ವರ್ತುಲ ರಸ್ತೆಯ ಒಳಗಿರುವ ೩೦ ಬಡಾವಣೆ ನಿವಾಸಿಗಳ ಕೋರಿಕೆ
ಮತದಾನ ಪಾಲಿಕೆಗೆ, ನಿರ್ವಹಣೆ ಮತ್ತೊಂದು ಸಂಸ್ಥೆಗೆ ಬೇಡ
ಹೆಚ್.ಎಸ್.ದಿನೇಶ್ ಕುಮಾರ್
ಮೈಸೂರು: ಬೃಹತ್ ಮೈಸೂರು ರಚನೆ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ನಗರದ ಶ್ರೀರಾಂಪುರ, ವಿಜಯನಗರ ಬಳಿಯ ಸುಮಾರು ೩೦ ಬಡಾವಣೆ ಗಳ ನಿವಾಸಿಗಳು ಆದಷ್ಟು ಬೇಗ ಗ್ರೇಟರ್ ಮೈಸೂರು ರಚನೆಯಾಗಲಿ ಎಂದು ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.
ನಗರದ ವರ್ತುಲ ರಸ್ತೆಯ ಒಳಗಿರುವ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಶ್ರೀರಾಂಪುರ, ವಿಜಯನಗರ ೪ನೇ ಹಂತದ ಸುತ್ತ ಮುತ್ತಲಿನ ಸುಮಾರು ೩೦ ಬಡಾವಣೆಗಳನ್ನು ಪಟ್ಟಣ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿತ್ತು.
ಶ್ರೀರಾಂಪುರ ವ್ಯಾಪ್ತಿಯಲ್ಲಿನ ಮುಡಾ ಅನುಮೋದಿತ ಈ ಬಡಾವಣೆಗಳು ಮೈಸೂರು ನಗರ ಪಾಲಿಕೆಯ ೬೫ನೇ ವಾರ್ಡ್‌ಗೆ ಸೇರಿದ್ದು, ೮೦೦ ಮನೆಗಳು ಹಾಗೂ ೨೦೦ಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ. ಮುಡಾ ವ್ಯಾಪ್ತಿಯಲ್ಲಿನ ಕಂದಾಯ ಬಡಾವಣೆ ೧,೨,೩, ಪ್ರೀತಿ ಲೇಔಟ್, ಮುನಿ ನಾರಾಯಣ ಲೇಔಟ್, ಹಂಸ ಬಡಾವಣೆ, ಶಕ್ತಿ ಬಡಾವಣೆ, ಎಂಸಿಡಿ ಬಡಾವಣೆ, ಭವ್ಯ ಭಾರತ ಬಡಾವಣೆ ಸೇರಿದಂತೆ ೨೨ ಬಡಾವಣೆಗಳನ್ನು ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಳಿಸಲು ಪಟ್ಟಿ ಮಾಡಲಾಗಿದೆ.
ವಿಜಯನಗರ ನಾಲ್ಕನೇ ಹಂತದ ನಿವಾಸಿಗಳು ಹೂಟಗಳ್ಳಿ ನಗರಸಭೆಗೆ ಬಡಾವಣೆ ಹಸ್ತಾಂತರ ಮಾಡುವ ಪ್ರಕ್ರಿಯೆ ವಿರುದ್ಧ ನ್ಯಾಯಾಲಯದ ಮೊರೆ ಹೋದ ಬೆನ್ನಲ್ಲೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳೂ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ನಮ್ಮ ಬಡಾವಣೆಯನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಡಿ, ನಗರಪಾಲಿಕೆ ವ್ಯಾಪ್ತಿಗೆ ಸೇರಿಸಿ ಎಂದು ಮನವಿ ಮಾಡಿದ್ದಾರೆ. ನಾವು ಸವಲತ್ತುಗಳನ್ನುಪಡೆಯುತ್ತಿರುವುದು ನಗರಪಾಲಿಕೆಯಿಂದ, ಮತದಾನ ಮಾಡುತ್ತಿರುವುದೂ ಕೂಡ ನಗರಪಾಲಿಕೆಯ ವಾರ್ಡ್ ಸಂಖ್ಯೆ ೬೫ರ ವ್ಯಾಪ್ತಿಗೆ. ಹೀಗಿರುವಾಗ ನಮ್ಮ ಬಡಾವಣೆಗಳನ್ನು ನಗರಪಾಲಿಕೆ ವ್ಯಾಪ್ತಿಯಲ್ಲೇ ಏಕೆ ಉಳಿಸಿಕೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಕೆಲ ಬಡಾವಣೆಯವರು ನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ನ್ಯಾಯಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆ ಹಸ್ತಾಂತರ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಹೀಗಾಗಿ ಮುಡಾ ವ್ಯಾಪ್ತಿಯ ೨೨ ಬಡಾವಣೆಗಳ ನಿವಾಸಿಗಳು ಅತಂತ್ರರಾಗಿದ್ದಾರೆ.
ಹಸ್ತಾಂತರ ಪ್ರಕ್ರಿಯೆಯ ಗೊಂದಲದಿಂದಾಗಿ ನಿವೇಶನದಾರರು ಈಗ ಖಾತೆ, ಕಂದಾಯ ಮಾಡಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ, ನಿವೇಶನ ಮಾರಾಟ, ಕೊಳ್ಳಲು ಅಥವಾ ಮನೆ ನಿರ್ಮಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ. ಮತದಾನ ಒಂದು ಕಡೆ, ಬಡಾವಣೆಗಳ ನಿರ್ವಹಣೆ ಮತ್ತೊಂ೦ದು ಕಡೆ ಬೇಡ. ನಾವು ಆಯ್ಕೆಮಾಡಿ ಗೆಲ್ಲಿಸಿದ ನಗರಪಾಲಿಕೆ ಸದಸ್ಯರೇ ಬಡಾವಣೆಗಳ ಮೂಲಸೌಲಭ್ಯ ವನ್ನು ನೀಡಲಿ ಎನ್ನುವ ವಾದವನ್ನು ಬಡಾವಣೆ ನಿವಾಸಿಗಳು ಮುಂದಿಡುತ್ತಿದ್ದಾರೆ.
ಕಂದಾಯ ಪಾವತಿಸಿಲ್ಲ: ಪಟ್ಟಣ ಪಂಚಾಯಿತಿಗಳಲ್ಲಿ ಅನುದಾನದ ಕೊರತೆ ಇದೆ. ಹೀಗಾಗಿ ಯಾವುದೇ ಅಭಿವೃದ್ಧಿ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವುಗಳು ಕಂದಾಯ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ನಿವಾಸಿಗಳು ಕಳೆದ ಒಂದೂವರೆ ವರ್ಷದಿಂದ ಕಂದಾಯ ಪಾವತಿಸಿಲ್ಲ
ಗ್ರೇಟರ್ ಮೈಸೂರಿಂದ ಅಭಿವೃದ್ಧಿ ಸಾಧ್ಯ:
ಇದೀಗ ಗ್ರೇಟರ್ ಮೈಸೂರು ಯೋಜನೆ ವರದಾನವಾಗಿ ಪರಿಣಮಿಸಿದೆ. ಬೃಹತ್ ಮೈಸೂರು ರಚನೆ ಆದಲ್ಲಿ ನಮ್ಮ ಬಡಾವಣೆಗಳು ನಗರಪಾಲಿಕೆ ವ್ಯಾಪ್ತಿಗೆ ಬರಲಿವೆ. ನಂತರ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂಬುದು ವಾದ. ಸಿಎಂ ಸಿದ್ದರಾಮಯ್ಯ ಅವರ ಈ ಆಲೋಚನೆ ಸ್ವಾಗತಾರ್ಹ. ಆದಷ್ಟು ಬೇಗ ಯೋಜನೆ ಜಾರಿಯಾಗುವಂತೆ ಕ್ರಮ ವಹಿಸಬೇಕು. ನಂತರ ನಾವು ಕಂದಾಯವನ್ನು ಕಾಲಕಾಲಕ್ಕೆ ಪಾವತಿಸುತ್ತೇವೆ. ಇದರಿಂದ ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಕಾರ್ಯಕ್ಕೆ ಹೊರೆಯಾಗುವುದಿಲ್ಲ ಎನ್ನುತ್ತಾರೆ ಬಡಾವಣೆಗಳ ನಿವಾಸಿಗಳು.
ಸಿಎಂ ಸಿದ್ದರಾಮಯ್ಯ ಅವರು ಬೃಹತ್ ಮೈಸೂರು ಮಾಡಲು ಶ್ರಮಿಸುತ್ತಿರುವುದು ಶ್ಲಾಘನೀಯ. ಇದರಿಂದ ಇಷ್ಟು ವರ್ಷ ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂಬ ವಿಶ್ವಾಸವಿದೆ. ಗ್ರೇಡ್ ೧ಮೈಸೂರು ನೆನೆಗುದಿಗೆ ಬಿದ್ದರೆ ಸಾವಿರಾರು ಮನೆಗಳ ನಿವಾಸಿಗಳು ಅತಂತ್ರ ಸ್ಥಿತಿಗೆ ಮರಳುತ್ತೇವೆ. ಯೋಜನೆ ಕಾರ್ಯಗತವಾಗದಿದ್ದಲ್ಲಿ ದಯಮಾಡಿ ವರ್ತುಲ ರಸ್ತೆಯ ಒಳಗಿರುವ ವಾರ್ಡ್ ನಂಬರ್ ೬೫ ಮತ್ತು ಮೈಸೂರು ಮಹಾನಗರಪಾಲಿಕೆಗೆ ಮತ ಚಲಾಯಿಸುತ್ತಿರುವ ಬಡಾವಣೆಗಳನ್ನು ಮೈಸೂರು ನಗರಪಾಲಿಕೆಯಲ್ಲಿಯೇ ಉಳಿಸಿಕೊಡಿ.”
-ಜೆ.ಜಯಂತ್, ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ಸಮಿತಿ
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…