ದೇಶ- ವಿದೇಶ

ಎಲ್‌ಪಿಜಿ ಕೊರತೆ | ಕೇಂದ್ರದಿಂದ 1955ರ ಕಾಯ್ದೆ ಜಾರಿ ; ಏನಿದು ಅಗತ್ಯ ಸರಕು ಕಾಯ್ದೆ?

ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು ರಕ್ಷಿಸಲು ಹಾಗೂ ಪೆಟ್ರೋಲಿಯಂ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ಲಭ್ಯತೆ, ಪೂರೈಕೆ ಹಾಗೂ ಸಮಾನ ಹಂಚಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಮಂಗಳವಾರ 1955ರ ಅಗತ್ಯ ಸರಕು ಕಾಯ್ದೆ(ಇಸಿ ಕಾಯ್ದೆ)ಯನ್ನು ಜಾರಿಗೆ ತಂದಿದೆ.

ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ದೇಶಾದ್ಯಂತ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಂಸ್ಕರಣಾಗಾರಗಳು ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ) ಉತ್ಪಾದನೆಯನ್ನು ಗರಿಷ್ಟಗೊಳಿಸಲು ಮತ್ತು ಪ್ರಮುಖ ಹೈಡ್ರೋಕಾರ್ಬನ್ ಹೊಳೆಗಳನ್ನು ಎಲ್‌ಪಿಜಿ ಪೂಲ್‌ಗೆ ತಿರುಗಿಸಲು ಸರ್ಕಾರ ಆದೇಶ ನೀಡಿದೆ.

ಭಾರತವು ಸುಮಾರು 332 ಮಿಲಿಯನ್​ ಎಲ್​ಪಿಜಿ ಗ್ರಾಹಕರನ್ನು ಹೊಂದಿದ್ದು, ನಿರಂತರ ಗ್ರಾಹಕರಿಗೆ ತನ್ನ ಅಗತ್ಯತೆಯನ್ನು ಪೂರೈಸಲು ಕೇಂದ್ರ ಸರ್ಕಾರ 1955ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ.

1955 ರ ಅಗತ್ಯ ಸರಕುಗಳ ಕಾಯ್ದೆ ಎಂದರೇನು?
1955ರ ಅಗತ್ಯ ಸರಕುಗಳ ಕಾಯ್ದೆ ಎನ್ನುವುದು, ಜನಸಾಮಾನ್ಯರ ದೈನಂದಿನ ಜೀವನಕ್ಕೆ ಅತ್ಯಗತ್ಯವಾದ ವಸ್ತುಗಳು ಸರಿಯಾದ ಬೆಲೆಗೆ ಮತ್ತು ಸುಗಮವಾಗಿ ಸಿಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕಿರುವ ಒಂದು ಬಲಿಷ್ಠ ಕಾನೂನು ಅಸ್ತ್ರವಾಗಿದೆ. ಜೊತೆಗ ಅಕ್ರಮ ದಾಸ್ತಾನು ತಡೆ, ಬೆಲೆ ನಿಯಂತ್ರಣ ಹಾಗೂ ಆದ್ಯತೆಯ ಹಂಚಿಕೆ ಮುಖ್ಯ ಉದ್ದೇಶವಾಗಿದೆ.

ಈ ಹೊಸ ಆದೇಶದಡಿಯಲ್ಲಿ, ಮನೆಗಳಿಗೆ ದೇಶೀಯ ಪೈಪ್ಡ್ ಅನಿಲ ಮತ್ತು ವಾಹನಗಳಿಗೆ ಸಿಎನ್‌ಜಿಯ ಶೇ.100 ರಷ್ಟು ಖಚಿತ ಪೂರೈಕೆ ಮಾಡಲಾಗುವುದು ಎಂದು ಹೇಳಿದೆ. ಆದೇಶದ ಪ್ರಕಾರ, ದೇಶೀಯ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಕೆ, ಸಾರಿಗೆಗಾಗಿ ಸಂಕುಚಿತ ನೈಸರ್ಗಿಕ ಅನಿಲ, ಎಲ್‌ಪಿಜಿ ಉತ್ಪಾದನೆ, ಪೈಪ್‌ಲೈನ್ ಕಂಪ್ರೆಸರ್ ಇಂಧನ ಅವಶ್ಯಕತೆಗಳು, ರಸಗೊಬ್ಬರ ಸ್ಥಾವರಗಳು, ಚಹ ಕೈಗಾರಿಕೆಗಳು ಮತ್ತು ಇತರ ಪ್ರಮುಖ ಕೈಗಾರಿಕಾ ಗ್ರಾಹಕರಂತಹ ವಲಯಗಳಿಗೆ ಆದ್ಯತೆಯ ಹಂಚಿಕೆಯನ್ನು ನೀಡಲಾಗಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಚಹ ಉದ್ಯಮ, ಉತ್ಪಾದನಾ ಘಟಕಗಳು ಮತ್ತು ನೈಸರ್ಗಿಕ ಅನಿಲ ಗ್ರಿಡ್ ಮೂಲಕ ಸಂಪರ್ಕ ಹೊಂದಿದ ಕೈಗಾರಿಕಾ ಗ್ರಾಹಕರು ತಮ್ಮ ಸರಾಸರಿ ಪೂರೈಕೆಯ ಶೇ.80 ಅನ್ನು ಪಡೆಯುತ್ತಾರೆ. ಅದೇ ರೀತಿ, ಕೈಗಾರಿಕಾ ಮತ್ತು ವಾಣಿಜ್ಯ ನೈಸರ್ಗಿಕ ಅನಿಲ ಗ್ರಾಹಕರನ್ನು ಸಹ ಅವರ ಹಿಂದಿನ ಆರು ತಿಂಗಳ ಸರಾಸರಿಯ ಶೇ.80 ಕ್ಕೆ ಮಿತಿಗೊಳಿಸಲಾಗಿದೆ.

25 ದಿನದ ಬಳಿಕವೇ ಮತ್ತೊಂದು ಸಿಲಿಂಡರ್
ಒಂದು ಸಿಲಿಂಡರ್ ಬುಕಿಂಗ್ ಮಾಡಿದ 25 ದಿನಗಳ ನಂತರವಷ್ಟೇ ಮತ್ತೊಂದು ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. ಬಿಕ್ಕಟ್ಟಿಗೆ ಮುನ್ನ ಸಿಲಿಂಡರ್ ಬುಕಿಂಗ್ ಅಂತರ 15 ದಿನಗಳಷ್ಟಿತ್ತು. 2 ದಿನಗಳ ಹಿಂದೆ ಇದನ್ನು 21 ದಿನಗಳಿಗೆ ಹೆಚ್ಚಿಸಲಾಗಿತ್ತು. ಈಗ ಮತ್ತಷ್ಟು ದಿನ ಹೆಚ್ಚು ಕಾಯಬೇಕಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಹಾಗೂ ಅನಗತ್ಯ ಸಂಗ್ರಹ ತಡೆಗೆ ಸರ್ಕಾರ ಈ ಕ್ರಮಕೈಗೊಂಡಿದೆ.

ದಾಖಲೆ ಮಟ್ಟಕ್ಕೆ ಕಚ್ಚಾತೈಲ
ಮಧ್ಯಪ್ರಾಚ್ಯ ಸಂಘರ್ಷವು ಭಾರತಕ್ಕೆ ಇಬ್ಬಗೆಯ ಸಂಕಟ ತಂದೊಡ್ಡಿದೆ. ಒಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 2022ರ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಮಟ್ಟಕ್ಕೆ ಜಿಗಿದಿದೆ. ಸೋಮವಾರ ಬ್ಯಾರಲ್‌ಗೆ 120 ಡಾಲರ್‌ವರೆಗೂ ಜಿಗಿದಿದ್ದ ಕಚ್ಚಾತೈಲ ದರ ಬಳಿಕ 106 ಡಾಲರ್ ತಲುಪಿದೆ. ಆದರೂ ಶೇ. 14 ಏರಿಕೆ ಕಂಡಿದೆ. ಇದು ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಒತ್ತಡ ಸೃಷ್ಟಿಸಿದೆ. ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಅಡುಗೆ ಅನಿಲದ ಬಿಸಿ ಈಗಾಗಲೇ ಗ್ರಾಹಕರಿಗೆ ತಟ್ಟಿದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

36 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

38 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

40 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

43 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

48 mins ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

56 mins ago