ಆಂದೋಲನ 50

ಆಂದೋಲನದ ಜತೆ ನಿಂತ ಓದುಗರು

ಎಚ್.ಡಿ.ಕೋಟೆ, ಸರಗೂರು ತಾಲೂಕಿಗೆ ಸಂಬಂಧಿಸಿದ ಒಂದಲ್ಲ ಒಂದು ಸುದ್ದಿಗಳನ್ನು ಪ್ರತಿನಿತ್ಯವೂ ಪ್ರಕಟಿಸುವ ಮೂಲಕ ಆಂದೋಲನ ದಿನಪತ್ರಿಕೆ ಕಳೆದ ೨೫ ವರ್ಷಗಳಿಂದ ಓದುಗರ ಹೃದಯದಲ್ಲಿ ಭದ್ರ ಸ್ಥಾನ ಪಡೆದಿದೆ. ತಾಲೂಕಿನ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದಿಟ್ಟು ಅವರ ಕಣ್ತೆರೆಸುವ ಕೆಲಸವನ್ನು ಪತ್ರಿಕೆ ನಿರಂತರವಾಗಿ ಮಾಡುತ್ತಾ ಬಂದಿದೆ. ಈ ಕಾರಣಕ್ಕಾಗಿಯೇ ರಾಜ್ಯ ಮಟ್ಟದ ಪತ್ರಿಕೆಗಳ ದರ ಸಮರದ ಹೊರತಾಗಿಯೂ ಸುದ್ದಿ ಮೌಲ್ಯಕ್ಕೆ ಆದ್ಯತೆ ನೀಡಿದ ‘ಆಂದೋಲನ’ ನಂಬರ್ ವನ್ ಪತ್ರಿಕೆಯಾಗಿ ಮುಂದುವರಿದಿದೆ.

ಆಂದೋಲನ ಪತ್ರಿಕೆಯಲ್ಲಿ ಯಾವುದೇ ಸುದ್ದಿಗಳು ಪ್ರಕಟವಾದರೆ ಸಂಬಂಧಪಟ್ಟವರು ತಕ್ಷಣ ಸ್ಪಂದಿಸುತ್ತಾರೆ ಎನ್ನುವ ಓದುಗರ ನಂಬಿಕೆ ಇದುವರೆಗೆ ಸುಳ್ಳಾಗಿಲ್ಲ. ಆಂದೋಲನ ವರದಿ ಫಲಶ್ರುತಿಯ ಕೆಲವು ಉದಾಹರಣೆಗಳು ಇಲ್ಲಿವೆ.

ಸುಮಾರು ೨೦ ವರ್ಷಗಳ ಹಿಂದಿನ ಮಾತು. ತಾಲ್ಲೂಕಿನ ಅಂತರಸಂತೆ ವಿಎಸ್ಸೆಸ್ಸೆನ್ ಸೊಸೈಟಿಯಲ್ಲಿ ಪಡಿತರದಾರರಿಗೆ ವಿತರಿಸದೆ ಸುಮಾರು ನೂರು ಕ್ವಿಂಟಾಲ್‌ಗೂ ಹೆಚ್ಚು ಅಕ್ಕಿ ಮತ್ತು ಗೋಧಿ ದಾಸ್ತಾನು ಮಾಡಲಾಗಿತ್ತು. ಇದನ್ನು ಕೇರಳಕ್ಕೆ ಸಾಗಿಸುವ ಹುನ್ನಾರದ ಸುಳಿವು ಪಡೆದ ಪತ್ರಿಕೆ ಸಚಿತ್ರ ವರದಿ ಮಾಡಿತ್ತು. ಪರಿಣಾಮ ಆಹಾರ ಶಿರಸ್ತೇದಾರ್, ಫುಡ್ ಇನ್‌ಸ್ಪೆಕ್ಟರ್, ಕಾರ‌್ಯದರ್ಶಿ ಅಮಾನತುಗೊಂಡರು. ಅಂಬೇಡ್ಕರ್ ಭವನದ ಕಾಮಗಾರಿ ವಿಳಂಬದ ಬಗ್ಗೆ ಪತ್ರಿಕೆ ವಿವರವಾದ ವರದಿ ಪ್ರಕಟಿಸಿದ ಬಳಿಕ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿತ್ತು. ಕೋಟೆ ಪಟ್ಟಣ ಪಂಚಾಯಿತಿಯ ಖಾತೆ ಅವ್ಯವಹಾರವನ್ನು ಪತ್ರಿಕೆ ಬಯಲಿಗೆಳೆದ ಬಳಿಕ ಹಲವು ಜನಪ್ರತಿನಿಧಿಗಳ ಮೇಲೆ ಕೇಸು ದಾಖಲಾಯಿತು.

ಜಿಪಂ ಕಾಮಗಾರಿಯ ೪ ಕೋಟಿ ರೂ. ಮೊತ್ತದ ಹಗರಣವನ್ನೂ ಆಂದೋಲನ ಬಯಲಿಗೆಳೆದಿತ್ತು. ಈ ಸಂಬಂಧ ಎಂಜಿನಿಯರ್ ಅಮಾನತಾಗಿದ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಸ್ತಿ ಪರಭಾರೆ ಸಂಚನ್ನು ಪತ್ರಿಕೆಯ ವರದಿ ವಿಫಲಗೊಳಿಸಿತ್ತು. ಠಾಣೆಯಲ್ಲಿಯೇ ತನ್ನ ಗೆಳೆಯನ ಹುಟ್ಟು ಹಬ್ಬ ಆಚರಿಸಿದ ಸರಗೂರು ಸಬ್ ಇನ್‌ಸ್ಪೆಕ್ಟರ್ ಪತ್ರಿಕೆಯ ವರದಿಯ ಪರಿಣಾಮ ವರ್ಗಾವಣೆ ಶಿಕ್ಷೆಗೆ ಗುರಿಯಾದರು. ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕ್ಲಬ್‌ಗಳ ಮೇಲೆ ಪತ್ರಿಕೆ ವರದಿಯನ್ನು ಆಧರಿಸಿ ನಿರ್ಬಂಧ ಹೇರಲಾಯಿತು. ಇದು ನೆನಪಿನಾಳದಿಂದ ಹೆಕ್ಕಿದ ಕೆಲವೇ ಪ್ರಕರಣಗಳು. ಇಂತಹ ಅನೇಕ ಉದಾಹರಣೆಗಳನ್ನು ಪಟ್ಟಿ ಮಾಡಬಹುದು.

andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago