ಆಂದೋಲನ 50

ಮಹಿಳಾ ಪರ ಹೋರಾಟಕ್ಕೆ ಚೈತನ್ಯ ತುಂಬಿದ್ದ ‘ಆಂದೋಲನ’

-ರತಿರಾವ್, ಸಮತಾ ವೇದಿಕೆ, ಮೈಸೂರು.

‘ಆಂದೋಲನ’ ದಿನಪತ್ರಿಕೆ ಸಮಾಜಮುಖಿ ಹೋರಾಟಗಳಿಗೆ ವೇದಿಕೆಯಿದ್ದಂತೆ, ಇಂದಿಗೂ ಅದು ತನ್ನ ಸತ್ವವನ್ನು ಕಳೆದುಕೊಂಡಿಲ್ಲ. ಹಿಂದಿನಂತೆೆಯೇ ನಮ್ಮ ಚಿಂತನೆಗಳಿಗೆ ಪೂರಕವಾಗಿಯೇ ನಡೆಯುತ್ತಿದೆ.
ಪತ್ರಿಕೆಯು ನಮ್ಮ ಸಮತಾ ವೇದಿಕೆಯಿಂದ ನಿರಂತವಾಗಿ ನಡೆಯುತ್ತಿದ್ದ ಹೋರಾಟಗಳ ವರದಿಯನ್ನು ದಾಖಲು ಮಾಡುತ್ತಿತ್ತು. ಈ ಹಿಂದೆ ಹೆಣ್ಣುಮಕ್ಕಳಿಗೆ ಕೊಂಗಳ್ಳಿ ಬೆಟ್ಟಕ್ಕೆ ಪ್ರವೇಶ ಇರುತ್ತಿರಲಿಲ್ಲ. ಈ ಸಂಪ್ರದಾಯ ತಪ್ಪು ಎಂದು ವಿರೋಧಿಸಿ ವೈಜ್ಞಾನಿಕವಾಗಿ ತಿಳಿವಳಿಕೆ ಮೂಡಿಸಲು ಮುಂದಾದಾಗ ಕೊಂಗಳ್ಳಿ ಬೆಟ್ಟಕ್ಕೇ ಹೋಗಬೇಕಾಯಿತು. ಈ ವೇಳೆ ‘ಆಂದೋಲನ’ ಪತ್ರಿಕೆ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರ ಪತ್ನಿ ನಿರ್ಮಲಾ ಅವರೂ ಭಾಗಿಯಾಗಿದ್ದರು.

ಸೆಕ್ಷನ್ ೪೯೮ ದಾಖಲಿಸಿದ್ದು ಇತಿಹಾಸ:
ಮೈಸೂರಿನಲ್ಲೇ ಇದ್ದ ಸ್ಥಳೀಯ ಪತ್ರಿಕೆೊಂಂದು ಅಂದು ವಿವಿಧ ಕ್ಷೇತ್ರದ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ವರ್ಣಿಸಿತ್ತು. ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳಲ್ಲಿ ಇದು ಅಪಾರ ಮುಜುಗರ ತರಿಸಿತ್ತು. ಅಲ್ಲದೆ, ಲಕ್ಮೀಪುರಂ ಸ್ಥಳವೊಂದರಲ್ಲಿ ಮಹಿಳೆಯರನ್ನು ಮಾರಾಟ ಮಾಡುವ ಅಡ್ಡವಾಗಿ ಮಾಡಿಕೊಳ್ಳಲಾಗಿತ್ತು. ಇದರ ವಿರುದ್ಧ ಸಮತಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಯಿತು. ೧೯೭೮, ೧೯೮೦, ೧೯೮೧-೮೨ರಲ್ಲಿ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸಲಾಯಿತು. ಇದರಿಂದ ಮೊದಲ ಬಾರಿಗೆ ಭಾರತೀಯ ಪತ್ರಿಕಾ ಮಂಡಳಿ ಆ ಸ್ಥಳೀಯ ಪತ್ರಿಕೆಗೆ ಶಿಕ್ಷೆ ವಿಧಿಸಿತ್ತು. ಅಲ್ಲದೆ, ಈ ಪತ್ರಿಕೆ ವಿರುದ್ಧ ಮೈಸೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಕ್ಷನ್ ೪೯೮ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಈ ಮೂಲಕ ನಮ್ಮ ಬೃಹತ್ ಹೋರಾಟ ಯಶಸ್ವಿಯೂ ಆಯಿತು. ಇದಕ್ಕೆಲ್ಲ ಬೆಂಬಲವಾಗಿ ನಿಂತದ್ದು, ‘ಆದೋಲನ’ ದಿನಪತ್ರಿಕೆ, ನಮ್ಮ ಪ್ರತ್ರಿಯೊಂದು ಹೋರಾಟವನ್ನು ಪತ್ರಿಕೆಯಲ್ಲಿ ದಾಖಲು ಮಾಡುತ್ತಾ, ಸಹಕಾರ ನೀಡುತ್ತಾ ಬಂದಿತ್ತು. ಅದನ್ನು ನಾವು ಎಂದಿಗೂ ಮರೆಯುವಂತಿಲ್ಲ.

ಅಲ್ಲದೆ, ರಾಜಶೇಖರ ಕೋಟಿ ಅವರು ಎನ್‌ಟಿಎಂ ಶಾಲೆ ಉಳಿಸುವಲ್ಲಿ ವಹಿಸಿದ ಶ್ರಮ, ಗೌರಿಹತ್ಯೆ, ೧೯೮೫ರಲ್ಲಿ ದೀಪಕ್ ಎಂಬವರ ಪ್ರಕರಣ ಇದೆಲ್ಲವನ್ನು ವರದಿ ಮಾಡುವಲ್ಲಿ ‘ಆಂದೋಲನ’ ಪತ್ರಿಕೆ ತಳೆದ ನಿಲುವು ಮೆಚ್ಚುವಂತಹದ್ದು, ಇಂದಿಗೂ ಪತ್ರಿಕೆ ತನ್ನ ಸತ್ವವನ್ನು ಉಳಿಸಿಕೊಂಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

andolanait

Recent Posts

ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವು

ಮಂಡ್ಯ: ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ…

3 hours ago

ರಾಜ್ಯದಲ್ಲಿ ಮಳೆ ಕೊರತೆ: ತಾಪಮಾನ ಏರಿಕೆ: ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮಳೆ ಕೊರತೆ ಮುಂದುವರಿದಿದ್ದು, ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಾರಿ ಮುಂಗಾರು ಕೊರತೆ…

7 hours ago

ಕೊಡಗು: ಪತ್ನಿಗೆ ಗುಂಡಿಕ್ಕಿ ಕೊಂದು ತಾನೂ ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ

ಸೋಮವಾರಪೇಟೆ: ತಾಲೂಕಿನ ಮಾದಾಪುರ ಹೋಬಳಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೌಟುಂಬಿಕ ಕಲಹ ಶಂಕೆಯಡಿ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಕನ್ನಿಕಂಡ…

8 hours ago

ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಆಸ್ಪತ್ರೆಗೆ ದಾಖಲು..!!

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಇದ್ದ ಓಂ ಪ್ರಕಾಶ್ ರಾವ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಅಪಘಾತವೊಂದರಲ್ಲಿ ಓಂ ಪ್ರಕಾಶ್…

8 hours ago

2,000 ರೂ. ವರೆಗಿನ ಯುಪಿಐ ಪಾವತಿಗಳಿಗೆ ಶುಲ್ಕವಿಲ್ಲ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ

ನವದೆಹಲಿ: 2,000 ರೂ. ವರೆಗೆ ನಡೆಯುವ ಎಲ್ಲಾ UPI ವಹಿವಾಟುಗಳಿಗೆ ಶುಲ್ಕವಿಲ್ಲ. ಅಷ್ಟೇ ಅಲ್ಲ, RuPay ಡೆಬಿಟ್ ಕಾರ್ಡ್ ಮೂಲಕ…

8 hours ago

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

1 day ago