ಆಂದೋಲನ 50

ತಿ.ನರಸೀಪುರ ತಾಲ್ಲೂಕಿನ ಸಾಧಕರಿಬ್ಬರಿಗೆ ಆತ್ಮೀಯ ಸನ್ಮಾನ

ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು, ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ ಅವರಿಗೆ ಗೌರವ ಸಲ್ಲಿಕೆ

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನಲ್ಲಿ ‘ಆಂದೋಲನ’ ದಿನಪತ್ರಿಕೆ ೫೦ ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಸಾಧಕರಿಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಾದ ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು, ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ ಅವರನ್ನು ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಎಂ.ಅಶ್ವಿನ್‌ಕುಮಾರ್, ಡಾ.ಎನ್.ಎಲ್.ಭಾರತೀಶಂಕರ್ ಸಮ್ಮುಖದಲ್ಲಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು: ತಿ.ನರಸೀಪುರ ತಾಲ್ಲೂಕಿನಲ್ಲಿ ಮಾದರಹಳ್ಳಿ ಗ್ರಾಮದ ಪ್ರಗತಿ ಪರ ರೈತ ಎಂ.ಕೆ.ಶಂಕರ್ ಗುರು ಪ್ರಮುಖರು. ಕಳೆದ ಮೂರು ೩ ದಶಕಗಳಿಂದ ಭತ್ತದ ಹೊಸ ತಳಿಗಳನ್ನು ಬೆಳೆಸುವುದರ ಜೊತೆಗೆ ಸಾಂಪ್ರದಾಯಿಕ ತಳಿಗಳ ಬೀಜ ಸಂಗ್ರಹ ಮತ್ತು ಸಂರಕ್ಷಣೆುಂಲ್ಲೂ ಶಂಕರ್ ಮಹತ್ತರ ಪಾತ್ರ ವಹಿಸಿದ್ದಾರೆ.
ಶಂಕರ್ ಅಭಿವೃದ್ಧಿಪಡಿಸಿರುವ ಸುಧಾರಿತ ತಳಿ ‘ಓಒ-೨’ ಭತ್ತದ ತಳಿುಂನ್ನು ಭಾರತ ಸರ್ಕಾರದ ಸಸ್ಯ ಪ್ರಭೇದಗಳ ನೋಂದಣಿ ಸಂಸ್ಥೆಯು ಗುರುತಿಸಿ ಅನುಮೋದನೆಯು ಮುದ್ರೆ ಒತ್ತಿದೆ. 2014ರಲ್ಲಿ ಪ್ಲಾಂಟ್ ಜಿನೋಮ್ ಸೇವರ್ ಫಾರ್ಮರ್ ಮನ್ನಣೆಯನ್ನು ನೀಡಿ ಗೌರವಿಸಿದೆ. ಶಂಕರ್ ಅವರು, ‘ರತ್ನಚೂಡಿ ತಳಿ ಎಂಬ ಔಷಧಿಯ ಗುಣವುಳ್ಳ ತಳಿಯನ್ನೂ ಸಂರಕ್ಷಿಸಿದಾರೆ. ‘ಜೀರಗ ಸಣ್ಣ ಎಂಬ ಇನ್ನೊಂದು ಅಕ್ಕಿ ತಳಿ ಪರಿಮಳ ಭರಿತವಾಗಿದ್ದು ಬೆಳೆಗಾರರಲ್ಲಿ ಜನಪ್ರಿಯವಾಗಿದೆ.

ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ
ತಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಎಂ.ವೀಣಾ( ೨೨) ಅವರು ಖೋಖೋದಲ್ಲಿ ರಾಜ್ಯ ಸರ್ಕಾರ ನೀಡುವ ಕ್ರೀಡಾ ರತ್ನ (೨೦೧೭) ಪ್ರಶಸ್ತಿ ಪಡೆದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದವರು. ೧೨ ವರ್ಷಗಳ ಹಿಂದೆ ೫ನೇ ತರಗತಿಯಲ್ಲಿ ಓದುತ್ತಿರುವಾಗಲೇ ವೀಣಾ ಖೋಖೋ ಆಟದ ಅಭ್ಯಾಸ ಆರಂಭಿಸಿದರು. ನಂತರ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖೋಖೋ ಪಂದ್ಯಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ೨೦೧೯-೨೦ನೇ ಸಾಲಿನ ೫೩ನೇ ನ್ಯಾಷನಲ್ ಸೀನಿಯರ್ಸ್ ಖೋಖೋ ಚಾಂಪಿಯನ್ ಶಿಪ್‌ನಲ್ಲಿ ರಾನ್ಸಿರಾಣಿ ಲಕ್ಷ್ಮೀಭಾಯಿ ಪ್ರಶಸ್ತಿ ಪಡೆದಿದ್ದಾರೆ. ಅಸ್ಸಾಂನಲ್ಲಿ ನಡೆದ ೧೨ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ದಿಲ್ಲಿಯಲ್ಲಿ ನಡೆದ ೪ನೇ ಏಷ್ಯನ್ ಗೇಮ್ಸ್ ಖೋಖೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇವರು ಕುರುಬೂರು ಮಹದೇವ ಸ್ವಾಮಿ ಮತ್ತು ಮಾದಲಾಂಬಿಕಾ ಅವರ ಪುತ್ರಿ, ಬಿಕಾಂ ಪದವೀಧರೆ ವೀಣಾ, ಈಗ ದೈಹಿಕ ಶಿಕ್ಷಕಿಯಾಗುವ ಉದ್ದೇಶದಿಂದ ಎಂಪಿ.ಎಡ್ ಮಾಡುತ್ತಿದ್ದಾರೆ.

 

andolanait

Recent Posts

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

22 mins ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

25 mins ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

30 mins ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

34 mins ago

ದ್ವೇಷ ಭಾಷಣಕ್ಕೆ ಕಡಿವಾಣ | ಗರಿಷ್ಟ 10 ವರ್ಷ ಶಿಕ್ಷೆ, ವಿಧಾನಸಭೆಯಲ್ಲಿ ಮಸೂದೆ ಮಂಡನೆ, BJP ವಿರೋಧ

ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ…

44 mins ago

ಮೈವಿವಿಯಲ್ಲಿ ಫ್ರೆಂಚ್‌ ಭಾಷೆ ವಿಭಾಗ ಪುನರಾಂಭಿಸಲು ಚರ್ಚೆ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ…

1 hour ago