಲ್ಲಿರಬೇಕು. ಅಲ್ಲಿಯ ತನಕ ಪೋಷಕರ ಪತ್ತೆ ಕಾರ್ಯ ನಡೆಸಲಾಗುವುದು. ಸಂಬಂಧಪಟ್ಟ ಪೋಷಕರು ಯಾರು ಮಗುವನ್ನು ಪಡೆಯದೆ ಹೋದರೆ ಕಾನೂನು ಪ್ರಕಾರ ಮಾನದಂಡಗಳನ್ನು ಅನುಸರಿಸಿ ದತ್ತು ನೀಡಲಾಗುವುದು ಎಂದು ಘಟಕದ ಸಿಬ್ಬಂದಿ ತಿಳಿಸಿದ್ದಾರೆ.

ಮಗುವಿನ ನೈಜ ಪೋಷಕರು ಮುಂದೆ ಬರದಿದ್ದರೆ ನಂತರ ಮಗುವನ್ನು ಕೊಳ್ಳೇಗಾಲ ಪಟ್ಟಣದಲ್ಲಿರುವ ಜೀವನ ಜ್ಯೋತಿ ದತ್ತು ಸಂಸ್ಥೆಯ ವಶಕ್ಕೆ ನೀಡಲಾಗುವುದು. ಅಲ್ಲಿನ ಸಿಬ್ಬಂದಿ ಮಗುವಿನ ಆರೈಕೆ, ಪಾಲನೆ ಮಾಡಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ದತ್ತು ಸ್ವೀಕಾರ ಕಾನೂನಿನ ಷರತ್ತುಗಳನ್ನು ಪೂರೈಸಿದವರಿಗೆ ಮಗುವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.

ಕಾರಾ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಅವಶ್ಯ: ಮಗುವನ್ನು ದತ್ತು ಪಡೆಯಬೇಕಾದರೆ ‘ಕಾರಾ’ ಎಂಬ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಮಗುವನ್ನು ದತ್ತು ನೀಡಲು ಅವಕಾಶವಿದ್ದರೆ ಅರ್ಜಿ ಸಲ್ಲಿಸಿದವರನ್ನು ಕರೆಸಿ ದತ್ತು ಸ್ವೀಕಾರ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ದತ್ತು ಪಡೆಯಲು ಇರುವ ಷರತ್ತುಗಳನ್ನು ಪೂರೈಸಿದರೆ ಮಾತ್ರ ಮಗುವನ್ನು ನೀಡಲಾಗು ತ್ತದೆ. ಅನಾಥ ಹಾಗೂ ಪಾಲಕರಿಂದ ತಿರಸ್ಕರಿ ಸಲ್ಪಟ್ಟ ಮಕ್ಕಳಿಗೆ ದತ್ತು ಸ್ವೀಕಾರ ಕಾರ್ಯಕ್ರಮ ದಡಿ ಹೊರ ರಾಜ್ಯ, ವಿದೇಶಗಳಲ್ಲಿ ಹೊಸ ಬದುಕು ಸಿಕ್ಕಿದೆ. ಮಕ್ಕಳಿಲ್ಲದ ಅನಿವಾಸಿ ಭಾರತೀಯರು ಅಮೆರಿಕ, ಆಸ್ಟ್ರೇಲಿಯಾ, ಇಟಲಿಗೂ ಮಕ್ಕಳನ್ನು ದತ್ತು ಪಡೆದುಕೊಂಡು ಹೋಗಿದ್ದಾರೆ. ೨೦೨೩-೨೪ನೇ ಸಾಲಿನಲ್ಲಿ ೨, ೨೦೨೪-೨೫ನೇ ಸಾಲಿನಲ್ಲಿ ೪, ೨೦೨೫ರಲ್ಲಿ ಇಬ್ಬರು ಮಕ್ಕಳನ್ನು ಪಾಲಕರು ಆಸ್ಪತ್ರೆಗಳಿಗೆ ನೀಡಿದ್ದಾರೆ. ಇಂತಹ ಮಕ್ಕಳು ಮಕ್ಕಳಿಲ್ಲದ ದಂಪತಿಯ ಮಡಿಲು ಸೇರಿ ಬೆಳೆಯುತ್ತಿದ್ದಾರೆ ಎಂದು ಮಕ್ಕಳ ಘಟಕದ ಸಿಬ್ಬಂದಿ ತಿಳಿಸಿದ್ದಾರೆ.

– ಪ್ರಸಾದ್ ಲಕ್ಕೂರು

ಆಂದೋಲನ ಡೆಸ್ಕ್

Recent Posts

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

2 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

3 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

3 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

3 hours ago

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…

4 hours ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

5 hours ago