ಆಂದೋಲನ 50

ನ್ಯಾಯದ ಪರ ‘ಆಂದೋಲನ’

 

ಎಂ.ಎನ್.ಸುಮನಾ, ವಕೀಲರು
ನಮ್ಮ ತಂದೆ ಟಿ.ಎನ್.ನಾಗರಾಜ್ ಮೂಲತಃ ಸಮಾಜವಾದಿ. ಯಾವುದೇ ಸಮಾಜವಾದದ ಹೋರಾಟ ಮೂಂಚೂಣಿ ನಮ್ಮಲ್ಲಿಯೇ  ಪ್ರಾರಂಭವಾಗುತ್ತಿತ್ತು. ಆಂದೋಲನ ದಿನಪತ್ರಿಕೆ ಪ್ರಾರಂಭಕ್ಕೂ ಮುನ್ನ ಸಮಾಜವಾದದ ಹೋರಾಟಗಳಲ್ಲಿ ರಾಜಶೇಖರ ಕೋಟಿ ಅವರು ನಮ್ಮ ತಂದೆಯವರೊಂದಿಗೆ ಪಾಲ್ಗೊಳ್ಳುತ್ತಿದ್ದರು.

೧೯೮೦ರ ಹಾಸುಪಾಸಿನಲ್ಲಿ ಆಂದೋಲನ ದಿನಪತ್ರಿಕೆ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಸಮಾಜವಾದ ಹೋರಾಟದ ಹಿನ್ನೆಲೆಯಲ್ಲಿ ಆಂದೋಲನ ಪತ್ರಿಕೆ ಭಾಗವಾಗಿ ರಾಜಶೇಖರ ಕೋಟಿ ಅವರು ಪಾಲ್ಗೊಳ್ಳುತ್ತಿದ್ದರು. ನಮ್ಮ ತಂದೆ ಕಾಲನಂತರವೂ ಕೋಟಿ ಅವರೊಂದಿಗಿನ ಒಡನಾಟ ಬೆಳೆಯಿತು. ರಾಜಶೇಖರ ಕೋಟಿ ಅವರು ಮಹಿಳಾ ಸಂಘಟನೆಯ ಹೋರಾಟಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುತ್ತಿದ್ದರು.

೧೯೯೫ರ ವೇಳೆಗೆ ಸಮತಾ ಅಧ್ಯಯನ ಕೇಂದ್ರ ಒಂದು ಟ್ರಸ್ಟ್ ಆಗಿ ಪರಿವರ್ತನೆಯಾಯಿತು. ರಾಜಶೇಖರ ಕೋಟಿ ಅವರು ನ್ಯಾಯದ ಪರ ನಿಲ್ಲುತ್ತಿದ್ದಂತೆ ಆಂದೋಲನ ದಿನಪತ್ರಿಕೆಯೂ ನಮ್ಮ ಪರ ನಿಲ್ಲುತ್ತಿತ್ತು. ಸಮತಾ ಟ್ರಸ್ಟ್ ಸ್ಥಾಪನೆಗೆ ಸ್ಥಳದ ಕುರಿತು ವಿವಾದ ಹುಟ್ಟಿಕೊಂಡಾಗ ಆಂದೋಲನ ಪತ್ರಿಕೆ ನೈಜ ವರದಿಗಳನ್ನು ದಾಖಲಿಉತ್ತಾ ನ್ಯಾಯಸಿಗುವಂತೆ ಮಾಡಿತ್ತು.
ನಂತರ ೧೯೯೮ರಲ್ಲಿ ರಾಜಶೇಖರ ಕೋಟಿ ಅವರೊಂದಿಗೆ ಅನೇಕ ಮಹಿಳಾ ಹೋರಾಟಗಾರರು ಶಕ್ತಿಧಾಮದ ಟ್ರಸ್ಟಿಗಳಾಗಿ ಸೇರಿಕೊಂಡೆವು. ಅಲ್ಲಿನ ಅನೇಕ ಚಟುವಟಿಕೆಗಳನ್ನು ಆಂದೋಲನ ದಿನಪತ್ರಿಕೆ ಪ್ರೋತ್ಸಾಹಿಸುತ್ತಿತ್ತು.

ಒಂದೊಮ್ಮೆ ಕಾಡುಗಳ್ಳ ವೀರಪ್ಪನ್ ಡಾ.ರಾಜ್‌ಕುಮಾರ್‌ಅವರನ್ನು ಅಪಹರಿಸಿದ್ದ ಸಮಯದಲ್ಲಿ ಪಾರ್ವತಮ್ಮ ಅವರೂ ಇತ್ತ ಬರಲಾಗಲಿಲ್ಲ. ಈ ವೇಳೆ ಸುಮಾರು ೨ ವರ್ಷಗಳ ಕಾಲ ಶಕ್ತಿಧಾಮಕ್ಕೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಆಗ ನಮ್ಮ ಸಂಕಷ್ಟಕ್ಕೆ ಸ್ಪಂಧಿಸಿದ್ದು ರಾಜಶೇಖರ ಕೋಟಿ ಅವರು, ಸಾವಿರಾರು ರೂ. ಜಾಹೀರಾತುಗಳನ್ನು ಉಚಿತವಾಗಿ ಪತ್ರಿಕೆಯಲ್ಲಿ ಪ್ರಕಟಿಸಿಕೊಡುವ ಮೂಲಕ ಸಂಸ್ಥೆಗೆ ನೆರವಾದರು. ಸಂಸ್ಥೆಯ ಬೆಳವಣಿಗೆಗೂ ರಚನಾತ್ಮಕ ಸಲಹೆ ಸೂಚನೆ ಕೊಡುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಸಹಾಯ ಕೇಳಿದರೂ ಸಹಕರಿಸುತ್ತಿದ್ದರು. ಅವರ ಮನೆ ಬಾಗಿಲು ಮುಚ್ಚಿದ್ದನ್ನೇ ನಾವು ನೋಡಿರಲಿಲ್ಲ.

ಮಹಿಳೆಯರು ಎಂದರೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದ ಕಾಲಘಟ್ಟದಲ್ಲಿ, ನಮ್ಮ ವಿಚಾರ ಚಿಂತೆಗಳನ್ನು ಹೊರಹಾಕಲು ವೇದಿಕೆ ಕಲ್ಪಿಸಿದ್ದು, ವೇದಿಕೆಯಾಗಿಯೇ ಇದ್ದದ್ದು ಆಂದೋಲನ ದಿನಪತ್ರಿಕೆ.

andolanait

Recent Posts

ಮಡಿಕೇರಿ | ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಬಸ್‌ ; ತಪ್ಪಿದ ಭಾರೀ ಅನಾಹುತ

ಮಡಿಕೇರಿ : ಸರ್ಕಾರಿ ಬಸ್‌ವೊಂದು ನಿಯಂತ್ರಣ ತಪ್ಪಿ ಬಸ್ ನಿಲ್ದಾಣದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್…

3 mins ago

ಪ್ರೇಯಸಿಯ ಕೊಂದು, ಶವವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟ ನೌಕಾಪಡೆ ಅಧಿಕಾರಿ!

ವಿಶಾಖಪಟ್ಟಣ : ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಅಲ್ಲದೇ,…

18 mins ago

ಎಸ್‌ಎಸ್ಎಲ್‌ಸಿ ಪರೀಕ್ಷೆ-1ರ ಮೌಲ್ಯಮಾಪನ ಏಪ್ರಿಲ್.8ರಿಂದ ಪ್ರಾರಂಭ

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಏಪ್ರಿಲ್.8ರಿಂದ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ…

2 hours ago

ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಶಾಸಕರು ಐಪಿಎಲ್‌ ಟಿಕೆಟ್‌ ಕೇಳೋದು ತಪ್ಪು. ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ ಎಂದು ಮಾಜಿ…

2 hours ago

ಇಂದಿನಿಂದ ರಾಜ್ಯದಲ್ಲಿ ಐದು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

3 hours ago

ವಿಧಾನಪರಿಷತ್‌ ಸದಸ್ಯತ್ವಕ್ಕೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆ

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯಸಭೆಗೆ…

3 hours ago