ಆಂದೋಲನ 50

ಯೋಗಾಚಾರ್ಯರ ನೆಲೆ ಮೈಸೂರು

ಡಾ. ಕೆ. ರಾಘವೇಂದ್ರ ಆರ್. ಪೈ

ಯೋಗ ಭಾರತದ ಶ್ರೇಷ್ಠ ಪರಂಪರೆಯ ಭಾಗ. ಸುಮಾರು ೨೫೦ ವರ್ಷಗಳಷ್ಟು ಹಿಂದೆಯೇ ಮೈಸೂರು ಸಾಹಿತ್ಯ, ಕಲೆ, ಸಂಗೀತ, ಯೋಗ, ಕ್ರೀಡೆ ಇತ್ಯಾದಿಗಳ ಬಗ್ಗೆ ಸಮಗ್ರ ಹಾಗೂ ಸಮೃದ್ಧ ಮಾಹಿತಿಯನ್ನು ನೀಡಬಲ್ಲ ಕೇಂದ್ರವಾಗಿತ್ತು. ಯೋಗ ಪರಂಪರೆಗೆ ಕೊಡುಗೆ ನೀಡಿರುವ ಮಹನೀಯರಲ್ಲಿ ಮೈಸೂರು ರಾಜಮನೆತನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಣಿಕೆ ಮಹತ್ವದ್ದು. ಅವರ ‘ ಶ್ರೀತತ್ತ್ವನಿಧಿ’ ಕೃತಿಯಲ್ಲಿ ಪ್ರಾಚೀನ ಸಾಹಿತ್ಯ, ಕಲೆ, ಯೋಗ ಹಾಗೂ ಇತರ ವಿಷಯಗಳನ್ನೊಳಗೊಂಡ ಸಮಗ್ರ ಮಾಹಿತಿಯನ್ನು ನೀಡಲಾಗಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಗ್ರಂಥವನ್ನು ವ್ಯವಸ್ಥಿತವಾಗಿ ಒಂದು ಗೂಡಿಸಿದರು.

ಈ ಕೃತಿಯಲ್ಲಿ ೧೨೨ ಆಸನಗಳನ್ನು ಸಚಿತ್ರವಾಗಿ ವಿವರಿಸಿ ನೀಡಲಾಗಿದೆ. ಈ ಹಸ್ತಪ್ರತಿಯ ಆಧಾರದ ಮೇರೆಗೆ ತಿಳಿದು ಬರುವುದೆಂದರೆ ಆ ಕಾಲದಲ್ಲಿ ಯೋಗ ಚಟುವಟಿಕೆ ವಿಫುಲವಾಗಿ ನಡೆಯುತ್ತಿತ್ತು. ಗ್ರಂಥಾಧಾರ ಪ್ರಕಾರ ಈ ಪದ್ಧತಿ ಮೈಸೂರಲ್ಲಿ ಕನಿಷ್ಠ ೧೦೦ ರಿಂದ ೧೫೦ ವರ್ಷಗಳಷ್ಟು ಹಿಂದಿನದು ಎಂದು ತಿಳಿದು ಬರುತ್ತದೆ.
೧೯೩೦ರಿಂದ ೧೯೪೦ರ ತನಕ ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಾಯೋಜಕತ್ವದಲ್ಲಿ ಕೃಷ್ಣಮಾಚಾರ್ಯರ ಮಾರ್ಗದರ್ಶನದೊಂದಿಗೆ ಯೋಗಶಾಲೆ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಬಿ.ಕೆ.ಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸರು ಅವರು ವಿದ್ಯಾರ್ಥಿಯಾಗಿದ್ದರು. ಭಾರತದ ಉದ್ದಗಲಕ್ಕೂ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಲು ಮಹಾರಾಜರು ನೆರವಿಗೆ ಬಂದರು. ಇದರ ಪರಿಣಾಮವೇ ಯೋಗವು ಪುನರುಜ್ಜೀವನಗೊಂಡು ಜನಪ್ರಿಯವಾಯಿತು. ಯೋಗದ ಆರಂಭದ ಬೆಳವಣಿಗೆಗೆ ಮುಖ್ಯವಾಗಿ ಅಯ್ಯಂಗಾರ್ ಮತ್ತು ಜೋಯಿಷರಿಗೆ ಧಾರಾಳ ನೆರವಿನ ಕೈಯನ್ನು ನೀಡಿದವರು ಮಹಾರಾಜರು.
ಕೃಷ್ಣಮಾಚಾರ್ಯರು ಬಳಸಿದ ಯೋಗ ಕಾರ್ಯವಿಧಾನಗಳಿಗೆ ‘ಶ್ರೀತತ್ವನಿಧಿ’ಯು ಒಂದು ಮೂಲಾಧಾರ ವಾಗಿ ಕಾಣುತ್ತದೆ. ಬಳಿಕ ಆ ದಾರಿಯನ್ನೇ ಅಯ್ಯಂಗಾರ್ ಮತ್ತು ಜೋಯಿಸರು ಅನುಸರಿಸಿದರು. ಕೃಷ್ಣಮೂರ್ತಿ ವಿರಚಿತ ಯೋಗಗ್ರಂಥಕ್ಕೆ ಈ ಹಸ್ತಪ್ರತಿಯೋ ಆಕರ ಗ್ರಂಥವಾಗಿ ರಾಜರ ನೆರವಿನಿಂದ ‘ಯೋಗ ಮಕರಂದ’ ಹೆಸರಲ್ಲಿ ೧೯೩೦ ರಲ್ಲಿ ಯೋಗ ಗ್ರಂಥವಾಗಿ ಬೆಳಕಿಗೆ ಬಂದಿತು.
ಇಂದು ಮೈಸೂರನ್ನು ಯೋಗ ನಗರಿಯಾಗಿ ವಿಶ್ವವೇ ಗುರುತಿಸಲು ಕಾರಣಕರ್ತರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಹಾಗೂ ಅವರಿಂದ ರಾಜಾಶ್ರಯ ಪಡೆದ ಯೋಗ ಆಚಾರ್ಯರಾದ ಟಿ ಕೃಷ್ಣಮಾಚಾರ್ ಮತ್ತು ಅವರ ಶಿಷ್ಯರಾದ ಬಿ.ಕೆ.ಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್, ದೇಶಿಕಾಚಾರ್, ಇಂದ್ರಾದೇವಿ ಮುಂತಾದವರು ಯೋಗಾಭಿಮಾನವನ್ನು, ಯೋಗದರ್ಶನವನ್ನು ಮೆರೆದಿರುವರು.

 

andolanait

Recent Posts

ಓದುಗರ ಪತ್ರ: ರಸ್ತೆ ದುರಸ್ತಿಗೊಳಿಸಿ

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…

2 hours ago

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಕಸ ತೆರವುಗೊಳಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…

2 hours ago

ಹಾರ್ಮುಜ್ ಹಾದಿಯಲ್ಲಿ ಬಟ್ಟಬಯಲಾದ ನೀತಿ ವೈಫಲ್ಯ

ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ…

2 hours ago

ಕಡಂಗಮರೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ

ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಆನೆಗಳ ಹಿಂಡು; ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ: ಸಮೀಪದ ಅರಣ್ಯ ಪ್ರದೇಶದಿಂದ…

2 hours ago

ಗುಂಡ್ಲುಪೇಟೆ: ಟಿಪ್ಪರ್‌ಗಳಿಗೆ ಬೀಳಬೇಕಿದೆ ಬ್ರೇಕ್

ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ…

2 hours ago