ಆಂದೋಲನ 50

ಆಂದೋಲನ ಪತ್ರಿಕೆಯ ಒಡನಾಡಿಗಳ ಒಡಲಾಳದ ಮಾತು – 4

 

ನನ್ನ ೧೮ ವರ್ಷಗಳ ಪರಿಸರ ರಕ್ಷಣೆಯ ಹೋರಾಟದ ಬೆನ್ನೆಲುಬಾಗಿ ನಿಂತ ಪತ್ರಿಕೆ ಎಂದರೆ ಅದು ‘ಆಂದೋಲನ’. ಅಂದಿನ ಕಾಲದಿಂದಲೂ ರಾಜಶೇಖರ ಕೋಟಿಯವರು ನಮ್ಮ ಪ್ರೋತ್ಸಾಹಕ್ಕೆ ನಿಂತ ಪರಿಣಾಮ ನಾವು ಇಂದು ಪರಿಸರವಾದಿಗಳು ಎಂದು ಗುರುತಿಸಿಕೊಳ್ಳಲು ಸಾಧ್ಯವಾಯಿತು. ತನ್ನ ಪ್ರಗತಿಪರ ಆಶಯಗಳೊಂದಿಗೆ ‘ಆಂದೋಲನ’ ರಾಜ್ಯ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಲಿ – ಭಾನು ಮೋಹನ್, ಪರಿಸರ ವಾದಿ.

‘ಆಂದೋಲನ ೫೦ ಸಾರ್ಥಕ ಪಯಣ’ ನಮ್ಮ ಕಾರ್ಯಕ್ರಮ ಎಂದು ಭಾವಿಸಿದ್ದೇನೆ. ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲ ಪತ್ರಿಕೆಗಳ ಪುನಶ್ಚೇತನಕ್ಕೆ ಬೇಕಾದ ಕಾರ್ಯಕ್ರಮ. ಈ ಕಾರ್ಯಕ್ರಮ ‘ಆಂದೋಲನ’ ಮುಂದಿನ ಮೆಟ್ಟಿಲುಗಳನ್ನು ಹತ್ತಲು ಮತ್ತು ಅಲ್ಲಿ ಕೆಲಸ ಮಾಡುವ ಸಾಮಾಜಿಕ ಸ್ಥೈರ್ಯವನ್ನು ನೀಡಿದೆ. ಮುದ್ರಣ ಮಾಧ್ಯಮಗಳು ಬಹಳ ಸಂಕಷ್ಟದಲ್ಲಿ ಇರುವ ಈ ದಿನಗಳಲ್ಲಿ ‘ಆಂದೋಲನ’ ಪತ್ರಿಕೆ ಪ್ರವರ್ಧಮಾನಕ್ಕೆ ಬರಲಿ. -ಸ್ಟ್ಯಾನ್ಲಿ , ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ

‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ, ಯಶಸ್ವಿಯಾಗಿ ನೆರವೇರಿದ್ದು ತುಂಬಾ ಸಂತಸದ ವಿಷಯ. ರಾಜಶೇಖರ ಕೋಟಿ ಅವರ ಆಸೆ, ಆಶಯಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆದಿದೆ. ಶೋಷಿತರ, ಶ್ರಮಿಕರ ಹಾಗೂ ದಮನಿತರ ದನಿಯಾಗಿ ಸಮಾಜದ ಸ್ಪಷ್ಟ ಪ್ರತಿಬಿಂಬವಾಗಿ ಹೊರಬರುತ್ತಿರುವ ‘ಆಂದೋಲನ’ಕ್ಕೆ ಮತ್ತೊಮ್ಮೆ ಅಭಿನಂದನೆಗಳು. -ಡಾ.ಲತಾ ರಾಜಶೇಖರ್, ಕವಯಿತ್ರಿ

ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯದ ಭಾಗದಲ್ಲಿ ಚಾಲ್ತಿಯಲ್ಲಿ ಇರುವ ಪತ್ರಿಕೆ ‘ಆಂದೋಲನ’. ಆದರೆ, ರಾಜ್ಯ ಪತ್ರಿಕೆಗೆ ಸಮನಾಗಿದೆ. ಒಂದು ಪ್ರಾದೇಶಿಕ ಪತ್ರಿಕೆಯಾಗಿ ಜವಾಬ್ದಾರಿಯುತ ಮತ್ತು ಮಾನವೀಯತೆ ನೆಲೆಯಲ್ಲಿ ಪತ್ರಿಕೋದ್ಯಮ ಮಾಡುತ್ತಾ ಮೈಸೂರು ಭಾಗದ ಮನೆ-ಮನಗಳನ್ನು ತಲುಪಿದೆ. – ಆರ್.ಚೇತನ್, ಎಸ್.ಪಿ.ಮೈಸೂರು ಜಿಲ್ಲೆ

ರಾಜಶೇಖರ ಕೋಟಿ ಅವರ ಕಾಲದಿಂದ ಇಲ್ಲಿಯವರೆಗೂ ಪತ್ರಿಕೆಯೊಂದಿಗೆ ಉತ್ತಮ್ಮ ಒಡನಾಟವಿದೆ. ಪ್ರತಿಯೊಂದು ವಿಚಾರದಲ್ಲೂ ಆಂದೋಲನ ಬೆಂಬಲವಿತ್ತು. ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮ ಪತ್ರಿಕೆಯ ಓದುಗರಲ್ಲಿ ಹೊಸ ಹುರುಪು ನೀಡಿದ್ದು, ಮುಂದಿನ ದಿನಗಳಲ್ಲಿ ಹೊಸತನದಿಂದ ಯಶಸ್ವಿಯಾಗಿ ಮುನ್ನಡೆಯಲಿ. -ಜೈನಹಳ್ಳಿ ಸತ್ಯನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ, ಜ್ಞಾನಬುತ್ತಿ ಸಂಸ್ಥೆ

ರಾಜಶೇಖರ ಕೋಟಿ ಅವರು ಯಾವುದೇ ಮುಲಾಜಿಗೆ ಒಳಗಾಗದ, ಪತ್ರಿಕೋದ್ಯಮವನ್ನೇ ಬದುಕು ಎಂದು ಅದಕ್ಕಾಗಿ ಜೀವನ ಸವೆಸಿದ ಸಾಧಕ. ಅವರು ಮೈಸೂರು ಭಾಗದಲ್ಲಿ ತಮ್ಮ ಅಮೂಲ್ಯವಾದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ‘ಆಂದೋಲನ ೫೦ ಸಾರ್ಥಕ ಪಯಣ’ದಲ್ಲಿ ಕೆಳ ವರ್ಗದ ಜನರಿಂದ ಹಿಡಿದು ಅನೇಕ ಗಣ್ಯರು ಭಾಗವಹಿಸಿದ್ದರು. ಇದು ಅವರು ನಡೆಸಿದ ಪತ್ರಿಕೋದ್ಯಮಕ್ಕೆ ಸಾಕ್ಷಿಯಾಗಿದೆ. – ನಾಗಣ್ಣ, ಸಂಪಾದಕ, ಪ್ರಜಾಪಗ್ರತಿ ದಿನಪತ್ರಿಕೆ

andolana

Recent Posts

ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರೆ

ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 51ನೇ ವರ್ಷದ ಹಾಗೂ ಭಗವತಿ ದೇವಾಲಯದ 25ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ…

1 hour ago

ಹನೂರು| ಆಕಸ್ಮಿಕ ಬೆಂಕಿ ತಗುಲಿ ಜೋಳದ ಮೆದೆ ಸಂಪೂರ್ಣ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲ್ಲೂಕಿನ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಜೋಳದ ಮೆದೆ…

1 hour ago

ಗಾಂಜಾ ಮಾರಾಟ, ಸೇವನೆ: ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ಬಂಧನ

ಸಿದ್ದಾಪುರ: ನಿಷೇದಿತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

1 hour ago

ಹನೂರು| ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ವೆಂಕಟೇಶ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ…

1 hour ago

ಟಿ.ನರಸೀಪುರ: ಕೆಎಸ್‌ಐಸಿ ಫ್ಯಾಕ್ಟರಿ ಆವರಣದಲ್ಲಿ ಸ್ಟೇಡಿಯಂ ನಿರ್ಮಿಸುವ ಪ್ರಸ್ತಾವನೆ: ಬೀದಿಗಿಳಿದ ಕಾರ್ಮಿಕರು

ಟಿ.ನರಸೀಪುರ: ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಫಿಲೇಚರ್‌ ಫ್ಯಾಕ್ಟರಿ ಆವರಣದ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಇಂದು…

2 hours ago

ಕೇರಳ ಇನ್ನು ಮುಂದೆ ಕೇರಳಂ: ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅಸ್ತು

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ…

2 hours ago