Andolana originals

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಕರ್ನಾಟಕದ ಮೇಲೆ ಬಿಜೆಪಿಯ ರಾಷ್ಟ್ರೀಯ ನಾಯಕರ ಕಣ್ಣು

ದಕ್ಷಿಣದ ರಾಜ್ಯಗಳಲ್ಲಿ ತನ್ನ ಪಾರುಪತ್ಯ ಭದ್ರಗೊಳಿಸಲು ಬಿಜೆಪಿಗೆ ಕರ್ನಾಟಕ ಅವಶ್ಯ

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಪಶ್ಚಿಮ ಬಂಗಾಳದ ಅಧಿಕಾರ ಸೂತ್ರವನ್ನು ಹಿಡಿದ ನಂತರ ಬಿಜೆಪಿಯ ಕೇಂದ್ರ ನಾಯಕರಿಗೆ ಕರ್ನಾಟಕ ಮುಂದಿನ ಟಾರ್ಗೆಟ್ ಎಂಬುದು ಸಹಜ. ಅಂದ ಹಾಗೆ ಕರ್ನಾಟಕವೇನೂ ಪಶ್ಚಿಮ ಬಂಗಾಳವಲ್ಲ. ಏಕೆಂದರೆ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಅದು ಹಲವು ವರ್ಷಗಳ ಕಾಲ ಸರ್ಕಸ್ ಮಾಡಬೇಕಾಯಿತು.

ಎಲ್ಲಕ್ಕಿಂತ ಮುಖ್ಯವಾಗಿ ಮೊದಲು ಪಶ್ಚಿಮ ಬಂಗಾಳದ ನೆಲದಲ್ಲಿ ತನ್ನ ನೆಲೆಯನ್ನು ಸ್ಥಾಪಿಸುವ ಅನಿವಾರ್ಯತೆ ಅದಕ್ಕಿತ್ತು. ಆನಂತರ ಇಂತಹ ನೆಲೆಗೆ ಪುಷ್ಟಿ ತುಂಬಲು ಹೆಣಗಾಡುವ ಅನಿವಾರ್ಯತೆ ಇತ್ತು. ಹೀಗಾಗಿ ಶುರುವಿನಲ್ಲಿ ನೆಲೆ ಕಂಡುಕೊಂಡ ಬಿಜೆಪಿ ನಂತರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸಮರ್ಥವಾಗಿ ಎದುರಿಸಿತು. ಕುತೂಹಲದ ಸಂಗತಿ ಎಂದರೆ ಮಮತ ಬ್ಯಾನರ್ಜಿ ಅವರನ್ನು ಬಿಜೆಪಿ ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದ್ದು ಕಮ್ಯೂನಿಸ ರ ಪಲ್ಲಟದಿಂದ, ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ಕಮ್ಯೂನಿಸ್ಟ್ ಪಕ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ನಂತರ ಎಷ್ಟು ಬಸವಳಿಯುತ್ತಾ ಹೋಯಿತೆಂದರೆ ಅದಕೆ ಸ್ವ ಯಂ ಆಗಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಸಾಧ್ಯವೇ ಆಗಲಿಲ್ಲ. ಒಂದು ಕಾಲದಲ್ಲಿ ಜ್ಯೋತಿ ಬಸು, ಬುದ್ಧ ದೇವ ಭಟ್ಟಾಚಾರ್ಯ ಸೇರಿದಂತೆ ಘಟಾನುಘಟಿ ನಾಯಕರನ್ನು ಕಂಡಿದ ಕಮ್ಯೂನಿಸ್ಟರು ಕೊನೆ ಕೊನೆಗೆ ಮಮತಾ ಬ್ಯಾನರ್ಜಿ ಅವರ ಹೊಡೆತವನ್ನು ತಡೆದುಕೊಳ್ಳಲಾಗದೆ ಅಸಹಾಯಕರಾದರು. ಅವರ ಇಂತಹ ಅಸಹಾಯಕತೆಯನೆ ಬಳಸಿಕೊಂಡ ಬಿಜೆಪಿ ನಾಯಕರು ಕಮ್ಯೂನಿಸ್ಟ್ ಮತದಾರರು ದೊಡ ಮಟ್ಟದಲ್ಲಿ ಬಿಜೆಪಿ ಕಡೆ ವಾಲುವಂತೆ ನೋಡಿಕೊಂಡರು. ಮತ್ತು ಈ ಮತದಾರರಿಗೂ ಮಮತಾ ಬ್ಯಾನರ್ಜಿ ಅವರನ್ನು ಎದುರಿಸಬಲ್ಲಂತಹ ಪಕ್ಷದ ಅಗತ್ಯವಿತ್ತು.

ಅವರ ಈ ಅಗತ್ಯಕ್ಕೂ, ಬಿಜೆಪಿಯ ಅಗತ್ಯಕ್ಕೂ ತಾಳೆ ಹೊಂದಿದಷ್ಟೆ ಅಲ್ಲ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ ಮಟ್ಟದಲ್ಲಿ ಗೆಲುವು ಗಳಿಸಿತು ಮತ್ತು ಇಂತಹ ಗೆಲುವು ತನಗೆ ಪಶ್ಚಿಮ ಬಂಗಾಳದಲ್ಲಿ ಸುಭದ್ರ ನೆಲೆ ಒದಗಿಸಿತು ಎಂದು ಭಾವಿಸಿದ್ದರು.

ಆದರೆ ೨೦೨೧ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಳೆಯ ಮ್ಯಾಜಿಕ್‌ಅನ್ನು ಪುನರಾವರ್ತನೆ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಮಮತಾ ಬ್ಯಾನರ್ಜಿ ಉರುಳಿಸಿದ ದಾಳಕೆ ಅದು ಮಂಕಾಗಬೇಕಾಯಿತು.

ಆದರೆ ಈ ಸಲ ಹಾಗಾಗಲಿಲ್ಲ. ಏಕೆಂದರೆ ಪಶ್ಚಿಮ ಬಂಗಾಳದ ನೆಲೆಯಲ್ಲಿ ಆರ್. ಎಸ್. ಎಸ್. ರಂಗಪ್ರವೇಶ ಮಾಡಿತು ಮತ್ತು ಅದು ಪಶ್ಚಿಮ ಬಂಗಾಳದ ಮತದಾರರ ಮೇಲೆ ಬೀರಿದ ಪ್ರಭಾವ ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಯಿತೆಂದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಅಂತರದ ಗೆಲುವು ಗಳಿಸಿತು. ಅದರ ಗೆಲುವಿನಲ್ಲಿ ಎಸ್. ಐ. ಆರ್. ಪಾತ್ರ ದೊಡ್ಡದು ಎಂಬುದು ಆರೋಪವಾದರೂ ಬಿಜೆಪಿಯ ಇವತ್ತಿನ ಗೆಲುವಿನಲ್ಲಿ ಆರ್. ಎಸ್. ಎಸ್. ಮಾಡಿದ ಗ್ರೌಂಡ್ ವರ್ಕ್ ಕಾರಣ ಎಂಬುದೂ ಅಷ್ಟೇ ನಿಜ.

ಯಾವಾಗ ಪಶ್ಚಿಮ ಬಂಗಾಳ ಬಿಜೆಪಿಯ ವಶವಾಯಿತೋ ಇದಾದ ನಂತರ ಆರ್. ಎಸ್. ಎಸ್. ಕರ್ನಾಟಕದ ಕಡೆ ಗಮನಹರಿಸಿದೆ. ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಆರ್. ಎಸ್. ಎಸ್. ರೂಪಿಸುವ ಕಾರ್ಯತಂತ್ರಗಳು ಬಿಜೆಪಿಗೆ ಎಷ್ಟರ ಮಟ್ಟಿಗೆ ಬಲ ನೀಡುತ್ತಿವೆ ಎಂದರೆ ಇಂತಹ ಬಲದ ಆಧಾರದ ಮೇಲೆ ಅದು ನೆಲೆಯಿಲ್ಲದ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿದೆ. ಅದು ಲಾಲೂಪ್ರಸಾದ್ ಯಾದವ್, ನಿತೀಶ್ ಕುಮಾರ್ ಅವರ ಪ್ರಭಾವವಿದ ಬಿಹಾರವೇ ಇರಬಹುದು, ಬಿಜು ಪಟ್ನಾಯಕ್ ಮತ್ತು ನಂತರ ನವೀನ್ ಪಟ್ನಾಯಕ್ ಅವರ ಹಿಡಿತದಲ್ಲಿದ ಒಡಿಶಾ ರಾಜ್ಯವೇ ಇರಬಹುದು, ಹೀಗೆ ಒಂದರ ಹಿಂದೊಂದರಂತೆ ನೆಲೆ ಇಲ್ಲದ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿರುವ ಬಿಜೆಪಿ ಈಗ ದ್ರಾವಿಡ ಪಕ್ಷಗಳ ಹಿಡಿತವಿದ್ದ ತಮಿಳುನಾಡಿನಲ್ಲಿ ಆರಂಗೇಟ್ರಂ ಮಾಡಿದೆ. ಕಮ್ಯೂನಿಸ್ಟರ ಪ್ರಭಾವ ದಟ್ಟವಾಗಿದ ಕೇರಳಂನಲ್ಲಿ ರಂಗಪ್ರವೇಶ ಮಾಡಿದೆ. ಹೀಗೆ ಒಂದು ಕಡೆಯಿಂದ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ ಬರುತ್ತಿರುವ ಬಿಜೆಪಿಗೆ ಈಗ ಕರ್ನಾಟಕ ಏಕೆ ಮಹತ್ವದೆಂದರೆ ದಕ್ಷಿಣದ ರಾಜ್ಯಗಳಲ್ಲಿ ಅದು ತನ್ನ ಪಾರುಪತ್ಯವನ್ನು ಭದ್ರಗೊಳಿಸಿಕೊಳ್ಳಲು ಕರ್ನಾಟಕ ಅದಕ್ಕೆ ಅವಶ್ಯ. ಅಂದ ಹಾಗೆ ಕರ್ನಾಟಕದಲ್ಲಿ ಅದು ಪಶ್ಚಿಮ ಬಂಗಾಳ, ಬಿಹಾರ, ಒಡಿಶಾದಲ್ಲಿ ಹೂಡಿದ ಶ್ರಮವನ್ನು ಹೂಡಬೇಕಾದ ಅಗತ್ಯವೇನೂ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಹೇಳಿ ಕೇಳಿ ಬಿಜೆಪಿ ಎರಡು ಬಾರಿ ಅಧಿಕಾರದ ಗದ್ದುಗೆ ಹಿಡಿದಿದೆ. ಒಂದು ಬಾರಿ ಜಾ. ದಳದ ಜತೆ ಸೇರಿ ಮೈತ್ರಿಕೂಟ ಸರ್ಕಾರದ ಪಾಲುದಾರನಾಗಿದೆ. ಅದರ ಈ ಸಾಧನೆಗೆ ಯಡಿಯೂರಪ್ಪ ಬಹುಮಟ್ಟಿಗೆ ಕಾರಣ ಎಂಬುದು ನಿಜ. ಆದರೆ ಈಗ ಯಡಿಯೂರಪಪ್ಪ ಅವರ ಬಲವನ್ನಷ್ಟೆ ನೆಚ್ಚಿಕೊಂಡು ಕರ್ನಾಟಕದಲ್ಲಿ ತನ್ನ ನೆಲೆಯನ್ನು ಮರುಸ್ಥಾಪನೆ ಮಾಡಿಕೊಳ್ಳುವುದು ಬಿಜೆಪಿ ವರಿಷ್ಟರ ಇಚ್ಚೆಯಲ್ಲ. ಬದಲಿಗೆ ಒಕ್ಕಲಿಗ ಪಾಳೇಪಟ್ಟಿನ ಶಕ್ತಿ ಎನ್ನಿಸಿಕೊಂಡಿರುವ ಜಾ. ದಳದ ಜತೆಗೂಡಿ ಕರ್ನಾಟಕವನ್ನು ವಶಪಡಿಸಿಕೊಳ್ಳುವುದು ಅದರ ಲೆಕ್ಕಾಚಾರ.

ಗಮನಿಸಬೇಕಾದ ಅಂಶವೆಂದರೆ ಅದರ ಈ ಲೆಕ್ಕಾಚಾರಕ್ಕೆ ಪೂರಕವಾದ ವಾತಾವಣ ಕರ್ನಾಟಕದಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಏಕೆಂದರೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಮುಂದುವರಿದಿದೆ ಮತ್ತು ಈ ಅಂಶವೇ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿದಲ್ಲದೆ ಕಾಂಗ್ರೆಸ್ ಪಕ್ಷದ ಅಂತರ್ಯಕ್ಕೂ ಹೊಡೆತ ನೀಡಿದೆ. ಇನ್ನು ಕೆಲ ದಿನಗಳಲ್ಲಿ ಅದು ಯಾವ ಸ್ವರೂಪ ಪಡೆಯುತ್ತದೆ ಎಂಬುದು ನಿಗೂಢವಾದರೂ,ಅದರ ಫಲಿತಾಂಶ ಏನೇ ಆದರೂ ಅದು ಬಿಜೆಪಿಗೆ ಪ್ಲಸ್ ಆಗಲಿದೆ ಎಂಬುದು ಅಷ್ಟೇ ನಿಜ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದ ನೆಲೆಯಲ್ಲಿ ಆರ್. ಎಸ್. ಎಸ್. ಕಾರ್ಯ ಚಟುವಟಿಕೆಗಳು ಪರಿಣಾಮಕಾರಿಯಾಗಿಯೇ ಆರಂಭವಾಗಿವೆ ಮತ್ತು ಅದು ಮುಂದಿನ ಕೆಲವೇ ದಿನಗಳಲ್ಲಿ ಕರ್ನಾಟಕವನ್ನು ಮರುವಶಪಡಿಸಿಕೊಳ್ಳುವ ಬಿಜೆಪಿಯ ಆಸೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಿವೆ.

ಆಡಳಿತಾರೂಢ ಕಾಂಗ್ರೆಸ್ ಈ ಹಂತದಲ್ಲಾದರೂ ಎಚ್ಚೆತ್ತುಕೊಳ್ಳ ದಿದ್ದರೆ ಪರಿಸ್ಥಿತಿ ಅದರ ಕೈ ಮೀರಲಿದೆ ಮತ್ತು ದಕ್ಷಿಣ ಭಾರತದ ಹೆಬ್ಬಾಗಿಲು ಅನ್ನಿಸಿಕೊಂಡ ಕರ್ನಾಟಕವನ್ನು ಮರು ವಶಮಾಡಿಕೊಳ್ಳುವ ತನ್ನ ಕನಸಿಗೆ ಬಿಜೆಪಿ ಹತ್ತಿರವಾಗಲಿದೆ.

ಆಂದೋಲನ ಡೆಸ್ಕ್

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

3 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

3 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

14 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

14 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

14 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

14 hours ago