ಕೆ.ಬಿ. ರಮೇಶನಾಯಕ
ಮೈಸೂರು: ಬರಗಾಲ, ಕಾವೇರಿ ವಿವಾದವನ್ನು ಸಮರ್ಥವಾಗಿ ಎದುರಿಸಿದರೂ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಎರಡು ದುರಂತ ಘಟನೆಗಳು ಎಸ್. ಎಂ. ಕೃಷ್ಣ ಅವರ ಬದುಕಿನಲ್ಲಿ ಎಂದಿಗೂ ಮರೆಯಲಾಗದಂತಾಗಿತ್ತು. ಎಸ್. ಎಂ. ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ನರಹಂತಕ ವೀರಪ್ಪನ್ ನಿಂದ ನಡೆದ ವರನಟ ಡಾ. ರಾಜಕುಮಾರ್ ಅಪಹರಣ, ಮಾಜಿ ಸಚಿವ ಎಚ್. ನಾಗಪ್ಪ ಅಪಹರಣ ಮತ್ತು ಹತ್ಯೆ ಪ್ರಕರಣ ಕೊನೆಯವರೆಗೂ ಮಾಸದ ರೀತಿಯಲ್ಲಿ ನೋವನ್ನುಂಟು ಮಾಡಿತು. ಬಹುಶಃ ಈ ಎರಡು ದುರಂತಗಳು ಅವರ ಪಾಲಿಗೆ ಸದಾ ದುಃಸ್ವಪ್ನವಾಗಿ ಕಾಡುತ್ತಿದ್ದವು ಎನ್ನಬಹುದು.
೧೯೯೨ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿ ಮುಂಚೂಣಿಯಲ್ಲಿದ್ದರು. ತಮ್ಮ ಹೆಸರನ್ನು ಹೈಕಮಾಂಡ್ ಘೋಷಿಸಲಿದೆ ಎನ್ನುವ ನಿರೀಕ್ಷೆಯಿಂದ ಮನೆದೇವರು ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಬೆಂಗಳೂರಿಗೆ ಹಿಂತಿರುಗುವ ಹೊತ್ತಿಗೆ ಸಿಎಂ ಸ್ಥಾನ ಎಂ. ವೀರಪ್ಪ ಮೊಯ್ಲಿ ಪಾಲಾಗಿತ್ತು. ಕೃಷ್ಣ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.
ನಂತರ ೧೯೯೯ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೃಷ್ಣ ಅವರು ಮುಖ್ಯಮಂತ್ರಿ ಗದ್ದುಗೆಯನ್ನು ಅಲಂಕರಿಸಿದಾಗ ತಮ್ಮ ಸರ್ಕಾರದ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಅಕ್ಷರದಾಸೋಹ ಕಾರ್ಯಕ್ರಮವನ್ನು ಚಾ. ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಿಂದಲೇ ಜಾರಿಗೆ ತರುವ ಮೂಲಕ ಹೊಸ ಹೆಜ್ಜೆಯನ್ನಿಟ್ಟರು. ಈ ಯೋಜನೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಂತೆ ಮಾಡಿತು. ಈ ಕಾರ್ಯಕ್ರಮಕ್ಕೆ ಎಐಸಿಸಿ ನಾಯಕಿ ಸೋನಿಯಾ ಗಾಂಽ ಅವರೇ ಆಗಮಿಸಿದ್ದರು. ೨೦೦೨ರ ಜ. ೧೦ರಂದು ಬಿಳಿಗಿರಿರಂಗನ ಬೆಟ್ಟದಲ್ಲಿ ಗಿರಿಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಮತ್ತು ಅರಣ್ಯ ಹಕ್ಕು ಕಾಯ್ದೆಗಳನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲು ಮಿನಿ ಸಚಿವ ಸಂಪುಟ ಸಭೆ ನಡೆಸಿ ದೇಶದ ಗಮನ ಸೆಳೆದಿದ್ದರು.
ಕಾವೇರಿ ವಿವಾದ, ಬರಗಾಲದ ಸಂಕಷ್ಟದ ನಡುವೆ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದ ಎಸ್. ಎಂ. ಕೃಷ್ಣ ಅವರ ಕಾಲದಲ್ಲಿ ವರನಟ ಡಾ. ರಾಜ್ ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿ ಸಿದ್ದು ದೊಡ್ಡ ಸಂಕಷ್ಟಕ್ಕೀಡಾಗಿತ್ತು. ಡಾ. ರಾಜ್ ಬಿಡು ಗಡೆಗೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗಿದ್ದರಿಂದಾಗಿ ತಮಿಳುನಾಡು ಸರ್ಕಾರದ ಮೂಲಕ ಮಾತುಕತೆ ನಡೆಸಿ ನಕ್ಕೀರನ್ ಗೋಪಾಲ್, ಶಿವಸುಬ್ರಹ್ಮಣ್ಯಂ ಅವರ ಮೂಲಕ ಸಂಧಾನದ ಮಾತುಕತೆ ನಡೆಸಿತ್ತು. ವೀರಪ್ಪನ್ ಇಟ್ಟ ಬೇಡಿಕೆಯನ್ನು ಮನ್ನಿಸದೆ ಸಂಧಾನಕಾರರ ಮೂಲಕವೇ ಸುರಕ್ಷಿತವಾಗಿ ಡಾ. ರಾಜ್ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದರು.
ಇದಾದ ಕೆಲವೇ ದಿನಗಳಲ್ಲಿ ವೀರಪ್ಪನ್ ಮಾಜಿ ಸಚಿವ ಎಚ್. ನಾಗಪ್ಪ ಅವರನ್ನು ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ನಿವಾಸದಿಂದ ಅಪಹರಣ ಮಾಡಿದ್ದ. ನಾಗಪ್ಪ ಜನತಾದಳದ ಪ್ರಬಲನಾಯಕರಾಗಿ ದ್ದರಿಂದ ಅವರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಎಷ್ಟೇ ಯತ್ನಿಸಿದರೂ ವೀರಪ್ಪನ್ ವಕ್ರದೃಷ್ಟಿಗೆ ನಾಗಪ್ಪ ಬಲಿಯಾಗಬೇಕಾಯಿತು. ಹತ್ಯೆಗೀಡಾದ ನಾಗಪ್ಪ ಅವರ ಮೃತದೇಹವನ್ನು ಕಾಡಿನಿಂದ ತರುವಾಗ ರೊಚ್ಚಿಗೆದ್ದ ಅಭಿಮಾನಿಗಳು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಿಂಸಾತ್ಮಕರೂಪಕ್ಕೆ ತಿರುಗಿತ್ತು. ನಂತರ, ಸರ್ಕಾರ ಅಭಿಮಾನಿಗಳನ್ನು ಸಮಾಧಾನಪಡಿಸಿ ನಾಗಪ್ಪ ಅವರ ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವಂತೆ ನೋಡಿಕೊಂಡಿತ್ತು.
ಚಾ. ನಗರ ಜಿಲ್ಲಾಡಳಿತ ಭವನ ನಿರ್ಮಾಣ ಚಾಮರಾಜನಗರಕ್ಕೆ ಕಾಲಿಡದೆ ಇದ್ದರೂ ಜಿಲ್ಲೆಯ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದರು. ನಂಜನ ಗೂಡು ಎಂ. ಮಹದೇವ್ ಅವರಿಗೆ ಮಂತ್ರಿ ಸ್ಥಾನ ನೀಡಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ನ್ನಾಗಿ ಮಾಡಿದ್ದರು. ಈ ವೇಳೆ ಜಿ. ರಾಜೂಗೌಡರಿಗೆ ಸಚಿವ ಸ್ಥಾನ ನೀಡದೆ ಕರ್ನಾಟಕ ನಗರ ಮೂಲ ಸೌಕರ್ಯ ಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈ ವೇಳೆ ಜಿಲ್ಲಾಡಳಿತ ಭವನದ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಅವರ ಅವಽಯಲ್ಲಿ ತಲೆ ಎತ್ತಿದ ಕಟ್ಟಡದಲ್ಲಿ ಇಂದು ಸರ್ಕಾರದ ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…