ಆಂದೋಲನ 50

ಆಂದೋಲನ ಪತ್ರಿಕೆಯ ಒಡನಾಡಿಗಳ ಒಡಲಾಳದ ಮಾತು – 3

ನಿಜವಾಗಿಯೂರಾಜಶೇಖರ ಕೋಟಿ ಅವರು ಸಾಧನೆ ಮಾಡಿದ್ದಾರೆ. ‘ಆಂದೋಲನ’ ೫೦ ವರ್ಷ ಪೂರೈಸಲು ಅವರು ಹಾಕಿದ ಬುನಾದಿ ಕಾರಣ. ರವಿ ಕೋಟಿ ಅವರು ಅವರ ತಂದೆ ರಾಜಶೇಖರ ಕೋಟಿ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅಚ್ಚುಕಟ್ಟಾಗಿ ‘ಆಂದೋಲನ’ ೫೦ ಸಾರ್ಥಕ ಪಯಣ ಕಾರ್ಯಕ್ರಮವನ್ನು ಮಾಡಿದ್ದಾರೆ. ರವಿ ಕೋಟಿ ಮತ್ತು ರಶ್ಮಿ ಕೋಟಿ ಅವರ ಬದ್ಧತೆ ಇನ್ನು ಹೆಚ್ಚಾಗಲಿ. ಪತ್ರಿಕೆ ಇನ್ನು ಹೆಚ್ಚು ಕಾಲ ಯಶಸ್ವಿಯಾಗಿ ಬೆಳೆಯಲಿ. -ಸಿ.ಎಸ್.ನಿರಂಜನಕುಮಾರ್, ಶಾಸಕರು, ಗುಂಡ್ಲುಪೇಟೆ.

ರಾಜಶೇಖರ ಕೋಟಿ ಅವರು ಸದಾ ವಸ್ತುನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದವರು. ಯಾವುದೇ ಪಕ್ಷದ ಪರವಾಗಿ ನಿಲ್ಲದೆ, ನಿಖರವಾದ ಸುದ್ದಿಗಳನ್ನು ಜನರ ಮುಂದಿಡುವ ಮೂಲಕ ನೊಂದವರ ಪರವಾಗಿದ್ದರು. ಅವರ ನಂತರವೂ ಅವರ ಪುತ್ರ ರವಿ ಕೋಟಿ ಅವರು ಈ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಈಗಲೂ ‘ಆಂದೋಲನ’ ವಸ್ತುನಿಷ್ಠ ವರದಿಯ ಮೂಲಕ ಜನರ ಪರವಾಗಿದೆ. -ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರು, ವರುಣ ವಿಧಾನಸಭಾ ಕ್ಷೇತ್ರ.

ಆಂದೋಲನ’ ತನ್ನ ೫೦ ವರ್ಷಗಳ ಸಾರ್ಥಕ ಪಯಾಣದಲ್ಲಿ ಜನಪರ ಕಾಳಜಿಗಾಗಿ ದುಡಿದಿದೆ. ಧ್ವನಿ ಇಲ್ಲದವರ ಧ್ವನಿಯಾಗಿ, ಹಿಂದುಳಿದ ವರ್ಗಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಅವರ ಅಭಿವೃದ್ಧಿಗಾಗಿ ದುಡಿದ ಪತ್ರಿಕೆ ಎಂದರೆ ಅದು ‘ಆಂದೋಲನ’. ಆದಿವಾಸಿಗಳ ಸಮಸ್ಯೆಗಳಿಗೂ ಸ್ಪಂದಿಸುತ್ತಾ ಬಂದಿದೆ ‘ಆಂದೋಲನ’ ಪತ್ರಿಕೆ. ಇಂದು ಒಂದು ಪ್ರಾದೇಶಿಕ ಪತ್ರಿಕೆಯಾಗಿ ಆಂದೋಲನ ೫೦ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ವಿಚಾರ. ಅನಿಲ್ ಚಿಕ್ಕಮಾದು, ಶಾಸಕ, ಎಚ್.ಡಿ.ಕೋಟೆ

ರಾಜಶೇಖರ ಕೋಟಿ ಅವರು ಮೈಸೂರಿನಲ್ಲಿ ‘ಆಂದೋಲನ’ ದಿನಪತ್ರಿಕೆಯನ್ನು ಆರಂಭಿಸಿದ ಸಂದರ್ಭದಲ್ಲಿ ನಾನು ಸಹ ಅವರ ಅಭಿಮಾನಿಯಾಗಿದ್ದೆ. ಪತ್ರಿಕೆಯನ್ನು ನಡೆಸಲು ಅವರು ಪಟ್ಟ ಶ್ರಮವನ್ನು ನಾನೂ ಹತ್ತಿರದಿಂದ ಕಂಡಿದ್ದೇನೆ. ಅವರೊಂದಿಗೆ ನಾನು ಸಹ ಭಾಗಿಯಾಗಿದ್ದೇನೆ. ಇಂದು ಅವರ ಶ್ರಮ ಅವರ ಏಳು-ಬೀಳಿನ ಪ್ರತಿಫಲ ಇಂದು ೫೦ ವರ್ಷಗಳನ್ನು ಪೂರೈಸಿದೆ. ಈ ಪತ್ರಿಕೆಯ ಕೀರ್ತಿ ಇನ್ನೂ ಹೆಚ್ಚಾಗಲಿ ಎಂದು ಆಶಿಸುತ್ತೇನೆ. -ಕಾಗಲವಾಡಿ ಎಂ.ಶಿವಣ್ಣ, ಮಾಜಿ ಸಂಸದರು.

ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ಸೃಷ್ಟಿಸಿದ್ದು ‘ಆಂದೋಲನ’ ದಿನಪತ್ರಿಕೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕಟ್ಟಕಡೆಯವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜಶೇಖರ ಕೋಟಿಯವರು ‘ಆಂದೋಲನ’ ಪತ್ರಿಕೆಯನ್ನು ಸ್ಥಾಪಿಸಿದರು. ಈಗ ಆ ಪತ್ರಿಕೆ ಹಲವು ಏಳು-ಬೀಳುಗಳನ್ನು ಕಂಡು ಈಗ ೫೦ ವರ್ಷಗಳನ್ನು ಪೂರೈಸಿರುವುದು ಸಂತಸದ ವಿಚಾರವಾಗಿದೆ. -ಎಸ್.ಟಿ.ರವಿಕುಮಾರ್, ಅಧ್ಯಕ್ಷ, ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು.


ಬಡವರು, ಶೋಷಿತರು, ರೈತರು ಮತ್ತು ನೊಂದವರ ಪರವಾಗಿ ಕೆಲಸ ಮಾಡಿದ ಪತ್ರಿಕೆ ಎಂದರೆ ಅದು ‘ಆಂದೋಲನ’. ತನ್ನ ವಸ್ತುನಿಷ್ಠ ವರದಿಯಿಂದಲೇ ಜನಪ್ರಿಯತೆಯನ್ನು ಗಳಿಸಿತ್ತು. ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಅವರ ಪರವಾಗಿ ನಿಂತು ದುಡಿದ ಪತ್ರಿಕೆ. ಎಲ್ಲಾ ಸಂದರ್ಭದಲ್ಲಿಯೂ ಮುಂಚೂಣಿಯಲ್ಲಿ ನಿಂತು ನಿಖರ ವರದಿಗಳನ್ನು ಜನರ ಮುಂದಿಡುತ್ತಿದೆ. -ಆರ್.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

ಯಾವುದೇ ಒಂದು ಪತ್ರಿಕೆ ಸತ್ವವನ್ನು ಹೊಂದಿದಾಗ ಮಾತ್ರ ಅದು ಹೆಚ್ಚು ಕಾಲ ಅಸ್ತಿತ್ವದಲ್ಲಿರಲು ಸಾಧ್ಯ. ‘ಆಂದೋಲನ’ವೂ ನೊಂದವರ ಪರವಾಗಿ ದುಡಿಯುವ ಸತ್ವವನ್ನು ಹೊಂದಿದ್ದ ಕಾರಣಕ್ಕೆ ಅದು ಇಂದು ೫೦ನೇ ವರ್ಷ ಆಚರಿಸಿಕೊಳ್ಳುತ್ತಿದೆ. ನಾನು ಕಾಲೇಜು ದಿನಗಳಿಂದಲೂ ಆಂದೋಲನವನ್ನು ಓದುತ್ತಿದ್ದೇನೆ. ಓಮ್ಮೆ ಆಂದೋಲನದ ಮೌಲ್ಯವನ್ನು ಅರಿತು ಓದಿದರೆ ಅದರ ಶಾಶ್ವತ ಓದುಗಾರರಾಗುವುದು ಖಚಿತ. -ಎ.ಎಸ್.ರಾಮದಾಸ್, ಶಾಸಕ, ಕೃಷ್ಣರಾಜ ಕ್ಷೇತ್ರ

‘ಆಂದೋಲನ’ ನನಗೆ ಯಾವ ರೀತಿಯಲ್ಲೂ ಪರಿಚಿತ ಪತ್ರಿಕಾ ಬಳಗ ಆಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಅಲ್ಲಿನ ಪತ್ರಕರ್ತರು ಸೋಷಿಯಲ್ ಮೀಡಿಯಾದಲ್ಲಿನ ನನ್ನ ಬರಹಗಳನ್ನು ಕಂಡು, ಅನುಮತಿ ಪಡೆದು ಅದನ್ನು ಪ್ರಕಟಿಸಿಕೊಂಡಿದ್ದಾರೆ. ಯಾವ ಪತ್ರಿಕೆಯಲ್ಲಿ ಈ ರೀತಿಯ ಹುಡುಕಾಟದ ಕಣ್ಣುಗಳಿರುವ, ಪ್ರೊ-ಆಕ್ಟಿವ್ ಪತ್ರಕರ್ತರಿರುತ್ತಾರೋ ಆ ಪತ್ರಿಕೆ ನಿಜಕ್ಕೂ ತನ್ನ ಓದುಗರಿಗೆ ನಿಯತ್ತಿನಿಂದಿರುತ್ತದೆ ಎಂಬುದು ನನ್ನ ನಂಬಿಕೆ. -ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು.

೧೯೮೦ರ ದಶಕದಲ್ಲಿ ಲಂಕೇಶ್ ಪತ್ರಿಕೆಯಲ್ಲಿದ್ದಾಗ ‘ಆಂದೋಲನ’ ಪತ್ರಿಕೆ ಮತ್ತು ಅದನ್ನು ಕಟ್ಟಿದ ರಾಜಶೇಖರ ಕೋಟಿಯವರ ಬಗ್ಗೆ ಕೇಳುತ್ತಿದ್ದೆ. ಯಾವತ್ತೂ ಅವರನ್ನು ನೋಡಿದ್ದಿಲ್ಲ. ಇಂದು ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲ. ಆದರೆ, ಅವರು ಕಟ್ಟಿ ಬೆಳೆಸಿ ಹೋದ ಈ ‘ಆಂದೋಲನ’ ಇಂದು ತನ್ನ ೫೦ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ‘ಆಂದೋಲನ’ ಹೀಗೇ ನಿರಂತರವಾಗಿರಲಿ. -ಪಂಜು ಗಂಗೊಳ್ಳಿ,ವ್ಯಂಗ್ಯಚಿತ್ರಕಾರ.

‘ಆಂದೋಲನ’ ಪತ್ರಿಕೆಯು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದೆ. ಇದನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಓವರ್‌ಸೈಡ್ ಮಾಡುವಂತಹ ಸ್ಥಳೀಯ ಪತ್ರಿಕೆ ಬರಲು ಸಾಧ್ಯವಿಲ್ಲ  ಎಂಬುದನ್ನು ತೋರಿಸುತ್ತಿದೆ. ಪತ್ರಿಕೆ ಆಕರ್ಷಣೀಯವಾಗಿ ಮೂಡಿ ಬಂದಿದೆ. ಸ್ವತಃ ಸಿದ್ದರಾಮಯ್ಯ ಅವರೇ ಇಡೀ ಕಾರ್ಯಕ್ರಮದುದ್ದಕ್ಕೂ ಪತ್ರಿಕೆ ಓದಿದ್ದು ಸಾಕ್ಷಿ.-ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ.

ಕಳೆದ ೫೦ ವರ್ಷಗಳಿಂದ ಮೈಸೂರಿನ ಭಾಗದಲ್ಲಿ ಜನಜನಿತವಾಗಿರುವ ‘ಆಂದೋಲನ’ ಪತ್ರಿಕೆಯ ಕಾರ್ಯ ಶ್ಲಾಘನೀಯ. ಒಳ್ಳೆಯ ಸುದ್ದಿ ನೀಡಿ ಜನರ ಮನ ಗೆದ್ದಿದೆ. ರಾಜಶೇಖರ ಕೋಟಿ ಅವರ ಪರಿಶ್ರಮ ನಿಜವಾಗಲೂ ಮೆಚ್ಚುವಂತಹತ್ತು. ಸಣ್ಣ ಪತ್ರಿಕೆ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ಪತ್ರಿಕೆಯಾಗಿ ಗಮನ ಸೆಳೆಯುವ ಮಟ್ಟಿಗೆ ಬೆಳೆದಿದೆ. ನನ್ನ ವೈದ್ಯಕೀಯ ಲೇಖನಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದರು. -ಡಾ.ಯು.ಜಿ. ಶೆಣೈ, ಮಕ್ಕಳ ತಜ್ಞ

ರಾಜಶೇಖರ ಕೋಟಿ ನನ್ನ ಎಪ್ಪತ್ತರ ದಶಕದ ಧಾರವಾಡ ದಿನಗಳ ಆತ್ಮೀಯ ಸ್ನೇಹಿತರು. ಅವರು ಕಟ್ಟಿ ಬೆಳೆಸಿದ ‘ಆಂದೋಲನ’ ಕ್ಕೆ ಈಗ ಐವತ್ತರ ಸಂಭ್ರಮ. ಪತ್ರಿಕೆ ಅಂದಿನಿಂದಲೂ ನಿರಂತರವಾಗಿ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಈ ಜೀವಪರ, ಜನಪರ ದಿನಪತ್ರಿಕೆ ನಿತ್ಯ ವೈಚಾರಿಕ ಬೆಳಕು ನೀಡುತ್ತ ಇನ್ನೂ ನೂರಾರು ವರ್ಷ ನಡೆಯಲಿ. ಜನರ ಸಮಸ್ಯೆಗಳಿಗೆ ದನಿಯಾಗಲಿ ಎಂದು ಹಾರೈಸುತ್ತೇನೆ. -ಸನತ್‌ಕುಮಾರ್ ಬೆಳಗಲಿ, ಹಿರಿಯ ಪತ್ರಕರ್ತ

ʼಆಂದೋಲನ’ ದಿನಪತ್ರಿಕೆಯನ್ನು ಆರಂಭದಿಂದಲೂ ಗಮನಿಸಿದ್ದೇನೆ. ಹಾಗೆೆುೀಂ ರಾಜಶೇಖರ ಕೋಟಿ ಅವರ ಜತೆ ಸಾಕಷ್ಟು ಒಡನಾಟ ಇಟ್ಟುಕೊಂಡು ಬಂದವನು ನಾನು. ‘ಆಂದೋಲನ’ ಅಂದರೆ ಜನರ ಜೀವನಾಡಿ ಪತ್ರಿಕೆಯಾಗಿದೆ. ೫೦ ವರ್ಷವನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಇನ್ನೂ ಕೂಡ ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡಿರುವ ಜೀವಧ್ವನಿಯಾಗಿ ‘ಆಂದೋಲನ’ ಪತ್ರಿಕೆ ನಮ್ಮ ನಡುವೆ ಉಳಿದಿದೆ. -ಎ.ಎಚ್.ವಿಶ್ವನಾಥ್, ಸದಸ್ಯರು, ವಿಧಾನ ಪರಿಷತ್ತು.

‘ಆಂದೋಲನ’ ದಿನಪತ್ರಿಕೆ ೫೦ ವರ್ಷಗಳನ್ನು ಪೂರೈಸಿದೆ. ಇದು ನೈತಿಕತೆಯ ಪ್ರತಿಬಿಂಬವಾಗಿದೆ. ರಾಜಶೇಖರ ಕೋಟಿ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದೇನೆ. ಅವರ ಮಕ್ಕಳಾದ ರಶ್ಮಿ ಕೋಟಿ ಮತ್ತು ರವಿ ಕೋಟಿ ಅವರದ್ದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಮಾಧ್ಯಮ ವ್ಯಾಪಾರವಾಗುತ್ತಿದೆ. ಮಾಧ್ಯಮ ಸರ್ವರ ಕಲ್ಯಾಣಕ್ಕೆ ನೆರವಾಗಬೇಕು. -ಡಾ.ಬಿ.ಜೆ ವಿಜಯಕುಮಾರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

‘ಆಂದೋಲನ’ ಪ್ರಾದೇಶಿಕ ಪತ್ರಿಕೆಯಾದರೂ ಯಾವುದೇ ರಾಜ್ಯಮಟ್ಟದ ಪತ್ರಿಕೆಗೆ ಕಡಿಮೆ ಇಲ್ಲದಂತೆ ಕೆಲಸ ಮಾಡುತ್ತಿದೆ. ದಲಿತರ, ದಮನಿತರ, ಶೋಷಿತರ ಪರವಾಗಿ ದುಡಿಯುತ್ತಿದೆ. ಇದು ೫೦ರ ಸಾರ್ಥಕ ಪಯಣವೇ ಹೊರತು ಸ್ವಾರ್ಥಕ ಪಯಣವಲ್ಲ. ಹಾಗೆೆುೀಂ ರಾಜಶೇಖರ ಕೋಟಿ ಅವರ ಕಾಲದಿಂದಲೂ ಈ ಪತ್ರಿಕೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಮುಂದೆಯೂ ಇದೇ ರೀತಿ ಸಾಗಲಿ ಎನ್ನುವುದು ನಮ್ಮ ಆಶಯವಾಗಿದೆ. -ಡಾ.ಸಿ.ಪಿ.ಕೃಷ್ಣಕುಮಾರ್, ಹಿರಿಯ ಸಾಹಿತಿ

andolana

Recent Posts

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

8 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

20 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

8 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

9 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

15 hours ago