ಆಂದೋಲನ 50

ಮೈಸೂರು- ನಂಜನಗೂಡಿಗೆ ಬಸ್‌ ಸಂಪರ್ಕ ಕಲ್ಪಿಸಿದ್ದ ಮೊದಲ ಸಂಸ್ಥೆ

ನಂಜನಗೂಡು ರೈಲು, ಬಸ್‌, ಕಾರು ಇತ್ಯಾದಿ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೆ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಬಸ್‌ ಸೇವೆ ಆರಂಭವಾಗಿದ್ದು, ಮೈಸೂರು- ನಂಜನಗೂಡು ನಡುವೆ ಎಂಬುದು ವಿಶೇಷ. ಮೈಸೂರು ರಾಜರ ಆಡಳಿತ ಕಾಲ ದಲ್ಲಿ ರಾಜ್ಯ ದಲ್ಲೇ ಪ್ರಥಮ ಬಾರಿಗೆ ಸಾರ್ವಜ ನಿಕರಿಗೆ ಸಾರಿಗೆ ಸೇವೆ ಒದಗಿಸಿ ದ ಕೀರ್ತಿಗೆ ವಲ್ಕನ್‌ ಬಸ್‌ ಸರ್ವೀಸ್‌ ಸಂಸ್ಥೆ ಭಾಜನವಾಗಿ ದೆ. ಈ ಸಂಸ್ಥೆಯಲ್ಲಿ ೫-೬ ಬಸ್‌ಗಳಿ ದು, ಮೈಸೂರು- ನಂಜನಗೂಡು ನಡುವೆ ಸಂಚರಿಸುತ್ತಿದ್ದವು ೧೯೨೦ರಲ್ಲಿ ಈ ಸಂಸ್ಥೆ ಬಸ್‌ ಸೇವೆ ಆರಂಭಿಸಿತ್ತು. ಯಳಂದೂರು ಜಹಗೀರ್‌ ದಾರರ ಮನೆತನಕ್ಕೆ ಸೇರಿದ್ದ ಜಿ. ಕೃಷ್ಣಮೂರ್ತಿ ಅವರು ಈ ಸಂಸ್ಥೆಯ ಮಾಲೀಕರಾಗದ್ದರು. ಇವರ ತಾತ ಗುರುರಾಯರು ನಂಜನಗೂಡಿನಲ್ಲಿ ಮೊಟ್ಟಮೊದಲ ತಲೆಮಾರಿನ ವಕೀಲರ ಗುಂ೨ಗೆ ಸೇರಿ ದರು.
೧೯೨೯ರಲ್ಲಿ ನಂಜನಗೂಡಿಗೆ ಗೃಹೋಪಯೋಗಿ ವಿದ್ಯುಚ್ಛಕ್ತಿ: ನಂಜನಗೂಡಿಗೆ ಮೊಟ್ಟಮೊ ದಲ ಗೃಹಪಯೋಗಿ ವಿದ್ಯುಚ್ಛಕ್ತಿ ಬಂದದ್ದು ೧೯೨೯ರಲ್ಲಿ. ಬಿ.ಎಂ.ಶಿವರಾಮಯ್ಯ ಎಂಬವರು ತಮ್ಮ ಮನೆಗೆ ವಿದ್ಯುತ್‌ ಸಂಪರ್ಕ ಪಡೆದ ಮೊದಲಿಗರು. ಇವರು ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರ ಸಹೋ ದರ. ರಾಷ್ಟ್ರಪತಿ ರಸ್ತೆಯಲ್ಲಿ ಇರುವ ನೀಲಕಂಠೇಶ್ವರ ಶಾಲೆಯ ಆವರಣ ದಲ್ಲಿಯೇ ಇವರ ಮನೆ ಇತ್ತು.

andolana

Recent Posts

ಹುಣಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಗ್ರಾಮದ ಕೆರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ…

2 hours ago

ಹನೂರು| ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆ ಫಲಿಸದೇ ಸಾವು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆಗೆ…

2 hours ago

ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಚುನಾವಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ನಾಳೆ ಉತ್ತರ ಬಂಗಾಳದ ಎಲ್ಲಾ 152…

3 hours ago

24 ಗಂಟೆಯ ಒಳಗಡೆ ಉತ್ತರಿಸಿ: ಮಲ್ಲಿಕಾರ್ಜುನ ಖರ್ಗೆಗೆ ಆಯೋಗ ನೋಟಿಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕಾಗಿ ಚುನಾವಣಾ ಆಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ…

3 hours ago

ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.…

5 hours ago

ಧಾರವಾಡ ಆಕಾಶವಾಣಿ ಕೇಂದ್ರ ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ್‌ ಆದೇಶ

ನವದೆಹಲಿ: ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಪ್ರಸಾರ ಭಾರತಿ ಹಿಂತೆಗೆದುಕೊಂಡಿದೆ. ಉತ್ತರ ಕರ್ನಾಟಕ ಜನರ ಒತ್ತಾಸೆ, ಅಭಿಲಾಷೆಯಂತೆ…

6 hours ago