Andolana originals

ಸಿದ್ದಾಪುರ ಮಾರುಕಟ್ಟೆಯಲ್ಲೊಂದು ತ್ಯಾಜ್ಯ ಶಿಖರ

ಕೃಷ್ಣ ಸಿದ್ದಾಪುರ

ಸಂತೆಮಾಳದಲ್ಲಿ ತರಕಾರಿ ಜೊತೆ ಸಾಂಕ್ರಾಮಿಕ ರೋಗವೂ ಉಚಿತ

ಕ್ರಮಕೈಗೊಳ್ಳದ ಗ್ರಾ.ಪಂ. ವಿರುದ್ಧ ಸಾರ್ವಜನಿಕರ ಅಸಮಾಧಾನ 

ಸಿದ್ದಾಪುರ: ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡುವ ಗ್ರಾ.ಪಂ.ಯೇ ಇಡೀ ಪಟ್ಟಣದಲ್ಲಿ ಸಂಗ್ರಹಿಸಿದ ಕಸವನ್ನು ತಂದು ಜನ ವಸತಿ ಪ್ರದೇಶದಲ್ಲಿ ಸುರಿದು ತ್ಯಾಜ್ಯದ ಶಿಖರವನ್ನು ನಿರ್ಮಿಸಿದೆ.

ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿ ಇರುವ ಇಲ್ಲಿನ ಗ್ರಾಮ ಪಂಚಾಯಿತಿ ಎರಡು ದಶಕಗಳಿಂದ ಕಸ ವಿಲೇವಾರಿಗೆ ಜಾಗವಿಲ್ಲದೆ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಜನವಸತಿ ಪ್ರದೇಶದಲ್ಲಿಯೇ ಕಸವನ್ನು ಸುರಿಯುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ .

ಸಿದ್ದಾಪುರ ಸಂತೆ ಮಾರುಕಟ್ಟೆಯ ಬಳಿ, ಸರ್ಕಾರಿ ಪ್ರಾಥಮಿಕ ಶಾಲೆಗೆ ಅನತಿ ದೂರದಲ್ಲಿಯೇ ಗ್ರಾಮ ಪಂಚಾಯಿತಿ ಪಟ್ಟಣದ ಅಂಗಡಿ ಮಳಿಗೆ, ಹೋಟೆಲ್ ಹಾಗೂ ಮನೆಗಳಿಂದ ಸಂಗ್ರಹಿಸಿದ ಕಸವನ್ನು ತಂದು ಸುರಿದು ಶಿಖರ ನಿರ್ಮಿಸಿದೆ. ಇದರಿಂದ ಇಡೀ ವಾತಾವರಣವೇ ದುರ್ನಾತ ಬೀರುತ್ತಿದ್ದು, ಸೊಳ್ಳೆ, ನೊಣಗಳು, ಬೀದಿ ನಾಯಿಗಳ ಹಾವಳಿಯು ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಪಟ್ಟಣದಲ್ಲಿ ಕಸ ಎತ್ತಲು ವರ್ತಕರಿಂದ ೧೦೦ರಿಂದ ೨೫೦ ರೂ. ಸಂಗ್ರಹಿಸುವ ವಿಚಾರವಾಗಿ ಈಗಾಗಲೇ ವರ್ತಕರ ಸಂಘದ ಸಭೆ ನಡೆಸಿತ್ತು. ಇದರ ಬೆನ್ನಲ್ಲೇ ಪಟ್ಟಣದಲ್ಲಿ ಕಸ ಎತ್ತುತ್ತಿದ್ದರೂ ಗ್ರಾಮದ ಒಳ ಹೊಕ್ಕು ನೋಡಿದರೆ ಸಂಪೂರ್ಣ ತ್ಯಾಜ್ಯಮಮಯವಾಗಿದೆ. ಈ ಹಿಂದೆ ಶಾಸಕರ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಸ ವಿಲೇವಾರಿ ವಿಚಾರದ ಬಗ್ಗೆ ಚರ್ಚೆ ನಡೆದು ಶಾಸಕರೇ ಖುದ್ದು ಮಾರುಕಟ್ಟೆ ಪ್ರಾಂಗಣ ಪರಿಶೀಲಿಸಿ ೨೦ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿಸುವಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಸೂಚಿಸಿದ್ದರು. ಆದರೆ ಆ ಸಂದರ್ಭದಲ್ಲಿ ಮಾತ್ರ ಕಸವನ್ನು ಖಾಲಿ ಮಾಡಿದ್ದು, ನಂತರ ಇದೇ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವುದಾಗಿ ಸ್ಥಳಿಯರು ಆರೋಪಿಸಿದ್ದಾರೆ.

ಮಾಲ್ದಾರೆ, ಚೆನ್ನಯ್ಯನಕೋಟೆ, ಅಮ್ಮತ್ತಿ, ಮೇಕೂರು ಹೊಸ್ಕೇರಿ, ಹಾಲುಗುಂದ, ಅರೆಕಾಡು ಹೊಸ್ಕೇರಿ, ವಾಲ್ನೂರು, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭಾನುವಾರದಂದು ದೊಡ್ಡ ಸಂತೆ ನಡೆಯುವ ಸಿದ್ದಾಪುರದಲ್ಲಿ ಪಂಚಾಯಿತಿಯೇ ಈ ರೀತಿ ಅವೈಜ್ಞಾನಿಕ ಕಸದ ಶಿಖರ ನಿರ್ಮಾಣಕ್ಕೆ ಎಡೆಇಕೊಟ್ಟಿರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

” ಮಾಲ್ದಾರೆ, ಚೆನ್ನಯ್ಯನಕೋಟೆ, ಅಮ್ಮತ್ತಿ, ಮೇಕೂರು ಹೊಸ್ಕೇರಿ, ಹಾಲುಗುಂದ, ಅರೆಕಾಡು ಹೊಸ್ಕೇರಿ, ವಾಲ್ನೂರು, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಜನರು ತರಕಾರಿ ಖರೀದಿಗೆ ಸಿದ್ದಾಪುರ ಸಂತೆಯನ್ನೇ ಅವಲಂಬಿಸಿದ್ದಾರೆ. ಈ ಪ್ರದೇಶದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಸ ಸಂಗ್ರಹವಾಗಿದ್ದು, ಸಾಂಕ್ರಾಮಿಕ ರೋಗ ಹರಡಲು ಪಂಚಾಯತಿಯೇ ಕಾರಣವಾಗುತ್ತಿದೆ. ಈ ಹಿಂದೆ ಈ ಪ್ರದೇಶದಲ್ಲಿ ಕಸ ಹಾಕಲು ಅವಕಾಶ ನೀಡುತ್ತಿರಲಿಲ್ಲ.”

-ಎಂ.ಎಂ.ಸೌಕತ್ ಅಲಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಸಿದ್ದಾಪುರ

” ಪಕ್ಕದಲ್ಲೆ ಪ್ರಾಥಮಿಕ ಶಾಲೆ ಇದೆ. ಈ ಪ್ರದೇಶದಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂಬ ಸಿಸಿಟಿವಿ ಕಣ್ಗಾವಲಿನ ಸಂದೇಶವಿದೆ. ಸ್ಥಳೀಯರು ಇಲ್ಲಿ ಕಸ ಹಾಕುತ್ತಿಲ್ಲ. ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ವಾಹನಕ್ಕೆ ನೀಡುತ್ತಿದ್ದು, ಶಾಲಾ ಮಕ್ಕಳು, ವಯೊ ವೃದ್ದರು ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಪಂಚಾಯಿತಿಯೇ ಕಸ ಹಾಕಿದ್ದು, ಈಗ ಯಾರು ಯಾರಿಗೆ ದಂಡ ವಿಧಿಸಬೇಕು ಎಂಬ ಪ್ರಶ್ನೆ ಎದುರಾಗಿದೆ.”

-ಅಪ್ಸಲ್, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ 

” ಮುಂಜಾನೆ ಬಾಗಿಲು ತೆರೆದರೆ ಕಸದ ರಾಶಿಯ ಶಿಖರ ದರ್ಶನವಾಗುತ್ತಿದ್ದು, ಈ ಪ್ರದೇಶದಲ್ಲಿ ಈ ಹಿಂದೆ ಡೆಂಗ್ಯು ಪ್ರಕರಣ ಕೂಡ ವರದಿಯಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಳಿಗೆಗಳನ್ನು ನಿರ್ಮಿಸಿ ಅದರ ಸುತ್ತಲೂ ಈ ರೀತಿ ತ್ಯಾಜ್ಯವನ್ನು ತಂದು ಸುರಿದಿರುವುದರಿಂದ ಮಳಿಗೆಗಳು ಉಪಯೋಗಕ್ಕೆ ಬಾರದೆ ಪಂಚಾಯಿತಿಯ ಆದಾಯ ಕುಂಠಿತವಾಗಿದೆ.”

-ಸಮ್ಮದ್, ಪ್ರದೇಶದ ನಿವಾಸಿ

ಆಂದೋಲನ ಡೆಸ್ಕ್

Recent Posts

ನಾನು ಸಾಮಾಜಿಕ‌ ಬಹಿಷ್ಕಾರದ ಕ್ರೂರತೆ ನೋಡಿ ಬೆಳೆದವನು: ಪರಿಷತ್ ಸದಸ್ಯ ಕೆ ಶಿವಕುಮಾರ್

ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್‌ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…

2 mins ago

ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ: ಸಿಎಂ ಸಿದ್ದರಾಮಯ್ಯ ಬೇಸರ

ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…

55 mins ago

2028ರವರೆಗೂ ಸಿದ್ದರಾಮಯ್ಯ ಗಟ್ಟಿಯಾಗಿರಬೇಕು: ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…

1 hour ago

ಸಿದ್ದರಾಮಯ್ಯ ಇಲ್ಲ ಅಂದರೆ ಕಾಂಗ್ರೆಸ್‌ ಪಕ್ಷ ಇಲ್ಲ: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ಸಿದ್ದರಾಮಯ್ಯ ಇಲ್ಲ ಅಂದರೆ ಕಾಂಗ್ರೆಸ್‌ ಇಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ…

1 hour ago

ಬಳ್ಳಾರಿ ಗಲಾಟೆ ಪ್ರಕರಣ: ಮೃತ ರಾಜಶೇಖರ್‌ ಮನೆಗೆ ಡಿಸಿಎಂ ಡಿಕೆಶಿ ಭೇಟಿ

ಬಳ್ಳಾರಿ: ನಗರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್‌ ಮನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ ಸಾಂತ್ವನ…

2 hours ago

ಸೌಜನ್ಯ ಅತ್ಯಾಚಾರ, ಅನಾಥ ಶವಗಳ ಪತ್ತೆ ಪ್ರಕರಣ: ಹೊಸ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಹಾಗೂ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯರ ನಾಪತ್ತೆ, ಅನಾಥ ಶವಗಳ ಪತ್ತೆ…

2 hours ago