Andolana originals

ತಣ್ಣಗೆ ಕಾಣುವ ಬಣ್ಣದ ಮಡಕೆ: ಆರೋಗ್ಯಕ್ಕೆ ಹಿತವೆ? ಅಹಿತವೇ?

‘ಆಂದೋಲನ’ ತಂಡದಿಂದ ರಿಯಾಲಿಟಿ ಚೆಕ್

ಮೈಸೂರು: ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ, ದಾಹ ತಣಿಸಿಕೊಳ್ಳಲು ಜನರು ನೈಸರ್ಗಿಕ ‘ಫ್ರಿಜ್’ ಎಂದೇ ಕರೆಯಲ್ಪಡುವ ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಬಣ್ಣ ಬಣ್ಣದ ಆಕರ್ಷಕ ಮಡಕೆಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಆದರೆ, ತಾವು ಖರೀದಿಸುವ ಈ ಮಡಕೆಗಳು ನಿಜವಾಗಿಯೂ ಮಣ್ಣಿನಿಂದ ಮಾಡಲ್ಪಟ್ಟಿವೆಯೇ ಅಥವಾ ಬೇರೇನಾದರೂ ಮಿಶ್ರಣ ಮಾಡಿ ತಯಾರಿಸಲಾಗಿದೆಯೇ? ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡಿದೆ. ಈ ವಸ್ತುಸ್ಥಿತಿಯನ್ನು ತಿಳಿಯಲು ‘ಆಂದೋಲನ’ ತಂಡವು ವಿಶೇಷ ರಿಯಾಲಿಟಿ ಚೆಕ್ ನಡೆಸಿತು.

ನಮ್ಮ ತಂಡವು ಮೊದಲು ಮೈಸೂರಿನ ಕಲಾಮಂದಿರದ ಪಕ್ಕದ ಫುಟ್‌ಪಾತ್‌ನಲ್ಲಿರುವ ಮಡಕೆ ಮಳಿಗೆಗಳಿಗೆ ಭೇಟಿ ನೀಡಿತು. ಅಲ್ಲಿ ಗುಜರಾತ್‌ನಿಂದ ತರಿಸಲಾದ ಆಕರ್ಷಕ ಮಡಕೆಗಳ ಮಾರಾಟ ಜೋರಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಹಿನ್ನೆಲೆಯಲ್ಲಿ, ನಮ್ಮ ತಂಡವು ಅಲ್ಲಿ ಒಂದು ಮಡಕೆಯನ್ನು ಖರೀದಿಸಿ ಪರೀಕ್ಷೆಗಾಗಿ ತಜ್ಞರ ಬಳಿ ಕೊಂಡೊಯ್ಯಿತು.

ಗುಣಮಟ್ಟದ ತಪಾಸಣೆಗಾಗಿ ಮೈಸೂರಿನ ಹೆಬ್ಬಾಳುವಿನಲ್ಲಿರುವ ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ ಅವರನ್ನು ಭೇಟಿ ಮಾಡಲಾಯಿತು. ಮಡಕೆಯನ್ನು ಪರಿಶೀಲಿಸಿದ ಅವರು, ಇದನ್ನು ಸಂಪೂರ್ಣ ಮಣ್ಣಿನಿಂದ ತಯಾರಿಸಿಲ್ಲ, ಮಣ್ಣಿನ ಜೊತೆಗೆ ಅಲ್ಪ ಪ್ರಮಾಣದಲ್ಲಿ ಸಿಮೆಂಟ್ ಮಿಶ್ರಣ ಮಾಡಲಾಗಿದೆ. ಆದರೆ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ನಮ್ಮ ಮನೆಯ ನೀರಿನ ಟ್ಯಾಂಕ್‌ಗಳು ಸಿಮೆಂಟ್ ನಿಂದಲೇ ಆಗಿರುತ್ತವೆ. ಆದರೆ ಹೊರಭಾಗದ ಹೊಳಪಿನ ಕೆಂಪು ಬಣ್ಣ ಆರೋಗ್ಯಕ್ಕೆ ಹಿತಕರವಲ್ಲ ಎಂದು ತಿಳಿಸಿದರು.

ಬಳಿಕ ಮೈಸೂರಿನವರೇ ಆದ ಸಿವಿಲ್ ಇಂಜಿನಿಯರ್ ಜೆ.ರಮೇಶ್ ಅವರ ನಿವಾಸದಲ್ಲಿ ಮಡಕೆಯ ಒಂದು ಚೂರಿಗೆ ಆಸಿಡ್ ದ್ರಾವಣವನ್ನು ಹಾಕಿ ಪರೀಕ್ಷಿಸಲಾಯಿತು. ಆಸಿಡ್ ಹಾಕಿದಾಗ ಮಡಕೆಯ ಚೂರಿನಿಂದ ನೊರೆ ಬರಲು ಪ್ರಾರಂಭವಾಯಿತು. ಇದು ಅದರಲ್ಲಿ ಸಿಮೆಂಟ್ ಮಿಶ್ರಣವಿರುವುದನ್ನು ದೃಢಪಡಿಸಿತು. ಗ್ರಾಹಕರು ಹೊರಗಿನ ಆಕರ್ಷಣೆಗೆ ಮರುಳಾಗದೆ, ಒಳಭಾಗದಲ್ಲಿ ಬಣ್ಣವಿಲ್ಲದ ಮತ್ತು ಸಾಧ್ಯವಾದಷ್ಟು ನೈಸರ್ಗಿಕ ಮಣ್ಣಿನ ಮಡಕೆಗಳನ್ನು ಆರಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಾಗಿದೆ.

” ಮಡಕೆಯ ಹೊರಭಾಗಕ್ಕೆ ಹಚ್ಚಿರುವ ಆಕರ್ಷಕ ಕೆಂಪು ಬಣ್ಣವು ‘ಯೂನಿಟಿಂಟ್’ ಎಂಬ ಸಿಂಥೆಟಿಕ್ ಬಣ್ಣವಾಗಿದೆ. ಇದು ನೈಸರ್ಗಿಕ ಮಣ್ಣಿನ ಬಣ್ಣವಲ್ಲದ ಕಾರಣ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೈಸರ್ಗಿಕ ಮಡಕೆಗಳಲ್ಲಿನ ಸಣ್ಣ ರಂಧ್ರಗಳು ನೀರನ್ನು ಬೇಗ ತಂಪಾಗಿಸುತ್ತವೆ. ಆದರೆ ಸಿಮೆಂಟ್ ಮತ್ತು ಬಣ್ಣ ಲೇಪಿತ ಮಡಕೆಗಳಲ್ಲಿ ಈ ಪ್ರಕ್ರಿಯೆ ಎಷ್ಟು ಪರಿಣಾಮಕಾರಿ ಎಂಬುದು ಪರೀಕ್ಷಿಸಬೇಕಾದ ವಿಷಯ.”

– ಕೊಳ್ಳೇಗಾಲ ಶರ್ಮ, ವಿಜ್ಞಾನ ಲೇಖಕ, ಮೈಸೂರು

” ಅಸಲಿ ಮಣ್ಣಿನ ಮಡಕೆಗೆ ಆಸಿಡ್ ಹಾಕಿದಾಗ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆದರೆ ಪರೀಕ್ಷಿಸಿದ ಮಡಕೆಯಲ್ಲಿ ನೊರೆ ಬಂದಿರುವುದು ಸಿಮೆಂಟ್ ಮತ್ತು ಮರಳಿನ ಮಿಶ್ರಣವನ್ನು ಖಚಿತಪಡಿಸಿದೆ. ಈ ಮಡಕೆಯಲ್ಲಿ ನೀರು ಶೇಖರಿಸಿದಾಗ ಅದು ಪ್ರತ್ಯಾಮ್ಲೀಯವಾಗಿ ಬದಲಾಗುತ್ತದೆ, ಇದು ದೇಹಕ್ಕೆ ಒಳ್ಳೆಯದು. ಆದರೆ ಮಡಕೆಯ ಒಳಭಾಗದಲ್ಲಿ ಯಾವುದೇ ಕಾರಣಕ್ಕೂ ಬಣ್ಣ ಇರಬಾರದು.”

-ಜೆ.ರಮೇಶ್, ಸಿವಿಲ್ ಇಂಜಿನಿಯರ್, ಮೈಸೂರು

 

 

ಆಂದೋಲನ ಡೆಸ್ಕ್

Recent Posts

SIR ನೋಟಿಸ್: ವಿಚಾರಣೆಗೆ ತೆರಳುವಾಗ ಈ ದಾಖಲೆಗಳು ನಿಮ್ಮ ಬಳಿ ಇರಲಿ

ಬೆಂಗಳೂರು: SIR ನೋಟಿಸ್‌ಗಳ ವಿಚಾರಣೆ ಅಧಿಕೃತವಾಗಿ ಆರಂಭವಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವುದು ಮುಖ್ಯವಾಗಿದೆ. ನಿಮ್ಮ…

2 hours ago

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

7 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

7 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

7 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

17 hours ago