ಆಂದೋಲನ 50

ಇತಿಹಾಸಕ್ಕೂ ಸಾಕ್ಷಿ ಹೇಳುತ್ತಿದೆ ನಂಜುಂಡನ ಸನ್ನಿಧಿ

ನಂಜನಗೂಡು ಶ್ರೀಕಂಠೇಶ್ವರ ದೇಗುಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ ಐತಿಹಾಸಿಕ ತಾಣವೂ ಹೌದು. ಇಲ್ಲಿರುವ ಪ್ರತಿಯೊಂದು ವಿಗ್ರಹ, ಪ್ರತಿಮೆಗಳು, ಕೆತ್ತನೆಗಳು, ಶಾಸನಗಳು, ಶಿಲಾ ಫಲಕಗಳು ಇತಿಹಾಸದತ್ತ ಬೆಳಕು ಚೆಲ್ಲುತ್ತವೆ. ದೇಗುಲದೊಳಗೆ ಶಿವ ನಾರಾಯಣರ ಆರಾಧನೆ ಶೈವ ಮತ್ತು ವೈಷ್ಣವ ಪರಂಪರೆಯ ಸಾಮರಸ್ಯಕ್ಕೆ ಉದಾಹರಣೆಯಾದರೆ ರಾಮಾನುಜಾಚಾರ‌್ಯರ ವಿಗ್ರಹ ಅಂದಿನ ವೈಷ್ಣವ ಪರಂಪರೆಯ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನ ಶೈವ ಪರಂಪರೆಗೆ ಸೇರಿದ ಸುಮಾರು ೪೦ ನಾಯನಾರ್ ಗಳ ಪ್ರತಿಮೆಗಳೂ ಇಲ್ಲಿವೆ. ಈ ಪ್ರತಿಮೆಗಳು ಶೈವ ಪಂಥ ಉತ್ತುಂಗದಲ್ಲಿದ್ದಾಗ ಸ್ಥಾಪನೆಯಾದ ಸಾಧ್ಯತೆ ಇದೆ. ನಾಯನಾರರು ಅಥವಾ ನಾಳ್ವರ್ ಗಳು ಕ್ರಿ.ಶ. ಐದನೇ ಮತ್ತು ಹತ್ತನೇ ಶತಮಾನಗಳ ನಡುವೆ ತಮಿಳುನಾಡಿನಲ್ಲಿ ಸಕ್ರಿಯರಾಗಿದ್ದ ಶಿವ ಭಕ್ತ ಸಂತ ಕವಿಗಳು. ತಮಿಳು ಶೈವ ಸಂತಚರಿತೆ ‘ಪೆರಿಯ ಪುರಾಣಂ’ ಕೃತಿಯಲ್ಲಿ ೬೩ ನಾಯನಾರರ ಇತಿಹಾಸವಿದೆ. ಸುಂದರನ್‌ರ ಎಂಟನೇ ಶತಮಾನದ ಕೃತಿ ‘ ತಿರುಕೊಂಡರ್ ತೋಗೈ’ ನಲ್ಲೂ ೬೦ ಶೈವ ಸಂತರ ಪಟ್ಟಿ ಇದೆ.

ಈ ಪ್ರತಿಮೆಗಳು ನಂಜುಂಡನ ಸನ್ನಿಧಿಗೆ ಬರುವುದಕ್ಕೂ ಒಂದು ದಂತಕಥೆಯಿದೆ. ಬಾದಾಮಿ ಯುದ್ಧದಲ್ಲಿ ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ದೊರೆ ೧ನೇ ನರಸಿಂಹವರ್ಮ ತನ್ನ ಸೇನಾಪತಿ ಪರಂಜ್ಯೋತಿಯ ಶೌರ್ಯ, ಸಾಹಸ ಮೆಚ್ಚಿ ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತಿನಲ್ಲಿ ಕಾಲು ಭಾಗವನ್ನು ಕೊಡುತ್ತಾನೆ. ಪರಂಜ್ಯೋತಿ ಆಸ್ತಿಯನ್ನು ವಿಂಗಡಿಸುತ್ತಿದ್ದಾಗ ಆತನಿಗೆ ಒಂದು ಗಣಪತಿ ವಿಗ್ರಹ ಸಿಗುತ್ತದೆ. ಅದನ್ನು ನೋಡಿದ ನಂತರ ಆತನಲ್ಲಿದ್ದ ಕ್ಷಾತ್ರ ಗುಣ ಕಳೆದು ಹೋಗಿ ಸನ್ಯಾಸಿಯಾಗುತ್ತಾನೆ. ಈ ವಿಗ್ರಹವನ್ನು ತೆಗೆದುಕೊಂಡು ಒಂದು ದೇವಸ್ಥಾನದಲ್ಲಿಡುತ್ತಾನೆ. ಬಳಿಕ ಈತ ಸೇರಿ ೪೦ ಮಂದಿ ನಾಯನಾರ್‌ಗಳಾಗಿ ಪರಿವರ್ತನೆಯಾಗಿ ದೇಶ ಪರ್ಯಟನೆ ಕೈಗೊಂಡು ಶೈವ ಪಂಥವನ್ನು ಪ್ರಚಾರ ಮಾಡುತ್ತಾರೆ. ನೂರಾರು ವರ್ಷಗಳ ಬಳಿಕ ಸಂಗೀತ ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ಬಾದಾಮಿಯಿಂದ ತೆಗೆದುಕೊಂಡು ಹೋದ ಇದೇ ಗಣಪತಿ ವಿಗ್ರಹದ ಕುರಿತು ‘ವಾತಾಪಿ ಗಣಪತಿ’ ಕೃತಿ ರಚಿಸುತ್ತಾರೆ. ವಾತಾಪಿ ಬಾದಾಮಿಯ ಮೂಲ ಹೆಸರು. ಈ ಗಣಪತಿ ವಿಗ್ರಹ ಇಂದಿಗೂ ತಮಿಳುನಾಡಿನಲ್ಲಿ ಇದೆ. ಇಂತಹ ಇತಿಹಾಸಕ್ಕೆ ಕಾರಣರಾದ ಪರಂಜ್ಯೋತಿ ಮತ್ತು ೪೦ ನಯನಾರ್‌ಗಳ ಪ್ರತಿಮೆಗಳು ನಂಜನಗೂಡಿನ ಪ್ರತಿಷ್ಠಾಪನೆಯಾಗುತ್ತದೆ. ಪರಂಜ್ಯೋತಿಯ ಹೆಸರು ಜನಪದ ಕಥನಗಳಲ್ಲೂ ಕೇಳಿ ಬರುವ ಹೆಸರು.


ನಂಜನಗೂಡು ವಾಸ್ತುಶಿಲ್ಪ

ಕಳಲೆ ದಳವಾಯಿಗಳು ವಾಸ್ತುಶಿಲ್ಪ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಕಳಲೆ ಗ್ರಾಮದಲ್ಲಿರುವ ಹಲವಾರು ದೇವಾಲಯಗಳು ಇದಕ್ಕೆ ನಿದರ್ಶನವಾಗಿದೆ. ಇಲ್ಲಿರುವ ಪ್ರಸಿದ್ದ ಲಕ್ಷ್ಮೀಕಾಂತ ದೇವಾಲಯವನ್ನು ಕಳಲೆ ಅರಸರು ನಿರ್ಮಿಸಿದರು. ಈ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಗರ್ಭಗುಡಿಯಲ್ಲಿ ಲಕ್ಷ್ಮೀಕಾಂತನ ಪ್ರಭಾವಳಿ ಸಹಿತವಾದ ೩.೫ ಅಡಿ ಎತ್ತರವಾದ ವಿಗ್ರಹವಿದೆ. ಅಕ್ಕಪಕ್ಕದಲ್ಲಿ ಪತ್ನಿಯರ ವಿಗ್ರಹಗಳಿವೆ. ಇವೆಲ್ಲವೂ ಲೋಹದ ಪ್ರತಿಮೆಗಳಾಗಿವೆ. ದೇವಾಲಯದ ಹೆಬ್ಬಾಗಿಲಿನ ದಕ್ಷಿಣ ಮತ್ತು ಉತ್ತರಭಾಗದಲ್ಲಿ ಎರಡು ವಿಶಾಲವಾದ ಮಂಟಪಗಳಿವೆ. ಇವುಗಳನ್ನು ನವರಾತ್ರಿ ಹಾಗೂ ಕಾರ್ತಿಕ ಮಂಟಪಗಳೆಂದು ಕರೆಯುತ್ತಾರೆ. ಇಡೀ ದೇವಾಲಯ ಯಾವುದೇ ನಿರ್ದಿಷ್ಟವಾದ ಅವಧಿಯಲ್ಲಿ ನಿರ್ಮಾಣ ಗೊಳ್ಳದೆ ೧೭ ನೇ ಶತಮಾನದ ಆರಂಭದಿಂದ ೧೮ ನೇ ಶತಮಾನದ ಮದ್ಯಭಾಗ ದವರೆಗೂ ವಿವಿಧ ಹಂತಗಳಲ್ಲಿ ನಿರ್ಮಾಣಗೊಂಡಿರುವಂತೆ ಕಾಣುತ್ತದೆ

andolana

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

8 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

8 hours ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

8 hours ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

8 hours ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

8 hours ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

8 hours ago