ಪ್ಯಾರಾ ಸ್ನೂಕರ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಲೋಕ್
ಜಿ. ತಂಗಂ ಗೋಪಿನಾಥಂ
ಮೈಸೂರು: ಅಚಲ ಆತ್ಮವಿಶ್ವಾಸ. . . ಸಾಧಿಸುವ ಛಲ ಇದ್ದರೆ ಎಂತಹದ್ದೇ ಬೃಹತ್ ನ್ಯೂನತೆಯೂ ಗುರಿ ತಲು ಪುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಮೈಸೂರಿನ ವಿಶೇಷ ಚೇತನ ಕ್ರೀಡಾಪಟುವೊಬ್ಬರು ಇತ್ತೀಚಿನ ನಿದರ್ಶನವಾಗಿದ್ದಾರೆ. ಶೇ. ೮೦ರಷ್ಟು ದೈಹಿಕ ವಿಕಲತೆ ಇದ್ದರೂ ಅಂತಾ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಅಮೆರಿಕ ದೇಶಕ್ಕೆ ತೆರಳಿದ್ದಾರೆ.
ಈ ಅಪ್ರತಿಮ ಪ್ರತಿಭೆಯ ಹೆಸರು ಅಲೋಕ್ ಆರ್. ಜೈನ್ ಇವರು ಸ್ನೂಕರ್ ಕ್ರೀಡೆಯಲ್ಲಿ ಅದ್ಭುತ ಸಾಧನೆ ಮೆರೆದು ವಿದೇಶದಲ್ಲೂ ತಮ್ಮ ಛಾಪು ಮೂಡಿಸುವ ದಾರಿಯಲ್ಲಿ ನಡೆದಿದ್ದಾರೆ. ಅದಕ್ಕಾಗಿ ಅವರು ಕಾಲು ಗಳಿಲ್ಲದ ಕಾರಣ ಎರಡು ಮಂಡಿಗಳಲ್ಲಿ , ಇರುವ ಒಂದು ಕೈನಲ್ಲೇ ಅಪಾರವಾದ ಶ್ರಮ ವಹಿಸಿದ್ದಾರೆ! ಆ ಒಂದು ಕೈನಲ್ಲಿ ಇರುವ ಬೆರಳುಗಳು ಕೂಡ ಪೂರ್ಣ ರೀತಿಯಲ್ಲಿ ಇಲ್ಲ! ಆದರೆ, ಅಲೋಕ್ ಇದಕ್ಕೆಲ್ಲ ಅಂಜದೆ, ಹಿಂಜರಿಯದೆ, ಯಾರ ಅನುಕಂಪವನ್ನೂ ಬಯಸದೆ, ಸ್ವಯಂ ಆತ್ಮಬಲವನ್ನು ಆಶ್ರಯಿಸಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
ಸಿದ್ದಾರ್ಥನಗರದ ನಿವಾಸಿಗಳಾದ ರಮೇಶ್ ಕುಮಾರ್ ಜೈನ್ ಮತ್ತು ಸಾಧನಾ ಜೈನ್ ದಂಪತಿಯ ದ್ವಿತೀಯ ಪುತ್ರ ಅಲೋಕ್ ಆರ್. ಜೈನ್ ಅವರು ಹುಟ್ಟುವಾಗಲೇ ಅಂಗವೈಕಲ್ಯಕ್ಕೆ ಒಳಗಾದರು. ಆದರೆ, ಇದರಿಂದ ಬೇಸತ್ತು ಹತಾಶರಾಗಲಿಲ್ಲ. ಏನಾದರೂ ಸಾಧನೆ ಮಾಡ ಬೇಕು ಎಂಬ ಛಲ ತೊಟ್ಟ ಅಲೋಕ್ ಜೈನ್ ಅವರು ೨೬ ವರ್ಷ ವಯಸ್ಸಿನಲ್ಲಿದ್ದಾಗ ಸ್ನೂಕರ್ ಕ್ರೀಡೆಯತ್ತ ಆಸಕ್ತಿ ಬೆಳೆಸಿ ಕೊಂಡರು. ಅಷ್ಟೇ ಅಲ್ಲ ನಿರಂತರ ಅಭ್ಯಾಸದಲ್ಲಿ ತೊಡ ಗಿಸಿಕೊಂಡಿದ್ದರು. ಕೇವಲ ೧೦ ವರ್ಷಗಳಲ್ಲಿ ಅಂತಾ ರಾಷ್ಟ್ರೀಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.
೧೯೮೮ ಜೂನ್ ೫ ರಂದು ಜನಿಸಿದ ಅಲೋಕ್ ಅವ ರಿಗೆ ಸಾಮಾನ್ಯರಂತೆ ಆಟ ಆಡಬೇಕೆಂಬ ಆಸೆ ಇತ್ತು. ಆದರೆ, ‘ನಿನ್ನಿಂದಾಗದು’ ಎಂದು ಇತರರು ಅಣಕಿಸಿ ದರು. ಅಣಕಿಸಿದವರಿಗೆ, ಅಪಹಾಸ್ಯ ಮಾಡಿದವರಿಗೆ ದಿಟ್ಟ ಉತ್ತರ ನೀಡಲೇಬೇಕೆಂದು ನಿರ್ಧರಿಸಿದ ಅಲೋಕ್, ಸ್ನೂಕರ್ ಕ್ರೀಡೆಯಲ್ಲಿ ತೊಡಗಿಸಿಕೊಂಡು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗೆಲುವು ಸಾಧಿಸುವ ಮೂಲಕ ತಮ್ಮ ಶಕ್ತಿ ಏನೆಂದು ಜಗತ್ತಿನ ಮುಂದೆ ಸಾಬೀತುಪಡಿಸಿದ್ದಾರೆ.
ಅಲೋಕ್ ಆರ್. ಜೈನ್ ಅವರು ಡಿ. ೧೬ ರಿಂದ ೨೦ ರವರೆಗೆ ಅಮೆರಿಕದ ಲಾಸ್ ಏಂಜಲೀಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ (ಎಲ್‌ಎಸಿಸಿ) ನಡೆಯಲಿರುವ ೨೦೨೪ರ ಡಬ್ಲ್ಯೂಪಿಎ ಹೇ-ಬಾಲ್ ಪ್ಯಾರಾ ಸ್ಪೋರ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ.
೬ ತಿಂಗಳ ಮುಂಚೆ ಕರ್ನಾಟಕ ಡಿಸೆಬಿಲಿಟಿ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಅಸೋಸಿಯೇಷನ್ ವತಿಯಿಂದ ಬೆಂಗ ಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರ್ನಾಟಕ ಡಿಸೆಬಿಲಿಟಿ ಸ್ನೂಕರ್ ಪಂದ್ಯಾವಳಿಯಲ್ಲಿ ಅಲೋಕ್ ೨ನೇ ಸ್ಥಾನ ಪಡೆದಿದ್ದರು. ಬಳಿಕ ಕಳೆದ ನ. ೯ ಮತ್ತು ೧೦ ರಂದು ಇದೇ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಜ್ಞಾನ ಭಾರತಿನಗರದಲ್ಲಿ ನಡೆದ ರಾಷ್ಟ್ರಮಟ್ಟದ ಡಬ್ಲ್ಯೂಡಿ ಬಿಎಸ್ ಮೊದಲನೇ ಕರ್ನಾಟಕ ಡಿಸೆಬಿಲಿಟಿ ಸ್ನೂಕರ್ ಆಹ್ವಾನಿತ ಪಂದ್ಯಾವಳಿಯಲ್ಲಿ ಅಲೋಕ್ ತೃತೀಯ ಸ್ಥಾನ ಗಳಿಸಿದ್ದರು. ಇದನ್ನು ಗಮನಿಸಿದ ವರ್ಲ್ಡ್ ಫೂಲ್ ಅಸೋಸಿ ಯೇಷನ್ (ಡಬ್ಲ್ಯೂಪಿಎ) ಸಂಸ್ಥೆಯೂ ಜಾಯ್ ಬಿಲಿ ಯರ್ಡ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ವಿಶೇಷ ಚೇತನರ ಸ್ನೂಕರ್ ಪಂದ್ಯಾವಳಿಗೆ ಅಲೋಕ್ ಜೈನ್ ಅವರಿಗೆ ಪಾಲ್ಗೊಳ್ಳುವ ಅವಕಾಶವನ್ನು ನೀಡಿದೆ. ಅಂತಾ ರಾಷ್ಟ್ರೀಯ ವಿಶೇಷ ಚೇತನರ ಸ್ನೂಕರ್ ಸ್ಪರ್ಧೆಯಲ್ಲಿ ಭಾರತದ ೭ ಪ್ರತಿನಿಽಗಳು ಭಾಗವಹಿಸಲಿದ್ದಾರೆ. ಅದ ರಲ್ಲಿ ಮೈಸೂರಿನ ಅಲೋಕ್ ಸೇರಿ ೫ ಮಂದಿ ಕರ್ನಾಟಕದವರು ಎಂಬುದು ವಿಶೇಷ.
‘ನನ್ನ ದೈಹಿಕ ಸ್ಥಿತಿಗೆ ತಕ್ಕಂತೆ ಸ್ನೂಕರ್ ಕ್ರೀಡೆ ಆಯ್ಕೆ’
ನಾನು ಶೇ. ೮೦ ರಷ್ಟು ಅಂಗವೈಕಲ್ಯತೆಯನ್ನು ಹೊಂದಿದ್ದು, ಸಾಧನೆ ಮಾಡಲು ಸ್ನೂಕರ್ ಕ್ರೀಡೆಯೇ ಸೂಕ್ತ ಅನಿಸಿತು. ಅಲ್ಲದೆ, ನನ್ನ ದೈಹಿಕ ಎತ್ತರಕ್ಕೆ ಸ್ನೂಕರ್ ಕ್ರೀಡೆ ಆಡುವುದು ಸಹಕಾರಿಯಾಗಿತ್ತು. ಆರಂಭದಲ್ಲಿ ಕುರ್ಚಿಯ ಸಹಾಯವನ್ನು ಬಳಸಿಕೊಂಡು ಸ್ನೂಕರ್ ಕ್ರೀಡೆಯನ್ನು ಅಭ್ಯಾಸ ಮಾಡುತ್ತಿದ್ದೆ. ಈಗ ನಾನು ಸಹಾಯಕ್ಕೆ ಯಾವುದೇ ವಸ್ತುಗಳನ್ನು ಬಳಸಿಕೊಳ್ಳದೇ ಸ್ನೂಕರ್ ಆಡುತ್ತೇನೆ ಎನ್ನುತ್ತಾರೆ ಅಲೋಕ್ ಆರ್. ಜೈನ್.
ಬಹುಮುಖ ಪ್ರತಿಭೆ ಅಲೋಕ್ ಅಲೋಕ್
ಆರ್. ಜೈನ್ ಅವರು ಸ್ನೂಕರ್ ಸರ್ಧೆ ಮಾತ್ರವಲ್ಲದೇ, ನೃತ್ಯ, -ಷನ್ ಶೋ, ಚಿತ್ರಕಲೆ, ಕ್ರಿಕೆಟ್ ಕ್ರೀಡೆಯಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅಲೋಕ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಮುಗಿಸಿದರು. ಪಿಯು ಶಿಕ್ಷಣವನ್ನು ವಿದ್ಯಾವಿಕಾಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಸದ್ಯ ಇವರು ತಂದೆಯ ಬಿಸಿನೆಸ್‌ಗೆ ಸಹಾಯ ಮಾಡುತ್ತಿದ್ದಾರೆ.
೧೦ ವರ್ಷಗಳಿಂದ ಸ್ನೂಕರ್ ಆಟ
ನಾನು ೧೦ ವರ್ಷಗಳಿಂದ ಸ್ನೂಕರ್ ಕ್ರೀಡೆಯನ್ನು ಆಡುತ್ತಿದ್ದೇನೆ. ಎತ್ತರಕ್ಕೆ ಇರುವರು ಸ್ನೂಕರ್ ಅನ್ನು ಆಡಲು ಬಾಗಬೇಕಾಗುತ್ತದೆ. ಆದರೆ, ನಾನು ಕಮ್ಮಿ ಎತ್ತರ ಇರುವುದರಿಂದ ನನಗೆ ಈ ಕ್ರೀಡೆ ಸೂಕ್ತವಾಗಿದೆ. ಈಗ ಡಬ್ಲ್ಯೂಪಿಎ ಹೇ-ಬಾಲ್ ಪ್ಯಾರಾ ಸ್ಪೋರ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಽಸುವ ಅವಕಾಶ ದೊರೆತಿರುವುದು ತುಂಬಾ ಖುಷಿ ಆಗಿದೆ. ಭಾರತಕ್ಕೆ ಪದಕ ತಂದುಕೊಂಡುವ ಗುರಿ ಇದೆ.
-ಅಲೋಕ್ ಆರ್. ಜೈನ್, ಸ್ನೂಕರ್ ಆಟಗಾರ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…