Andolana originals

ಸುಗ್ಗನಹಳ್ಳಿಯ ಬಂಡಿ ಉತ್ಸವಕ್ಕೆ ಸಕಲ ಸಿದ್ಧತೆ

ಭೇರ್ಯ: ಕೆ.ಆರ್.ನಗರ ತಾಲ್ಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಮೇ 24ರ ಶುಕ್ರವಾರ ರಾತ್ರಿ ನಡೆಯಲಿರುವ ಬಂಡಿ ಉತ್ಸವದ ಹಬ್ಬಕ್ಕೆ ಸಕಲ ಸಿದ್ಧತೆ ನಡೆದಿದೆ. ಗ್ರಾಮೀಣ ಸಂಪ್ರದಾಯದಂತೆ ಗ್ರಾಮ ದೇವತೆಯ ಹೆಸರಿನಲ್ಲಿ ನಡೆಸುವ ಈ ಹಬ್ಬವನ್ನು ಕೆಲವು ಕಡೆ ಹಸಿರುಬಂಡಿ ಎನ್ನುತ್ತಾರೆ. ಸುಗ್ಗನಹಳ್ಳಿ ಗ್ರಾಮದಲ್ಲಿ 1950ರಿಂದಲೂ ಈ ಗ್ರಾಮದ ಪೂರ್ವಿಕರು, ಹಿರಿಯರು ಸಾಂಪ್ರದಾಯಿಕವಾಗಿ ಬಂಡಿಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

ಇದೇ ಮೇ 24ರ ಶುಕ್ರವಾರ ಗ್ರಾಮದ ತುಂಬೆಲ್ಲ ಹಸಿರೆಲೆಯ ತೋರಣ, ತೆಂಗಿನ ಗರಿ, ಅಡಕೆ, ಹೊಂಬಾಳೆ ಇವುಗಳಿಂದ ಅಲಂಕರಿಸಿ, ಜೊತೆಗೆ ಕಲ್ಲಿನ ಚಕ್ರದಿಂದ ನಿರ್ಮಾಣ ಮಾಡಿರುವ ಬಂಡಿಯನ್ನು ವಿಶೇಷವಾಗಿ ವಿವಿಧ ಬಣ್ಣಗಳಿಂದ ಅಲಂಕರಿಸಿ, ಬಾಳೆ ಗೊನೆ ಕಟ್ಟಿ, ತಮಟೆ, ಡೊಳ್ಳು, ನಗಾರಿಯೊಂದಿಗೆ ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆಯವರೆಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂಡಿ ಎಳೆಯುತ್ತಾರೆ.

ಇದಕ್ಕೂ ಮೊದಲು ಯುವತಿಯರು, ಮುತ್ತೈದೆಯರು ತಂಬಿಟ್ಟು ಆರತಿ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ಹಬ್ಬಕ್ಕೂ ಮೊದಲು ಕನ್ನಂಬಾಡಿ ಅಮ್ಮನವರ ಹಬ್ಬ ಹರಿಸೇವೆ ಜೊತೆಗೆ ಅನ್ನದಾನ, ಮುನಿಯಪ್ಪನ ಹಬ್ಬ ಆಚರಣೆ ಮಾಡಿದ ನಂತರ ಬಹಳ ವಿಶಿಷ್ಟವಾಗಿ ಬಂಡಿ ಹಬ್ಬ ಆಚರಣೆ ಮಾಡಲಾಗುವುದು ಎಂದು ಮುಖಂಡ ಬಂಡೆಕುಮಾರ್ ತಿಳಿಸಿದರು.

ಗ್ರಾಮದೇವತೆ ಪಟ್ಟಲದಮ್ಮದೇವಿಗೆ ಹರಕೆ, ಮುಡಿಪು ಕಾಣಿಕೆ ಒಪ್ಪಿಸುವ ಸಲುವಾಗಿ ಗ್ರಾಮದ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಿಂದ ಬಂಡಿ ಚಕ್ರವನ್ನು ಎಳೆಯುವ ಸಂದರ್ಭದಲ್ಲಿ ದೂಳ್‌ಮರಿ ಹೊಡೆಯಲಾಗುತ್ತದೆ.

ಈ ಹಬ್ಬವನ್ನು ಸಾಮರಸ್ಯದಿಂದ ಯಾವುದೇ ಜಾತಿ-ಭೇದವಿಲ್ಲದೆ ಎಲ್ಲಾ ಸಮುದಾಯದವರು ಒಟ್ಟಾಗಿ ಸೇರಿ ಆಚರಿಸುವುದು ವಿಶೇಷ. ಮುಖಂಡರಾದ ಡೇರಿ ಅಧ್ಯಕ್ಷ ರಾಜು, ವಿಜಯ್, ರಾಜಶೆಟ್ಟಿ, ರಾಜಶೇಖರ್, ತಿಮ್ಮೇಗೌಡ, ಧರಣಿ, ವೀರಭದ್ರಶೆಟ್ಟಿ, ವೆಂಕಟೇಶ್, ಮೂರ್ತಿ, ಪುನೀತ್, ರವೀಶ್, ಅಮರ್, ಬಾಂಡ್ ರವಿ, ವಿಜಿ, ಮಹದೇವ ಸೇರಿದಂತೆ ಗ್ರಾಮದ ಅನೇಕ ಯುವಕರು ಗ್ರಾಮದಲ್ಲಿ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಬಂಡಿ ಹಬ್ಬವನ್ನು ಗ್ರಾಮದಲ್ಲಿ ಸಾಮರಸ್ಯದಿಂದ ಯಾವುದೇ ಜಾತಿ-ಭೇದವಿಲ್ಲದೆ ನಮ್ಮ ಪೂರ್ವಿಕರ ಕಾಲದಿಂದಲೂ ಆಚರಣೆ ಮಾಡುತ್ತಾ ಬಂದಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಜನಪದ ಸೊಗಡು ಇಂದಿಗೂ ಉಳಿದಿದೆ. – ಬಂಡೆ ಕುಮಾರ್, ಹಿರಿಯ ಮುಖಂಡ, ಸುಗ್ಗನಹಳ್ಳಿ.

ಭೇರ್ಯ ಮಹೇಶ್

ಮೂಲತಃ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಸಮೀಪದ ಬಟಿಗನಹಳ್ಳಿ ಗ್ರಾಮದವನಾದ ನಾನು ಭೇರ್ಯ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿ ಹೊಸ ಅಗ್ರಹಾರದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದೇನೆ. 2002 ಹಾಗೂ 2004ರಲ್ಲಿ ಪತ್ರಿಕೋದ್ಯಮ ತರಬೇತಿ ಪಡೆದಿದ್ದೇನೆ. 1992ರಿಂದ ಆಂದೋಲನ ಮತ್ತು ಮೈಸೂರು ಮಿತ್ರ ಸೇರಿದಂತೆ ಪತ್ರಿಕಾ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದು, 2000ರಲ್ಲಿ ಪ್ರಜಾನುಡಿ ದಿನ ಪತ್ರಿಕೆಯ ಕೆ.ಆರ್.ನಗರ ತಾಲ್ಲೂಕು ಗ್ರಾಮಾಂತರ ವರದಿಗಾರನಾಗಿ ತದ ನಂತರ ಆಂದೋಲನ ಮತ್ತು ಕನ್ನಡ ಪ್ರಭ ಪತ್ರಿಕೆಯ ತಾಲ್ಲೂಕು ಗ್ರಾಮಾಂತರ ಮತ್ತು ಭೇರ್ಯ ಗ್ರಾಮದ ವರದಿಗಾರನಾಗಿ ಕಾರ್ಯನಿರ್ವಹಿಸಿ ಪ್ರಸ್ತುತ 2021ರಿಂದ ಕೆ.ಆರ್.ನಗರ ತಾಲ್ಲೂಕು ಆಂದೋಲನ ಪತ್ರಿಕೆಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

9 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

9 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

10 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

12 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

16 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

16 hours ago